ಉಡುಪಿ : ಆಸ್ಟ್ರೇಲಿಯನ್ ಓಪನ್ ಟೆನಿಸ್ ಪುರುಷರ ಹಾಗೂ ಮಹಿಳೆಯರ ಫೈನಲ್ ಪಂದ್ಯಾಟದ ಧ್ವಜವಂದನಾ ತಂಡಕ್ಕೆ ಆಸ್ಟ್ರೇಲಿಯಾದ ಮೆಲ್ಬರ್ನ್ ನಲ್ಲಿ ನೆಲೆಸಿರುವ ಉಡುಪಿ ಮೂಲದ ಚಾರ್ವಿ ಶೆಟ್ಟಿ ಆಯ್ಕೆಯಾಗಿದ್ದಾರೆ.
ಆಸ್ಟ್ರೇಲಿಯನ್ ಓಪನ್ ಟೆನಿಸ್ ಟೂರ್ನಮೆಂಟ್ ನ ಸಂಘಟನಾ ಸಿಬ್ಬಂದಿ ತಂಡದಲ್ಲಿ ಬಾಲ್ ಕಿಡ್ಸ್ ಆಗಿ ಕಾರ್ಯನಿರ್ವಹಿಸುತ್ತಿರುವ ಚಾರ್ವಿ ಮೆಲ್ಬರ್ನ್ ನ ಹ್ಯಾಲಿ ಬರೀ ಕಾಲೇಜಿನಲ್ಲಿ ಒಂಭತ್ತನೇ ತರಗತಿಯ ವಿದ್ಯಾರ್ಥಿನಿ.
ಚಾರ್ವಿ ಶೆಟ್ಟಿ ಸ್ವತಃ ಟೆನಿಸ್ ಅಟಗಾರ್ತಿಯಾಗಿದ್ದು, ಉತ್ತಮ ಈಜುಪಟು ಹಾಗೂ ಕರಾಟೆಯಲ್ಲಿ ಬ್ಲಾಕ್ ಬೆಲ್ಟ್ ಪಡೆದಿದ್ದಾರೆ.
ಇವರು ಬಸ್ರೂರು ಕೋಳ್ಕೆರೆ ಅನಂತರಾಮಶೆಟ್ಟಿ ಮತ್ತು ಬ್ರಹ್ಮಾವರ ಸಕ್ಕರೆ ಕಾರ್ಖಾನೆಯ ಅಧ್ಯಕ್ಷ ಬೈಕಾಡಿ ಸುಪ್ರಸಾದ್ ಶೆಟ್ಟಿ ಅವರ ಸಹೋದರಿ ಕೊರಂಗ್ರಪಾಡಿ ದೊಡ್ಡಮನೆ ಬೈಕಾಡಿ ಸುಶ್ಮಿತಾ ಶೆಟ್ಟಿ ದಂಪತಿ ಪುತ್ರಿ.