• About us
  • Contact us
  • Disclaimer
Monday, June 29, 2026
  • Login
Coastal Times Kannada
No Result
View All Result
  • Home
    • ಗ್ಯಾಜೆಟ್
  • ರಾಜ್ಯ
  • ರಾಷ್ಟ್ರೀಯ
  • ರಾಜಕೀಯ
  • ವಿದೇಶಿ ಸುದ್ದಿ
  • ಕರಾವಳಿ
  • ಕ್ರೈಂ ನ್ಯೂಸ್
  • ಕ್ರೀಡೆ
  • ಸಿನಿಮಾ
  • ಆರೋಗ್ಯ
  • ವೆಬ್ ಸ್ಟೊರೀಸ್
Join to Group
  • Home
    • ಗ್ಯಾಜೆಟ್
  • ರಾಜ್ಯ
  • ರಾಷ್ಟ್ರೀಯ
  • ರಾಜಕೀಯ
  • ವಿದೇಶಿ ಸುದ್ದಿ
  • ಕರಾವಳಿ
  • ಕ್ರೈಂ ನ್ಯೂಸ್
  • ಕ್ರೀಡೆ
  • ಸಿನಿಮಾ
  • ಆರೋಗ್ಯ
  • ವೆಬ್ ಸ್ಟೊರೀಸ್
No Result
View All Result
Coastal Times Kannada
No Result
View All Result

ಮುಂಬೈನಿಂದ ಕೇರಳಕ್ಕೆ ಕುಟುಂಬದೊಂದಿಗೆ ಪ್ರಯಾಣಿಸುತ್ತಿದ್ದ ಚಿನ್ನದ ವ್ಯಾಪಾರಿಯನ್ನು ಪಣಂಬೂರು ಬಳಿ ಕಾರು ಅಡ್ಡಗಟ್ಟಿ ದರೋಡೆ

Coastal Times by Coastal Times
June 29, 2026
in ಕ್ರೈಮ್ ನ್ಯೂಸ್
ಮುಂಬೈನಿಂದ ಕೇರಳಕ್ಕೆ ಕುಟುಂಬದೊಂದಿಗೆ ಪ್ರಯಾಣಿಸುತ್ತಿದ್ದ ಚಿನ್ನದ ವ್ಯಾಪಾರಿಯನ್ನು ಪಣಂಬೂರು ಬಳಿ ಕಾರು ಅಡ್ಡಗಟ್ಟಿ ದರೋಡೆ
374
VIEWS
WhatsappTelegramShare on FacebookShare on Twitter

ಮಂಗಳೂರು, ಜೂನ್ 29: ಮುಂಬೈನಿಂದ ಕುಟುಂಬದ ಜೊತೆಗೆ ಕಾರಿನಲ್ಲಿ ಬರುತ್ತಿದ್ದ ಕೇರಳ ಮೂಲದ ಚಿನ್ನದ ವ್ಯಾಪಾರಿಯನ್ನು ಅಡ್ಡಗಟ್ಟಿ ಲಕ್ಷಾಂತರ ಮೌಲ್ಯದ ಚಿನ್ನ ಮತ್ತು ನಗದು ಹಣವನ್ನು ಅಪಹರಿಸಿದ ಘಟನೆ ಪಣಂಬೂರು ಬಳಿಯ ಬೈಕಂಪಾಡಿ ಜಂಕ್ಷನ್ನಲ್ಲಿ ಇಂದು ನಸುಕಿನ ವೇಳೆಗೆ ನಡೆದಿದೆ.

ನಸುಕಿನ 3 ಗಂಟೆ ವೇಳೆಗೆ ಎರಡು ಇನೋವಾ ಮತ್ತು ಇನ್ನೊಂದು ಸ್ವಿಫ್ಟ್ ಕಾರಿನಲ್ಲಿ ಬಂದಿದ್ದ ಏಳೆಂಟು ಮಂದಿಯಿದ್ದ ತಂಡ ಏಕಾಏಕಿ ಚಿನ್ನದ ವ್ಯಾಪಾರಿಯ ಕಾರನ್ನು ಅಡ್ಡಗಟ್ಟಿ, ಪತ್ನಿ ಹಾಗೂ ಮಗನ ಸಮೇತ ಕಾರಿನೊಂದಿಗೆ ಪರಾರಿಯಾದ ಸಿನಿಮಾ ಶೈಲಿಯ ದರೋಡೆ ನಡೆದಿದೆ. ಕೇರಳದ ಪಯ್ಯನ್ನೂರಿನ ನಿವಾಸಿ ಹಾಗೂ ಚಿನ್ನದ ವ್ಯಾಪಾರಿ ವಿಕಾಸ್ (42) ಅವರು ತನ್ನ ಪತ್ನಿ ಹಾಗೂ ಪುತ್ರನ ಜೊತೆಗೆ ಬಿಳಿ ಬಣ್ಣದ ಸ್ವಿಫ್ಟ್ ಡಿಸೈರ್ ಕಾರಿನಲ್ಲಿ ಮುಂಬೈನಿಂದ ಕೇರಳಕ್ಕೆ ಹಿಂದಿರುಗುತ್ತಿದ್ದರು. ಬೈಕಂಪಾಡಿಯ ದ್ವಾರದ ಬಳಿ KA-03 G-8210, KL-13 BB-1841 ಸಂಖ್ಯೆಯ ಎರಡು ಇನ್ನೋವಾ ಕಾರುಗಳು ಹಾಗೂ KL-11 BE-4104 ಸಂಖ್ಯೆಯ ಸ್ವಿಫ್ಟ್ ಕಾರಿನಲ್ಲಿ ಬಂದ ಸುಮಾರು 7ರಿಂದ 8 ಮಂದಿ ಅಪರಿಚಿತರು ವಿಕಾಸ್ ಅವರ ಕಾರನ್ನು ಅಡ್ಡಗಟ್ಟಿದ್ದಾರೆ.

ವಿಕಾಸ್ ಅವರನ್ನು ಕಾರಿನಿಂದ ಕೆಳಗಿಳಿಸಿದ ದುಷ್ಕರ್ಮಿಗಳು, ಅವರ ಪತ್ನಿ ಮತ್ತು ಮಗನ ಸಮೇತ ಕಾರನ್ನು ಒಯ್ದಿದ್ದಾರೆ. ನಂತರ ಕುಳೂರು ಬಳಿ ಪತ್ನಿ, ಮಗನನ್ನು ಕೆಳಗಿಳಿಸಿ, ಆರೋಪಿಗಳು ಕಾರಿನೊಂದಿಗೆ ಪರಾರಿಯಾಗಿದ್ದಾರೆ. ವಿಕಾಸ್ ಕೇರಳದ ಪಯ್ಯನ್ನೂರಿನಲ್ಲಿ ಚಿನ್ನದ ವ್ಯಾಪಾರ ನಡೆಸುತ್ತಿದ್ದು, ಮುಂಬೈ ಬಳಿಯ ಸಾಂಗ್ಲಿಯಲ್ಲಿ ಪರಿಚಯಸ್ಥರ ವಿವಾಹ ಸಮಾರಂಭದಲ್ಲಿ ಭಾಗವಹಿಸಿ ವಾಪಸಾಗುತ್ತಿದ್ದರು. ಘಟನೆ ಸಂಬಂಧ ಪಣಂಬೂರು ಪೊಲೀಸ್ ಠಾಣೆಯಲ್ಲಿ ದರೋಡೆ ಪ್ರಕರಣ ದಾಖಲಾಗಿದ್ದು, 180 ಗ್ರಾಮ್ ಚಿನ್ನ ಮತ್ತು ನಗದು ಸಹಿತ ಸುಮಾರು 20 ಲಕ್ಷ ರು. ಮೌಲ್ಯದ ಸೊತ್ತು ಹೊತ್ತೊಯ್ದಿದ್ದಾರೆ ಎಂದು ವಿಕಾಸ್ ದೂರು ನೀಡಿದ್ದಾರೆ.‌

ಆದರೆ ಕೇರಳದ ಚಿನ್ನದ ವ್ಯಾಪಾರಿಗಳು ಮುಂಬೈನಲ್ಲಿ ಗಟ್ಟಿಗಳ ರೂಪದಲ್ಲಿ ಚಿನ್ನ ಖರೀದಿಸಿ ಒಯ್ಯುವುದು ಸಾಮಾನ್ಯವಾಗಿದ್ದು ದೊಡ್ಡ ಮೊತ್ತದ ಚಿನ್ನ ಕಳವಾಗಿರುವ ಸಾಧ್ಯತೆ ಇದೆ. ಆರೋಪಿಗಳ ಪತ್ತೆಗಾಗಿ ಸಿಸಿಟಿವಿ ದೃಶ್ಯಗಳನ್ನು ಆಧರಿಸಿ ಪೊಲೀಸರು ತನಿಖೆ ಆರಂಭಿಸಿದ್ದಾರೆ.‌

Share this:

  • Share on Facebook (Opens in new window) Facebook
  • Share on X (Opens in new window) X

Like this:

Like Loading…

Related

Discover more from Coastal Times Kannada

Subscribe to get the latest posts sent to your email.

Previous Post

‘ಸನಾತನಿ ಸಿಂಹ’ ಹೆಸರಲ್ಲಿ ಜಾಲತಾಣದಲ್ಲಿ ಅಕ್ಷೇಪಾರ್ಹ ಕಮೆಂಟ್ ; ಆರೋಪಿ ಆನಂದ ಸೆರೆ

Related Posts

ಮಂಗಳೂರು ಸಿಸಿಬಿ ಪೊಲೀಸರ ಕಾರ್ಯಾಚರಣೆ, 2.10 ಲಕ್ಷ ರೂ. ಮೌಲ್ಯದ ಎಂಡಿಎಂಎ ಜಪ್ತಿ ಆರೋಪಿ ಅರೆಸ್ಟ್
ಕ್ರೈಮ್ ನ್ಯೂಸ್

ಮಂಗಳೂರು ಸಿಸಿಬಿ ಪೊಲೀಸರ ಕಾರ್ಯಾಚರಣೆ, 2.10 ಲಕ್ಷ ರೂ. ಮೌಲ್ಯದ ಎಂಡಿಎಂಎ ಜಪ್ತಿ ಆರೋಪಿ ಅರೆಸ್ಟ್

June 26, 2026
42
ಮದುವೆಗೆ 17 ಕೋಟಿಯ ಅರಮನೆ ಬುಕ್ ಮಾಡಿದ್ದ ಕುಟುಂಬ ! ಪ್ರಿಯಕರನ ಜೊತೆ ಸೇರಿ ವರನನ್ನು ಪ್ರಪಾತಕ್ಕೆ ತಳ್ಳಿ ಕೊಂದ ಉದ್ಯಮಿಯ ಪುತ್ರಿ!
ಕ್ರೈಮ್ ನ್ಯೂಸ್

ಮದುವೆಗೆ 17 ಕೋಟಿಯ ಅರಮನೆ ಬುಕ್ ಮಾಡಿದ್ದ ಕುಟುಂಬ ! ಪ್ರಿಯಕರನ ಜೊತೆ ಸೇರಿ ವರನನ್ನು ಪ್ರಪಾತಕ್ಕೆ ತಳ್ಳಿ ಕೊಂದ ಉದ್ಯಮಿಯ ಪುತ್ರಿ!

June 25, 2026
80

Discussion about this post

Recent News

ಮುಂಬೈನಿಂದ ಕೇರಳಕ್ಕೆ ಕುಟುಂಬದೊಂದಿಗೆ ಪ್ರಯಾಣಿಸುತ್ತಿದ್ದ ಚಿನ್ನದ ವ್ಯಾಪಾರಿಯನ್ನು ಪಣಂಬೂರು ಬಳಿ ಕಾರು ಅಡ್ಡಗಟ್ಟಿ ದರೋಡೆ

ಮುಂಬೈನಿಂದ ಕೇರಳಕ್ಕೆ ಕುಟುಂಬದೊಂದಿಗೆ ಪ್ರಯಾಣಿಸುತ್ತಿದ್ದ ಚಿನ್ನದ ವ್ಯಾಪಾರಿಯನ್ನು ಪಣಂಬೂರು ಬಳಿ ಕಾರು ಅಡ್ಡಗಟ್ಟಿ ದರೋಡೆ

June 29, 2026
374
‘ಸನಾತನಿ ಸಿಂಹ’ ಹೆಸರಲ್ಲಿ ಜಾಲತಾಣದಲ್ಲಿ ಅಕ್ಷೇಪಾರ್ಹ ಕಮೆಂಟ್ ; ಆರೋಪಿ ಆನಂದ ಸೆರೆ

‘ಸನಾತನಿ ಸಿಂಹ’ ಹೆಸರಲ್ಲಿ ಜಾಲತಾಣದಲ್ಲಿ ಅಕ್ಷೇಪಾರ್ಹ ಕಮೆಂಟ್ ; ಆರೋಪಿ ಆನಂದ ಸೆರೆ

June 29, 2026
5
COASTAL BOX LOGO

CORPORATE OFFICE

KHYATI VISUAL MEDIA
3rd Floor, Shalimar Complex
Kankanady, Mangaluru-575002

Email ID : coastaltimeskannada@gmail.com

Follow Us

ಹೊಸ ಸುದ್ದಿಗಳು

ಮುಂಬೈನಿಂದ ಕೇರಳಕ್ಕೆ ಕುಟುಂಬದೊಂದಿಗೆ ಪ್ರಯಾಣಿಸುತ್ತಿದ್ದ ಚಿನ್ನದ ವ್ಯಾಪಾರಿಯನ್ನು ಪಣಂಬೂರು ಬಳಿ ಕಾರು ಅಡ್ಡಗಟ್ಟಿ ದರೋಡೆ

ಮುಂಬೈನಿಂದ ಕೇರಳಕ್ಕೆ ಕುಟುಂಬದೊಂದಿಗೆ ಪ್ರಯಾಣಿಸುತ್ತಿದ್ದ ಚಿನ್ನದ ವ್ಯಾಪಾರಿಯನ್ನು ಪಣಂಬೂರು ಬಳಿ ಕಾರು ಅಡ್ಡಗಟ್ಟಿ ದರೋಡೆ

June 29, 2026
‘ಸನಾತನಿ ಸಿಂಹ’ ಹೆಸರಲ್ಲಿ ಜಾಲತಾಣದಲ್ಲಿ ಅಕ್ಷೇಪಾರ್ಹ ಕಮೆಂಟ್ ; ಆರೋಪಿ ಆನಂದ ಸೆರೆ

‘ಸನಾತನಿ ಸಿಂಹ’ ಹೆಸರಲ್ಲಿ ಜಾಲತಾಣದಲ್ಲಿ ಅಕ್ಷೇಪಾರ್ಹ ಕಮೆಂಟ್ ; ಆರೋಪಿ ಆನಂದ ಸೆರೆ

June 29, 2026
ಮಂಗಳೂರು ಸಿಸಿಬಿ ಪೊಲೀಸರ ಕಾರ್ಯಾಚರಣೆ, 2.10 ಲಕ್ಷ ರೂ. ಮೌಲ್ಯದ ಎಂಡಿಎಂಎ ಜಪ್ತಿ ಆರೋಪಿ ಅರೆಸ್ಟ್

ಮಂಗಳೂರು ಸಿಸಿಬಿ ಪೊಲೀಸರ ಕಾರ್ಯಾಚರಣೆ, 2.10 ಲಕ್ಷ ರೂ. ಮೌಲ್ಯದ ಎಂಡಿಎಂಎ ಜಪ್ತಿ ಆರೋಪಿ ಅರೆಸ್ಟ್

June 26, 2026
  • About
  • Advertise
  • Privacy & Policy
  • Contact

Copyright ©2024. All Rights Reserved. Coastaltimeskannada.com | Design and Developed By Bluechip Infosystem - Contact Us : cc.bcis.blr@gmail.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

%d