ಮಂಗಳೂರು: 2023ರ ಜೂನ್ 3 ಮತ್ತು 5 ತಾರೀಕಿನಂದು, ಬೊಂದೆಲ್ ಜಂಕ್ಷನ್‌ನಲ್ಲಿರುವ ಜಾನ್ಸಿನ್ ಕಾಟೇಜ್‌ನಲ್ಲಿ, 20 ವರುಷಗಳಿಂದ ಬೊಂದೆಲ್ ಲಾಕ್ಟರ್ ಕ್ಲಬ್ ಇವರು ಲಕ್ಷ್ಮಿ ಲಾಪ್ಟರ್ ಕ್ಲಬ್‌ಗಳನ್ನು ನಡೆಸುತ್ತಿರುವ ಮೆಮೋರಿಯಲ್ ಕಾಲೇಜ್ ಆಫ್ ನಸಿರ್ಂಗ್ ಇದರ 100 ವಿದ್ಯಾರ್ಥಿಗಳಿಗೆ ಲಾಪ್ಟರ್ ಸೆಶನ್‌ಗಳನ್ನು ನಡೆಸಿದರು. ಬೊಂದೆಲ್ ಕ್ಲಬ್ಬಿನ ಸಂಸ್ಥಾಪಕ ಜಾನ್ ಬಿ. ಮೊಂತೇರೊ ಮತ್ತು ಕ್ಲಬ್ಬಿನ ಹಿರಿಯ ಸದಸ್ಯರಾದ ನಿವೃತ್ತ ಪ್ರಾಧ್ಯಾಪಕ ಖಾಲಿದ್ ಅನ್ಸಾರಿ ಮತ್ತು ಬೊನವೆಂಚರ್ ಡಿಸೋಜಾ ಇವರು ವಿದ್ಯಾರ್ಥಿ ಮತ್ತು ಅಧ್ಯಾಪಕರಿಗೆ ಮಾರ್ಗದರ್ಶನ ನೀಡಿದರು.


ಇದಕ್ಕೂ ಮುನ್ನ ಎಪ್ರಿಲ್ 4, 2023ರಂದು ಜಾನ್ ಮೊಂತೇರೊ ಮತ್ತು ಪ್ರೊ ಖಾಲಿದ್ ಅನ್ಸಾರಿ ಇವರನ್ನು ಬಲ್ಮಠ ಎ.ಜೆ. ಟವನ ಕಾಲೇಜು ಆವರಣದಲ್ಲಿ ಬೋಧಕರಿಗಾಗಿ ನಗೆ ಅಧಿವೇಶನವನ್ನು ನಡೆಸಲು ಆಹ್ವಾನಿಸಲಾಗಿತ್ತು. ಪ್ರಾಂಶುಪಾಲೆ ಡಾ| ಲರಿಸ್ಸಾ ಮಾರ್ಥಾ ಸ್ಯಾಮ್ಸ್ ಅವರ ಮಾರ್ಗದರ್ಶನದಲ್ಲಿ ಮಾನಸಿಕ ಆರೋಗ್ಯ ವಿಭಾಗದ ಉಪನ್ಯಾಸಕಿ ಶ್ರೀಮತಿ ಶ್ರೀರಂಜನಿ ಅವರು ಕಾರ್ಯಕ್ರಮವನ್ನು ಸಂಯೋಜಿಸಿದರು.
Discover more from Coastal Times Kannada
Subscribe to get the latest posts sent to your email.








Discussion about this post