• About us
  • Contact us
  • Disclaimer
Wednesday, November 4, 2026
  • Login
Coastal Times Kannada
No Result
View All Result
  • Home
    • ಗ್ಯಾಜೆಟ್
  • ರಾಜ್ಯ
  • ರಾಷ್ಟ್ರೀಯ
  • ರಾಜಕೀಯ
  • ವಿದೇಶಿ ಸುದ್ದಿ
  • ಕರಾವಳಿ
  • ಕ್ರೈಂ ನ್ಯೂಸ್
  • ಕ್ರೀಡೆ
  • ಸಿನಿಮಾ
  • ಆರೋಗ್ಯ
  • ವೆಬ್ ಸ್ಟೊರೀಸ್
Join to Group
  • Home
    • ಗ್ಯಾಜೆಟ್
  • ರಾಜ್ಯ
  • ರಾಷ್ಟ್ರೀಯ
  • ರಾಜಕೀಯ
  • ವಿದೇಶಿ ಸುದ್ದಿ
  • ಕರಾವಳಿ
  • ಕ್ರೈಂ ನ್ಯೂಸ್
  • ಕ್ರೀಡೆ
  • ಸಿನಿಮಾ
  • ಆರೋಗ್ಯ
  • ವೆಬ್ ಸ್ಟೊರೀಸ್
No Result
View All Result
Coastal Times Kannada
No Result
View All Result

ಮಹಿಳಾ ಟಿ20 ಚಾಲೆಂಜ್‌: ಸೂಪರ್‌ನೋವಾಸ್ ಚಾಂಪಿಯನ್‌; ವೆಲಾಸಿಟಿ ವಿರುದ್ಧ 4 ರನ್‌ ರೋಚಕ ಗೆಲುವು

Coastal Times by Coastal Times
May 29, 2022
in ಕ್ರೀಡಾ ಸುದ್ದಿ
ಮಹಿಳಾ ಟಿ20 ಚಾಲೆಂಜ್‌: ಸೂಪರ್‌ನೋವಾಸ್ ಚಾಂಪಿಯನ್‌; ವೆಲಾಸಿಟಿ ವಿರುದ್ಧ 4 ರನ್‌ ರೋಚಕ ಗೆಲುವು
30
VIEWS
WhatsappTelegramShare on FacebookShare on Twitter

ಪುಣೆ: ಬ್ಯಾಟಿಂಗ್‌ ಮತ್ತು ಬೌಲಿಂಗ್‌ ಮೂಲಕ ಅಮೋಘ ಪ್ರದರ್ಶನ ನೀಡಿದ ವಿಂಡೀಸ್‌ ಆಲ್‌ರೌಂಡರ್‌ ಡಿಯಾಂಡ್ರ ಡಾಟಿನ್‌ ಅವರು ಸೂಪರ್‌ನೋವಾಸ್ ತಂಡ 3ನೇ ಬಾರಿಗೆ ಮಹಿಳಾ ಟಿ20 ಚಾಲೆಂಜ್‌ ಗೆಲ್ಲುವಲ್ಲಿ ಪ್ರಧಾನ ಪಾತ್ರ ನಿರ್ವಹಿಸಿದರು. ನಿನ್ನೆ ಪುಣೆಯಲ್ಲಿ ನಡೆದ ‘ಮಹಿಳಾ ಐಪಿಎಲ್‌’ ಎಂದೇ ಪರಿಗಣಿಸಲಾದ ಟೂರ್ನಿಯ ಫೈನಲ್ ಪಂದ್ಯದಲ್ಲಿ ಸೂಪರ್‌ನೋವಾಸ್ ತಂಡವು ವೆಲಾಸಿಟಿಗೆ 4 ರನ್‌ಗಳಿಂದ ಸೋಲುಣಿಸಿತು.

ಡಾಟಿನ್‌ 44 ಎಸೆತಗಳಲ್ಲಿ 62 ಗಳಿಸಿದ್ದು ಸೂಪರ್‌ನೋವಾಸ್ ಎದುರಾಳಿಗೆ 165 ರನ್‌ ಟಾರ್ಗೆಟ್‌ ನೀಡಲು ನೆರವಾಯಿತು. ಬೌಲಿಂಗ್‌ ಮೂಲಕವೂ ಈ ಬ್ಯಾಟರ್‌ ಮಿಂಚಿದರು. ನಾಲ್ಕು ಓವರ್‌ಗಳಲ್ಲಿ 2 ವಿಕೆಟ್‌ ಸಾಧನೆ ಮಾಡಿದರು. ಹಾಗಾಗಿ, ವೆಲಾಸಿಟಿ 8 ವಿಕೆಟ್‌ ನಷ್ಟಕ್ಕೆ 161 ಕಲೆ ಹಾಕಿ ಗೆಲುವಿನ ಸನಿಹದಲ್ಲಿ ಎಡವಿತು. ದಕ್ಷಿಣ ಆಫ್ರಿಕಾ ಬ್ಯಾಟರ್‌ ಲಾರಾ ವೊಲ್ವಾರ್ಟ್‌ ಏಕಾಂಗಿಯಾಗಿ ವೆಲಾಸಿಟಿ ಪರ ದಿಟ್ಟ ಹೋರಾಟ ನಡೆಸಿದರು. ಇವರು 40 ಎಸೆತಗಳಲ್ಲಿ 65 ರನ್‌ ಸಂಗ್ರಹಿಸಿ ಕ್ರೀಸ್‌ನಲ್ಲಿ ಗಟ್ಟಿಯಾಗಿ ಬೇರೂರಿದ್ರೂ ತಂಡದ ಸಹ ಆಟಗಾರರ ಸೂಕ್ತ ಬೆಂಬಲ ಸಿಗದ ಕಾರಣ ಹೋರಾಟ ಫಲ ನೀಡಲಿಲ್ಲ. 10ನೇ ಕ್ರಮಾಂಕದ ಬ್ಯಾಟರ್‌ ಸಿಮ್ರಾನ್ ಬಹದ್ದೂರ್ 10 ಎಸೆತಗಳಲ್ಲಿ 20 ರನ್‌ ಚಚ್ಚಿದರು. 19ನೇ ಓವರ್‌ನಲ್ಲಿ ಬ್ಯಾಕ್‌ ಟು ಬ್ಯಾಕ್‌ 3 ಬೌಂಡರಿಗಳನ್ನು ಹೊಡೆದರು. ವೆಲಾಸಿಟಿ ಗೆಲ್ಲಲು ಕೊನೆಯ ಓವರ್‌ನಲ್ಲಿ 17 ರನ್‌ ಬೇಕಿತ್ತು. ಈ ಸಂದರ್ಭದಲ್ಲಿ ದಾಳಿಗಿಳಿದ ಎಡಗೈ ಸ್ಪಿನ್ನರ್‌ ಸೋಫಿ ಎಕ್ಲೆಸ್ಟೋನ್‌ ಕೇವಲ 12 ನೀಡಿ ಸೂಪರ್‌ನೋವಾ ತಂಡಕ್ಕೆ ಗೆಲುವು ತಂದಿಟ್ಟರು. ಪಂದ್ಯದ ಮೊದಲಾರ್ಧದಲ್ಲಿ ಈ ಇಂಗ್ಲಿಷ್‌ ಬೌಲರ್‌ ವೆಲಾಸಿಟಿಯನ್ನು ಕಾಡಿದ್ರೆ ಆಸ್ಟ್ರೇಲಿಯಾ ಲೆಗ್‌ ಸ್ಪಿನ್ನರ್‌ ಅಲನಾ ಕಿಂಗ್‌ (3/32) ಮೂಲಕ ಬ್ಯಾಕ್‌ಎಂಡ್‌ನಲ್ಲಿ ತಂಡಕ್ಕೆ ಮಾರಕವಾದರು. ತಾವು ಎಸೆದ 16ನೇ ಓವರ್‌ನಲ್ಲಿ ಕಿಂಗ್‌ ಅವರಿಗೆ ಹ್ಯಾಟ್ರಿಕ್‌ ವಿಕೆಟ್‌ ಸಾಧಿಸುವ ಅವಕಾಶವಿತ್ತು.

ಸೂಪರ್‌ನೋವಾಸ್ ತಂಡ 2018 ಮತ್ತು 2019ರಲ್ಲಿ ಫೈನಲ್‌ನಲ್ಲಿ ಜಯಗಳಿಸಿದ್ದು, 2020ರಲ್ಲಿ ಮಾತ್ರ ಪ್ರಶಸ್ತಿ ಸುತ್ತಿನ ಹೋರಾಟದಲ್ಲಿ ಟ್ರೇಲ್‌ಬ್ಲೇಜರ್ಸ್‌ ವಿರುದ್ಧ ಸೋಲು ಅನುಭವಿಸಿತ್ತು. ಕಳೆದ ವರ್ಷ ಕೋವಿಡ್‌ ಕಾರಣಕ್ಕೆ ಟೂರ್ನಿ ನಡೆದಿರಲಿಲ್ಲ. 2019ರಲ್ಲಿ ವೆಲೋಸಿಟಿ ರನ್ನರ್‌ಅಪ್ ಆಗಿ ಹೊರಹೊಮ್ಮಿತ್ತು. ನಿನ್ನೆಯ ಪಂದ್ಯದಲ್ಲಿ ವೆಲಾಸಿಟಿಯ ಪ್ರದರ್ಶನದ ವಿಚಾರಕ್ಕೆ ಬರೋಣ. ವೆಲಾಸಿಟಿ ಆರಂಭಿಕರಾದ ಶೆಫಾಲಿ ವರ್ಮಾ ಮತ್ತು ಯಸ್ತಿಕಾ ಭಾಟಿಯಾ ಸ್ಫೋಟಕ ಆರಂಭವನ್ನೇನೂ ನೀಡಿದರು. ಮೊದಲ 2 ಓವರ್‌ಗಳಲ್ಲಿ 28 ರನ್‌ ಸೇರಿಸಿದರು. ಆದ್ರೆ ಸೂಪರ್‌ನೋವಾ ಮಹಿಳೆಯರ ಬೌಲಿಂಗ್‌ ದಾಳಿಯ ರಭಸಕ್ಕೆ ಕ್ರೀಸ್‌ನಲ್ಲಿ ಬಲವಾಗಿ ನೆಲೆಯೂರಲು ಸಾಧ್ಯವಾಗಲಿಲ್ಲ. ಇನ್ನಿಂಗ್ಸ್‌ನ 11 ಓವರ್‌ ಮುಗಿಯುವಷ್ಟರಲ್ಲಿ ತಂಡದ ಅರ್ಧ ಬ್ಯಾಟರ್‌ಗಳು ಔಟಾಗಿ ಪೆವಿಲಿಯನ್‌ ಸೇರಿಕೊಂಡಿದ್ದರು. ನಂತರ ತಂಡ ವೈಫಲ್ಯ ಅನುಭವಿಸುತ್ತಾ ಸಾಗಿತು. ವೆಲಾಸಿಟಿ ಕ್ಯಾಪ್ಟನ್‌ ದೀಪ್ತಿ ಶರ್ಮಾ, ಕೇಟ್‌ ಕ್ರಾಸ್‌ ಹಾಗು ಸಿಮ್ರಾನ್ ಬಹದ್ದೂರ್‌ ತಲಾ 2 ವಿಕೆಟ್‌ ಪಡೆದರು. ಅಯಬೊಂಗ ಕಾಕಾ 1 ವಿಕೆಟ್‌ ಕಿತ್ತರು.

Winners Are Grinners! ☺️ ☺️@ImHarmanpreet, Captain of Supernovas, receives the #My11CircleWT20C Trophy from the hands of Mr. @SGanguly99, President, BCCI & Mr. @JayShah, Honorary Secretary, BCCI. 👏 🏆 #SNOvVEL pic.twitter.com/ujGbXX4GzB

— IndianPremierLeague (@IPL) May 28, 2022

Share this:

  • Share on Facebook (Opens in new window) Facebook
  • Share on X (Opens in new window) X

Like this:

Like Loading…

Related

Discover more from Coastal Times Kannada

Subscribe to get the latest posts sent to your email.

Previous Post

ಮಂಗಳೂರು: ಹಿಜಾಬ್ ಧರಿಸಿ ಬಂದ ವಿದ್ಯಾರ್ಥಿನಿಯರನ್ನು ವಾಪಸ್ ಕಳುಹಿಸಿದ ವಿವಿ ಕಾಲೇಜ್​ ಪ್ರಿನ್ಸಿಪಾಲ್

Next Post

ಮಂಗಳೂರು: ಪೊಲೀಸರಿಗೆ ‘ನಾಯಿಂಡೆ ಮೋನೆ ಪೊಲೀಸ್ ‘ ಎಂದು ನಿಂದಿಸಿದ ಆರೋಪಿಗಳು ಸೇರಿ 9 ಜನರ ಬಂಧನ

Related Posts

ಸರ್ವಾಂಗಾಸನವನ್ನು ನಿರಂತರ 32 ನಿಮಿಷಗಳ ಕಾಲ ಮಾಡುವ ಮೂಲಕ ಆಳ್ವಾಸ್ ವಿದ್ಯಾರ್ಥಿ ಪಿಕೆ ವಿಕಾಸ್ ‘ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್’ನಿಂದ ವಿಶ್ವ ದಾಖಲೆ ಮಾನ್ಯತೆ ಪಡೆದಿದ್ದಾರೆ.
ಕರಾವಳಿ

ಸರ್ವಾಂಗಾಸನವನ್ನು ನಿರಂತರ 32 ನಿಮಿಷಗಳ ಕಾಲ ಮಾಡುವ ಮೂಲಕ ಆಳ್ವಾಸ್ ವಿದ್ಯಾರ್ಥಿ ಪಿಕೆ ವಿಕಾಸ್ ‘ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್’ನಿಂದ ವಿಶ್ವ ದಾಖಲೆ ಮಾನ್ಯತೆ ಪಡೆದಿದ್ದಾರೆ.

October 5, 2026
29
ಮಂಗಳೂರು: ಏಷ್ಯನ್ ಗೇಮ್ಸ್‌ನ ರಿಲೇ ಸ್ಪರ್ಧೆಯಲ್ಲಿ ಭಾರತಕ್ಕೆ ಚಿನ್ನದ ಪದಕ ತಂದುಕೊಟ್ಟ ಅಥ್ಲೀಟ್ ಎಂ.ಆರ್. ಪೂವಮ್ಮ ಅವರಿಗೆ ಬಿಜೆಪಿಯಿಂದ ಅಭಿನಂದನೆ
ಕ್ರೀಡಾ ಸುದ್ದಿ

ಮಂಗಳೂರು: ಏಷ್ಯನ್ ಗೇಮ್ಸ್‌ನ ರಿಲೇ ಸ್ಪರ್ಧೆಯಲ್ಲಿ ಭಾರತಕ್ಕೆ ಚಿನ್ನದ ಪದಕ ತಂದುಕೊಟ್ಟ ಅಥ್ಲೀಟ್ ಎಂ.ಆರ್. ಪೂವಮ್ಮ ಅವರಿಗೆ ಬಿಜೆಪಿಯಿಂದ ಅಭಿನಂದನೆ

October 3, 2026
27
Next Post
ಮಂಗಳೂರು: ಪೊಲೀಸರಿಗೆ ‘ನಾಯಿಂಡೆ ಮೋನೆ ಪೊಲೀಸ್ ‘ ಎಂದು ನಿಂದಿಸಿದ ಆರೋಪಿಗಳು ಸೇರಿ 9 ಜನರ ಬಂಧನ

ಮಂಗಳೂರು: ಪೊಲೀಸರಿಗೆ 'ನಾಯಿಂಡೆ ಮೋನೆ ಪೊಲೀಸ್ ' ಎಂದು ನಿಂದಿಸಿದ ಆರೋಪಿಗಳು ಸೇರಿ 9 ಜನರ ಬಂಧನ

Discussion about this post

Recent News

ಮಂಗಳೂರು: ನ.6.‘ಪ್ರಜಾಪ್ರಭುತ್ವ ಉಳಿಸಿ- ಅರಾಜಕತೆ ಅಳಿಸಿ’ ಎಂಬ ಬೃಹತ್ ಪಾದಯಾತ್ರೆ ಹಾಗೂ ಸಾರ್ವಜನಿಕ ಸಭೆ ಅಭಿಯಾನ

ಮಂಗಳೂರು: ನ.6.‘ಪ್ರಜಾಪ್ರಭುತ್ವ ಉಳಿಸಿ- ಅರಾಜಕತೆ ಅಳಿಸಿ’ ಎಂಬ ಬೃಹತ್ ಪಾದಯಾತ್ರೆ ಹಾಗೂ ಸಾರ್ವಜನಿಕ ಸಭೆ ಅಭಿಯಾನ

November 4, 2026
10
ನಕ್ಸಲ್ ನಾಯಕಿ ಮುಂಡಗಾರು ಲತಾ ಬಿಗಿ ಬಂದೋಬಸ್ತಿನಲ್ಲಿ ಕಡಬ ನ್ಯಾಯಾಲಯಕ್ಕೆ ಹಾಜರು

ನಕ್ಸಲ್ ನಾಯಕಿ ಮುಂಡಗಾರು ಲತಾ ಬಿಗಿ ಬಂದೋಬಸ್ತಿನಲ್ಲಿ ಕಡಬ ನ್ಯಾಯಾಲಯಕ್ಕೆ ಹಾಜರು

November 4, 2026
38
COASTAL BOX LOGO

CORPORATE OFFICE

KHYATI VISUAL MEDIA
3rd Floor, Shalimar Complex
Kankanady, Mangaluru-575002

Email ID : coastaltimeskannada@gmail.com

Follow Us

ಹೊಸ ಸುದ್ದಿಗಳು

ಮಂಗಳೂರು: ನ.6.‘ಪ್ರಜಾಪ್ರಭುತ್ವ ಉಳಿಸಿ- ಅರಾಜಕತೆ ಅಳಿಸಿ’ ಎಂಬ ಬೃಹತ್ ಪಾದಯಾತ್ರೆ ಹಾಗೂ ಸಾರ್ವಜನಿಕ ಸಭೆ ಅಭಿಯಾನ

ಮಂಗಳೂರು: ನ.6.‘ಪ್ರಜಾಪ್ರಭುತ್ವ ಉಳಿಸಿ- ಅರಾಜಕತೆ ಅಳಿಸಿ’ ಎಂಬ ಬೃಹತ್ ಪಾದಯಾತ್ರೆ ಹಾಗೂ ಸಾರ್ವಜನಿಕ ಸಭೆ ಅಭಿಯಾನ

November 4, 2026
ನಕ್ಸಲ್ ನಾಯಕಿ ಮುಂಡಗಾರು ಲತಾ ಬಿಗಿ ಬಂದೋಬಸ್ತಿನಲ್ಲಿ ಕಡಬ ನ್ಯಾಯಾಲಯಕ್ಕೆ ಹಾಜರು

ನಕ್ಸಲ್ ನಾಯಕಿ ಮುಂಡಗಾರು ಲತಾ ಬಿಗಿ ಬಂದೋಬಸ್ತಿನಲ್ಲಿ ಕಡಬ ನ್ಯಾಯಾಲಯಕ್ಕೆ ಹಾಜರು

November 4, 2026
ಮಂಗಳೂರಿನಲ್ಲಿ ಮೊದಲ ವಿಶ್ವ ಕೊಂಕಣಿ ಸಂಗೀತ ಮಹಾಸಮ್ಮೇಳನಕ್ಕೆ ಗೋವಾ ಮುಖ್ಯಮಂತ್ರಿ ಡಾ.ಪ್ರಮೋದ್ ಸಾವಂತ್ ಚಾಲನೆ, 12 ದಿನ, 12 ಗಂಟೆ, 12 ನಿಮಿಷಗಳ ನಿರಂತರ ಗಾಯನ, ಗಿನ್ನೆಸ್ ವಿಶ್ವದಾಖಲೆ ಗುರಿ

ಮಂಗಳೂರಿನಲ್ಲಿ ಮೊದಲ ವಿಶ್ವ ಕೊಂಕಣಿ ಸಂಗೀತ ಮಹಾಸಮ್ಮೇಳನಕ್ಕೆ ಗೋವಾ ಮುಖ್ಯಮಂತ್ರಿ ಡಾ.ಪ್ರಮೋದ್ ಸಾವಂತ್ ಚಾಲನೆ, 12 ದಿನ, 12 ಗಂಟೆ, 12 ನಿಮಿಷಗಳ ನಿರಂತರ ಗಾಯನ, ಗಿನ್ನೆಸ್ ವಿಶ್ವದಾಖಲೆ ಗುರಿ

November 3, 2026
  • About
  • Advertise
  • Privacy & Policy
  • Contact

Copyright ©2024. All Rights Reserved. Coastaltimeskannada.com | Design and Developed By Bluechip Infosystem - Contact Us : cc.bcis.blr@gmail.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

%d