ಮಂಗಳೂರು : ಕುಲಶೇಖರದ ಶ್ರೀ ವೀರನಾರಾಯಣ ದೇವಸ್ಥಾನದ ಜೀರ್ಣೋದ್ಧಾರ ಪ್ರಯುಕ್ತ ಶಿಲಾನ್ಯಾಸವು ದಿನಾಂಕ 27-01-2022 ರಂದು ನೆರವೇರಿತು. ಉಡುಪಿ ಪೇಜಾವರ ಮಠದೀಶ ರಾದ ಶ್ರೀ ವಿಶ್ವ ಪ್ರಸನ್ನ ತೀರ್ಥ ಸ್ವಾಮೀಜಿ ಹಾಗೂ ಶ್ರೀದಾಮ ಮಾಣಿಲದ ಪರಮಾಪೂಜ್ಯ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಈ ಪುಣ್ಯ ಕಾರ್ಯವನ್ನು ನೆರವೇರಿಸಿದರು. ಗಣ್ಯವರೇಣ್ಯ್ರರ ಉಪಸ್ಥಿತಿಯಲ್ಲಿ ಅಪಾರ ಭಕ್ತರ ಕೂಡುವಿಕೆಯಲ್ಲಿ ನಡೆಯಿತು. ಶಿಲಾನ್ಯಾಸದ ಧಾರ್ಮಿಕ ವಿಧಿ ವಿಧಾನಗಳು ಕ್ಷೇತ್ರದ ತಂತ್ರಿಗಳಾದ ಆನಂದ ಉಪಾಧ್ಯಯಾ ರವರ ನೇತೃತ್ವದಲ್ಲಿ ನಡೆಯಿತು. ಸಮಸ್ತ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮದ ಅಭೂತಪೂರ್ವ ಯಶಸ್ಸಿಗೆ ಕಾರಣಿಭೂತರಾದರು.
ನಂತರ ನಡೆದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದ ಉಡುಪಿ ಪೇಜಾವರ ಮಠದೀಶ ರಾದ ಶ್ರೀ ವಿಶ್ವ ಪ್ರಸನ್ನ ತೀರ್ಥ ಸ್ವಾಮೀಜಿ, ಊರಿನ ಅಭಿವೃದ್ಧಿಗೆ ಕ್ಷೇತ್ರವು ಮಹತ್ತರ ಆಗಿದೆ. ಕ್ಷೇತ್ರಗಳು ಜೀರ್ಣೋದ್ಧಾರಗೊಂಡಾಗ ಸಮಾಜ ಅಭಿವೃದ್ಧಿ ಆಗುತ್ತದೆ. ಕುಲಶೇಖರದ ಶ್ರೀ ವೀರನಾರಾಯಣ ದೇವಸ್ಥಾನ ದಕ್ಷಿಣ ಭಾರತದಲ್ಲೇ ಪ್ರಸಿದ್ಧ ಹೊಂದಿದೆ. ಇದರ ಬ್ರಹ್ಮಕಲಶ ನಿರ್ವಿಘ್ನವಾಗಿ ನಡೆಯಲಿ, ಕ್ಷೇತ್ರದ ಜೀರ್ಣೋದ್ಧಾರದೊಂದಿಗೆ ಸಮಾಜದ ಅಭಿವೃದ್ಧಿಯಾಗಲಿ ಎಂದು ಸ್ವಾಮೀಜಿಯವರು ಹೇಳಿದರು.
ಮೋಹನದಾಸ ಪರಮಹಂಸ ಸ್ವಾಮೀಜಿಯವರು ಮಾತನಾಡುತ್ತಾ ಜೀರ್ಣೋದ್ಧಾರದ ಕಾರ್ಯವು ಸರ್ವ ಭಕ್ತರ ಒಗ್ಗಟ್ಟು ಮತ್ತು ಸಹಕಾರದಿಂದ ನೆರವೆರಲಿ, ಧರ್ಮ ಕಾರ್ಯ ನಿರಂತರ ನಡೆಯುವಂತಾಗಲಿ ಎಂದು ಶ್ರೀದಾಮ ಮಾಣಿಲದ ಪರಮಾಪೂಜ್ಯ ಸ್ವಾಮೀಜಿ ತಿಳಿಸಿದರು.
ಆನಂತರ ಆಗಮಿಸಿದ ಒಡಿಯೂರು ಕ್ಷೇತ್ರದ ಸಾದ್ವಿ ಮಾತಾನಂದ ಮಾಯಿ ಆಶೀರ್ವಚನ ನೀಡುತ್ತಾ ಕ್ಷೇತದ ಸರ್ವತೋಮುಖ ಅಭಿವೃದ್ಧಿ ಆಗುವಂತೆ ಶುಭ ಹಾರೈಸಿದರು.
ಧಾರ್ಮಿಕ ಸಭಾ ವೇದಿಕೆಯಲ್ಲಿ ದೇವಸ್ಥಾನದ ಆಡಳಿತ ಮಂಡಳಿಯ ಅಧ್ಯಕ್ಷ ಪುರುಷೋತ್ತಮ ಕುಲಾಲ್ ಕಲ್ಬಾವಿ, ದ.ಕ.ಜಿಲ್ಲಾ ಮೂಲ್ಯರ ಯಾನೆ ಕುಲಾಲ ರ ಮಾತೃ ಸಂಘದ ಅಧ್ಯಕ್ಷ ಮಯೂರ್ ಉಳ್ಳಾಲ್, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷರು ದಾಮೋಧರ್ .ಎ, ಶ್ರೀ ವೀರನಾರಾಯಣ ಟ್ರಸ್ಟ್ ನ ಅಧ್ಯಕ್ಷರು ಪ್ರೇಮಾನಂದ ಕುಲಾಲ್, ಸೇವಾ ಸಮಿತಿ ಅಧ್ಯಕ್ಷರು ಸುಂದರ್ ಕುಲಾಲ್, ಶ್ರೀ ವೀರನಾರಾಯಣ ಮಹಿಳಾ ಮಂಡಳಿ ಉಪಾಧ್ಯಕ್ಷೆ ಪಾರ್ವತಿ.ಕೆ ಯವರು ಉಪಸ್ಥಿತರಿದ್ದರು.
ಸಂಪೂರ್ಣ ಕಾರ್ಯಕ್ರಮದ ಸಂಧರ್ಭದಲ್ಲಿ ದೇವಸ್ಥಾನದ ಆಡಳಿತ ಮಂಡಳಿ, ದೇವಸ್ಥಾನದ ಸೇವಾ ಸಮಿತಿ, ದೇವಳದ ಜೀರ್ಣೋದ್ಧಾರ ಸಮಿತಿ, ಶ್ರೀ ವೀರನಾರಾಯಣ ಸೇವಾ ಟ್ರಸ್ಟ್ , ಶ್ರೀ ವೀರನಾರಾಯಣ ಮಹಿಳಾ ಮಂಡಳಿ, ದ.ಕ. ಜಿಲ್ಲಾ ಮೂಲ್ಯರ ಯಾನೆ ಮಾತೃ ಸಂಘ, ವಿವಿಧ ನಗರಗಳ ಕುಲಾಲ ಸಮಾಜದ ಸಂಘ ಸಂಸ್ಥೆಗಳ ಅಧ್ಯಕ್ಷರು, ಪದಾಧಿಕಾರಿಗಳು ಹಾಗು ಸರ್ವ ಸದಸ್ಯರು ಉಪಸ್ಥಿತರಿದ್ದರು.
ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆ, ಬೆಂಗಳೂರು, ಮುಂಬೈ, ಕೇರಳ ಹಾಗೂ ವಿವಿಧ ನಗರಗಳಿಂದ ಸಹಸ್ರಾರು ಭಕ್ತರು ಆಗಮಿಸಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ದೇವಸ್ಥಾನದ ಜೀರ್ಣೋದ್ಧಾರ ಕಾರ್ಯಕ್ಕೆ ಮುನ್ನುಡಿಯಿತ್ತರು.
Discover more from Coastal Times Kannada
Subscribe to get the latest posts sent to your email.
Discussion about this post