• About us
  • Contact us
  • Disclaimer
Wednesday, July 22, 2026
  • Login
Coastal Times Kannada
No Result
View All Result
  • Home
    • ಗ್ಯಾಜೆಟ್
  • ರಾಜ್ಯ
  • ರಾಷ್ಟ್ರೀಯ
  • ರಾಜಕೀಯ
  • ವಿದೇಶಿ ಸುದ್ದಿ
  • ಕರಾವಳಿ
  • ಕ್ರೈಂ ನ್ಯೂಸ್
  • ಕ್ರೀಡೆ
  • ಸಿನಿಮಾ
  • ಆರೋಗ್ಯ
  • ವೆಬ್ ಸ್ಟೊರೀಸ್
Join to Group
  • Home
    • ಗ್ಯಾಜೆಟ್
  • ರಾಜ್ಯ
  • ರಾಷ್ಟ್ರೀಯ
  • ರಾಜಕೀಯ
  • ವಿದೇಶಿ ಸುದ್ದಿ
  • ಕರಾವಳಿ
  • ಕ್ರೈಂ ನ್ಯೂಸ್
  • ಕ್ರೀಡೆ
  • ಸಿನಿಮಾ
  • ಆರೋಗ್ಯ
  • ವೆಬ್ ಸ್ಟೊರೀಸ್
No Result
View All Result
Coastal Times Kannada
No Result
View All Result

ಕಾಂತಾರ ಸಿನಿಮಾ ಯಶಸ್ಸಿಗೆ ಪಂಜುರ್ಲಿಯೇ ಕಾರಣ ; ರಿಷಬ್ ಶೆಟ್ಟಿ

Coastal Times by Coastal Times
October 5, 2022
in ಸಿನಿಮಾ
ಕಾಂತಾರ ಸಿನಿಮಾ ಯಶಸ್ಸಿಗೆ ಪಂಜುರ್ಲಿಯೇ ಕಾರಣ ; ರಿಷಬ್ ಶೆಟ್ಟಿ
81
VIEWS
WhatsappTelegramShare on FacebookShare on Twitter

ಮಂಗಳೂರು, ಅ.4: ನಗರದಲ್ಲಿ ಕಾಂತಾರ ಚಿತ್ರ ತಂಡದ ಜೊತೆಗೆ ಸುದ್ದಿಗೋಷ್ಠಿ ನಡೆಸಿದ ರಿಷಬ್ ಶೆಟ್ಟಿ, ಕಾಂತಾರ ಚಿತ್ರ ಮಾಡಿದ್ದಲ್ಲ, ಅದು ಆಗಿದ್ದು. ನನ್ನದೇನೂ ಇಲ್ಲ. ಇಡೀ ಚಿತ್ರತಂಡದ ಶ್ರಮ. ಮೇಲಾಗಿ ದೈವ ನರ್ತಕರಾಗಿ ಇಡೀ ಚಿತ್ರದ ಸೀಕ್ವೆನ್ಸ್, ದೈವದ ಚಿತ್ರಣ ಹೀಗೇ ಬರಬೇಕೆಂದು ಹೇಳಿಕೊಟ್ಟ ಮುಕೇಶ್ ಅವರ ಶ್ರಮ ಕಾರಣ ಎಂದು ಹೇಳಿದರು. ಚಿತ್ರದ ಶೂಟಿಂಗ್ ಬಗ್ಗೆ ಹೇಳಿದ ಅವರು, ನಮ್ಮ ದೈವಾರಾಧನೆ ಬಗ್ಗೆ ಇಂದಿನ ಹುಡುಗರಿಗೆ, ಯುವಕರಿಗೆ ಎಷ್ಟು ಗೊತ್ತಿದೆಯೋ ಗೊತ್ತಿಲ್ಲ. ಆದರೆ ದೈವಾರಾಧನೆ ಎನ್ನುವುದು ಸಮಾಜದ ಎಲ್ಲರನ್ನೂ ಒಳಗೊಳ್ಳಿಸುವ ಅದ್ಭುತ. ನಮ್ಮ ಮಣ್ಣಿನ ಗುಣವಾಗಿ ಅನಾದಿ ಕಾಲದಿಂದ ಹರಿದು ಬಂದಿದೆ. ಅಂಥ ವೈಶಿಷ್ಟ್ಯವನ್ನು ಇಡೀ ಜಗತ್ತಿಗೆ ತೋರಿಸಬೇಕೆಂದು ಪ್ರಯತ್ನ ಮಾಡಿದ್ದೇನೆ. ದೈವಗಳ ಆಶೀರ್ವಾದದಿಂದ ಚಿತ್ರ ಚೆನ್ನಾಗಿ ಮೂಡಿಬಂದಿದೆ ಎಂದರು.  ಕಾಂತಾರ ಸಿನಿಮಾ ಅನ್ನು ಇತರ ಭಾಷೆಗಳಿಗೆ ಡಬ್ ಮಾಡುವ ಬಗ್ಗೆ ಬೇಡಿಕೆಗಳು ಬರುತ್ತಿದೆ. ಈ ಬಗ್ಗೆ ಇನ್ನೆರಡು ದಿನಗಳಲ್ಲಿ ಚಿತ್ರತಂಡ ನಿರ್ಧಾರ ಮಾಡಿ ಘೋಷಿಸಲಿದೆ ಎಂದು ಕಾಂತಾರ ಸಿನಿಮಾ ನಿರ್ದೇಶಕ, ನಟ ರಿಷಬ್ ಶೆಟ್ಟಿ ಹೇಳಿದರು. ಈ ಸಿನಿಮಾ ನಿರ್ಮಿಸುವ ಮೊದಲೇ ಅದನ್ನು ಪ್ಯಾನ್ ಇಂಡಿಯಾ ಸಿನಿಮಾ ಮಾಡಿ ಎಂಬ ಒತ್ತಾಯಗಳು ಕೇಳಿ ಬಂದಿದ್ದವು. ಆದರೆ ಮೊದಲು ಕನ್ನಡದಲ್ಲೇ ಈ ಸಿನಿಮಾವನ್ನು ಮಾಡಬೇಕೆಂಬ ಒತ್ತಾಸೆಯಿಂದ ಕನ್ನಡದಲ್ಲಿ ನಿರ್ಮಾಣ ಮಾಡಲಾಗಿದೆ. ಇದೀಗ ಸಿನಿಮಾದ ಬಗ್ಗೆ ಎಲ್ಲೆಡೆ ಜನರು ಮಾತನಾಡತೊಡಗಿದ್ದು, ಬೇರೆ ಭಾಷೆಗಳಿಗೂ ಡಬ್ ಮಾಡಬೇಕೆಂಬ ಒತ್ತಾಯಗಳು ಕೇಳಿ ಬರುತ್ತಿದೆ‌. ಎರಡು ದಿನಗಳಲ್ಲಿ ಕಾಂತಾರ ಸಿನಿಮಾವನ್ನು ಇತರ ಭಾಷೆಗಳಿಗೂ ಡಬ್ ಮಾಡುವ ಬಗ್ಗೆ ಘೋಷಿಸಲಾಗುತ್ತದೆ ಎಂದರು.

ಈ ಸಿನಿಮಾದಲ್ಲಿ ದೈವ ನರ್ತಕನ ಪಾತ್ರ ಮಾಡಿದ ದೈವ ನರ್ತಕ ಮುಖೇಶ್ ಅವರು ಮಾತನಾಡಿ, ದೈವಾರಾಧನೆಯ ಹಿನ್ನೆಲೆಯುಳ್ಳ ಈ ಸಿನಿಮಾವನ್ನು ಇಡೀ ತಂಡವು ಶ್ರದ್ಧೆ ಭಕ್ತಿಯಿಂದ ಮಾಡಿದೆ‌. ಮದ್ಯ, ಮಾಂಸವನ್ನು ತ್ಯಜಿಸಿ ಈ ಸಿನಿಮಾವನ್ನು ಮಾಡಲಾಗಿದೆ ಎಂದರು. ಸ್ವತಃ ನಾನು 36 ದಿನಗಳ ಕಾಲ ಶುದ್ಧಾಚಾರ ಪಾಲಿಸಿದ್ದೇನೆ. ನಮ್ಮ ದೈವದ ಶಕ್ತಿಯನ್ನು ಹೊರಗಿನವರಿಗೆ ತೋರಿಸಬೇಕಂದ್ರೆ ನಾವು ಅದರ ಬಗ್ಗೆ ತಿಳಿದುಕೊಂಡಿರಬೇಕು. ಅದಕ್ಕಾಗಿ ದೈವ ನರ್ತಕ ಮುಕೇಶ್ ಅವರನ್ನು ಜೊತೆಗಿಟ್ಟುಕೊಂಡಿದ್ದೇನೆ. ಈ ಚಿತ್ರವನ್ನು ಮುಕೇಶ್ ಮತ್ತು ಇಡೀ ದೈವ ನರ್ತನ ಸೇವೆ ನಡೆಸುವ ಕುಟುಂಬಸ್ಥರಿಗೆ ಅರ್ಪಿಸುತ್ತೇನೆ ಎಂದರು. ಡಬ್ ಮಾಡುತ್ತೀರಾ ಎಂಬ ಪ್ರಶ್ನೆಗೆ, ಈಗಾಗಲೇ ಹಿಂದಿ, ಮಲಯಾಳಂ, ತೆಲುಗು ಭಾಷೆಗೆ ಡಬ್ ಮಾಡಲು ಅಲ್ಲಿನವರು ಮುಂದೆ ಬಂದಿದ್ದಾರೆ. ಶೀಘ್ರದಲ್ಲೇ ಡಬ್ ಆಗಿ ಬರಲಿದೆ ಎಂದರು.

ಕಾಂತಾರ ಸಿನಿಮಾ ನಾಯಕಿ ಸಪ್ತಮಿ ಗೌಡ ಮಾತನಾಡಿ, ಇದು ನನ್ನ ಎರಡನೇ ಸಿನಿಮಾ. ಈ ಸಿನಿಮಾಕ್ಕಾಗಿ ನಾನು ಮಂಗಳೂರು ಕನ್ನಡ ಭಾಷೆಯನ್ನು ಕಲಿತುಕೊಂಡಿದ್ದೆ. ಈ ಸಿನಿಮಾ ಬಂದ ಬಳಿಕ ಪ್ರೇಕ್ಷಕರು ನಾನು ಮಂಗಳೂರು ಹುಡುಗಿ ಅಂತಲೇ ನಂಬಿದ್ದಾರೆ‌‌. ಅಷ್ಟು ಚೆನ್ನಾಗಿ ಪಾತ್ರ ಬಂದಿದೆ ಎಂದು ಹೇಳಿದರು.

Share this:

  • Share on Facebook (Opens in new window) Facebook
  • Share on X (Opens in new window) X

Like this:

Like Loading…

Related

Discover more from Coastal Times Kannada

Subscribe to get the latest posts sent to your email.

Previous Post

ಟೈಲರ್ ಕನ್ಹಯ್ಯಾಲಾಲ್ ಮರ್ಡರ್ ಕೇಸ್: ಪ್ರತ್ಯಕ್ಷ ಸಾಕ್ಷಿಯಾಗಿದ್ದ ವ್ಯಕ್ತಿಗೆ ಯಶಸ್ವಿ ಮೆದುಳು ಶಸ್ತ್ರಚಿಕಿತ್ಸೆ

Next Post

ಸುಳ್ಯ : ಸ್ಕೂಟಿ ಕಾರು ಮಧ್ಯೆ ಅಪಘಾತ: ಅಣ್ಣ – ತಂಗಿ ಸಾವು

Related Posts

ಜೂ.25ರಂದು ಮಂಗಳೂರಿಗೆ ಬಾಲಿವುಡ್ ಸೂಪರ್ ಸ್ಟಾರ್ ಶಾರುಖ್ ಖಾನ್
ಕರಾವಳಿ

ಜೂ.25ರಂದು ಮಂಗಳೂರಿಗೆ ಬಾಲಿವುಡ್ ಸೂಪರ್ ಸ್ಟಾರ್ ಶಾರುಖ್ ಖಾನ್

June 23, 2026
96
ಹೊಸ ನಿರೀಕ್ಷೆ ಹುಟ್ಟುಹಾಕಿದ – ವಾದಿರಾಜ ವಾಲಗ ಮಂಡಳಿ ಹಾಸ್ಯಮಯ ಸಿನಿಮಾದ ಚಿತ್ರೀಕರಣ ಮುಕ್ತಾಯ- ನಿರ್ಮಾಪಕ ಡಾ. ಎಂ.ಎನ್ ರಾಜೇಂದ್ರ ಕುಮಾರ್
ಕರಾವಳಿ

ಹೊಸ ನಿರೀಕ್ಷೆ ಹುಟ್ಟುಹಾಕಿದ – ವಾದಿರಾಜ ವಾಲಗ ಮಂಡಳಿ ಹಾಸ್ಯಮಯ ಸಿನಿಮಾದ ಚಿತ್ರೀಕರಣ ಮುಕ್ತಾಯ- ನಿರ್ಮಾಪಕ ಡಾ. ಎಂ.ಎನ್ ರಾಜೇಂದ್ರ ಕುಮಾರ್

April 28, 2026
46
Next Post
ಸುಳ್ಯ : ಸ್ಕೂಟಿ ಕಾರು ಮಧ್ಯೆ ಅಪಘಾತ: ಅಣ್ಣ – ತಂಗಿ ಸಾವು

ಸುಳ್ಯ : ಸ್ಕೂಟಿ ಕಾರು ಮಧ್ಯೆ ಅಪಘಾತ: ಅಣ್ಣ - ತಂಗಿ ಸಾವು

Discussion about this post

Recent News

ಆಗಸ್ಟ್ 8, 9; ಮಂಗಳೂರಿನಲ್ಲಿ ಉಚಿತ ಕೃತಕ ಕೈ-ಕಾಲು ಜೋಡಣಾ ಶಿಬಿರ, ಅರ್ಹ ಫಲಾನುಭವಿಗಳಿಗೆ ಹೆಸರು ನೋಂದಾಯಿಸಲು ಮನವಿ

ಆಗಸ್ಟ್ 8, 9; ಮಂಗಳೂರಿನಲ್ಲಿ ಉಚಿತ ಕೃತಕ ಕೈ-ಕಾಲು ಜೋಡಣಾ ಶಿಬಿರ, ಅರ್ಹ ಫಲಾನುಭವಿಗಳಿಗೆ ಹೆಸರು ನೋಂದಾಯಿಸಲು ಮನವಿ

July 22, 2026
20
ಮಂಗಳೂರಿನಲ್ಲಿ ಅಕೌಂಟ್ ದಂಧೆ ಬಯಲಿಗೆ: ಯುವಕನ ಅಕೌಂಟ್ ಬಳಸಿ ಕೋಟಿ ಕೋಟಿ ಸೈಬರ್ ವಂಚನೆ: ಪ್ರಕರಣ ದಾಖಲು

ಮಂಗಳೂರಿನಲ್ಲಿ ಅಕೌಂಟ್ ದಂಧೆ ಬಯಲಿಗೆ: ಯುವಕನ ಅಕೌಂಟ್ ಬಳಸಿ ಕೋಟಿ ಕೋಟಿ ಸೈಬರ್ ವಂಚನೆ: ಪ್ರಕರಣ ದಾಖಲು

July 22, 2026
31
COASTAL BOX LOGO

CORPORATE OFFICE

KHYATI VISUAL MEDIA
3rd Floor, Shalimar Complex
Kankanady, Mangaluru-575002

Email ID : coastaltimeskannada@gmail.com

Follow Us

ಹೊಸ ಸುದ್ದಿಗಳು

ಆಗಸ್ಟ್ 8, 9; ಮಂಗಳೂರಿನಲ್ಲಿ ಉಚಿತ ಕೃತಕ ಕೈ-ಕಾಲು ಜೋಡಣಾ ಶಿಬಿರ, ಅರ್ಹ ಫಲಾನುಭವಿಗಳಿಗೆ ಹೆಸರು ನೋಂದಾಯಿಸಲು ಮನವಿ

ಆಗಸ್ಟ್ 8, 9; ಮಂಗಳೂರಿನಲ್ಲಿ ಉಚಿತ ಕೃತಕ ಕೈ-ಕಾಲು ಜೋಡಣಾ ಶಿಬಿರ, ಅರ್ಹ ಫಲಾನುಭವಿಗಳಿಗೆ ಹೆಸರು ನೋಂದಾಯಿಸಲು ಮನವಿ

July 22, 2026
ಮಂಗಳೂರಿನಲ್ಲಿ ಅಕೌಂಟ್ ದಂಧೆ ಬಯಲಿಗೆ: ಯುವಕನ ಅಕೌಂಟ್ ಬಳಸಿ ಕೋಟಿ ಕೋಟಿ ಸೈಬರ್ ವಂಚನೆ: ಪ್ರಕರಣ ದಾಖಲು

ಮಂಗಳೂರಿನಲ್ಲಿ ಅಕೌಂಟ್ ದಂಧೆ ಬಯಲಿಗೆ: ಯುವಕನ ಅಕೌಂಟ್ ಬಳಸಿ ಕೋಟಿ ಕೋಟಿ ಸೈಬರ್ ವಂಚನೆ: ಪ್ರಕರಣ ದಾಖಲು

July 22, 2026
ಮಂತ್ರಾಲಯಕ್ಕೆ ತೆರಳುತ್ತಿದ್ದ ವೇಳೆ ನಿಯಂತ್ರಣ ತಪ್ಪಿ ಕಾರು ಡಿವೈಡರ್ ಗೆ ಡಿಕ್ಕಿ, ಮಂಗಳೂರಿನ ಹಾಪ್‌ಕಾಮ್ಸ್ ಜಿಎಂ ರವಿ ಶೆಟ್ಟಿ ಸ್ಥಳದಲ್ಲೇ ಸಾವು

ಮಂತ್ರಾಲಯಕ್ಕೆ ತೆರಳುತ್ತಿದ್ದ ವೇಳೆ ನಿಯಂತ್ರಣ ತಪ್ಪಿ ಕಾರು ಡಿವೈಡರ್ ಗೆ ಡಿಕ್ಕಿ, ಮಂಗಳೂರಿನ ಹಾಪ್‌ಕಾಮ್ಸ್ ಜಿಎಂ ರವಿ ಶೆಟ್ಟಿ ಸ್ಥಳದಲ್ಲೇ ಸಾವು

July 21, 2026
  • About
  • Advertise
  • Privacy & Policy
  • Contact

Copyright ©2024. All Rights Reserved. Coastaltimeskannada.com | Design and Developed By Bluechip Infosystem - Contact Us : cc.bcis.blr@gmail.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

%d