• About us
  • Contact us
  • Disclaimer
Tuesday, September 8, 2026
  • Login
Coastal Times Kannada
No Result
View All Result
  • Home
    • ಗ್ಯಾಜೆಟ್
  • ರಾಜ್ಯ
  • ರಾಷ್ಟ್ರೀಯ
  • ರಾಜಕೀಯ
  • ವಿದೇಶಿ ಸುದ್ದಿ
  • ಕರಾವಳಿ
  • ಕ್ರೈಂ ನ್ಯೂಸ್
  • ಕ್ರೀಡೆ
  • ಸಿನಿಮಾ
  • ಆರೋಗ್ಯ
  • ವೆಬ್ ಸ್ಟೊರೀಸ್
Join to Group
  • Home
    • ಗ್ಯಾಜೆಟ್
  • ರಾಜ್ಯ
  • ರಾಷ್ಟ್ರೀಯ
  • ರಾಜಕೀಯ
  • ವಿದೇಶಿ ಸುದ್ದಿ
  • ಕರಾವಳಿ
  • ಕ್ರೈಂ ನ್ಯೂಸ್
  • ಕ್ರೀಡೆ
  • ಸಿನಿಮಾ
  • ಆರೋಗ್ಯ
  • ವೆಬ್ ಸ್ಟೊರೀಸ್
No Result
View All Result
Coastal Times Kannada
No Result
View All Result

ಬಾಳೆಪುಣಿ ಗ್ರಾಮದ ಒಂಟಿ ಮಹಿಳೆಯ ಅತ್ಯಾಚಾರ ಪ್ರಕರಣ; ಆರೋಪಿಗೆ ಕಠಿಣ ಜೀವಾವಧಿ ಶಿಕ್ಷೆ

Coastal Times by Coastal Times
June 29, 2023
in ಕ್ರೈಮ್ ನ್ಯೂಸ್
ಬಾಳೆಪುಣಿ ಗ್ರಾಮದ ಒಂಟಿ ಮಹಿಳೆಯ ಅತ್ಯಾಚಾರ ಪ್ರಕರಣ; ಆರೋಪಿಗೆ ಕಠಿಣ ಜೀವಾವಧಿ ಶಿಕ್ಷೆ
430
VIEWS
WhatsappTelegramShare on FacebookShare on Twitter

ಮಂಗಳೂರು, ಜೂ.28: ಮನೆಯಲ್ಲಿ ಒಂಟಿಯಾಗಿದ್ದ ಅವಿವಾಹಿತ 53‌ ವರ್ಷ ಪ್ರಾಯದ ಮಹಿಳೆಯ ಅತ್ಯಾಚಾರಗೈದು ಕೊಲೆಗೈದ ಪ್ರಕರಣಕ್ಕೆ ಸಂಬಂಧಿಸಿ ಆರೋಪಿಯನ್ನು ಮಂಗಳೂರಿನ 6ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ಕಾಂತರಾಜು ಎಸ್.ವಿ ಅವರು ಜೀವಾವಧಿ ಶಿಕ್ಷೆ ವಿಧಿಸಿ ಬುಧವಾರ ತೀರ್ಪು ನೀಡಿದ್ದಾರೆ.

ಮಂಜೇಶ್ವರ ಸಮೀಪದ ಪಾತೂರು ವರ್ಕಾಡಿ ಬದಿಮಾಲೆ ನಿವಾಸಿ ಮುಹಮ್ಮದ್ ಅಶ್ರಫ್ ಯಾನೆ ಅಶ್ರಫ್ (33) ಶಿಕ್ಷೆಗೊಳಗಾದ ಆರೋಪಿ. 2020ನೇ‌ ಇಸವಿ ಸೆಪ್ಟೆಂಬರ್ 24 ರಂದು ಬಂಟ್ವಾಳ ತಾಲೂಕಿನ ಬಾಳೆಪುಣಿ ಗ್ರಾಮದ ಕಣಂತೂರು, ಬೆಳ್ಳೇರಿ ಎಂಬಲ್ಲಿ ಒಂಟಿಯಾಗಿ ವಾಸವಿದ್ದ 53 ವರ್ಷದ ಅವಿವಾಹಿತ ಮಹಿಳೆ ಕುಸುಮಾ ತನ್ನದೇ ಮನೆಯಲ್ಲಿ ನಗ್ನಸ್ಥಿತಿಯಲ್ಲಿ ಕೊಲೆಯಾದ ರೀತಿ ಕಂಡುಬಂದಿದ್ದರು. ನೆರೆ ಮನೆಯವರಿಂದ ಕುಸುಮಾ ಸಾವಿನ ವಿಚಾರ ಬೆಳಕಿಗೆ ಬಂದಿತ್ತು. ಕೊಣಾಜೆ ಪೊಲೀಸರು ತನಿಖೆ ಕೈಗೆತ್ತಿಕೊಂಡಿದ್ದು ಕೆಲವೇ ದಿನಗಳಲ್ಲಿ ಒಂಟಿ ಮಹಿಳೆಯ ಅತ್ಯಾಚಾರ ಕೊಲೆ ಪ್ರಕರಣವನ್ನು ಭೇದಿಸುವಲ್ಲಿ ಯಶಸ್ವಿಯಾಗಿದ್ದರು. ಆರೋಪಿ, ಕಾಸರಗೋಡು ಜಿಲ್ಲೆಯ ಗಡಿಭಾಗದ ಪಾತೂರು ನಿವಾಸಿ ಕೂಲಿ ಕಾರ್ಮಿಕನಾಗಿದ್ದ ಅಶ್ರಫ್ ನನ್ನು ಬಂಧಿಸಿದ್ದರು.

ಆರೋಪಿ ಅಶ್ರಫ್ ಒಂಟಿ ಮಹಿಳೆಯ ಮನೆಗೆ ನುಗ್ಗಿ ಮಹಿಳೆಯ ಮೇಲೆ ಅತ್ಯಾಚಾರಗೈದು, ಆಕೆಯ ಕಿವಿ ಓಲೆ ಮತ್ತು ಮನೆಯಲ್ಲಿದ್ದ 15 ಸಾವಿರ ನಗದನ್ನು ಕದ್ದು ಪರಾರಿಯಾಗಿದ್ದ. ಪೊಲೀಸರು ಮಹಿಳೆಯ ಶವದ ಮರಣೋತ್ತರ ಪರೀಕ್ಷೆ ನಡೆಸಿದಾಗ ಆಕೆ ಅತ್ಯಾಚಾರಕ್ಕೊಳಗಾಗಿ ಕೊಲೆಯಾಗಿದ್ದಾಗಿ ವರದಿ ಬಂದಿತ್ತು.  ಅಂದಿನ ಎಸಿಪಿ ರಂಜಿತ್ ಕುಮಾರ್ ಬಂಡಾರು ನೇತೃತ್ವದಲ್ಲಿ ತನಿಖೆಯ ಜಾಡು ಹಿಡಿದ ಪೊಲೀಸರು ಪಾತೂರು ನಿವಾಸಿ ಅಶ್ರಫ್ ನನ್ನ ಬಂಧಿಸಿದ್ದರು.

ಕೊಲೆ ನಡೆದ ಕೆಲವೇ ದಿನಗಳ ಹಿಂದೆ ಅಶ್ರಫ್, ಕುಸುಮಾ ಅವರ ಮನೆಗೆ ಕೂಲಿ ಕೆಲಸಕ್ಕೆ ಬಂದಿದ್ದ. ಬಾವಿಗೆ ಬಿದ್ದಿದ್ದ ಹೆಬ್ಬಾವು ತೆಗೆಯುವುದಕ್ಕೂ ಸಹಕರಿಸಿದ್ದ. ಮಹಿಳೆ ಒಂಟಿಯಾಗಿರುವುದು, ಮನೆ ತುಂಬಾ ಅಡಿಕೆ ಬೆಳೆ ಇರುವುದನ್ನು ಗಮನಿಸಿ ಲಕ್ಷಾಂತರ ರೂಪಾಯಿ ಹಣ ಮನೆಯಲ್ಲಿ ಇರಬಹುದು ಎಂದು ಕಳ್ಳತನಕ್ಕೆ ಯೋಜನೆ ಹಾಕಿದ್ದ. ಅದರಂತೆ, ಮನೆಗೆ ನುಗ್ಗಿದ್ದ ಅಶ್ರಫ್ ಗೆ 15,000 ರೂ. ನಗದು ಸಿಕ್ಕಿತ್ತು. ಇಷ್ಟಕ್ಕೆ ಸುಮ್ಮನಾಗದ ಕಿರಾತಕ 53 ವರುಷದ ಮಹಿಳೆಯ ಮೇಲೆ ಅತ್ಯಾಚಾರ ಎಸಗಿ ಕ್ರೌರ್ಯ ಮೆರೆದು ಆಕೆಯ ಬಳಿಯಿದ್ದ ಚಿನ್ನದ ಆಭರಣಗಳನ್ನ ದೋಚಿ ಪರಾರಿಯಾಗಿದ್ದ.

ವಿಚಾರಣೆ ನಡೆಸಿದ ನ್ಯಾಯಾಧೀಶರು ಆರೋಪಿಗೆ ಐಪಿಸಿ ಕಲಂ 302ರಡಿ ಜೀವಾವಧಿ ಶಿಕ್ಷೆ ಮತ್ತು 1 ಲ.ರೂ. ದಂಡ, ದಂಡ ಪಾವತಿಸಲು ತಪ್ಪಿದರೆ ಹೆಚ್ಚುವರಿ 2 ವರ್ಷ ಸಜೆ, ಕಲಂ 448ರಡಿ 1 ವರ್ಷ ಶಿಕ್ಷೆ, 1,000 ರೂ. ದಂಡ, ದಂಡ ಪಾವತಿಸಲು ತಪ್ಪಿದರೆ ಹೆಚ್ಚುವರಿ 3 ತಿಂಗಳ ಸಜೆ, ಕಲಂ 376ರಡಿ 10 ವರ್ಷ ಶಿಕ್ಷೆ, 1 ಲ.ರೂ. ದಂಡ, ದಂಡ ಪಾವತಿಸಲು ತಪ್ಪಿದರೆ 1 ವರ್ಷ ಶಿಕ್ಷೆ, ಕಲಂ 392ರಡಿ 10 ವರ್ಷ ಶಿಕ್ಷೆ, 50,000 ರೂ. ದಂಡ, ದಂಡ ಪಾವತಿಸಲು ತಪ್ಪಿದರೆ 6 ತಿಂಗಳು ಹೆಚ್ಚುವರಿ ಶಿಕ್ಷೆ, ಕಲಂ 201ರಡಿ 7 ವರ್ಷ ಶಿಕ್ಷೆ, 50,000 ರೂ. ದಂಡ, ದಂಡ ಪಾವತಿಸಲು ತಪ್ಪಿದರೆ ಹೆಚ್ಚುವರಿ 1 ವರ್ಷ ಶಿಕ್ಷೆ ವಿಧಿಸಿದ್ದಾರೆ.

ಪ್ರಕರಣದ ವಿಶೇಷ ತನಿಖಾಧಿಕಾರಿಯಾಗಿದ್ದ ಮಂಗಳೂರು ದಕ್ಷಿಣ ಉಪವಿಭಾಗ ಸಹಾಯಕ ಪೊಲೀಸ್ ಆಯುಕ್ತ ರಂಜಿತ್ ಕುಮಾರ್ ಬಂಡಾರು ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು. ಸರಕಾರದ ಪರವಾಗಿ ಅಭಿಯೋಜಕರಾದ ಜ್ಯೋತಿ ಪ್ರಮೋದ್ ನಾಯಕ್ ಮತ್ತು ಬಿ. ಶೇಖರ್ ಶೆಟ್ಟಿ ವಾದಿಸಿದ್ದರು.

Share this:

  • Share on Facebook (Opens in new window) Facebook
  • Share on X (Opens in new window) X

Like this:

Like Loading…

Related

Discover more from Coastal Times Kannada

Subscribe to get the latest posts sent to your email.

Previous Post

ಮಂಗಳೂರು ಮೇರಿಹಿಲ್ ಬಳಿ ರಸ್ತೆ ವಿಭಜಕಕ್ಕೆ ಬೈಕ್ ಡಿಕ್ಕಿ: ಬಾಲಕರಿಬ್ಬರು ಬಲಿ

Next Post

ವಿವಾಹದ ನೆಪದಲ್ಲಿ ವಿದ್ಯಾರ್ಥಿನಿಯನ್ನು ಮಂಗಳೂರಿನ ಲಾಡ್ಜ್ ನಲ್ಲಿರಿಸಿ ಅತ್ಯಾಚಾರ ; ಕಡಬ ಮೂಲದ ಯುವಕನ ಬಂಧನ

Related Posts

ಪುತ್ತೂರು: ದೇವಸ್ಥಾನದ ಕಾಣಿಕೆ ಹುಂಡಿ ಕಳ್ಳತನ ಪ್ರಕರಣ-ಕೇರಳದ ವ್ಯಕ್ತಿ ಬಂಧನ, ಕದ್ದ ಕಾಣಿಕೆ ಹುಂಡಿ, ಬೈಕ್ ವಶ
ಕ್ರೈಮ್ ನ್ಯೂಸ್

ಪುತ್ತೂರು: ದೇವಸ್ಥಾನದ ಕಾಣಿಕೆ ಹುಂಡಿ ಕಳ್ಳತನ ಪ್ರಕರಣ-ಕೇರಳದ ವ್ಯಕ್ತಿ ಬಂಧನ, ಕದ್ದ ಕಾಣಿಕೆ ಹುಂಡಿ, ಬೈಕ್ ವಶ

September 5, 2026
28
ಮಂಗಳೂರು: ಪಣಂಬೂರಿನಲ್ಲಿ ಚಾಲಕನ ಧಾವಂತಕ್ಕೆ ಖಾಸಗಿ ಬಸ್ ಪಲ್ಟಿ ; ಅಪಾಯದಿಂದ ಪಾರಾದ ಪ್ರಯಾಣಿಕರು
ಕ್ರೈಮ್ ನ್ಯೂಸ್

ಮಂಗಳೂರು: ಪಣಂಬೂರಿನಲ್ಲಿ ಚಾಲಕನ ಧಾವಂತಕ್ಕೆ ಖಾಸಗಿ ಬಸ್ ಪಲ್ಟಿ ; ಅಪಾಯದಿಂದ ಪಾರಾದ ಪ್ರಯಾಣಿಕರು

September 4, 2026
73
Next Post
ವಿವಾಹದ ನೆಪದಲ್ಲಿ ವಿದ್ಯಾರ್ಥಿನಿಯನ್ನು ಮಂಗಳೂರಿನ ಲಾಡ್ಜ್ ನಲ್ಲಿರಿಸಿ ಅತ್ಯಾಚಾರ ; ಕಡಬ ಮೂಲದ ಯುವಕನ ಬಂಧನ

ವಿವಾಹದ ನೆಪದಲ್ಲಿ ವಿದ್ಯಾರ್ಥಿನಿಯನ್ನು ಮಂಗಳೂರಿನ ಲಾಡ್ಜ್ ನಲ್ಲಿರಿಸಿ ಅತ್ಯಾಚಾರ ; ಕಡಬ ಮೂಲದ ಯುವಕನ ಬಂಧನ

Discussion about this post

Recent News

ಮಲ್ಪೆ: ಹೂಡೆ ಸಮೀಪ ಇಂದು ಬೆಳಿಗ್ಗೆ ನವಜಾತ ಶಿಶುವೊಂದು ರಸ್ತೆ ಬದಿಯಲ್ಲಿ ಎಸೆದ ಸ್ಥಿತಿಯಲ್ಲಿ ಪತ್ತೆಯಾಗಿದೆ.

ಮಲ್ಪೆ: ಹೂಡೆ ಸಮೀಪ ಇಂದು ಬೆಳಿಗ್ಗೆ ನವಜಾತ ಶಿಶುವೊಂದು ರಸ್ತೆ ಬದಿಯಲ್ಲಿ ಎಸೆದ ಸ್ಥಿತಿಯಲ್ಲಿ ಪತ್ತೆಯಾಗಿದೆ.

September 7, 2026
35
ಮೂಡಾ ಅಧ್ಯಕ್ಷರಿಗೆ ಜಾಗತಿಕ ಬಂಟರ ಸಂಘಗಳ ಒಕ್ಕೂಟದಿಂದ ಅಭಿನಂದನೆ

ಮೂಡಾ ಅಧ್ಯಕ್ಷರಿಗೆ ಜಾಗತಿಕ ಬಂಟರ ಸಂಘಗಳ ಒಕ್ಕೂಟದಿಂದ ಅಭಿನಂದನೆ

September 7, 2026
20
COASTAL BOX LOGO

CORPORATE OFFICE

KHYATI VISUAL MEDIA
3rd Floor, Shalimar Complex
Kankanady, Mangaluru-575002

Email ID : coastaltimeskannada@gmail.com

Follow Us

ಹೊಸ ಸುದ್ದಿಗಳು

ಮಲ್ಪೆ: ಹೂಡೆ ಸಮೀಪ ಇಂದು ಬೆಳಿಗ್ಗೆ ನವಜಾತ ಶಿಶುವೊಂದು ರಸ್ತೆ ಬದಿಯಲ್ಲಿ ಎಸೆದ ಸ್ಥಿತಿಯಲ್ಲಿ ಪತ್ತೆಯಾಗಿದೆ.

ಮಲ್ಪೆ: ಹೂಡೆ ಸಮೀಪ ಇಂದು ಬೆಳಿಗ್ಗೆ ನವಜಾತ ಶಿಶುವೊಂದು ರಸ್ತೆ ಬದಿಯಲ್ಲಿ ಎಸೆದ ಸ್ಥಿತಿಯಲ್ಲಿ ಪತ್ತೆಯಾಗಿದೆ.

September 7, 2026
ಮೂಡಾ ಅಧ್ಯಕ್ಷರಿಗೆ ಜಾಗತಿಕ ಬಂಟರ ಸಂಘಗಳ ಒಕ್ಕೂಟದಿಂದ ಅಭಿನಂದನೆ

ಮೂಡಾ ಅಧ್ಯಕ್ಷರಿಗೆ ಜಾಗತಿಕ ಬಂಟರ ಸಂಘಗಳ ಒಕ್ಕೂಟದಿಂದ ಅಭಿನಂದನೆ

September 7, 2026
ಮಂಗಳೂರು-ಗೋವಾ ಕ್ರೂಸ್ ಸೇವೆ, ಹೌಸ್ ಬೋಟ್ ಆರಂಭಕ್ಕೆ ಚಿಂತನೆ, ಕ್ಯಾಸಿನೊ ತೆರೆಯುವ ಪ್ರಸ್ತಾವನೆ ಇಲ್ಲ – ಸಚಿವ ಕೆ.ಜೆ. ಜಾರ್ಜ್

ಮಂಗಳೂರು-ಗೋವಾ ಕ್ರೂಸ್ ಸೇವೆ, ಹೌಸ್ ಬೋಟ್ ಆರಂಭಕ್ಕೆ ಚಿಂತನೆ, ಕ್ಯಾಸಿನೊ ತೆರೆಯುವ ಪ್ರಸ್ತಾವನೆ ಇಲ್ಲ – ಸಚಿವ ಕೆ.ಜೆ. ಜಾರ್ಜ್

September 7, 2026
  • About
  • Advertise
  • Privacy & Policy
  • Contact

Copyright ©2024. All Rights Reserved. Coastaltimeskannada.com | Design and Developed By Bluechip Infosystem - Contact Us : cc.bcis.blr@gmail.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

%d