ಮುಂಬೈ: ನೀಲಿ ಚಿತ್ರಗಳ ನಿರ್ಮಾಣದಲ್ಲಿ ತೊಡಗಿದ್ದ ಗುಂಪೊಂದನ್ನು ಮುಂಬೈ ಪೊಲೀಸರು ಬಂಧಿಸಿದ್ದಾರೆ. ಮುಂಬೈ ಬಳಿಯ ಲೊನಾವ್ಲಾನಲ್ಲಿ ಐಶಾರಾಮಿ ವಿಲ್ಲಾ ಒಂದನ್ನು ಬಾಡಿಗೆ ಪಡೆದಿದ್ದ 15 ಜನರ ತಂಡವೊಂದು ಅಲ್ಲಿಯೇ ನೀಲಿ ಚಿತ್ರದ ಶೂಟಿಂಗ್ ನಡೆಸುತ್ತಿತ್ತು. ಈ ಶೂಟಿಂಗ್ನ ವಿಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಸಹ ಆಗಿತ್ತು. ಅದರ ಬೆನ್ನತ್ತಿದ ಲೊನಾವ್ಲಾ ಪೊಲೀಸರು ಗುಂಪನ್ನು ಬಂಧಿಸಲು ಯಶಸ್ವಿಯಾಗಿದ್ದಾರೆ. ನೀಲಿ ಚಿತ್ರ ನಿರ್ಮಾಣದಲ್ಲಿ ತೊಡಗಿದ್ದ 13 ಜನರನ್ನು ಲೊನಾವ್ಲಾ ಗ್ರಾಮಾಂತರ ಠಾಣೆ ಪೊಲೀಸರು ಬಂಧಿಸಿದ್ದು, ಅದರಲ್ಲಿ ಐದು ಮಂದಿ ಯುವತಿಯರು ಸಹ ಇದ್ದಾರೆ.
ಬೇರೆ ಬೇರೆ ರಾಜ್ಯಗಳಿಂದ ಆಗಮಿಸಿದ್ದ ಯುವಕರು ಒಟ್ಟಿಗೆ ಸೇರಿ ನೀಲಿ ಚಿತ್ರದ ಶೂಟಿಂಗ್ ಮಾಡುತ್ತಿದ್ದರು. ಐವರು ಯುವತಿಯರನ್ನು ಇದೇ ಕಾರಣಕ್ಕೆ ಬಳಸಿಕೊಳ್ಳಲಾಗಿತ್ತು. ಡಿಜಿಟಲ್ ಫ್ಲಾಟ್ಫಾರ್ಮ್, ಒಟಿಟಿಗಳಿಗಾಗಿ ಈ ಯುವಕರು ನೀಲಿ ಚಿತ್ರದ ಚಿತ್ರೀಕರಣ ಮಾಡುತ್ತಿದ್ದರು ಎನ್ನಲಾಗಿದೆ. ದಾಳಿ ನಡೆಸಿದ ಪೊಲೀಸರು ಚಿತ್ರೀಕರಣ ಮಾಡಿದ್ದ ಫುಟೇಜ್ ಅನ್ನು ವಶಪಡಿಸಿಕೊಂಡಿದ್ದಾರೆ. ಅಲ್ಲದೆ ಡಿಜಿಟಲ್ ಕ್ಯಾಮೆರಾ ಹಾಗೂ ಚಿತ್ರೀಕರಣಕ್ಕೆ ಬಳಸಿದ್ದ ಇನ್ನಿತರೆ ಕೆಲವು ವಸ್ತುಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ನೀಲಿ ಚಿತ್ರಗಳ ನಿರ್ಮಾಣಕ್ಕೆ ಭಾರತದಲ್ಲಿ ನಿಷೇಧವಿದೆ. ಇದೇ ಪ್ರಕರಣದಲ್ಲಿ ಶಿಲ್ಪಾ ಶೆಟ್ಟಿ ಪತಿ ರಾಜ್ ಕುಂದ್ರಾ ಸಹ ಜೈಲು ಸೇರಿದ್ದರು. ಈ ಹಿಂದೆ ಮುಂಬೈನ ಒಂದು ಬಂಗ್ಲೆ ಮೇಲೆ ದಾಳಿ ನಡೆಸಿದ್ದ ಪೊಲೀಸರು ನೀಲಿ ಚಿತ್ರ ನಿರ್ಮಾಣ ಮಾಡುತ್ತಿದ್ದಾರೆಂಬ ಆರೋಪದಲ್ಲಿ ಗುಂಪೊಂದನ್ನು ಬಂಧಿಸಿದ್ದರು. ಆ ನೀಲಿ ಚಿತ್ರ ನಿರ್ಮಾಣಕ್ಕೆ ಬಂಡವಾಳ ಹೂಡಿದ್ದ ರಾಜ್ ಕುಂದ್ರಾ ಅವರನ್ನು ಆ ನಂತರ ಬಂಧಿಸಲಾಯ್ತು. ಭಾರತದಲ್ಲಿ ಚಿತ್ರೀಕರಣ ಮಾಡಿ ಆ ವಿಡಿಯೋವನ್ನು ಹಾಟ್ಶಾಟ್ಸ್ ಹೆಸರಿನ ಆಪ್ಗೆ ಲಂಡನ್ನ ಸಂಸ್ಥೆಯೊಂದರ ಮೂಲಕ ಅಪ್ಲೋಡ್ ಮಾಡುತ್ತಿದ್ದರಂತೆ ಕುಂದ್ರಾ.
Discover more from Coastal Times Kannada
Subscribe to get the latest posts sent to your email.
Discussion about this post