ಮೆಲ್ಬೋರ್ನ್: ಚೆಕ್ ಗಣರಾಜ್ಯದ ಅಗ್ರ ಶ್ರೇಯಾಂಕದ ಕತ್ರಿನಾ ಸಿನಿಕೋವಾ, ಬಾರ್ಬೊರಾ ಕ್ರೆಜ್ಕೋವಾ ಅವರು ಆಸ್ಟ್ರೇಲಿಯನ್ ಓಪನ್ 2022 ರಲ್ಲಿ ಮಹಿಳೆಯರ ಡಬಲ್ಸ್ ಟ್ರೋಫಿಯನ್ನು ಗೆದ್ದರು.
ಭಾನುವಾರ ನಡೆದ ಫೈನಲ್ನಲ್ಲಿ ಕಜಕಿಸ್ತಾನದ ಅನ್ನಾ ಡಿನಿಲಿನಾ ಬ್ರೆಜಿಲ್ನ ಬೀಟ್ರಿಸ್ ಹದ್ದದ್ ಮಯ್ಯ ಅವರನ್ನು ಸೋಲಿಸಿ 6-7, (3-7), 6-4, 6-4 ಅಂತರದಲ್ಲಿ ಗೆದ್ದರು. ಕ್ರೆಜಿಕೋವಾ ಜೋಡಿಗೆ ಇದು ನಾಲ್ಕನೇ ಗ್ರ್ಯಾಂಡ್ ಸ್ಲಾಮ್ ಆಗಿದೆ. 2 ಗಂಟೆ 42 ನಿಮಿಷಗಳ ಕಾಲ ನಡೆದ ಈ ಪಂದ್ಯದಲ್ಲಿ ಜೆಕ್ ಜೋಡಿ ಸುಲಭವಾಗಿ ಗೆಲುವು ಸಾಧಿಸಿದೆ.
ಕಜಕಿಸ್ತಾನದ ತೀವ್ರ ಪ್ರತಿರೋಧದ ನಡುವೆಯೂ ಅಂತಿಮವಾಗಿ ಮೇಲುಗೈ ಸಾಧಿಸುವ ಮೂಲಕ ಕತ್ರಿನಾ ಸಿನಿಕೋವಾ ಬಾರ್ಬೊರಾ ಕ್ರೆಜ್ಕೋವಾ ಪ್ರಶಸ್ತಿ ಗೆದ್ದುಕೊಂಡರು. ಈ ಜೋಡಿ 2016 ರಲ್ಲಿ ಜೊತೆಯಾಗಿ ನಂತರ 2018 ವಿಂಬಲ್ಡನ್ ಗೆದ್ದರು, 2021 ರಲ್ಲಿ ಫ್ರೆಂಚ್ ಓಪನ್ ತಮ್ಮದಾಗಿಸಿಕೊಂಡಿದ್ದಾರೆ. ಭಾನುವಾರ ಆಸ್ಟ್ರೇಲಿಯನ್ ಓಪನ್ ಪ್ರಶಸ್ತಿ ಗೆಲ್ಲುವ ಮೂಲಕ ನಾಲ್ಕನೇ ಗ್ರ್ಯಾನ್ ಸ್ಲಾಮ್ ತಮ್ಮ ಕಾತೆಗೆ ಸೇರಿಸಿಕೊಂಡಿದ್ದಾರೆ.
Discover more from Coastal Times Kannada
Subscribe to get the latest posts sent to your email.
Discussion about this post