• About us
  • Contact us
  • Disclaimer
Thursday, June 11, 2026
  • Login
Coastal Times Kannada
No Result
View All Result
  • Home
    • ಗ್ಯಾಜೆಟ್
  • ರಾಜ್ಯ
  • ರಾಷ್ಟ್ರೀಯ
  • ರಾಜಕೀಯ
  • ವಿದೇಶಿ ಸುದ್ದಿ
  • ಕರಾವಳಿ
  • ಕ್ರೈಂ ನ್ಯೂಸ್
  • ಕ್ರೀಡೆ
  • ಸಿನಿಮಾ
  • ಆರೋಗ್ಯ
  • ವೆಬ್ ಸ್ಟೊರೀಸ್
Join to Group
  • Home
    • ಗ್ಯಾಜೆಟ್
  • ರಾಜ್ಯ
  • ರಾಷ್ಟ್ರೀಯ
  • ರಾಜಕೀಯ
  • ವಿದೇಶಿ ಸುದ್ದಿ
  • ಕರಾವಳಿ
  • ಕ್ರೈಂ ನ್ಯೂಸ್
  • ಕ್ರೀಡೆ
  • ಸಿನಿಮಾ
  • ಆರೋಗ್ಯ
  • ವೆಬ್ ಸ್ಟೊರೀಸ್
No Result
View All Result
Coastal Times Kannada
No Result
View All Result

17ನೇ ಲೋಕಸಭೆ ವಿಸರ್ಜನೆ; ಪ್ರಧಾನಿ ನರೇಂದ್ರ ಮೋದಿ ರಾಜೀನಾಮೆ

Coastal Times by Coastal Times
June 5, 2024
in ರಾಜಕೀಯ
17ನೇ ಲೋಕಸಭೆ ವಿಸರ್ಜನೆ; ಪ್ರಧಾನಿ ನರೇಂದ್ರ ಮೋದಿ ರಾಜೀನಾಮೆ
150
VIEWS
WhatsappTelegramShare on FacebookShare on Twitter

ನವದೆಹಲಿ: ಲೋಕಸಭೆ ಫಲಿತಾಂಶ ಪ್ರಕಟವಾದ ನಂತರ ಇಂದು ಬುಧವಾರ ದೆಹಲಿಯಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ಕೇಂದ್ರ ಸಚಿವ ಸಂಪುಟ ಸಭೆ ನಡೆದಿದ್ದು, 17ನೇ ಲೋಕಸಭೆಯನ್ನು ವಿಸರ್ಜಿಸಲಾಯಿತು. ಬಳಿಕ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಭೇಟಿ ಮಾಡಿ ರಾಜೀನಾಮೆ ಪತ್ರ ಸಲ್ಲಿಸಿದ ಪ್ರಧಾನಿ ನರೇಂದ್ರ ಮೋದಿ ನೂತನ ಸರ್ಕಾರ ರಚನೆಗೆ ಅವಕಾಶ ಕೋರಿದರು.

ಪ್ರಧಾನ ಮಂತ್ರಿಗಳು ಹಾಗೂ ಅವರ ಸಂಪುಟ ಸದಸ್ಯರ ರಾಜೀನಾಮೆ ಅಂಗೀಕರಿಸಿದ ರಾಷ್ಟ್ರಪತಿಗಳು ಹೊಸ ಸರ್ಕಾರ ರಚನೆಯಾಗುವವರೆಗೆ ಅಧಿಕಾರದಲ್ಲಿ ಮುಂದುವರಿಯುವಂತೆ ಮನವಿ ಮಾಡಿದರು ಎಂದು ರಾಷ್ಟ್ರಪತಿ ಭವನದ ಪ್ರಕಟಣೆಯಲ್ಲಿ ತಿಳಿಸಿದೆ.

ಲೋಕಸಭೆ ಚುನಾವಣೆಯಲ್ಲಿ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಮೈತ್ರಿಕೂಟಕ್ಕೆ (NDA) ಸ್ಪಷ್ಟ ಬಹುಮತ ದೊರೆತ ಹಿನ್ನೆಲೆಯಲ್ಲಿ ಜೂನ್ 8 ಶನಿವಾರದಂದು ನರೇಂದ್ರ ಮೋದಿಯವರು ಸತತ ಮೂರನೇ ಅವಧಿಗೆ ಪ್ರಮಾಣ ವಚನ ಸ್ವೀಕರಿಸುವ ಸಾಧ್ಯತೆ ಇದೆ. ಅದೇ ದಿನ ಕೇಂದ್ರ ಸಚಿವ ಸಂಪುಟ ಸದಸ್ಯರ ಪ್ರಮಾಣ ವಚನ ಸ್ವೀಕಾರ ಸಮಾರಂಭವೂ ನಡೆಯುವ ಸಾಧ್ಯತೆ ಇದೆ.

ಚುನಾವಣಾ ಫಲಿತಾಂಶ ಪ್ರಕಟವಾದ ನಂತರ ಇಂದು ಬೆಳಗ್ಗೆ ಪ್ರಧಾನಿ ನಿವಾಸದಲ್ಲಿ ಕೇಂದ್ರ ಸಚಿವ ಸಂಪುಟ ಸಭೆ ನಡೆಯಿತು. 17ನೇ ಲೋಕಸಭೆಯನ್ನು ವಿಸರ್ಜಿಸಲು ಶಿಫಾರಸು ಮಾಡಲಾಯಿತು. ಸಭೆಯು ಬೆಳಗ್ಗೆ 11.30 ಕ್ಕೆ ಪ್ರಾರಂಭವಾಗಿ ನಂತರ ಮಂತ್ರಿ ಮಂಡಲದ ಸಭೆ ನಡೆಯಿತು ಎಂದು ಮೂಲಗಳು ತಿಳಿಸಿವೆ. ಇದು ಮೋದಿ 2.0 ರ ಕ್ಯಾಬಿನೆಟ್ ಮತ್ತು ಮಂತ್ರಿ ಮಂಡಳಿಯ ಕೊನೆಯ ಸಭೆಯಾಗಿದೆ. ಪ್ರಸ್ತುತ ಲೋಕಸಭೆಯ ವಿಸರ್ಜನೆಯ ಕುರಿತು ಕ್ಯಾಬಿನೆಟ್ ಶಿಫಾರಸು ಮಾಡಿದ್ದು 18 ನೇ ಲೋಕಸಭೆಗೆ ದಾರಿ ಮಾಡಿಕೊಡುತ್ತದೆ. ಪ್ರಸ್ತುತ 17ನೇ ಲೋಕಸಭೆಯ ಅವಧಿ ಜೂನ್ 16ಕ್ಕೆ ಕೊನೆಗೊಳ್ಳಲಿದೆ.

ಇಂದಿನ ಸಂಪುಟ ಸಭೆಯಲ್ಲಿ ಲೋಕಸಭಾ ಚುನಾವಣಾ ಫಲಿತಾಂಶಗಳ ಬಗ್ಗೆ ಅವಲೋಕನ ಮಾಡಲಾಯಿತು. ಮುಂದಿನ ಸರ್ಕಾರ ರಚನೆಗೆ ಸಂಬಂಧಿಸಿದ ವಿಷಯಗಳ ಬಗ್ಗೆಯೂ ಚರ್ಚಿಸಲಾಯಿತು ಎಂದು ಮೂಲಗಳು ತಿಳಿಸಿವೆ. 240 ಸ್ಥಾನಗಳನ್ನು ಪಡೆದು ಬಹುಮತದ ಕೊರತೆ ಎದುರಿಸುತ್ತಿರುವ ಬಿಜೆಪಿ ತನ್ನ ಮಿತ್ರಪಕ್ಷಗಳ ನೆರವಿನೊಂದಿಗೆ ಸರ್ಕಾರ ರಚಿಸಲು ಮುಂದಾಗಿದೆ. 543 ಸದಸ್ಯ ಬಲದ ಲೋಕಸಭೆಯಲ್ಲಿ ಎನ್‌ಡಿಎ 293 ಸ್ಥಾನಗಳನ್ನು ಪಡೆದುಕೊಂಡಿದೆ. ಪ್ರಮುಖ ವಿರೋಧ ಪಕ್ಷವಾದ ಕಾಂಗ್ರೆಸ್ 99 ಸ್ಥಾನಗಳನ್ನು ಗಳಿಸಿದ್ದು ಇಂಡಿಯಾ ಬ್ಲಾಕ್ ಒಟ್ಟಾಗಿ 233 ಸ್ಥಾನಗಳನ್ನು ಗೆದ್ದುಕೊಂಡಿವೆ.

Share this:

  • Share on Facebook (Opens in new window) Facebook
  • Share on X (Opens in new window) X

Like this:

Like Loading…

Related

Discover more from Coastal Times Kannada

Subscribe to get the latest posts sent to your email.

Previous Post

ಮೋದಿಗಿಂತ ಹೆಚ್ಚು ಮತಗಳ ಅಂತರದಲ್ಲಿ ಗೆದ್ದ ರಾಹುಲ್‌ ಗಾಂಧಿ

Next Post

ಮೋದಿಯನ್ನೇ ನಾಯಕರಾಗಿ ಆಯ್ಕೆ ಮಾಡಿದ ಮೈತ್ರಿಕೂಟ; ಜೂನ್ 8 ರಂದು ಮೂರನೇ ಅವಧಿಗೆ ಪ್ರಧಾನಿಯಾಗಿ ಪ್ರಮಾಣ

Related Posts

ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ ಸಿದ್ದರಾಮಯ್ಯ! ರಾಜ್ಯಪಾಲರ ವಿಶೇಷ ಕಾರ್ಯದರ್ಶಿಗೆ ಪತ್ರ ಹಸ್ತಾಂತರ
ರಾಜಕೀಯ

ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ ಸಿದ್ದರಾಮಯ್ಯ! ರಾಜ್ಯಪಾಲರ ವಿಶೇಷ ಕಾರ್ಯದರ್ಶಿಗೆ ಪತ್ರ ಹಸ್ತಾಂತರ

May 28, 2026
22
ತಮಿಳುನಾಡಿನಲ್ಲಿ ಇಂದಿನಿಂದ ದಳಪತಿಯ ಅಬ್ಬರ ಶುರು: 200 ಯೂನಿಟ್ ವಿದ್ಯುತ್ ಫ್ರೀ: ಅಧಿಕಾರ ಸಿಗುತ್ತಿದ್ದಂತೆ ಕಡತಕ್ಕೆ ಸಿಎಂ ವಿಜಯ್​ ಸಹಿ
ರಾಜಕೀಯ

ತಮಿಳುನಾಡಿನಲ್ಲಿ ಇಂದಿನಿಂದ ದಳಪತಿಯ ಅಬ್ಬರ ಶುರು: 200 ಯೂನಿಟ್ ವಿದ್ಯುತ್ ಫ್ರೀ: ಅಧಿಕಾರ ಸಿಗುತ್ತಿದ್ದಂತೆ ಕಡತಕ್ಕೆ ಸಿಎಂ ವಿಜಯ್​ ಸಹಿ

May 10, 2026
48
Next Post
ಮೋದಿಯನ್ನೇ ನಾಯಕರಾಗಿ ಆಯ್ಕೆ ಮಾಡಿದ ಮೈತ್ರಿಕೂಟ; ಜೂನ್ 8 ರಂದು ಮೂರನೇ ಅವಧಿಗೆ ಪ್ರಧಾನಿಯಾಗಿ ಪ್ರಮಾಣ

ಮೋದಿಯನ್ನೇ ನಾಯಕರಾಗಿ ಆಯ್ಕೆ ಮಾಡಿದ ಮೈತ್ರಿಕೂಟ; ಜೂನ್ 8 ರಂದು ಮೂರನೇ ಅವಧಿಗೆ ಪ್ರಧಾನಿಯಾಗಿ ಪ್ರಮಾಣ

Discussion about this post

Recent News

ಧರ್ಮಸ್ಥಳ : 26 ವರ್ಷಗಳ ಹಿಂದೆ ಕಾಣೆಯಾಗಿದ್ದ ಸತೀಶ್, ಸಲೀಂ ಆಗಿ ಪತ್ತೆ! ಸಾಯುವ ಮುನ್ನ ಮಗನ ನೋಡಬೇಕೆಂಬ ತಾಯಿ ಕನಸು ನನಸು!

ಧರ್ಮಸ್ಥಳ : 26 ವರ್ಷಗಳ ಹಿಂದೆ ಕಾಣೆಯಾಗಿದ್ದ ಸತೀಶ್, ಸಲೀಂ ಆಗಿ ಪತ್ತೆ! ಸಾಯುವ ಮುನ್ನ ಮಗನ ನೋಡಬೇಕೆಂಬ ತಾಯಿ ಕನಸು ನನಸು!

June 11, 2026
44
ಮಂಗಳೂರಲ್ಲಿ “ಕೆಲವೇ ತಿಂಗಳಲ್ಲಿ ಹಣ ಡಬಲ್ ”, ಲಕ್ಕಿ ಸ್ಕೀಮ್ ಹೆಸರಲ್ಲಿ ಕೋಟ್ಯಂತರ ರೂ. ವಂಚನೆ: 5-6 ತಿಂಗಳಾದರೂ ಹಣ ವಾಪಸ್‌ ಇಲ್ಲ

ಮಂಗಳೂರಲ್ಲಿ “ಕೆಲವೇ ತಿಂಗಳಲ್ಲಿ ಹಣ ಡಬಲ್ ”, ಲಕ್ಕಿ ಸ್ಕೀಮ್ ಹೆಸರಲ್ಲಿ ಕೋಟ್ಯಂತರ ರೂ. ವಂಚನೆ: 5-6 ತಿಂಗಳಾದರೂ ಹಣ ವಾಪಸ್‌ ಇಲ್ಲ

June 10, 2026
610
COASTAL BOX LOGO

CORPORATE OFFICE

KHYATI VISUAL MEDIA
3rd Floor, Shalimar Complex
Kankanady, Mangaluru-575002

Email ID : coastaltimeskannada@gmail.com

Follow Us

ಹೊಸ ಸುದ್ದಿಗಳು

ಧರ್ಮಸ್ಥಳ : 26 ವರ್ಷಗಳ ಹಿಂದೆ ಕಾಣೆಯಾಗಿದ್ದ ಸತೀಶ್, ಸಲೀಂ ಆಗಿ ಪತ್ತೆ! ಸಾಯುವ ಮುನ್ನ ಮಗನ ನೋಡಬೇಕೆಂಬ ತಾಯಿ ಕನಸು ನನಸು!

ಧರ್ಮಸ್ಥಳ : 26 ವರ್ಷಗಳ ಹಿಂದೆ ಕಾಣೆಯಾಗಿದ್ದ ಸತೀಶ್, ಸಲೀಂ ಆಗಿ ಪತ್ತೆ! ಸಾಯುವ ಮುನ್ನ ಮಗನ ನೋಡಬೇಕೆಂಬ ತಾಯಿ ಕನಸು ನನಸು!

June 11, 2026
ಮಂಗಳೂರಲ್ಲಿ “ಕೆಲವೇ ತಿಂಗಳಲ್ಲಿ ಹಣ ಡಬಲ್ ”, ಲಕ್ಕಿ ಸ್ಕೀಮ್ ಹೆಸರಲ್ಲಿ ಕೋಟ್ಯಂತರ ರೂ. ವಂಚನೆ: 5-6 ತಿಂಗಳಾದರೂ ಹಣ ವಾಪಸ್‌ ಇಲ್ಲ

ಮಂಗಳೂರಲ್ಲಿ “ಕೆಲವೇ ತಿಂಗಳಲ್ಲಿ ಹಣ ಡಬಲ್ ”, ಲಕ್ಕಿ ಸ್ಕೀಮ್ ಹೆಸರಲ್ಲಿ ಕೋಟ್ಯಂತರ ರೂ. ವಂಚನೆ: 5-6 ತಿಂಗಳಾದರೂ ಹಣ ವಾಪಸ್‌ ಇಲ್ಲ

June 10, 2026
ಮಂಗಳೂರು: ನಿಷೇಧಿತ ಎಂಡಿಎಂಎ ಮಾರಾಟ ಮಾಡುತ್ತಿದ್ದ ಮೂವರು ಆರೋಪಿಗಳ ಬಂಧನ

ಮಂಗಳೂರು: ನಿಷೇಧಿತ ಎಂಡಿಎಂಎ ಮಾರಾಟ ಮಾಡುತ್ತಿದ್ದ ಮೂವರು ಆರೋಪಿಗಳ ಬಂಧನ

June 10, 2026
  • About
  • Advertise
  • Privacy & Policy
  • Contact

Copyright ©2024. All Rights Reserved. Coastaltimeskannada.com | Design and Developed By Bluechip Infosystem - Contact Us : cc.bcis.blr@gmail.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

%d