ಮಂಗಳೂರು, ಮಾ 30 : ಇಬ್ಬರು ಮಹಿಳಾ ಅಧಿಕಾರಿಗಳು ಸೇರಿದಂತೆ ಮಂಗಳೂರು ಕಮಿಷನರೆಟ್ ವ್ಯಾಪ್ತಿಯ ಎಂಟು ಮಂದಿ ಪೊಲೀಸರು ಮುಖ್ಯಮಂತ್ರಿ ಪದಕಕ್ಕೆ ಆಯ್ಕೆಯಾಗಿದ್ದಾರೆ.
ಮಂಗಳೂರು ಪೊಲೀಸ್ ಕಮಿಷನರೇಟ್ ವ್ಯಾಪ್ತಿಯ ನಟರಾಜ್ (ಎಸಿಪಿ, ಸಂಚಾರ), ಪ್ರದೀಪ್ ಟಿ.ಆರ್ (ಪಿಎಸ್‌ಐ, ಸಿಸಿಬಿ), ಶೋಭಾ (ಪಿಎಸ್‌ಐ, ಬರ್ಕೆ ಠಾಣೆ), ವನಜಾಕ್ಷಿ (ಸಿಸಿಆರ್‌ಬಿ, ಪಿಎಸ್‌ಐ), ಕುಶಾಲ್ ಮಣಿಯಾಣಿ (ಎಎಸ್‌ಐ ಬಜಪೆ ಠಾಣೆ), ಇಸಾಕ್ ಕೆ (ಸಿಎಚ್‌ಸಿ ಪಣಂಬೂರು ಠಾಣೆ) ಹಾಗೂ ಎಸಿಬಿ ಹೆಡ್ ಕಾನ್ ಸ್ಟೆಬಲ್ ಹರಿಪ್ರಸಾದ್, ಗೃಹ ರಕ್ಷಕ ದಳದ ದ.ಕ ಜಿಲ್ಲಾ ಪ್ಲಟೂನ್ ಕಮಾಂಡರ್ ಆರ್ಕ್ ಸೆರಾ ಆಯ್ಕೆಯಾಗಿದ್ದಾರೆ.
ಇನ್ನು ಮುಖ್ಯಮಂತ್ರಿ ಪದಕಕ್ಕೆ ಆಯ್ಕೆಯಾಗಿರುವ ಪೊಲೀಸರಿಗೆ ಮಂಗಳೂರು ಪೊಲೀಸ್ ಕಮಿಷನರ್ ಎನ್. ಶಶಿಕುಮಾರ್ ಹಾಗೂ ಪೊಲೀಸ್ ವರಿಷ್ಠಾಧಿಕಾರಿ ಋಷಿಕೇಶ್ ಸೊನಾವಣೆ ಅಭಿನಂದನೆ ಸಲ್ಲಿಸಿದ್ದಾರೆ.
Congratulations to CM Medal winners of Mangalore City Police. We are a force of finest men and women. Proud of you all. Winners are Nataraj ACP Traffic, PradeepaT.R, PSI CCB, Smt. Vanajakshi K. PSI CCRB, Shobha PSI Barke PS, Kushal Maniyani ASI BajpePS Isaq K CHC566 PanamburPS pic.twitter.com/yLS8VM1j6b
— N. Shashi Kumar CP Mangaluru City (@compolmlr) March 30, 2022