ಮಂಗಳೂರು: ಬೇಸಿಗೆ ಎಂದಾಕ್ಷಣ ಮೊದಲು ಮನಸ್ಸಿಗೆ ಬರುವುದು ತಂಪಾದ ಪಾನೀಯ…ಅದರಲ್ಲೂ ಹಿಂದಿನ ಕಾಲದ ಗೋಲಿ ಸೋಡ ಕಣ್ಣಿಗೆ ಬಿದ್ದರೆ ಬಾಲ್ಯದ ದಿನಗಳಲ್ಲಿ ಗೋಲಿಸೋಡ ಕುಡಿದ ನೆನಪು ಬರುತ್ತದೆ.. ಅದರಲ್ಲೂ ದಕ್ಷಿಣಕನ್ನಡದ ಜನರು ಅದನ್ನು ನೋಡಿದ ಕ್ಷಣ ಕೈಗೆತ್ತಿಕೊಂಡು ಕುಡಿಯುತ್ತಾರೆ.
ಅದರೆ ನಗರದ ಬಿಕರ್ನಕಟ್ಟೆ ಕೈಕಂಬ ಬಳಿ ಇರುವ ಒಂದು ಅಂಗಡಿಯಲ್ಲಿ ಗ್ರಾಹಕರೊಬ್ಬರು ಗೋಳಿಸೋಡವನ್ನು ಖರೀದಿಸಿ ಸೇವನೆ ಮಾಡುವಾಗ ಬಾಟಲಿನ ಒಳಗಡೆ ಎರಡು ಮೂರು ನೊಣಗಳು ಸತ್ತು ಬಿದ್ದಿರುವುದು ಕಂಡು ಬಂದಿದೆ. ಗ್ರಾಹಕರು ಅಂಗಡಿ ಮಾಲೀಕನಿಗೆ ನೊಣ ಇದ್ದ ಬಾಟಲಿಯನ್ನು ತೋರಿಸಿದಾಗ ಅಂಗಡಿಯ ಮಾಲೀಕ ತನ್ನಲ್ಲಿದ್ದ ಎಲ್ಲಾ ಗೋಲಿಸೋಡ ಬಾಟಲಿಯನ್ನು ಪರಿಶೀಲಿಸಿದಾಗ ಕೆಲವು ಬಾಟಲಿಯಲ್ಲಿ ನೊಣಗಳು ಕಂಡು ಬಂದವು. ಇದು ಗೋಲಿಸೋಡ ಫ್ಯಾಕ್ಟರಿಯವರ ಮಾಲಕರ ನಿರ್ಲಕ್ಷತನದಿಂದ ಇಂಥ ಅವಘಡಗಳು ಸಂಭವಿಸಿದೆ. ಫರಂಗಿಪೇಟೆಯ ಮೇರ ಮಜಲು ನ ಫ್ಯಾಕ್ಟರಿಯಲ್ಲಿ ತಯಾರಿಸಲ್ಪಟ್ಟ ಗೋಲಿಸೋಡವನ್ನು ಬಿಕರ್ನಕಟ್ಟೆ ಕೈಕಂಬ ಬಳಿ ಇರುವ ಅಂಗಡಿ ಮಾಲೀಕರು ಖರೀದಿಸಿದ್ದಾರೆ. ಈ ಬಗ್ಗೆ ಸಂಬಂಧ ಪಟ್ಟ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕೆಂದು ಗ್ರಾಹಕ ಮನವಿ.
Discover more from Coastal Times Kannada
Subscribe to get the latest posts sent to your email.
Discussion about this post