ಮಂಗಳೂರು : ವಿಶ್ವದ ದಿಗ್ಗಜ ಕಾರು ಉತ್ಪಾದಕ ಸಂಸ್ಥೆ ಟೊಯೋಟಾದ ಕಾರುಗಳನ್ನು ಗ್ರಾಹಕರಿಗೆ ಪೂರೈಸುತ್ತಿರುವ ಅತ್ಯುನ್ನತ ಸೇವೆಗೆ ಹೆಸರಾದ ಭರವಸೆಯ ಸಂಸ್ಥೆ ಮಂಗಳೂರಿನ ಯುನೈಟೆಡ್ ಟೊಯೋಟಾ ಸಂಸ್ಥೆಯಲ್ಲಿ ಟೊಯೋಟಾದ ವಿನೂತನ ಗ್ಲಾಂಝ್ಹಾ ಕಾರನ್ನು ಗುರುವಾರ ಅನಾವರಣಗೊಳಿಸಲಾಯಿತು.
ತುಳು ಚಿತ್ರರಂಗದ ಖ್ಯಾತ ನಾಯಕ ನಟ ರೂಪೇಶ್ ಶೆಟ್ಟಿ ಹೊಸ ಕಾರನ್ನು ಅನಾವರಣಗೊಳಿಸಿದರು.
ಇದೇ ಸಂದರ್ಭದಲ್ಲಿ ನೂತನ ಕಾರಿನ ಕೀಲಿಕೈಯನ್ನು ಜನಾರ್ದನ ಅರ್ಕುಳ ಸೇರಿದಂತೆ ನಾಲ್ಕು ಪ್ರಮುಖ ಗ್ರಾಹಕರಿಗೆ ಹಸ್ತಾಂತರಿದಲಾಯಿತು. ತರ್ಜನಿ ಕಮ್ಯುನಿಕೇಶನ್ಸ್ ಚೇರ್‍ಮನ್ ಸಂಜಯ ಪ್ರಭು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಯುನೈಟೆಡ್ ಟೊಯೋಟಾ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಆರೂರ್ ಗಣೇಶ್ ರಾವ್, ನಿರ್ದೇಶಕ ಡಾ. ರಾಘವೇಂದ್ರ ರಾವ್, ರಾಮ್ ಗೋಪಾಲ್ ರಾವ್, ಆರೂರು ವಿಕ್ರಮ್ ರಾವ್, ಸಿಇಒ ರಮೇಶ್ ಪ್ರಭು ಮತ್ತಿತರರು ಉಪಸ್ಥಿತರಿದ್ದರು.
ಟೊಯೊಟಾ ಕಿರ್ಲೋಸ್ಕರ್ ಮೋಟರ್ (ಟಿಕೆಎಂ) ಕಂಪನಿಯು ತನ್ನ ಪ್ರೀಮಿಯಂ ಹ್ಯಾಚ್‌ಬ್ಯಾಕ್ ಕಾರು ‘ಗ್ಲಾನ್ಸಾ’ದ ಹೊಸ ಆವೃತ್ತಿ ಹೆಚ್ಚಿನ ಇಂಧನ ದಕ್ಷತೆ ಒದಗಿಸುವ ಕೆ–ಸರಣಿಯ 1.2 ಲೀಟರ್ ಸಾಮರ್ಥ್ಯದ ಎಂಜಿನ್ ಇದರಲ್ಲಿ ಇದೆ. ಈ ಎಂಜಿನ್ ಪ್ರತಿ ಲೀಟರ್ ಪೆಟ್ರೋಲ್‌ಗೆ 22 ಕಿಲೋ ಮೀಟರ್ ದಕ್ಷತೆಯನ್ನು ನೀಡಬಲ್ಲದು. ಈ ಕಾರು ಆಟೊಮ್ಯಾಟಿಕ್ ಹಾಗೂ ಮ್ಯಾನುವಲ್ ಟ್ರಾನ್ಸ್‌ಮಿಷನ್ ಆಯ್ಕೆಗಳಲ್ಲಿ ಲಭ್ಯವಿದೆ ಎಂದು ಕಂಪನಿ ಹೇಳಿದೆ.
ಆರು ಏರ್‌ಬ್ಯಾಗ್‌ಗಳು, ಆ್ಯಂಟಿಲಾಕ್ ಬ್ರೇಕಿಂಗ್ ವ್ಯವಸ್ಥೆ (ಎಬಿಎಸ್), ಇಬಿಡಿ ಇದೆ. ಕಾರಿನಲ್ಲಿ 45ಕ್ಕೂ ಹೆಚ್ಚಿನ ಫೀಚರ್‌ಗಳು ಇವೆ. ಕೆಂಪು, ಬೂದು, ಸಿಲ್ವರ್, ನೀಲಿ ಮತ್ತು ಬಿಳಿ ಬಣ್ಣಗಳಲ್ಲಿ ಲಭ್ಯವಿರಲಿದೆ. ಐದು ವರ್ಷಗಳವರೆಗೆ ಅಥವಾ 2.20 ಲಕ್ಷ ಕಿಲೋ ಮೀಟರ್‌ಗಳವರೆಗೆ ವಾರಂಟಿ ಸೌಲಭ್ಯ ಪಡೆದುಕೊಳ್ಳುವ ಅವಕಾಶ ಇದೆ.