• About us
  • Contact us
  • Disclaimer
Saturday, September 12, 2026
  • Login
Coastal Times Kannada
No Result
View All Result
  • Home
    • ಗ್ಯಾಜೆಟ್
  • ರಾಜ್ಯ
  • ರಾಷ್ಟ್ರೀಯ
  • ರಾಜಕೀಯ
  • ವಿದೇಶಿ ಸುದ್ದಿ
  • ಕರಾವಳಿ
  • ಕ್ರೈಂ ನ್ಯೂಸ್
  • ಕ್ರೀಡೆ
  • ಸಿನಿಮಾ
  • ಆರೋಗ್ಯ
  • ವೆಬ್ ಸ್ಟೊರೀಸ್
Join to Group
  • Home
    • ಗ್ಯಾಜೆಟ್
  • ರಾಜ್ಯ
  • ರಾಷ್ಟ್ರೀಯ
  • ರಾಜಕೀಯ
  • ವಿದೇಶಿ ಸುದ್ದಿ
  • ಕರಾವಳಿ
  • ಕ್ರೈಂ ನ್ಯೂಸ್
  • ಕ್ರೀಡೆ
  • ಸಿನಿಮಾ
  • ಆರೋಗ್ಯ
  • ವೆಬ್ ಸ್ಟೊರೀಸ್
No Result
View All Result
Coastal Times Kannada
No Result
View All Result

ಕುಡುಕನಿಗೆ ಕೈಗೆ ಬಂದ 10 ಲಕ್ಷರೂ. ಬಾಯಿಗಿಲ್ಲ! ಉಂಡೂ ಹೋದ, ಕೊಂಡೂ ಹೋದ..

Coastal Times by Coastal Times
December 6, 2022
in ಕರಾವಳಿ
ಕುಡುಕನಿಗೆ ಕೈಗೆ ಬಂದ 10 ಲಕ್ಷರೂ. ಬಾಯಿಗಿಲ್ಲ! ಉಂಡೂ ಹೋದ, ಕೊಂಡೂ ಹೋದ..
267
VIEWS
WhatsappTelegramShare on FacebookShare on Twitter

ಮಂಗಳೂರು, ಡಿ.6: ನಗರದ ಪಂಪ್​ವೆಲ್ ರಸ್ತೆ ಬದಿ ಸುಮಾರು 10 ಲಕ್ಷರೂ. ಮೊತ್ತದ ಬಂಡಲ್ ಬಿದ್ದಿತ್ತು. ಆತನ ಸಂತೋಷಕ್ಕೆ ಪಾರವೇ ಇರಲಿಲ್ಲ. ಆದರೆ, ಆತನ ಕುಡಿತದ ಚಟದಿಂದ ಅರ್ಧ ಗಂಟೆಯಲ್ಲೇ ಅಷ್ಟೂ ಹಣ ಪೊಲೀಸರ ಪಾಲಾಯಿತು. ಘಟನೆ ನಡೆದು ವಾರ ಕಳೆದರೂ ಇನ್ನೂ ಪ್ರಕರಣ ಬೆಳಕಿಗೆ ಬಂದಿಲ್ಲ. ಪೊಲೀಸರ ಖಜಾನೆಯಲ್ಲಿ ಹಣ ಭದ್ರವಾಗಿದೆ. ಕನ್ಯಾಕುಮಾರಿ ಮೂಲದ ಶಿವರಾಜ್ (49) ಮೆಕ್ಯಾನಿಕ್ ಆಗಿದ್ದಾರೆ. ಬೋಂದೆಲ್‌ನ ಕೃಷ್ಣನಗರದಲ್ಲಿ ಮನೆ. ಪತ್ನಿ ಅನಾರೋಗ್ಯದಿಂದ ಮೃತಪಟ್ಟಿದ್ದು, ಮಗಳು ಪಿಯು ವಿದ್ಯಾರ್ಥಿನಿ. ಕುಡಿತದ ದಾಸನಾಗಿರುವ ಶಿವರಾಜ್, ಮನೆಗೆ ಹೋಗುತ್ತಿಲ್ಲ. ಹೋಟೆಲ್‌ನಲ್ಲಿ ಚಹಾ, ತಿಂಡಿ, ಬಸ್‌ಗಳಲ್ಲೇ ನಿದ್ದೆ.

ನ.27ರಂದು ಪಂಪ್‌ವೆಲ್ ಮೇಲೇತುವೆ ಸಮೀಪದ ವೈನ್‌ಶಾಪ್‌ ಗೆ ಹೋಗಿ ಎಣ್ಣೆಹಾಕಿ ಪಕ್ಕದಲ್ಲಿ ಬೀಡಿ ಸೇದುತ್ತಾ ನಿಂತಿದ್ದರು. ಅಲ್ಲಿನ ಬೈಕ್‌ ಗಳ ಪಾರ್ಕಿಂಗ್ ಸ್ಥಳದಲ್ಲಿ ಒಂದು ಚೀಲ ಬಿದ್ದಿತ್ತು. ಅಲ್ಲೇ ಇದ್ದ ಕೂಲಿ ಕಾರ್ಮಿಕ ಚೀಲವನ್ನೂ ಹಾಗೂ ಶಿವರಾಜ್‌ನನ್ನೂ ದಿಟ್ಟಿಸುತ್ತಿದ್ದ. “ಏನು ನೋಡುತ್ತಿದ್ದಿಯಾ,” ಎಂದು ಕೇಳಿದಾಗ, ಆ ಚೀಲ ತೋರಿಸಿ, “ಏನೋ ಎಂದು ಉತ್ತರಿಸಿದ. ಚೀಲ ತೆರೆದಾಗ ಅಚ್ಚುಕಟ್ಟಾಗಿ ಕಟ್ಟಿದ್ದ ಬಂಡಲ್ ಇತ್ತು. ಮೆಲ್ಲಗೆ ಕವರ್ ಹರಿದಾಗ, 500 ರೂ. ನೋಟುಗಳಿರುವ ಬಂಡಲ್ ಕಂಡು ಇಬ್ಬರೂ ಹೌಹಾರಿದರು. ಚೀಲ ಎತ್ತಿಕೊಂಡು ಎರಡು ನೋಟು ಹೊರಗೆ ತೆಗೆದು, ಮತ್ತೆ ಅದೇ ವೈನ್ ಶಾಪ್ ಗೆ ಹೋಗಿ ಇಬ್ಬರೂ ಕುಡಿದು, ಹೊರಗೆ ಬಂದು ಉಳ್ಳಾಲ ಕಡೆಯ ಸರ್ವಿಸ್ ರಸ್ತೆಯಲ್ಲಿ ಅರ್ಧ ಕಿ.ಮೀ. ನಡೆದುಕೊಂಡು ಹೋದರು.

ಅಷ್ಟರಲ್ಲಿ  ‘ನನಗೇನೂ ಕೊಡುವುದಿಲ್ಲವೇ’ ? ಎಂದು ಕೂಲಿ ಕಾರ್ಮಿಕ ಕೇಳಿದಾಗ, 500 ಮತ್ತು 2000 ರೂ. ಮುಖಬೆಲೆಯ ಒಂದು ಬಂಡಲ್ ಆತನಿಗೆ ಕೊಡಲಾಯಿತು, ಆದರೆ ಶಿವರಾಜ್ ತನಗೆ ಐಶ್ವರ್ಯ ಸಿಕ್ತು ಎಂದು ಹಣದ ಕಂತೆಯನ್ನು ಮನೆಗೊಯ್ಯುವ ಬದಲು ಮತ್ತೆ ಅದೇ ವೈನ್ ಶಾಪ್ ಹೋಗಿ ಎಣ್ಣೆ ಹೀರಲು ಆರಂಭಿಸಿದ್ದ.‌ ಪ್ಯಾಕೆಟ್ ಒಳಗಿನಿಂದ ಎರಡು ಸಾವಿರದ ನೋಟನ್ನು ತೆಗೆದು ವೈನ್ ಶಾಪ್ ಸಿಬಂದಿ ಕೈಗಿತ್ತಿದ್ದ. ಆನಂತರ, ಹಣದ ಕಂತೆಯನ್ನು ಹಿಡ್ಕೊಂಡು ಅಲ್ಲಿಂದ ಹೊರ ಬಂದಿದ್ದ .

ಆದರೆ ಟೈಟ್ ಆಗಿದ್ದ ಬಡ ಕೂಲಿ ಕಾರ್ಮಿಕನ ಕೈಯಲ್ಲಿ ಹಣದ ಕಂತೆ ಇರುವುದನ್ನು ನೋಡಿದ ಅಲ್ಲಿದ್ದವರು ಯಾರೋ ಪೊಲೀಸರ ಗಮನಕ್ಕೆ ತಂದಿದ್ದರು. ಮಾಹಿತಿಯಂತೆ ಗಸ್ತುನಿರತ ಪೊಲೀಸರು ಸ್ಥಳಕ್ಕೆ ಬಂದು ಟೈಟ್ ಆಗಿ ನಿಂತುಕೊಂಡಿದ್ದ ಶಿವರಾಜ್ ಅವರನ್ನು ನೇರವಾಗಿ ಕಂಕನಾಡಿ ನಗರ ಠಾಣೆಗೆ ಕರೆದೊಯ್ದಿದ್ದರು. ಅಲ್ಲಿ ಹೋದರೂ, ಶಿವರಾಜ್ ತಲೆಗೆ ಹತ್ತಿದ್ದ ನಶೆ ಇಳಿಯುವಾಗ ರಾತ್ರಿಯಾಗಿತ್ತು. ಪೊಲೀಸರು ದುಡ್ಡಿನ ಕಂತೆ ಬಗ್ಗೆ ಕೇಳಿದಾಗ, ನನಗೆ ದಾರಿಯಲ್ಲಿ ಬಿದ್ದು ಸಿಕ್ಕಿದ್ದು ಎಂದು ಉತ್ತರಿಸಿದ್ದಾನೆ‌. ಅಲ್ಲದೆ, ಒಂದು ಬಂಡಲ್ ಒಬ್ಬಾತನಿಗೆ ಕೊಟ್ಟಿರುವ ವಿಷಯವನ್ನೂ ತಿಳಿಸಿದ್ದಾನೆ.

ಪೊಲೀಸರು ಮರುದಿನ ಶಿವರಾಜ್‌ ಜೊತೆಗೆ ಬಂದು ಪಂಪ್ವೆಲ್ ಬಳಿಯ ವೈನ್ ಶಾಪ್ ಇರುವಲ್ಲಿಯೇ ಇನ್ನೊಬ್ಬ ಕೂಲಿ ಕಾರ್ಮಿನನ್ನು ಹುಡುಕಾಡಿದ್ದಾರೆ. ಆದರೆ ಹಣದ ಎರಡು ಕಂತೆ ಹಿಡಿದುಕೊಂಡು ಜಾಗ ಖಾಲಿ ಮಾಡಿದ್ದ ಕಾರ್ಮಿಕ ಮರಳಿ ಬಂದಿರಲಿಲ್ಲ. ಇತ್ತ ಶಿವರಾಜ್ ಬಳಿಯಿದ್ದ ಹಣದ ಕಂತೆಯನ್ನು ಕಂಕನಾಡಿ ನಗರ ಪೊಲೀಸರು ವಶಕ್ಕೆ ಪಡೆದಿದ್ದು ಆತನನ್ನು ಠಾಣೆಯಿಂದ ಬಿಟ್ಟು ಕಳುಹಿಸಿದ್ದಾರೆ.

ಆದರೆ ಘಟನೆ ನಡೆದು ವಾರ ಕಳೆದರೂ, ಯಾರು ಕೂಡ ಹಣ ಕಳಕೊಂಡ ಬಗ್ಗೆ ಪೊಲೀಸ್ ದೂರು ದಾಖಲಿಸಿಲ್ಲ. ಈ ನಡುವೆ, ತನಗೆ ಬಿದ್ದು ಸಿಕ್ಕ ಹಣ, ಹಿಂತಿರುಗಿಸಿ ಕೊಡುವಂತೆ ಶಿವರಾಜ್ ಪೊಲೀಸರ ಬಳಿ ಕೇಳಿದ್ದಾರೆ. ಪೊಲೀಸರು ಹಣ ನೀಡಲು ನಿರಾಕರಣೆ ಮಾಡಿದ್ದರು. ಪ್ಯಾಕೆಟ್ ನಲ್ಲಿ 5ರಿಂದ 10 ಲಕ್ಷ ಇರಬಹುದು ಎಂದು ಶಿವರಾಜ್ ಮಾಧ್ಯಮಕ್ಕೆ ಹೇಳಿಕೆ ನೀಡಿದ್ದರಿಂದ ಗುಟ್ಟು ರಟ್ಟಾಗಿದೆ. ಆದರೆ ತಮಗೆ ದೊರೆತ ಬಾಕ್ಸ್​ನಲ್ಲಿ 49 ಸಾವಿರ ರೂ. ಮಾತ್ರ ಇತ್ತು ಎಂದು ಕಂಕನಾಡಿ ಪೊಲೀಸರು ತಿಳಿಸಿದ್ದಾರೆ. ಹಣ ಕಳಕೊಂಡ ಬಗ್ಗೆ ಯಾರು ಕೂಡ ದೂರು ದಾಖಲು ಮಾಡದೇ ಇರುವುದರಿಂದ ಆ ಹಣದ ಕಂತೆ ಹವಾಲಾ ಹಣವೇ ಆಗಿದ್ದಿರಬೇಕು ಎನ್ನುವ ಶಂಕೆ ಇದೆ. ಈ ನಡುವೆ, ಪ್ಯಾಕೆಟ್ ಒಳಗಿದ್ದ ಲಕ್ಷ ಲಕ್ಷ ರೂಪಾಯಿ ಯಾರ ಕೈಸೇರಿದೆ ಎನ್ನುವ ಸಂಶಯ ಎದುರಾಗಿದೆ.

Share this:

  • Share on Facebook (Opens in new window) Facebook
  • Share on X (Opens in new window) X

Like this:

Like Loading…

Related

Discover more from Coastal Times Kannada

Subscribe to get the latest posts sent to your email.

Previous Post

ಮಂಗಳೂರು: ಸಮಸ್ಯೆ ಪರಿಹರಿಸಲು ಎಂದು ಹೋಗಿದ್ದ ಎಬಿವಿಪಿ ಮುಖಂಡನ ಥಳಿಸಿದ ಕೆಪಿಟಿ ಪ್ರಾಂಶುಪಾಲ

Next Post

ಕೋಟೆಕಾರಿನ ಬಾಡಿಗೆ ಮನೆಯಲ್ಲಿ ವೇಶ್ಯಾವಾಟಿಕೆ- ದಂಪತಿ ಸಹಿತ ನಾಲ್ವರ ಬಂಧನ

Related Posts

ಸೆ.19: ಕಾಞಂಗಾಡ್‌ನ  ಹೊಸದುರ್ಗ ನಿತ್ಯಾನಂದ ಆಶ್ರಮದಲ್ಲಿ ಪುಸ್ತಕ ಬಿಡುಗಡೆ
ಕರಾವಳಿ

ಸೆ.19: ಕಾಞಂಗಾಡ್‌ನ ಹೊಸದುರ್ಗ ನಿತ್ಯಾನಂದ ಆಶ್ರಮದಲ್ಲಿ ಪುಸ್ತಕ ಬಿಡುಗಡೆ

September 11, 2026
17
ಬೆಳೆಗಾರರ ಬೆಂಬಲದಿಂದ 2025-26 ರ ಆರ್ಥಿಕ ವರ್ಷದಲ್ಲಿ ಕ್ಯಾಂಪ್ಕೊ, ದಾಖಲೆ ಸಾಧನೆ:  ರೂ.3,735 ಕೋಟಿ ವಹಿವಾಟು, ರೂ.49.62 ಕೋಟಿ ಲಾಭ

Discussion about this post

Recent News

ಮುಲ್ಕಿಯ ಆದಿ ಕಿಲ್ಪಾಡಿ ಕೊರ್ದಬ್ಬು ದೈವಸ್ಥಾನದಲ್ಲಿ ನಡೆದ ಕಳ್ಳತನ ಪ್ರಕರಣ: ನಾಲ್ವರು ಅಂತರ್ ಜಿಲ್ಲಾ ಕಳ್ಳರ ಬಂಧನ

ಮುಲ್ಕಿಯ ಆದಿ ಕಿಲ್ಪಾಡಿ ಕೊರ್ದಬ್ಬು ದೈವಸ್ಥಾನದಲ್ಲಿ ನಡೆದ ಕಳ್ಳತನ ಪ್ರಕರಣ: ನಾಲ್ವರು ಅಂತರ್ ಜಿಲ್ಲಾ ಕಳ್ಳರ ಬಂಧನ

September 11, 2026
40
ಮಂಗಳೂರು: ಸಾರ್ವಜನಿಕ ಸ್ಥಳಗಳಲ್ಲಿ ನಿಷೇಧಿತ ಎಂಡಿಎಂಎ ಹಾಗೂ ಗಾಂಜಾ ಸೇವನೆ ಮಾಡಿ ತೂರಾಡುತ್ತಿದ್ದ ಒಟ್ಟು 6 ಮಂದಿ ಆರೋಪಿಗಳ ಬಂಧನ

ಮಂಗಳೂರು: ಸಾರ್ವಜನಿಕ ಸ್ಥಳಗಳಲ್ಲಿ ನಿಷೇಧಿತ ಎಂಡಿಎಂಎ ಹಾಗೂ ಗಾಂಜಾ ಸೇವನೆ ಮಾಡಿ ತೂರಾಡುತ್ತಿದ್ದ ಒಟ್ಟು 6 ಮಂದಿ ಆರೋಪಿಗಳ ಬಂಧನ

September 11, 2026
59
COASTAL BOX LOGO

CORPORATE OFFICE

KHYATI VISUAL MEDIA
3rd Floor, Shalimar Complex
Kankanady, Mangaluru-575002

Email ID : coastaltimeskannada@gmail.com

Follow Us

ಹೊಸ ಸುದ್ದಿಗಳು

ಮುಲ್ಕಿಯ ಆದಿ ಕಿಲ್ಪಾಡಿ ಕೊರ್ದಬ್ಬು ದೈವಸ್ಥಾನದಲ್ಲಿ ನಡೆದ ಕಳ್ಳತನ ಪ್ರಕರಣ: ನಾಲ್ವರು ಅಂತರ್ ಜಿಲ್ಲಾ ಕಳ್ಳರ ಬಂಧನ

ಮುಲ್ಕಿಯ ಆದಿ ಕಿಲ್ಪಾಡಿ ಕೊರ್ದಬ್ಬು ದೈವಸ್ಥಾನದಲ್ಲಿ ನಡೆದ ಕಳ್ಳತನ ಪ್ರಕರಣ: ನಾಲ್ವರು ಅಂತರ್ ಜಿಲ್ಲಾ ಕಳ್ಳರ ಬಂಧನ

September 11, 2026
ಮಂಗಳೂರು: ಸಾರ್ವಜನಿಕ ಸ್ಥಳಗಳಲ್ಲಿ ನಿಷೇಧಿತ ಎಂಡಿಎಂಎ ಹಾಗೂ ಗಾಂಜಾ ಸೇವನೆ ಮಾಡಿ ತೂರಾಡುತ್ತಿದ್ದ ಒಟ್ಟು 6 ಮಂದಿ ಆರೋಪಿಗಳ ಬಂಧನ

ಮಂಗಳೂರು: ಸಾರ್ವಜನಿಕ ಸ್ಥಳಗಳಲ್ಲಿ ನಿಷೇಧಿತ ಎಂಡಿಎಂಎ ಹಾಗೂ ಗಾಂಜಾ ಸೇವನೆ ಮಾಡಿ ತೂರಾಡುತ್ತಿದ್ದ ಒಟ್ಟು 6 ಮಂದಿ ಆರೋಪಿಗಳ ಬಂಧನ

September 11, 2026
ಸೆ.19: ಕಾಞಂಗಾಡ್‌ನ  ಹೊಸದುರ್ಗ ನಿತ್ಯಾನಂದ ಆಶ್ರಮದಲ್ಲಿ ಪುಸ್ತಕ ಬಿಡುಗಡೆ

ಸೆ.19: ಕಾಞಂಗಾಡ್‌ನ ಹೊಸದುರ್ಗ ನಿತ್ಯಾನಂದ ಆಶ್ರಮದಲ್ಲಿ ಪುಸ್ತಕ ಬಿಡುಗಡೆ

September 11, 2026
  • About
  • Advertise
  • Privacy & Policy
  • Contact

Copyright ©2024. All Rights Reserved. Coastaltimeskannada.com | Design and Developed By Bluechip Infosystem - Contact Us : cc.bcis.blr@gmail.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

%d