ಪುತ್ತೂರು, ಸೆ.29: ವಿವಾಹಿತ ಮಹಿಳೆಯ ಜೊತೆ ಸಲುಗೆ ಬೆಳೆಸಿಕೊಂಡಿದ್ದಲ್ಲದೆ, ಆಕೆಯ ಜೊತೆಗೆ ಫೋಟೊ ತೆಗೆದು ಬ್ಲಾಕ್ಮೇಲ್ ನಡೆಸಿರುವ ಘಟನೆ ನಡೆದಿದ್ದು, ಪ್ರಕರಣದಲ್ಲಿ ಸುಬ್ರಹ್ಮಣ್ಯ ಗ್ರಾಮ ಪಂಚಾಯತ್ ಮಾಜಿ ಸದಸ್ಯರೊಬ್ಬರನ್ನು ಕಾರವಾರ ಪೊಲೀಸರು ಬಂಧಿಸಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕು ಅರ್ಲಪದವು ಬಳಿ ನಿವಾಸಿ ಪ್ರಶಾಂತ ಭಟ್ ಮಾಣಿಲ (35) ಬಂಧಿತ. ಈತ ಮೂಲತ: ಪುತ್ತೂರಿನ ಅರ್ಲಪದವು ನಿವಾಸಿಯಾದರೂ, ಆತನ ಕಾರ್ಯಕ್ಷೇತ್ರವಿದ್ದದು ಸುಬ್ರಹ್ಮಣ್ಯದಲ್ಲಿ . ಅಲ್ಲಿ ಆತ ಸಾಮಾಜಿಕ ಹಾಗೂ ರಾಜಕೀಯ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದ.
ಉತ್ತರ ಕನ್ನಡ ಜಿಲ್ಲೆಯ ಶಿರಸಿಯ 28ರ ಹರೆಯದ ಮಹಿಳೆ ಸಂತ್ರಸ್ತೆ. ಈಕೆಗೆ ಹಾಡುವ ಖಯಾಲಿ ಇದ್ದು, ತನ್ನ ಸಂಗೀತ ಆಸಕ್ತಿಯನ್ನು ಪ್ರದರ್ಶಿಸಿಸಲು ಕ್ಲಬ್ ಹೌಸ್ ಅಪ್ಲಿಕೇಷನನ್ನು ವೇದಿಕೆಯಾಗಿ ಬಳಸುತ್ತಿದ್ದಳು . ಸಂಗೀತ ಆಸಕ್ತನಾಗಿದ್ದ ಪ್ರಶಾಂತ್ ಈಕೆಯ ಚ್ಯಾಟ್ ರೂಂ ಸೇರಿಕೊಂಡು ಹಾಡನ್ನು ಆಲಿಸುತ್ತಲೇ ಆಕೆಯ ಜತೆ ಚಾಟ್ ಮಾಡಲು ಆರಂಭಿಸಿದ್ದಾನೆ. ಬಣ್ಣ ಬಣ್ಣದ ಮಾತುಗಳಿಂದ ಆಕೆಯ ಹಾಡನ್ನು ಹೊಗಳಿದ ಆತ ಆರ್ಕೆಸ್ಟ್ರಾದಲ್ಲಿ ಹಾಡಲು ಅವಕಾಶ ಕೊಡಿಸುವುದಾಗಿ ಆಮೀಷವೊಡ್ಡಿದ್ದಾನೆ ಎಂದು ದೂರಿನಲ್ಲಿ ಮಹಿಳೆ ತಿಳಿಸಿದ್ದಾರೆ
ಆರ್ಕೆಸ್ಟ್ರಾದಲ್ಲಿ ಹಾಡಬೇಕೆಂಬ ಆಸೆ ಹೊತ್ತಿದ್ದ ಮಹಿಳೆ ಇವನಿಗೆ ಮೊಬೈಲ್ ನಂಬರ್ ನೀಡಿದ್ದಾಳೆ. ಬಳಿಕ ನಡೆದದ್ದು ಮಾತ್ರ ಲವ್ವಿ ಡವ್ವಿ . ಸರಿ ಸುಮಾರು 2 ವರ್ಷ ಕಾಲ ಅವರಿಬ್ಬರು ಫೋನ್ ನಲ್ಲಿ ಮೆಸೇಜ್ ಹಾಗೂ ಕಾಲ್ ಮಾಡಿಕೊಂಡು ಕಾಲ ಕಳೆದಿದ್ದರು. ಇದೇ ವರ್ಷದ ಜನವರಿ ತಿಂಗಳ ಕೊನೆಯಲ್ಲಿ ಶಿರಸಿ ಮಾರಿಗುಡಿ ದೇವಸ್ಥಾನದಲ್ಲಿ ಭೇಟಿಯಾದ ಅವರಿಬ್ಬರು ಬಳಿಕ ಅಲ್ಲಿಂದ ನೇರ ಹೋಗಿ ಶಿರಸಿಯ ಖಾಸಗಿ ಲಾಡ್ಜ್ ನಲ್ಲಿ ಪಲ್ಲಂಗದಾಟ ಶುರು ಮಾಡಿಕೊಂಡಿದ್ದಾರೆ. ಬಳಿಕ ಇವರ ಕಾಮದಾಟ ಮುಂದುವರಿಯುತ್ತಾ ಹೋಯಿತು. ಈ ವೇಳೆ ಅವರಿಬ್ಬರು ಜತೆ ಜತೆಯಾಗಿ ಫೊಟೊಗೆ ಫೋಸ್ ಕೂಡ ನೀಡಿದ್ದಾರೆ. ಇವೆಲ್ಲವೂ ಪ್ರಶಾಂತ್ ಮೊಬೈಲ್ ನಲ್ಲಿ ಭದ್ರವಾಗಿ ಸಂಗ್ರಹವಾಗಿತ್ತು
ಈ ಫೋಟೊ ಹಿಡಿದುಕೊಂಡು ಸಂತ್ರಸ್ತೆಯನ್ನು ಆರೋಪಿ ಬ್ಲ್ಯಾಕ್ ಮೇಲ್ ಮಾಡಲು ಆರಂಭಿಸಿದ್ದಾನೆ. ವೀಡಿಯೋ ಕಾಲ್ ಮಾಡಿ, ಬೆತ್ತಲೆ ದೇಹವನ್ನು ತೋರಿಸುವಂತೆ ಒತ್ತಡ ಹಾಕಿದ ಆತ ಲಾಡ್ಜ್ ನಲ್ಲಿ ತೆಗೆದ ಫೋಟೊ ತಾಯಿ ಹಾಗೂ ಗಂಡನಿಗೆ ಕಳುಹಿಸುವುದಾಗಿ ಬೆದರಿಕೆ ಒಡ್ಡಿದ್ದಾನೆ. ಗತ್ಯಂತರವಿಲ್ಲದೇ ಮಹಿಳೆ ಮೊಬೈಲ್ ನಲ್ಲಿ ದೇಹ ಪ್ರದರ್ಶಿಸಿದ್ದು , ಅದು ಕೂಡ ಸ್ಕ್ರೀನ್ ಶಾಟ್ ರೂಪದಲ್ಲಿ ಪ್ರಶಾಂತ್ ನ ಫೋನ್ ಸೇರಿದೆ
ಈ ಬಳಿಕ ಈ ಎಲ್ಲ ಫೋಟೊಗಳನ್ನು ಇಟ್ಟುಕೊಂಡು ಹಣಕ್ಕೆ ಬೇಡಿಕೆ ಇಟ್ಟಿದ್ದು ಮಹಿಳೆ ಒಂದು ಬಾರಿ 25 ಸಾವಿರ ರೂಪಾಯಿ ಗೂಗಲ್ ಪೇ ಮಾಡಿದ್ದಾಳೆ. ಆದರೇ ಸ್ವಲ್ಪ ದಿನದ ಬಳಿಕ ಮತ್ತಷ್ಟೂ ಹಣಕ್ಕೆ ಬೇಡಿಕೆ ಇಟ್ಟ ಪ್ರಶಾಂತ್ 7 ಲಕ್ಷ ರೂಪಾಯಿ ನೀಡುವಂತೆ ಒತ್ತಡ ಹಾಕಿದ್ದಾನೆ. ಹಣ ನೀಡದಿದ್ದಾಗ ಆಕೆಯ ಖಾಸಗಿ ಫೋಟೋಗಳನ್ನು ಹಾಗೂ ತನ್ನ ಜೊತೆ ಇರುವ ಫೋಟೋಗಳನ್ನು ಮಹಿಳೆಯ ತಾಯಿಯ ಮೊಬೈಲಿಗೆ ವಾಟ್ಸಪ್ ಮಾಡಿದ್ದಾನೆ.
ಕೊನೆಗೆ ಈತನ ಉಪಟಳ ತಾಳಲಾರದೇ ಸಂತ್ರಸ್ತೆ ಮಹಿಳೆ ಕಾರವಾರ ಪೊಲೀಸ್ ಠಾಣೆಯಲ್ಲಿ ಅತ್ಯಾಚಾರ ಪ್ರಕರಣ ದಾಖಲಿಸಿದ್ದಾರೆ. ಮನೆ ಮಂದಿಗೆ ಹಾಗೂ ಮಾರ್ಯಾದೆಗೆ ಅಂಜಿ ತಡವಾಗಿ ದೂರು ನೀಡಿರುವುದಾಗಿ ಮಹಿಳೆ ತಿಳಿಸಿದ್ದಾರೆ ತನಿಖೆ ನಡೆಸಿದ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ
Discover more from Coastal Times Kannada
Subscribe to get the latest posts sent to your email.
Discussion about this post