ವೆಲ್ಲಿಂಗ್ಟನ್: 2023ರ ಜನವರಿಯಲ್ಲಿ ನಡೆಯಲಿರುವ ಮೊದಲ ಐಸಿಸಿ ಅಂಡರ್-19 ಮಹಿಳಾ ಕ್ರಿಕೆಟ್ ವಿಶ್ವಕಪ್ T20 ಸ್ವರೂಪದಲ್ಲಿ ನಡೆಯಲಿದೆ. ಒಂದು ವಾರದೊಳಗೆ ಮಂಡಳಿಯ ಸಭೆಯಲ್ಲಿ ನಿರ್ಧರಿಸಲಾಗುತ್ತದೆ ಎಂದು ಐಸಿಸಿ ಸಿಇಒ ಜೆಫ್ ಅಲ್ಲಾರ್ಡೈಸ್ ಇಂದು ಪ್ರಕಟಿಸಿದ್ದಾರೆ.
ನ್ಯೂಜಿಲೆಂಡ್‌ನಲ್ಲಿ 2022ರ ಮಹಿಳಾ ವಿಶ್ವಕಪ್‌ನ ನಾಕೌಟ್ ಪಂದ್ಯಗಳ ಮೊದಲು ಆನ್‌ಲೈನ್ ಮಾಧ್ಯಮ ಸಮ್ಮೇಳನವನ್ನು ಉದ್ದೇಶಿಸಿ ಮಾತನಾಡಿದ ಅಲ್ಲಾರ್ಡೈಸ್, “ಅಂಡರ್ -19 ವಿಶ್ವಕಪ್ ಅನ್ನು ಜನವರಿ 2023 ರಲ್ಲಿ ನಿಗದಿಪಡಿಸಲಾಗಿದೆ, ಅದರ ಸ್ವರೂಪವು ಟಿ20 ಆಗಿರುತ್ತದೆ. ಟೂರ್ನಿಯ ಆತಿಥ್ಯವನ್ನು ಒಂದು ವಾರದೊಳಗೆ ಮಂಡಳಿಯ ಸಭೆಯಲ್ಲಿ ನಿರ್ಧರಿಸಲಾಗುತ್ತದೆ ಎಂದು ತಿಳಿಸಿದರು. ,
ಮುಂದಿನ ಸುತ್ತಿನ ಮಹಿಳಾ ಕ್ರಿಕೆಟ್ ಪಂದ್ಯಾವಳಿಗಳಿಗೆ (2024–27) ಆತಿಥೇಯರನ್ನು ಜುಲೈ 2022ರಲ್ಲಿ ಖಚಿತಪಡಿಸಲಾಗುವುದು ಎಂದೂ ಕೂಡ ಐಸಿಸಿ ಸಿಇಒ ಹೇಳಿದರು.
2019 ರ ಅಕ್ಟೋಬರ್‌ನಲ್ಲಿ ನಡೆದ ಮಂಡಳಿಯ ಸಭೆಯಲ್ಲಿ ICC ಮೊದಲ ಮಹಿಳಾ ಅಂಡರ್-19 ವಿಶ್ವಕಪ್ ಅನ್ನು ಆಯೋಜಿಸಲು ನಿರ್ಧರಿಸಿದೆ ಎಂಬುದು ಗಮನಾರ್ಹ. ಮೂಲತಃ ಅಂಡರ್-19 ಮಹಿಳಾ ವಿಶ್ವಕಪ್ ಅನ್ನು ಜನವರಿ 2021 ರಲ್ಲಿ ನಡೆಸಲು ನಿರ್ಧರಿಸಲಾಗಿತ್ತು, ಆದರೆ ಕೊರೊನಾ ಸಾಂಕ್ರಾಮಿಕ ರೋಗದಿಂದಾಗಿ ಡಿಸೆಂಬರ್ 2021ರವರೆಗೆ ಸ್ಥಗಿತಗೊಳಿಸಲಾಯಿತು. ಬಳಿಕ ಜನವರಿ 2022ರಲ್ಲಿ ಅಲಾರ್ಡೈಸ್ ನೀಡಿದ ಹೇಳಿಕೆಯಲ್ಲಿ ಕೊರೊನಾ ಸಾಂಕ್ರಾಮಿಕವು ಮಹಿಳಾ ವಿಶ್ವಕಪ್ ಗೆ ಅಡ್ಡಿಪಡಿಸಿದೆ ಎಂದು ತಿಳಿಸಿದ್ದರು.
Discover more from Coastal Times Kannada
Subscribe to get the latest posts sent to your email.
Discussion about this post