ಇಸ್ಲಾಮಾಬಾದ್: ಪಾಕಿಸ್ತಾನದ ಇಬ್ಬರು ರಾಜಕೀಯ ಪಕ್ಷಗಳ ಪ್ರತಿನಿಧಿಗಳು ಟಿವಿ ಡಿಬೇಟ್ ವೇಳೆ ಲೈವ್ ನಲ್ಲೇ ಪರಸ್ಪರ ಹೊಡೆದಾಡಿಕೊಂಡಿರುವ ವಿಡಿಯೋ ಇದೀಗ ವ್ಯಾಪಕ ವೈರಲ್ ಆಗುತ್ತಿದೆ. ಪಾಕಿಸ್ತಾನದಲ್ಲಿ ಈ ಘಟನೆ ನಡೆದಿದ್ದು, ಪಾಕಿಸ್ತಾನದ ಖಾಸಗಿ ವಾಹಿನಿಯೊಂದರ ನೇರಪ್ರಸಾರ ಕಾರ್ಯಕ್ರಮದಲ್ಲಿ ರಾಜಕೀಯ ಪಕ್ಷಗಳ ಪ್ರತಿನಿಧಿಗಳು ಹೊಡೆದಾಡಿಕೊಂಡಿದ್ದಾರೆ. ಚರ್ಚಾ ಕಾರ್ಯಕ್ರಮದ ವೇಳೆ ವಾದ ತೀವ್ರಗೊಂಡ ಹಿನ್ನೆಲೆ ಪಾಕಿಸ್ತಾನ್ ತೆಹ್ರೀಕ್ ಇನ್‌ಸಾಫ್ (ಪಿಟಿಐ) ಪಕ್ಷದ ಪರವಾಗಿ ಬಂದಿದ್ದ ವಕೀಲ ಶೇರ್ ಅಫಜಲ್ ಮರವತ್ ಮತ್ತು ಪಾಕಿಸ್ತಾನ ಮುಸ್ಲಿಂ ಲೀಗ್ ಪರವಾಗಿ ಬಂದಿದ್ದ ಸೆನೆಟರ್ ಅಫಾನುಲ್ಹಾ ಖಾನ್ ಹೊಡೆದಾಡಿಕೊಂಡಿದ್ದಾರೆ.
مرشد کو گالی دو گے تو مرید تو جواب دے گا ہی۔۔ اور جواب بنتا بھی ہے! کوئی تو ان کو انکی زبان میں سمجانے والا ہو!
پکڑنا ہے یا چھوڑنا ہے 🤣😎 pic.twitter.com/i52eSgjrGL— SB_Blog (@Bukhari2204) September 28, 2023
ಕಾರ್ಯಕ್ರಮ ನಡೆಸಿಕೊಡುತ್ತಿದ್ದ ನಿರೂಪಕ ತಡೆಯಲು ಯತ್ನಿಸಿದರೂ ಡೆಸ್ಕ್‌ನಿಂದ ಎದ್ದು ಗಲಾಟೆ ಮಾಡಿದ್ದಾರೆ. ಕೊನೆಗೆ ಸ್ಥಳದಲ್ಲಿದ್ದ ಇತರ ಸಿಬ್ಬಂದಿ ಇಬ್ಬರನ್ನೂ ದೂರ ಸರಿಸಿ ಗಲಾಟೆ ನಿಲ್ಲಿಸಿದ್ದಾರೆ. ಇದರ ವಿಡಿಯೊವನ್ನು @Bukhari2204 ಎನ್ನುವ ಬಳಕೆದಾರರು ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.
ವೀಡಿಯೊದಲ್ಲಿ, ಶೇರ್ ಅಫ್ಜಲ್ ಮರ್ವಾತ್ – ಮೆರೂನ್ ಶರ್ಟ್‌ನಲ್ಲಿ – ತನ್ನ ಕುರ್ಚಿಯಿಂದ ಎದ್ದು ಅಫ್ನಾನುಲ್ಲಾ ಖಾನ್‌ಗೆ ಕಪಾಳಮೋಕ್ಷ ಮಾಡುತ್ತಾರೆ. ಬಳಿಕ ಖಾನ್ ಕೂಡ ಅವರೊಂದಿಗೆ ಸಂಘರ್ಷಕ್ಕಿಳಿದಿದ್ದಾರೆ. ಈ ವೇಳೆ ಅಲ್ಲಿಯೇ ಇದ್ದ ಟಿವಿ ನಿರೂಪಕ ಇಬ್ಬರನ್ನು ಶಾಂತಗೊಳಿಸಲು ಪ್ರಯತ್ನಿಸುತ್ತಾರೆ. ಅದರೆ ಅದು ಸಫಲವಾಗುವುದಿಲ್ಲ. ಬಳಿಕ ಸಿಬ್ಬಂದಿ ಸದಸ್ಯರು ಇಬ್ಬರನ್ನು ಬೇರ್ಪಡಿಸಲು ಪ್ರಯತ್ನಿಸಿದ್ದಾರೆ. ಈ ವೇಳೆ ಇಬ್ಬರು ಅಶ್ಲೀಲ ಪದಗಳಿಂದ ಬೈದಾಡಿಕೊಳ್ಳುತ್ತಾರೆ. ಈ ವಿಡಿಯೋ ಇದೀಗ ವ್ಯಾಪಕ ವೈರಲ್ ಆಗಿದ್ದು, ಇದು ಹಾಲಿ ಪಾಕಿಸ್ತಾನ ರಾಜಕಾರಣಕ್ಕೆ ಹಿಡಿದ ಕೈಗನ್ನಡಿಯಾಗಿದೆ ಎಂದು ಹಲವರು ಟೀಕಿಸಿದ್ದಾರೆ.
Discussion about this post