• About us
  • Contact us
  • Disclaimer
Friday, May 8, 2026
  • Login
Coastal Times Kannada
No Result
View All Result
  • Home
    • ಗ್ಯಾಜೆಟ್
  • ರಾಜ್ಯ
  • ರಾಷ್ಟ್ರೀಯ
  • ರಾಜಕೀಯ
  • ವಿದೇಶಿ ಸುದ್ದಿ
  • ಕರಾವಳಿ
  • ಕ್ರೈಂ ನ್ಯೂಸ್
  • ಕ್ರೀಡೆ
  • ಸಿನಿಮಾ
  • ಆರೋಗ್ಯ
  • ವೆಬ್ ಸ್ಟೊರೀಸ್
Join to Group
  • Home
    • ಗ್ಯಾಜೆಟ್
  • ರಾಜ್ಯ
  • ರಾಷ್ಟ್ರೀಯ
  • ರಾಜಕೀಯ
  • ವಿದೇಶಿ ಸುದ್ದಿ
  • ಕರಾವಳಿ
  • ಕ್ರೈಂ ನ್ಯೂಸ್
  • ಕ್ರೀಡೆ
  • ಸಿನಿಮಾ
  • ಆರೋಗ್ಯ
  • ವೆಬ್ ಸ್ಟೊರೀಸ್
No Result
View All Result
Coastal Times Kannada
No Result
View All Result

ಮಂಗಳೂರು ಮಹಾನಗರದ ಜನರನ್ನು ಸಂಕಷ್ಟಕ್ಕೆ ದೂಡಿದ ಬಿಜೆಪಿ : ಜೆ.ಆರ್.ಲೋಬೊ

Coastal Times by Coastal Times
May 8, 2023
in ಕರಾವಳಿ
ಮಂಗಳೂರು ಮಹಾನಗರದ ಜನರನ್ನು ಸಂಕಷ್ಟಕ್ಕೆ ದೂಡಿದ ಬಿಜೆಪಿ : ಜೆ.ಆರ್.ಲೋಬೊ
39
VIEWS
WhatsappTelegramShare on FacebookShare on Twitter

ಮಂಗಳೂರು: ಮಂಗಳೂರು ನಗರ ವಿಶ್ವದಲ್ಲೇ ಗುರುತಿಸಲ್ಪಟ್ಟಿದೆ. ವಿಶ್ವದ ಶ್ರೇಷ್ಟ ನಗರವಾಗಿ ತಲೆ ಎತ್ತಿ ನಿಲ್ಲುವ ಎಲ್ಲಾ ಸದಾವಕಾಶಗಳು ಮಂಗಳೂರಿಗಿದೆ. ಸರ್ವ ಸಂಪರ್ಕ ಕೇಂದ್ರವಾದ ಮಂಗಳೂರು, ಜಗತ್ತಿನ ವಾಣಿಜ್ಯ ನಗರವಾಗಿ ಪರಿವರ್ತನೆಯಾಗುವ ಎಲ್ಲಾ ಅವಕಾಶಗಳು ತೆರೆದಿವೆ. ಅದಕ್ಕೆ ಸರಕಾರದ ಮತ್ತು ರಾಜಕೀಯ ದೂರದೃಷ್ಟಿತ್ವ ಹಾಗೂ ಇಚ್ಛಾಶಕ್ತಿ ಪ್ರದರ್ಶನವಾಗಬೇಕಿದೆ. ಇದಕ್ಕೆ ಪೂರಕವಾಗಿ ಮಂಗಳೂರು ಶಾಂತಿಯ ತಾಣವಾಗಬೇಕು. ಹಾಗೂ ಕಾನೂನು ವ್ಯವಸ್ಥೆ ಪರಿಣಾಮಕಾರಿಯಾಗಿರಬೇಕು ಎಂದು ಜೆ.ಆರ್. ಲೋಬೊ ಹೇಳಿದರು.

ಮಾನ್ಯ ಶಾಸಕ ಕಾಮತ್‌ ರವರು ತಾನು ಅಭಿವೃದ್ಧಿ ಮಾಡಿದ್ದೇನೆಂದು, ಪದೇ ಪದೇ ಹೇಳುತ್ತಿದ್ದಾರೆ. ಅಭಿವೃದ್ಧಿ ಏನು ಎಂಬುದರ ಅರ್ಥ ವ್ಯಾಪ್ತಿಯನ್ನು ಜನರು ವಿಶ್ಲೇಷಣೆ ಮಾಡಬೇಕಿದೆ. ಅವರ ಅವಧಿಯಲ್ಲಿ ಯಾವುದೇ ಹೊಸ ಯೋಜನೆಗಳು ಜಾರಿಗೆ ಆಗಿಲ್ಲ. ಕೇವಲ ರಸ್ತೆ ಮತ್ತು ಒಂದಿಷ್ಟು ಮೂಲಭೂತ ಸೌಕರ್ಯಗಳ ಅಭಿವೃಧಿ ಮಾತ್ರ ಆಗಿದೆ. ಅದನ್ನು ಮಹಾನಗರ ಪಾಲಿಕೆಯ ಕಾರ್ಪೊರೇಟರ್‌ಗಳೇ ನಿಭಾಯಿಸಬಲ್ಲರು. ಶಾಸಕನಾದವನು ರಾಜ್ಯ, ರಾಷ್ಟ್ರ, ಮತ್ತು ಅಂತರರಾಷ್ಟ್ರೀಯ ಬಂಡವಾಳವನ್ನು ಆಕರ್ಷಿಸಬೇಕು. ತನ್ಮೂಲಕ ಅಭಿವೃದ್ಧಿಯನ್ನು ಸಾಧಿಸಬೇಕು.

ಕುಡಿಯುವ ನೀರಿನ ತೆರಿಗೆ, ಉದ್ದಿಮೆ ಪರವಾನಿಗೆ ಶುಲ್ಕ, ಘನ ತ್ಯಾಜ್ಯ ಶುಲ್ಕ, ಆಸ್ತಿ ತೆರಿಗೆ ಶುಲ್ಕ ಅತೀ ಹೆಚ್ಚು ಮಾಡಲಾಗಿದೆ. ತನ್ಮೂಲಕ ಜನರನ್ನು ಸಂಕಷ್ಟಕ್ಕೆ ತಳ್ಳಿದ್ದಾರೆ. ಮೂಡಾದ ಏಕನಿವೇಶನ ಶುಲ್ಕವನ್ನೂ ಹೆಚ್ಚಿಸಲಾಗಿದೆ. ತುಂಡು ಭೂಪರಿವರ್ತನೆಗೆ ಅವಕಾಶ ಇಲ್ಲದಿರುವುದರಿಂದ ಜನಸಾಮಾನ್ಯರಿಗೆ ತೊಂದರೆ ಆಗುತ್ತಿದೆ. ಕಚೇರಿಯಿಂದ ಕಚೇರಿಗೆ ಜನ ಅಲೆಯುವಂತೆ ಮಾಡಲಾಗಿದೆ. ನಗರದಲ್ಲಿ 2000ರೂಪಾಯಿಗೆ ಹೂಯಿಗೆ ಕೊಡುತ್ತೇನೆಂದು ಹೇಳಿದ ಬಿಜೆಪಿ ಇದೀಗ ಹೊಯಿಗೆಯೇ ಸಿಗದಂತೆ ಮಾಡಿ ಜನಸಾಮಾನ್ಯರು ಸಣ್ಣ ಮನೆಯನ್ನು ಕಟ್ಟಿಕೊಳ್ಳದಂತೆ ಮಾಡಿದೆ. ಹಂಪನ್‌ ಕಟ್ಟಾ ಸಿಗ್ನಲ್‌ ನಿಂದ ಕೆ.ಎಸ್.ರಾವ್‌ ರಸ್ತೆಗೆ ಹೋಗುವುದಕ್ಕೆ ಪದೇ ಪದೇ ಅಡಚಣೆ, ಟೌನ್ ಹಾಲ್ ಕಡೆಯಿಂದ ಆರ್‌ಟಿಒ ರಸ್ತೆ ಏಕಮುಖ ರಸ್ತೆಯಾಗಿ ಬದಲಾವಣೆ, ಟೌನ್ ಹಾಲ್ ಎದುರು ಕೋಟ್ಯಾಂತರ ರೂಪಾಯಿ ಖರ್ಚು ಮಾಡಿದ ಅಂಡರ್‌ಪಾಸ್ ಸದುಪಯೋಗ ಮಾಡದಿರುವುದು, ಟ್ರಾಫಿಕ್ ಸಮಸ್ಯೆ, ಪಾರ್ಕಿಂಗ್ ಸಮಸ್ಯೆ ಹೀಗೆ ಬಿಜೆಪಿಯ ನಗರ ಪಾಲಿಕೆಯ ಆಡಳಿತ, ಜನ ವಿರೋಧಿಯಾಗಿದೆ.

ಈ ಡಬಲ್ ಇಂಜಿನ್ ಸರಕಾರ ಹೊಸ ಡಿಸಿ ಕಚೇರಿ ಕಾಮಗಾರಿಯನ್ನು ಪೂರ್ಣಗೊಳಿಸಿಲ್ಲ. ಕದ್ರಿ ಪಾರ್ಕ್‌ನಲ್ಲಿ ಅಪಾರ ಹಣ ಖರ್ಚು ಮಾಡಿ ಪಾರ್ಕಿಂಗ್ ವ್ಯವಸ್ಥೆ ಇಲ್ಲದಂತೆ ಮಾಡಿದೆ. ಸ್ಮಾರ್ಟ್ ಸಿಟಿ ಹಣವನ್ನು ಕೇವಲ ಕಾಂಕ್ರಿಟ್‌ ರಸ್ತೆಗೆ ಸುರಿದು 40% ಭ್ರಷ್ಟಾಚಾರ ಮಾಡಿದೆ. ಪದೇ ಪದೇ ಕಾಂಕ್ರಿಟ್ ರಸ್ತೆಯನ್ನು ಅಗೆದು ಸಾರ್ವಜನಿಕರ ತೆರಿಗೆ ಹಣವನ್ನು ಹಾಳು ಮಾಡಿದೆ. ಮೀನುಗಾರಿಕಾ ಬಂದರು ಅಭಿವೃದ್ಧಿಗೆ ಯಾವುದೇ ಪ್ರಯತ್ನ ಮಾಡಿಲ್ಲ. ಸೆಂಟ್ರಲ್ ಮಾರುಕಟ್ಟೆಯನ್ನು ಕೆಡಹುವ ಮೊದಲು ವ್ಯಾಪಾರಿಗಳಿಗೆ ಪರ್ಯಾಯ ವ್ಯವಸ್ಥೆ ಮಾಡದೆ ನೂರಾರು ಕುಟುಂಬಗಳು ಬೀದಿಗೆ ಬಂದಂತಾಗಿದೆ. ಕೊಲೋನಾ ಸಂದರ್ಭದಲ್ಲಿ ಬೇಕಾಬಿಟ್ಟಿ ನಿಯಮಗಳು ಜನಸಾಮಾನ್ಯರನ್ನು ಹಾಗೂ ವ್ಯಾಪಾರಿ ವರ್ಗದವರನ್ನು ಸಂಕಷ್ಟಕ್ಕೆ ತಳ್ಳುವಂತೆ ಮಾಡಿದೆ. ಈ ಎಲ್ಲಾ ವಿಷಯಗಳ ಕುರಿತು ಮಾನ್ಯ ಶಾಸಕರು ಮತದಾರರಿಗೆ ಉತ್ತರಿಸಲೇ ಇಲ್ಲ. ಒಟ್ಟಾರೆ ಮುಂಗಳೂರು ನಗರ ನಿವಾಸಿಗಳ ಬದುಕನ್ನು ಬಿಜೆಪಿ ನರಕವನ್ನಾಗಿಸಿದೆ. ಇದನ್ನೇ ಅಭಿವೃದ್ಧಿ ಎಂದು ಮಾನ್ಯ ಶಾಸಕರು ಹೇಳುತ್ತಿದ್ದಾರೆ.

ನಾನು ಮೊದಲ ಬಾರಿಗೆ ಶಾಸಕನಾಗಿದ್ದಾಗ ಹಲವು ಚಿಂತನೆಗಳೊಂದಿಗೆ ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ಮಂಗಳೂರು ನಗರವನ್ನು ಸೇರ್ಪಡಿಸಿದ್ದು, ಜಲಸಿ ಯೋಜನೆಯನ್ನು ಜಾರಿಗೆ ತಂದದ್ದು, ಮಂಗಳೂರಿಗೆ ಹೊಸತನ ನೀಡಬೇಕು ಎಂಬ ಕಾರಣಕ್ಕೆ ದೇಶದಲ್ಲೇ ಮೊದಲ 3ಡಿ ಪ್ಲಾನಿಟೋರಿಯಂ ಪ್ರಾರಂಭಿಸಿದೆ. ನಮ್ಮ ಭಾಗದ ಅನ್ನದ ತಟ್ಟೆಯೆಂದೇ ಪ್ರಸಿದ್ಧವಾದ ಮೀನುಗಾರಿಕೆಗೆ ಪ್ರಥಮ ಆದ್ಯತೆ ನೀಡಲು ಲಕ್ಷದ್ವೀಪದಿಂದ 400ಕೋಟಿ ಬಂಡವಾಳ ತರಲು ಯತ್ನಿಸಿದೆ. ನಾನು ಚುನಾವಣೆಯಲ್ಲಿ ಸೋತ ಹಿನ್ನಲೆಯಲ್ಲಿ ಆನೇಕ ಯೋಜನೆಗಳು ತಡೆಹಿಡಿಯಲ್ಪಟ್ಟಿದೆ, ಅದು ಪುನಃ ಕೈಗೂಡಬೇಕಾದರೆ ಮಂಗಳೂರಿನ ಮತದಾರರು ನನ್ನನ್ನು ಮತ್ತೊಮ್ಮೆ ಆಶೀರ್ವಾದಿಸಬೇಕಿದೆ. ಇದರ ಜೊತೆಗೆ ನಗರದ ದೊಡ್ಡ ಸಮಸ್ಯೆ, ಯುವಕರಲ್ಲಿನ ನಿರುದ್ಯೋಗ, ಅಂತರರಾಷ್ಟ್ರೀಯ ಕ್ರೀಡಾಗ್ರಾಮ, ಐಟಿ ಪಾರ್ಕ್‌, ಮೀನುಗಾರಿಕಾ ಅಭಿವೃದ್ಧಿ, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳ ಅಭಿವೃದ್ಧಿಯಿಂದ ಮಾತ್ರ ನಿರುದ್ಯೋಗ ಸಮಸ್ಯೆ ನಿವಾರಣೆ ಆಗುತ್ತದೆ. ಪ್ರವಾಸೋದ್ಯಮವನ್ನು ಅಭಿವೃದ್ಧಿ ಪಡಿಸಲು ವಿಫುಲ ಅವಕಾಶವು ಇದೆ. ಜಗತ್ತಿನ ಬಂಡವಾಳ ಆಕರ್ಷಣೆಗೆ ಸುಸಜ್ಜಿತ ರಸ್ತೆ, ನದಿ ತಟದಲ್ಲಿ ಸಂಪರ್ಕ ರಸ್ತೆ ಅಗತ್ಯವಿದೆ.

ಮಂಗಳೂರಿನ ನಗರದಲ್ಲಿ ಕಾನೂನು ವ್ಯವಸ್ಥೆಯನ್ನು ಬಲಪಡಿಸುವುದು ಅಗತ್ಯವಿದೆ. ಯುವಕರನ್ನು ದಾರಿ ತಪ್ಪಿಸುವ ವಿವಿಧ ಜೂಜು ಕೇಂದ್ರಗಳನ್ನು ನನ್ನ ಅವಧಿಯಲ್ಲಿ ನಿಲ್ಲಿಸಲಾಗಿತ್ತು. ಅದು ಕಳೆದ 5 ವರ್ಷಗಳಲ್ಲಿ ಮತ್ತೆ ನಗರದಾದ್ಯಂತ ವ್ಯಾಪಿಸಿದೆ. ಇಂತಹುದ್ದಕ್ಕೆ ಕಡಿವಾಣ ಹಾಕುವುದು, ನನ್ನ ಉದ್ದೇಶವಾಗಿದೆ. ಹಾಗೂ ಮಂಗಳೂರನ್ನು “ಶೈಕ್ಷಣಿಕ ಕಾಶಿ” ಎಂಬ ಪಾವಿತ್ರ್ಯ ನಗರವನ್ನಾಗಿ ಉಳಿಸಬೇಕಾಗಿದೆ. ಜೊತೆಗೆ ಕರಾವಳಿಯ ತುಳು ಭಾಷೆ ಸಂಸ್ಕೃತಿಯ ಅಭಿವೃದ್ಧಿಗೆ ಸಾಧ್ಯವಾಗುವ ಎಲ್ಲಾ ಪ್ರಯತ್ನಗಳನ್ನು ಮಾಡಲು ನಿರ್ಧರಿಸಿದ್ದೇನೆ.

ಬೆಲೆ ಏರಿಕೆ 40% ಭ್ರಷ್ಟಾಚಾರ, ನಿರುದ್ಯೋಗ, ಆಡಳಿತ ವೈಫಲ್ಯ ಇತ್ಯಾದಿಯಿಂದ ಜನರು ರೋಸಿ ಹೋಗಿದ್ದು, ಮತದಾರರು ಕಾಂಗ್ರೆಸ್ ಬೆಂಬಲಕ್ಕೆ ನಿಲ್ಲುವ ವಾತಾವರಣ ನಿರ್ಮಾಣವಾಗಿದೆ. ಪ್ರತಿಯೊಬ್ಬರು ತಪ್ಪದೇ ಮತದಾನ ಮಾಡಿ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಬೇಕೆಂದು ಎಂದು ಜೆ.ಆರ್. ಲೋಬೊ ಹೇಳಿದರು.

 

Share this:

  • Share on Facebook (Opens in new window) Facebook
  • Share on X (Opens in new window) X

Like this:

Like Loading...

Related


Discover more from Coastal Times Kannada

Subscribe to get the latest posts sent to your email.

Previous Post

ಸರಕಾರದ ಸಾಧನೆಗೆ ಜನಮೆಚ್ಚುಗೆ; ಬಿಜೆಪಿ ಬಹುಮತ ಖಚಿತ: ಕೃಷ್ಣ ಜೆ. ಪಾಲೆಮಾರ್

Next Post

ಮಂಗಳೂರು: ಎಂಸಿಸಿ ಬ್ಯಾಂಕ್ ಲಿಮಿಟೆಡ್‌ನ ಸಂಸ್ಥಾಪಕರ ದಿನಾಚರಣೆ

Related Posts

ಖ್ಯಾತ ಸಾಹಿತಿ ವಲ್ಲಿ ವಗ್ಗ ಅವರ ನೂತನ ಕೃತಿ ‘ವಿಂಚ್ಣಾರ್ ಕಾಣಿಯೊ’ ಬಿಡುಗಡೆ
ಕರಾವಳಿ

ಖ್ಯಾತ ಸಾಹಿತಿ ವಲ್ಲಿ ವಗ್ಗ ಅವರ ನೂತನ ಕೃತಿ ‘ವಿಂಚ್ಣಾರ್ ಕಾಣಿಯೊ’ ಬಿಡುಗಡೆ

May 6, 2026
3
ಮೇ 9 -10 ರಂದು : ಸುರತ್ಕಲ್ ನಲ್ಲಿ ರಾಜ್ಯಮಟ್ಟದ “ಲೆಜೆಂಡ್ಸ್ ಕ್ರಿಕೆಟ್ ಲೀಗ್ ಸೀಸನ್ – 5” ಹಿರಿಯರ ಕ್ರಿಕೆಟ್ ಹಬ್ಬ
ಕರಾವಳಿ

ಮೇ 9 -10 ರಂದು : ಸುರತ್ಕಲ್ ನಲ್ಲಿ ರಾಜ್ಯಮಟ್ಟದ “ಲೆಜೆಂಡ್ಸ್ ಕ್ರಿಕೆಟ್ ಲೀಗ್ ಸೀಸನ್ – 5” ಹಿರಿಯರ ಕ್ರಿಕೆಟ್ ಹಬ್ಬ

May 6, 2026
9
Next Post
ಮಂಗಳೂರು: ಎಂಸಿಸಿ ಬ್ಯಾಂಕ್ ಲಿಮಿಟೆಡ್‌ನ ಸಂಸ್ಥಾಪಕರ ದಿನಾಚರಣೆ

ಮಂಗಳೂರು: ಎಂಸಿಸಿ ಬ್ಯಾಂಕ್ ಲಿಮಿಟೆಡ್‌ನ ಸಂಸ್ಥಾಪಕರ ದಿನಾಚರಣೆ

Discussion about this post

Recent News

ಪಶ್ಚಿಮ ಬಂಗಾಳ: ಮುಖ್ಯಮಂತ್ರಿ ರೇಸ್​ನಲ್ಲಿರುವ ಸುವೇಂದು ಅಧಿಕಾರಿ ಆಪ್ತ ಸಹಾಯಕ ಚಂದ್ರನಾಥ್ ರಥ್ ಹತ್ಯೆ

ಪಶ್ಚಿಮ ಬಂಗಾಳ: ಮುಖ್ಯಮಂತ್ರಿ ರೇಸ್​ನಲ್ಲಿರುವ ಸುವೇಂದು ಅಧಿಕಾರಿ ಆಪ್ತ ಸಹಾಯಕ ಚಂದ್ರನಾಥ್ ರಥ್ ಹತ್ಯೆ

May 7, 2026
45
ಖ್ಯಾತ ಸಾಹಿತಿ ವಲ್ಲಿ ವಗ್ಗ ಅವರ ನೂತನ ಕೃತಿ ‘ವಿಂಚ್ಣಾರ್ ಕಾಣಿಯೊ’ ಬಿಡುಗಡೆ

ಖ್ಯಾತ ಸಾಹಿತಿ ವಲ್ಲಿ ವಗ್ಗ ಅವರ ನೂತನ ಕೃತಿ ‘ವಿಂಚ್ಣಾರ್ ಕಾಣಿಯೊ’ ಬಿಡುಗಡೆ

May 6, 2026
3
COASTAL BOX LOGO

CORPORATE OFFICE

KHYATI VISUAL MEDIA
3rd Floor, Shalimar Complex
Kankanady, Mangaluru-575002


Email ID : coastaltimeskannada@gmail.com

Follow Us

ಹೊಸ ಸುದ್ದಿಗಳು

ಪಶ್ಚಿಮ ಬಂಗಾಳ: ಮುಖ್ಯಮಂತ್ರಿ ರೇಸ್​ನಲ್ಲಿರುವ ಸುವೇಂದು ಅಧಿಕಾರಿ ಆಪ್ತ ಸಹಾಯಕ ಚಂದ್ರನಾಥ್ ರಥ್ ಹತ್ಯೆ

ಪಶ್ಚಿಮ ಬಂಗಾಳ: ಮುಖ್ಯಮಂತ್ರಿ ರೇಸ್​ನಲ್ಲಿರುವ ಸುವೇಂದು ಅಧಿಕಾರಿ ಆಪ್ತ ಸಹಾಯಕ ಚಂದ್ರನಾಥ್ ರಥ್ ಹತ್ಯೆ

May 7, 2026
ಖ್ಯಾತ ಸಾಹಿತಿ ವಲ್ಲಿ ವಗ್ಗ ಅವರ ನೂತನ ಕೃತಿ ‘ವಿಂಚ್ಣಾರ್ ಕಾಣಿಯೊ’ ಬಿಡುಗಡೆ

ಖ್ಯಾತ ಸಾಹಿತಿ ವಲ್ಲಿ ವಗ್ಗ ಅವರ ನೂತನ ಕೃತಿ ‘ವಿಂಚ್ಣಾರ್ ಕಾಣಿಯೊ’ ಬಿಡುಗಡೆ

May 6, 2026
ಸಚಿವ ಜಮೀರ್ ಮನೆಯಿಂದ 1 ಕೆ.ಜಿ 200 ಗ್ರಾಂ ಚಿನ್ನಾಭರಣ ಕಳ್ಳತನ; ಸಂಬಂಧಿ ಸೇರಿ ಇಬ್ಬರು ಸೆರೆ

ಸಚಿವ ಜಮೀರ್ ಮನೆಯಿಂದ 1 ಕೆ.ಜಿ 200 ಗ್ರಾಂ ಚಿನ್ನಾಭರಣ ಕಳ್ಳತನ; ಸಂಬಂಧಿ ಸೇರಿ ಇಬ್ಬರು ಸೆರೆ

May 6, 2026
  • About
  • Advertise
  • Privacy & Policy
  • Contact

Copyright ©2024. All Rights Reserved. Coastaltimeskannada.com | Design and Developed By Bluechip Infosystem - Contact Us : cc.bcis.blr@gmail.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
No Result
View All Result
  • Home
    • ಗ್ಯಾಜೆಟ್
  • ರಾಜ್ಯ
  • ರಾಷ್ಟ್ರೀಯ
  • ರಾಜಕೀಯ
  • ವಿದೇಶಿ ಸುದ್ದಿ
  • ಕರಾವಳಿ
  • ಕ್ರೈಂ ನ್ಯೂಸ್
  • ಕ್ರೀಡೆ
  • ಸಿನಿಮಾ
  • ಆರೋಗ್ಯ
  • ವೆಬ್ ಸ್ಟೊರೀಸ್

Copyright ©2024. All Rights Reserved. Coastaltimeskannada.com | Design and Developed By Bluechip Infosystem - Contact Us : cc.bcis.blr@gmail.com

%d