• About us
  • Contact us
  • Disclaimer
Thursday, October 15, 2026
  • Login
Coastal Times Kannada
No Result
View All Result
  • Home
    • ಗ್ಯಾಜೆಟ್
  • ರಾಜ್ಯ
  • ರಾಷ್ಟ್ರೀಯ
  • ರಾಜಕೀಯ
  • ವಿದೇಶಿ ಸುದ್ದಿ
  • ಕರಾವಳಿ
  • ಕ್ರೈಂ ನ್ಯೂಸ್
  • ಕ್ರೀಡೆ
  • ಸಿನಿಮಾ
  • ಆರೋಗ್ಯ
  • ವೆಬ್ ಸ್ಟೊರೀಸ್
Join to Group
  • Home
    • ಗ್ಯಾಜೆಟ್
  • ರಾಜ್ಯ
  • ರಾಷ್ಟ್ರೀಯ
  • ರಾಜಕೀಯ
  • ವಿದೇಶಿ ಸುದ್ದಿ
  • ಕರಾವಳಿ
  • ಕ್ರೈಂ ನ್ಯೂಸ್
  • ಕ್ರೀಡೆ
  • ಸಿನಿಮಾ
  • ಆರೋಗ್ಯ
  • ವೆಬ್ ಸ್ಟೊರೀಸ್
No Result
View All Result
Coastal Times Kannada
No Result
View All Result

ಫೆಬ್ರವರಿಯಲ್ಲಿ 4,303 ಅಂಕ ಕಳೆದುಕೊಂಡ ಸೆನ್ಸೆಕ್ಸ್​; NIFTY ಇತಿಹಾಸದಲ್ಲೇ ಭಾರೀ ಕುಸಿತ, ಒಂದೇ ದಿನ 90 ಲಕ್ಷ ಕೋಟಿ ನಷ್ಟ

Coastal Times by Coastal Times
March 1, 2025
in ರಾಷ್ಟ್ರೀಯ ಸುದ್ದಿ
ಫೆಬ್ರವರಿಯಲ್ಲಿ 4,303 ಅಂಕ ಕಳೆದುಕೊಂಡ ಸೆನ್ಸೆಕ್ಸ್​; NIFTY ಇತಿಹಾಸದಲ್ಲೇ ಭಾರೀ ಕುಸಿತ, ಒಂದೇ ದಿನ 90 ಲಕ್ಷ ಕೋಟಿ ನಷ್ಟ
33
VIEWS
WhatsappTelegramShare on FacebookShare on Twitter

ಮುಂಬೈ: ದುರ್ಬಲ ಜಾಗತಿಕ ಪ್ರವೃತ್ತಿಗಳು ಮತ್ತು ವ್ಯಾಪಾರ ಉದ್ವಿಗ್ನತೆಗಳು ಹೂಡಿಕೆದಾರರ ಭಾವನೆಯ ಮೇಲೆ ಪರಿಣಾಮ ಬೀರಿದ್ದರಿಂದ ಭಾರತೀಯ ಷೇರು ಮಾರುಕಟ್ಟೆ ಶುಕ್ರವಾರ ತೀವ್ರ ಕುಸಿತಕ್ಕೆ ಸಾಕ್ಷಿಯಾಯಿತು. ದೇಶದ ಎರಡೂ ಬೆಂಚ್ ಮಾರ್ಕ್ ಸೂಚ್ಯಂಕಗಳು ಭಾರಿ ನಷ್ಟದೊಂದಿಗೆ ದಿನವನ್ನು ಕೊನೆಗೊಳಿಸಿದವು.

ಸೆನ್ಸೆಕ್ಸ್ 1,414 ಪಾಯಿಂಟ್ ಅಥವಾ ಶೇಕಡಾ 1.9 ರಷ್ಟು ಕುಸಿದು 73,198 ರಲ್ಲಿ ಕೊನೆಗೊಂಡಿದೆ. ಸೂಚ್ಯಂಕವು ವಾರದಲ್ಲಿ 2,113 ಪಾಯಿಂಟ್​ಗಳು ಅಥವಾ ಶೇಕಡಾ 2.8 ರಷ್ಟು ಕಳೆದುಕೊಂಡಿದೆ. ಇನ್ನು ಒಟ್ಟಾರೆಯಾಗಿ ಫೆಬ್ರವರಿಯಲ್ಲಿ ಸೆನ್ಸೆಕ್ಸ್​ 4,303 ಪಾಯಿಂಟ್​ಗಳು ಅಥವಾ ಶೇಕಡಾ 5.6 ರಷ್ಟು ಕುಸಿದಿದೆ. ಸೆನ್ಸೆಕ್ಸ್ ಈಗ ತನ್ನ ಸಾರ್ವಕಾಲಿಕ ಗರಿಷ್ಠ 85,978 ರ ಮಟ್ಟದಿಂದ ಸುಮಾರು ಶೇಕಡಾ 15 ರಷ್ಟು ಕುಸಿದಿದೆ.

ನಿಫ್ಟಿ 50 ಸೂಚ್ಯಂಕವು 420 ಪಾಯಿಂಟ್ ಅಥವಾ ಶೇಕಡಾ 1.86 ರಷ್ಟು ಕುಸಿದು 22,125 ಕ್ಕೆ ತಲುಪಿದೆ. ಇಂಟ್ರಾ-ಡೇ ಸೆಷನ್​ನಲ್ಲಿ ನಿಫ್ಟಿ 22,105 ರ ಕನಿಷ್ಠ ಮಟ್ಟ ತಲುಪಿತ್ತು. ನಿಫ್ಟಿ ಫೆಬ್ರವರಿಯಲ್ಲಿ ಶೇಕಡಾ 5.9 ರಷ್ಟು ಅಂಕಗಳನ್ನು ಕಳೆದುಕೊಂಡಿದೆ ಮತ್ತು ಈಗ ಅದು ತನ್ನ ದಾಖಲೆಯ ಗರಿಷ್ಠ 26,277ರ ಮಟ್ಟದಿಂದ ಸುಮಾರು ಶೇಕಡಾ 16 ರಷ್ಟು ಕುಸಿದಿದೆ.

ದೇಶೀಯ ಬೆಂಚ್ ಮಾರ್ಕ್ ಸೂಚ್ಯಂಕಗಳು ಇಂಟ್ರಾ-ಡೇ ಸೆಷನ್ ಅನ್ನು ಕೆಳಮಟ್ಟದಲ್ಲಿ ಕೊನೆಗೊಳಿಸುತ್ತಿದ್ದಂತೆ, ಇಂಡಸ್ಇಂಡ್ ಬ್ಯಾಂಕ್ ಶೇಕಡಾ 7 ರಷ್ಟು ಕುಸಿದು ಅಗ್ರ ನಷ್ಟ ಅನುಭವಿಸಿತು. ಟೆಕ್ ಮಹೀಂದ್ರಾ, ಮಹೀಂದ್ರಾ & ಮಹೀಂದ್ರಾ, ಭಾರ್ತಿ ಏರ್ ಟೆಲ್, ಟಾಟಾ ಮೋಟಾರ್ಸ್, ಟೈಟಾನ್, ಇನ್ಫೋಸಿಸ್ ಮತ್ತು ನೆಸ್ಲೆ ಇಂಡಿಯಾ ಶೇಕಡಾ 4 ರಿಂದ 6 ರಷ್ಟು ಕುಸಿದವು.

ಸೆನ್ಸೆಕ್ಸ್​ನ 30 ಷೇರುಗಳ ಪೈಕಿ 27 ಷೇರುಗಳು ಶೇಕಡಾ 1 ಕ್ಕಿಂತ ಹೆಚ್ಚು ನಷ್ಟ ದಾಖಲಿಸಿದರೆ, ಎಚ್​ಡಿಎಫ್​ಸಿ ಬ್ಯಾಂಕ್ ಮಾತ್ರ ಶೇಕಡಾ 2 ರಷ್ಟು ಏರಿಕೆಯಾಗಿದೆ. ಎಲ್ಲಾ ವಲಯ ಸೂಚ್ಯಂಕಗಳು ಶೇಕಡಾ 1 ಕ್ಕಿಂತ ಹೆಚ್ಚಿನ ನಷ್ಟದೊಂದಿಗೆ ಕೊನೆಗೊಂಡವು. ಐಟಿ ಮತ್ತು ಆಟೋ ಷೇರುಗಳು ತಲಾ ಶೇಕಡಾ 4 ರಷ್ಟು ಕುಸಿದವು. ಎಫ್ ಎಂಸಿಜಿ, ಹೆಲ್ತ್ ಕೇರ್, ಕ್ಯಾಪಿಟಲ್ ಗೂಡ್ಸ್, ಗ್ರಾಹಕ ಬಾಳಿಕೆ ಬರುವ ವಸ್ತುಗಳು ಮತ್ತು ತೈಲ ಮತ್ತು ಅನಿಲ ಸೇರಿದಂತೆ ಇತರ ವಲಯಗಳು ಸಹ ಶೇಕಡಾ 2 ಕ್ಕಿಂತ ಹೆಚ್ಚು ನಷ್ಟವನ್ನು ದಾಖಲಿಸಿವೆ.

ವಹಿವಾಟಿಗೆ ಒಳಪಟ್ಟ 4,081 ಷೇರುಗಳ ಪೈಕಿ 3,248 ಷೇರುಗಳು ನಷ್ಟದಲ್ಲಿ ಕೊನೆಗೊಂಡರೆ, 742 ಷೇರುಗಳು ಮಾತ್ರ ಲಾಭ ಗಳಿಸುವಲ್ಲಿ ಯಶಸ್ವಿಯಾದವು. ಸುಮಾರು 476 ಷೇರುಗಳು ತಮ್ಮ ಲೋವರ್ ಸರ್ಕ್ಯೂಟ್ ಮಿತಿಯನ್ನು ತಲುಪಿದರೆ, 106 ಷೇರುಗಳು ತಮ್ಮ ಗರಿಷ್ಠ ಮಿತಿಯನ್ನು ಮುಟ್ಟಿದವು.

ಇಂದಿನ ವಹಿವಾಟಿನಿಂದ ಷೇರು ಮಾರುಕಟ್ಟೆಯ ಹೂಡಿಕೆದಾರರಿಗೆ ಬರೋಬ್ಬರಿ 93.65 ಲಕ್ಷ ಕೋಟಿ ನಷ್ಟ ಉಂಟಾಗಿದೆ ಎಂದು ಅಂದಾಜಿಸಲಾಗಿದೆ. ಕಳೆದ ವರ್ಷ ಸೆಪ್ಟೆಂಬರ್ 27 ರಂದು ದಾಖಲಾಗಿದ್ದ 85,978.25 ಪಾಯಿಂಟ್ ದಾಖಲೆಯ ಗರಿಷ್ಠ ಮಟ್ಟದಿಂದ, ಬಿಎಸ್ಇ ಸೂಚ್ಯಂಕ ಬರೋಬ್ಬರಿ 12,780.15 ಪಾಯಿಂಟ್ ಗಳು ಅಥವಾ ಶೇ.14.86 ಪ್ರತಿಶತ ಕುಸಿದಿದೆ.

ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಕೆನಡಾ, ಮೆಕ್ಸಿಕೋ ಮತ್ತು ಚೀನಾ ಉತ್ಪನ್ನಗಳ ಮೇಲೆ ಆಮದು ಸುಂಕ ದಿಢೀರ್ ಏರಿಕೆ ಮಾಡಿದ್ದರಿಂದ ಅಮೆರಿಕಾದ ಷೇರು ಮಾರುಕಟ್ಟೆ ತಲ್ಲಣಿಸಿದೆ. ಒಂದು ದಿನ ಹಿಂದೆಯೇ ಅಮೆರಿಕದಲ್ಲಿ ಮಾರುಕಟ್ಟೆ ಕುಸಿತ ಕಂಡಿದ್ದು ಇದರ ಪರಿಣಾಮ ಭಾರತಕ್ಕೂ ತಟ್ಟಿದೆ ಎನ್ನಲಾಗುತ್ತಿದೆ.

Share this:

  • Share on Facebook (Opens in new window) Facebook
  • Share on X (Opens in new window) X

Like this:

Like Loading…

Related

Discover more from Coastal Times Kannada

Subscribe to get the latest posts sent to your email.

Previous Post

ಹೊನ್ನಾವರ: ಗುಜರಿ ಗೋಡೌನ್​​ಗೆ ಬೆಂಕಿ; ಲಾರಿಸಹಿತ ವಸ್ತುಗಳು ಅಗ್ನಿಗಾಹುತಿ

Next Post

ನಟ ದರ್ಶನ್​ಗೆ ವಿಧಿಸಿದ್ದ ಷರತ್ತು ಸಡಿಲಿಸಿದ ಹೈಕೋರ್ಟ್: ದೇಶಾದ್ಯಂತ ಸುತ್ತಾಡಲು ಅವಕಾಶ

Related Posts

ಕರ್ನಾಟಕ ಸೇರಿ 6 ರಾಜ್ಯಗಳಿಗೆ ನೂತನ ರಾಜ್ಯಪಾಲರ ನೇಮಕ: ರಾಜ್ಯದ ಗವರ್ನರ್ ಆಗಿ​ ಡಾ.ಸುಧಾ ಯಾದವ್
ರಾಷ್ಟ್ರೀಯ ಸುದ್ದಿ

ಕರ್ನಾಟಕ ಸೇರಿ 6 ರಾಜ್ಯಗಳಿಗೆ ನೂತನ ರಾಜ್ಯಪಾಲರ ನೇಮಕ: ರಾಜ್ಯದ ಗವರ್ನರ್ ಆಗಿ​ ಡಾ.ಸುಧಾ ಯಾದವ್

October 13, 2026
19
ಬಾಲಿವುಡ್​ ಹಿರಿಯ ನಟ ನಾನಾ ಪಾಟೇಕರ್ ಗೋವಾದ ನಿವಾಸದಲ್ಲಿ ತೀವ್ರ ಹೃದಯಾಘಾತಕ್ಕೀಡಾಗಿ ಸಾವು
ರಾಷ್ಟ್ರೀಯ ಸುದ್ದಿ

ಬಾಲಿವುಡ್​ ಹಿರಿಯ ನಟ ನಾನಾ ಪಾಟೇಕರ್ ಗೋವಾದ ನಿವಾಸದಲ್ಲಿ ತೀವ್ರ ಹೃದಯಾಘಾತಕ್ಕೀಡಾಗಿ ಸಾವು

October 8, 2026
28
Next Post
ನಟ ದರ್ಶನ್​ಗೆ ವಿಧಿಸಿದ್ದ ಷರತ್ತು ಸಡಿಲಿಸಿದ ಹೈಕೋರ್ಟ್: ದೇಶಾದ್ಯಂತ ಸುತ್ತಾಡಲು ಅವಕಾಶ

ನಟ ದರ್ಶನ್​ಗೆ ವಿಧಿಸಿದ್ದ ಷರತ್ತು ಸಡಿಲಿಸಿದ ಹೈಕೋರ್ಟ್: ದೇಶಾದ್ಯಂತ ಸುತ್ತಾಡಲು ಅವಕಾಶ

Discussion about this post

Recent News

ಮಂಗಳೂರು: ಚರ್ಚ್ ಪಾದ್ರಿ ವಿರುದ್ಧ 50ಕ್ಕೂ ಹೆಚ್ಚು ಮಕ್ಕಳಿಗೆ ಲೈಂಗಿಕ ದೌರ್ಜನ್ಯ ಆರೋಪ ; ಒಡನಾಡಿ ಸಂಸ್ಥೆಯಿಂದ ಮಂಗಳೂರು ಕಮಿಷನರಿಗೆ ದೂರು

ಮಂಗಳೂರು: ಚರ್ಚ್ ಪಾದ್ರಿ ವಿರುದ್ಧ 50ಕ್ಕೂ ಹೆಚ್ಚು ಮಕ್ಕಳಿಗೆ ಲೈಂಗಿಕ ದೌರ್ಜನ್ಯ ಆರೋಪ ; ಒಡನಾಡಿ ಸಂಸ್ಥೆಯಿಂದ ಮಂಗಳೂರು ಕಮಿಷನರಿಗೆ ದೂರು

October 15, 2026
110
ಛಾಯಾಗ್ರಾಹಕರ ಬಗ್ಗೆ ಅವಹೇಳನಕಾರಿ ಪೋಸ್ಟ್: ಮಂಗಳೂರಿನ ಯುಟ್ಯೂಬರ್ ವಿರುದ್ಧ ಕ್ರಮಕ್ಕೆ ಆಗ್ರಹ!!

ಛಾಯಾಗ್ರಾಹಕರ ಬಗ್ಗೆ ಅವಹೇಳನಕಾರಿ ಪೋಸ್ಟ್: ಮಂಗಳೂರಿನ ಯುಟ್ಯೂಬರ್ ವಿರುದ್ಧ ಕ್ರಮಕ್ಕೆ ಆಗ್ರಹ!!

October 14, 2026
119
COASTAL BOX LOGO

CORPORATE OFFICE

KHYATI VISUAL MEDIA
3rd Floor, Shalimar Complex
Kankanady, Mangaluru-575002

Email ID : coastaltimeskannada@gmail.com

Follow Us

ಹೊಸ ಸುದ್ದಿಗಳು

ಮಂಗಳೂರು: ಚರ್ಚ್ ಪಾದ್ರಿ ವಿರುದ್ಧ 50ಕ್ಕೂ ಹೆಚ್ಚು ಮಕ್ಕಳಿಗೆ ಲೈಂಗಿಕ ದೌರ್ಜನ್ಯ ಆರೋಪ ; ಒಡನಾಡಿ ಸಂಸ್ಥೆಯಿಂದ ಮಂಗಳೂರು ಕಮಿಷನರಿಗೆ ದೂರು

ಮಂಗಳೂರು: ಚರ್ಚ್ ಪಾದ್ರಿ ವಿರುದ್ಧ 50ಕ್ಕೂ ಹೆಚ್ಚು ಮಕ್ಕಳಿಗೆ ಲೈಂಗಿಕ ದೌರ್ಜನ್ಯ ಆರೋಪ ; ಒಡನಾಡಿ ಸಂಸ್ಥೆಯಿಂದ ಮಂಗಳೂರು ಕಮಿಷನರಿಗೆ ದೂರು

October 15, 2026
ಛಾಯಾಗ್ರಾಹಕರ ಬಗ್ಗೆ ಅವಹೇಳನಕಾರಿ ಪೋಸ್ಟ್: ಮಂಗಳೂರಿನ ಯುಟ್ಯೂಬರ್ ವಿರುದ್ಧ ಕ್ರಮಕ್ಕೆ ಆಗ್ರಹ!!

ಛಾಯಾಗ್ರಾಹಕರ ಬಗ್ಗೆ ಅವಹೇಳನಕಾರಿ ಪೋಸ್ಟ್: ಮಂಗಳೂರಿನ ಯುಟ್ಯೂಬರ್ ವಿರುದ್ಧ ಕ್ರಮಕ್ಕೆ ಆಗ್ರಹ!!

October 14, 2026
ಮಂಗಳೂರು ಏರ್ ಪೋರ್ಟ್ ನಲ್ಲಿ ಟೂರಿಸ್ಟ್ ವಾಹನಗಳಿಂದ ದುಬಾರಿ ಶುಲ್ಕ ವಸೂಲಿ: ಟ್ಯಾಕ್ಸಿ ಚಾಲಕರಿಂದ 10 ದಿನಗಳ ಗಡುವು, ಅನಿರ್ದಿಷ್ಟಾವಧಿ ಧರಣಿ ಎಚ್ಚರಿಕೆ

ಮಂಗಳೂರು ಏರ್ ಪೋರ್ಟ್ ನಲ್ಲಿ ಟೂರಿಸ್ಟ್ ವಾಹನಗಳಿಂದ ದುಬಾರಿ ಶುಲ್ಕ ವಸೂಲಿ: ಟ್ಯಾಕ್ಸಿ ಚಾಲಕರಿಂದ 10 ದಿನಗಳ ಗಡುವು, ಅನಿರ್ದಿಷ್ಟಾವಧಿ ಧರಣಿ ಎಚ್ಚರಿಕೆ

October 14, 2026
  • About
  • Advertise
  • Privacy & Policy
  • Contact

Copyright ©2024. All Rights Reserved. Coastaltimeskannada.com | Design and Developed By Bluechip Infosystem - Contact Us : cc.bcis.blr@gmail.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

%d