ಮಂಗಳೂರು ಮಾ.29 : ಶಾರ್ಟ್ ಸರ್ಕ್ಯೂಟ್ ನಿಂದ ಮಾರುತಿ ಸ್ವಿಪ್ಟ್ ಕಾರು ಹೊತ್ತಿ ಉರಿದ ಘಟನೆ ಮಂಗಳೂರಿನಲ್ಲಿ ಮಾ.29ರ ರಾತ್ರಿ ನಡೆದಿದೆ.
ಮೂಲತ ಕೇರಳದ ಕುಟುಂಬವೊಂದು ಮಂಗಳೂರಿನ ಶಕ್ತಿ ನಗರದ ಫ್ಲಾಟ್ ನಲ್ಲಿ ವಾಸಿಸುತ್ತಿತ್ತು. ಪ್ರತಿದಿನ ತಮ್ಮ ಫ್ಲಾಟ್ ಹತ್ತಿರದ ಪಾರ್ಕ್ ಗೆ ತಮ್ಮ ಸಾಕು ನಾಯಿ ಜೊತೆ ಅದೇ ಕಾರಿನಲ್ಲಿ ಹೊಗುತಿದ್ದರು .
ಮಹಿಳೆಯೊಬ್ಬರು ಶಕ್ತಿನಗರದಲ್ಲಿ ಕಾರು ನಿಲ್ಲಿಸಿ ತನ್ನ ಮೊಬೈಲನ್ನು ಕಾರಿನೊಳಗೆ ಚಾರ್ಜ್‌ಗಿಟ್ಟು ವಿಹಾರಕ್ಕೆ ತೆರಳಿದ್ದರು. ಮರಳಿ ಬರುವಷ್ಟರಲ್ಲಿ ಜಾರ್ಜ್ ಇಟ್ಟ ಸ್ಥಳದಲ್ಲಿ ಬೆಂಕಿ ಕಾಣಿಸಿತು. ತಕ್ಷಣ ಅವರು ಸ್ಥಳೀಯರಿಗೆ ತಿಳಿಸಿದ್ದು, ಮಾಹಿತಿ ಪಡೆದ ಅಗ್ನಿಶಾಮಕ ದಳದ ಅಧಿಕಾರಿ, ಸಿಬ್ಬಂದಿ ವರ್ಗವು ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸಿದ್ದಾರೆ. ಆದರೆ ಕಾರು ಸುಟ್ಟು ಹೋಗಿದೆ ಎಂದು ತಿಳಿದು ಬಂದಿದೆ.