ಮಂಗಳೂರು, ಸೆ. 29: ಆಳಸಮುದ್ರ ಮೀನುಗಾರಿಕೆಗೆ ಹೋಗಿದ್ದ ಮಂಗಳೂರಿನ ಮೀನುಗಾರರ ಬಲೆಗೆ ಬೃಹತ್ ಗಾತ್ರದ ಮುರು ಮೀನು ಸಿಕ್ಕಿದ್ದು, ಇದೀಗ ಇದರ ವೀಡಿಯೋ ಭಾರೀ ವೈರಲ್ ಆಗುತ್ತಿದೆ.
ನಗರದ ಮೀನುಗಾರಿಕಾ ಧಕ್ಕೆಯಿಂದ ಆಳಸಮುದ್ರ ಮೀನುಗಾರಿಕೆಗೆಂದು ಹೊರಟ ಬೋಟ್‌ನವರ ಬಲೆಗೆ ಈ ಮೀನು ಬಿದ್ದಿದೆ. ಸುಮಾರು 300 ಕೆ.ಜಿ.ಯಷ್ಟು ತೂಕವಿರುವ ಈ ಮುರು ಮೀನನ್ನು ಐದಾರು ಮಂದಿ ಮೀನುಗಾರರು ಎತ್ತಲು ಹರಸಾಹಸ ಪಡುವುದು ದೃಶ್ಯದಲ್ಲಿ ಕಂಡುಬಂದಿದೆ. ಸಾಮಾನ್ಯ ಸಣ್ಣ ಗಾತ್ರದ ಮುರು ಮೀನು ಎಲ್ಲೆಡೆ ನೋಡಲು ಸಿಗುತ್ತದೆ. ಆದರೆ ಇಷ್ಟು ದೊಡ್ಡ ಗಾತ್ರದ ಮುರು ಮೀನು ಕಾಣಲು ಸಿಗುವುದು ವಿರಳ. ಕೆ.ಜಿ.ಗೆ 200 ರೂಪಾಯಿ ಬೆಲೆಗೆ ಈ ಮೀನು ಮಾರಾಟವಾಗುತ್ತದೆ ಎಂದು ಮೀನುಗಾರರೊಬ್ಬರು ತಿಳಿಸಿದ್ದಾರೆ.
Discussion about this post