ಕಡಬ ನ.2: ಕೋಡಿಂಬಾಳ ಗ್ರಾಮದ ಪುಳಿಕುಕ್ಕು ಸಮೀಪ ರಸ್ತೆ ಬದಿಯಲ್ಲಿದ್ದ ಬೃಹತ್ ಗಾತ್ರದ ಮರವೊಂದು ಚಲಿಸುತ್ತಿದ್ದ ದ್ವಿಚಕ್ರ ವಾಹನಕ್ಕೆ ಬಿದ್ದ ಪರಿಣಾಮ ಸವಾರ ಸ್ಥಳದಲ್ಲೇ ಮೃತಪಟ್ಟ ದಾರುಣ ಘಟನೆ ನಡೆದಿದೆ. ಎಡಮಂಗಲದ ಸೊಸೈಟಿವೊಂದರಲ್ಲಿ ಪಿಗ್ಗಿ ಸಂಗ್ರಹಕಾರರಾಗಿದ್ದ ದೇವಸ್ಯ ನಿವಾಸಿ ಸೀತಾರಾಮ (58ವ) ಮೃತ ಪಟ್ಟ ಸ್ಕೂಟಿ ಸವಾರ ಎಂದು ಗುರುತಿಸಲಾಗಿದೆ.
ಕಡಬದಿಂದ ಪಂಜದ ಮನೆಯ ಕಡೆಗೆ ತೆರಳುತ್ತಿದ್ದ ಸ್ಕೂಟರ್ ಸವಾರ ಸೀತಾರಾಮ ಪುಳಿಕುಕ್ಕು ಸಮೀಪದ ತಿರುವಿನಲ್ಲಿ ಬೃಹತ್ ಗಾತ್ರದ ಧೂಪದ ಮರವೊಂದು ನೇರವಾಗಿ ಇವರ ಮೈಮೇಲೆ ಬಿದ್ದಿದೆ. ಇದರಿಂದ ಸ್ಕೂಟರ್ ಸವಾರ ಸ್ಥಳದಲ್ಲೇ ಪ್ರಾಣ ಕಳಕೊಂಡಿದ್ದಾರೆ.
ರಸ್ತೆ ಬದಿಯ ಮರ ಉರುಳಿ ಬಿದ್ದಿದ್ದಕ್ಕೆ ಅರಣ್ಯ ಇಲಾಖೆಯ ಅಸಡ್ಡೆ ಕಾರಣ ಎಂದು ಸಾರ್ವಜನಿರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮರದ ಬಗ್ಗೆ ಅನೇಕ ಬಾರಿ ಅಧಿಕಾರಿಗಳ ಗಮನಕ್ಕೆ ತಂದರೂ ನಿರ್ಲಕ್ಷ್ಯ ವಹಿಸಿದ್ದರು. ಈಗ ಅಮಾಯಕರೊಬ್ಬರು ಪ್ರಾಣ ಕಳಕೊಳ್ಳುವಂತಾಯ್ತು ಎಂದಿದ್ದಾರೆ. ಸೀತಾರಾಮ ಅವರು ಎಡಮಂಗಲ ಸೊಸೈಟಿಯ ಪಿಗ್ಮಿ ಕಲೆಕ್ಟರ್ ಆಗಿದ್ದು ಕಡಬದಿಂದ ಹರಕೆಗೆ ಕೋಳಿ ಖರೀದಿಸಿ ಮನೆಗೆ ಬರುತ್ತಿದ್ದಾಗ ಜವರಾಯ ಎರಗಿದ್ದಾನೆ. ಸ್ಥಳಕ್ಕೆ ಕಡಬ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ಪ್ರಕರಣ ದಾಖಲಿಸಿದ್ದಾರೆ.
Discover more from Coastal Times Kannada
Subscribe to get the latest posts sent to your email.
Discussion about this post