ಮಂಗಳೂರು, ಡಿ. 31 ಪ್ರದೀಪ್ ಅವರ ನಿರ್ದೇಶನದ ತುಳು ಸಿನಿಮಾ ‘ಸೋಡಾ ಶರ್ಬತ್’ ನ ಅದ್ಧೂರಿ ಪ್ರಥಮ ಪ್ರದರ್ಶನವು ಗುರುವಾರದಂದು ಬಿಗ್ ಚಿತ್ರಮಂದಿರದಲ್ಲಿ ನಡೆಯಿತು.
ಪ್ರೀಮಿಯರ್ ಶೋಗೆ ಮುನ್ನ ನಡೆದ ಕಿರು ಕಾರ್ಯಕ್ರಮವನ್ನು ಕೇಮಾರು ಮಠದ ಶ್ರೀ ವಿಟ್ಲದಾಸ ಸ್ವಾಮೀಜಿ ಉದ್ಘಾಟಿಸಿದರು.
ದೈಜಿವರ್ಲ್ಡ್ ಮಾಧ್ಯಮದ ವ್ಯವಸ್ಥಾಪಕ ನಿರ್ದೇಶಕ ವಾಲ್ಟರ್ ನಂದಳಿಕೆ, ನಿರ್ದೇಶಕ ಮತ್ತು ನಿರ್ಮಾಪಕ ಪ್ರಕಾಶ್ ಪಾಂಡೇಶ್ವರ್, ಸ್ನೇಹಾಲಯದ ಸಂಸ್ಥಾಪಕ ಜೋಸೆಫ್ ಕ್ರಾಸ್ತಾ, ಗಾಯಕ ಮೊಹಮ್ಮದ್ ಇಕ್ಬಾಲ್ ಇತರರು ಉಪಸ್ಥಿತರಿದ್ದರು.
ತುಳುನಾಡ ಮಾಣಿಕ್ಯ ಖ್ಯಾತಿಯ ಅರವಿಂದ ಬೋಳಾರ್, ಖ್ಯಾತ ಹಾಸ್ಯ ನಟ ಭೋಜರಾಜ್ ವಾಮಂಜೂರು, ತೆಲಿಕೆದ ಬೊಳ್ಳಿ ಖ್ಯಾತಿಯ ದೇವದಾಸ್ ಕಾಪಿಕಾಡ್, ಉಮೇಶ್ ಮಿಜಾರ್, ಪ್ರಸನ್ನ ಬೈಲೂರು ಕೊಂಕಣಿಯ ಖ್ಯಾತ ನಟ ಮೆಲ್ಲು ವೆಲೆನ್ಸಿಯಾ, ಪ್ರೈವೆಟ್ ಚಾಲೆಂಜ್ ಖ್ಯಾತಿಯ ವಾಲ್ಟರ್ ನಂದಳಿಕೆ, ಲವೀನಾ ಫೆರ್ನಾಂಡಿಸ್, ರಂಜಿತಾ ಸೇರಿದಂತೆ ಅನೇಕ ಮಂದಿ ಈ ಸಿನಿಮಾದಲ್ಲಿ ಅಭಿನಯಿಸುತ್ತಿದ್ದು, ಮೆಲ್ವಿನ್ ಎಲ್ಪೆಲ್ ಕಾರ್ಯನಿರ್ವಾಹಕ ನಿರ್ಮಾಪಕರಾಗಿ ಹಾಗೂ ಪ್ಯಾಟ್ಸನ್ ಪೆರೀರಾ ಚಿತ್ರಕ್ಕೆ ಸಂಗೀತ ಸಂಯೋಜಿಸಿದ್ದಾರೆ. ಸಂಕಲನವನ್ನು ಗಣೇಶ್ ನೀರ್ಚಾಲ್ ಮಾಡಿದ್ದಾರೆ.
Discover more from Coastal Times Kannada
Subscribe to get the latest posts sent to your email.
Discussion about this post