• About us
  • Contact us
  • Disclaimer
Sunday, September 13, 2026
  • Login
Coastal Times Kannada
No Result
View All Result
  • Home
    • ಗ್ಯಾಜೆಟ್
  • ರಾಜ್ಯ
  • ರಾಷ್ಟ್ರೀಯ
  • ರಾಜಕೀಯ
  • ವಿದೇಶಿ ಸುದ್ದಿ
  • ಕರಾವಳಿ
  • ಕ್ರೈಂ ನ್ಯೂಸ್
  • ಕ್ರೀಡೆ
  • ಸಿನಿಮಾ
  • ಆರೋಗ್ಯ
  • ವೆಬ್ ಸ್ಟೊರೀಸ್
Join to Group
  • Home
    • ಗ್ಯಾಜೆಟ್
  • ರಾಜ್ಯ
  • ರಾಷ್ಟ್ರೀಯ
  • ರಾಜಕೀಯ
  • ವಿದೇಶಿ ಸುದ್ದಿ
  • ಕರಾವಳಿ
  • ಕ್ರೈಂ ನ್ಯೂಸ್
  • ಕ್ರೀಡೆ
  • ಸಿನಿಮಾ
  • ಆರೋಗ್ಯ
  • ವೆಬ್ ಸ್ಟೊರೀಸ್
No Result
View All Result
Coastal Times Kannada
No Result
View All Result

ಮಂಗಳೂರು: ಎಂಸಿಸಿ ಬ್ಯಾಂಕ್ ಲಿಮಿಟೆಡ್‌ನ ಸಂಸ್ಥಾಪಕರ ದಿನಾಚರಣೆ

Coastal Times by Coastal Times
May 9, 2023
in ಕರಾವಳಿ
ಮಂಗಳೂರು: ಎಂಸಿಸಿ ಬ್ಯಾಂಕ್ ಲಿಮಿಟೆಡ್‌ನ ಸಂಸ್ಥಾಪಕರ ದಿನಾಚರಣೆ
29
VIEWS
WhatsappTelegramShare on FacebookShare on Twitter

ಮಂಗಳೂರು: ಕರಾವಳಿ ಕರ್ನಾಟಕದ ಪ್ರಥಮ ಅರ್ಬನ್ ಕೋ-ಆಪರೇಟಿವ್ ಬ್ಯಾಂಕ್‌ಗಳಲ್ಲಿ ಒಂದಾದ ಎಂ.ಸಿ.ಸಿ. ಬ್ಯಾಂಕ್‌ ಲಿಮಿಟೆಡ್‌ನ ಸಂಸ್ಥಾಪಕರ ದಿನವನ್ನು ಮೇ 7, 2023ರಂದು ಬ್ಯಾಂಕಿನ ಆಡಳಿತ ಕಚೇರಿ ಆವರಣದಲ್ಲಿ 111 ವರ್ಷಗಳ ಸಮರ್ಷಿತ ಸೇವೆಯನ್ನು ಪೂರ್ಣಗೊಳಿಸುವುದರೊಂದಿಗೆ ಆಚರಿಸಲಾಯಿತು.

ಈ ಸಂದರ್ಭದಲ್ಲಿ ಧರ್ಮಗುರು ಫಾ| ಬೊನವೆಂಚರ್ ನಜರೆತ್‌ ಅವರು ಪವಿತ್ರ ಪೂಜೆಯನ್ನು ನೆರವೇರಿಸಿದರು. ಅವರು ದೂರದೃಷ್ಟಿಯ ಸಂಸ್ಥಾಪಕ ಪಿ.ಎಫ್.ಎಕ್ಸ್‌. ಸಲ್ದಾನ್ಹಾ ಅವರು ಸಮಾಜದ ಅನುಕೂಲಕ್ಕಾಗಿ ಶ್ರೇಷ್ಟ ಸಂಸ್ಥೆಯನ್ನು ಪ್ರಾರಂಭಿಸುವ ಉದಾತ್ತ ಕಾರ್ಯವನ್ನು ಸ್ಮರಿಸಿ, ದಿನದ ಮಹತ್ವವನ್ನು ವಿವರಿಸಿದರು. ಕಳೆದ 111 ವರ್ಷಗಳಿಂದ ಬ್ಯಾಂಕ್‌ನಿಂದ ಸಮಾಜಕ್ಕೆ ಉತ್ತಮ ಕೆಲಸವಾಗಿದೆ. ಮುಂದೆಯೂ ಬ್ಯಾಂಕಿನ ಅಭಿವೃದ್ಧಿಗೆ ಆಡಳಿತ ಮಂಡಳಿ ಮತ್ತು ಸಿಬ್ಬಂದಿಗಳು ದೂರದೃಷ್ಟಿಯುಳ್ಳವರಾಗಿದ್ದು ಪ್ರಾಮಾಣಿಕತೆಯಿಂದ ಕೆಲಸ ಮಾಡಬೇಕು ಎಂದು ಕರೆ ನೀಡಿದರು.

ಬಳಿಕ ನಡೆದ ವೇದಿಕೆ ಕಾರ್ಯಕ್ರಮದಲ್ಲಿ ಬ್ಯಾಂಕ್‌ ಅಧ್ಯಕ್ಷ ಅನಿಲ್‌ ಲೋಬೊ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ, ಮಂಗಳೂರಿನ ಪ್ರಾವಿಟ್ ಫುಡ್ ಪ್ರಾಡಕ್ಟ್ನ ವ್ಯವಸ್ಥಾಪಕ ನಿರ್ದೇಶಕರಾದ ಶ್ರೀ ವಿನ್ಸೆಂಟ್ ಕುಟಿನ್ಹಾ, ಜನರಲ್ ಮ್ಯಾನೇಜರ್ ಸುನಿಲ್ ಮಿನೇಜಸ್ ಮತ್ತು ನಿರ್ದೇಶಕರು ವೇದಿಕೆಯಲ್ಲಿದ್ದರು. ಅನಿಲ್ ಲೋಬೊ ಅವರು ಪ್ರಾಸ್ತಾವಿಕವಾಗಿ ಗಣ್ಯರು, ಅತಿಥಿಗಳು, ಆಹ್ವಾನಿತರು ಮತ್ತು ಸಿಬ್ಬಂದಿಯನ್ನು ಸ್ವಾಗತಿಸಿ, 2018ರಲ್ಲಿ ಬ್ಯಾಂಕಿನ ಆಡಳಿತವನ್ನು ವಹಿಸಿಕೊಂಡ ಪ್ರಸ್ತುತ ಮಂಡಳಿಯು ಈ ಮಹಾನ್‌ ಸಂಸ್ಥೆಯ ದಾರ್ಶನಿಕ ಸಂಸ್ಥಾಪಕರಾದ ಪಿ.ಎಫ್.ಎಕ್ಸ್, ಸಲ್ದಾನ್ಹಾ ಇವರನ್ನು ಗೌರವಿಸಲು, 2022ರಿಂದ ಸಂಸ್ಥಾಪಕರ ದಿನವನ್ನು ಆಚರಿಸಲು ಪ್ರಾರಂಭಿಸಿದೆ. ಇದರಿಂದ ದಾರ್ಶನಿಕ ಸಂಸ್ಥಾಪಕರ ಮಹತ್ತರ ಕಾರ್ಯಗಳು – ನಿರ್ದೇಶಕರು, ಸದಸ್ಯರು ಮತ್ತು ಸಿಬ್ಬಂದಿಯ ಮನಸ್ಸಿನಲ್ಲಿ ಉಳಿಯುತ್ತದೆ ಎಂದರು.

ಬ್ಯಾಂಕ್ ಕಳೆದ ವರ್ಷದಲ್ಲಿ ಗ್ರಾಹಕರ ಸಭೆ, ಮಹಿಳಾ ದಿನಾಚರಣೆ, ಶತಮಾನೋತ್ಸವದ ನಂತರದ ದಶಮಾನೋತ್ಸವ, ಎನ್‌‌ಐ ಸಭೆ ಇತ್ಯಾದಿ ಹಲವಾರು ಕಾರ್ಯಕ್ರಮಗಳನ್ನು ನಡೆಸಿ, ಬ್ಯಾಂಕ್‌ನ ಗ್ರಾಹಕರು ಮತ್ತು ಷೇರುದಾರರಲ್ಲಿ ಅಭಿಮಾನ ಮೂಡುವಂತೆ ಮಾಡಿದೆ. ಬ್ಯಾಂಕ್ ಸೊಸೈಟಿಯ ಅಗತ್ಯಗಳಿಗೆ ಸ್ಪಂದಿಸುವ ಮತ್ತು ಗ್ರಾಹಕರ, ಷೇರುದಾರರ ವಿಶ್ವಾಸ ಗಳಿಸುವ ಪ್ರಬಲ ಹಣಕಾಸು ಸಂಸ್ಥೆಯಾಗಿ ಉಳಿದುಕೊಂಡಿದ್ದು, ಕಳೆದ 5 ವರ್ಷಗಳಿಂದ ಬ್ಯಾಂಕ್‌ನ ಕಾರ್ಯನಿರ್ವಹಣೆಯಲ್ಲಿ ಸ್ಪಷ್ಟವಾಗಿದೆ ಎಂದು ಹೇಳಿದರು.

ನಂತರ ಮಾತನಾಡಿದ ಶ್ರೀ ಎನ್ಸೆಂಟ್ ಕುಟಿನ್ಹಾ ಅವರು ಕಳೆದ ವರ್ಷಗಳಲ್ಲಿ ಬ್ಯಾಂಕ್‌ ಸಾಧಿಸಿರುವ ಪ್ರಗತಿಯನ್ನು ಶ್ಲಾಘಿಸಿ, ಬ್ಯಾಂಕ್‌ ತನ್ನ ಕಾರ್ಯಕ್ಷೇತ್ರವನ್ನು ಎರಡು ಜಿಲ್ಲೆಗಳಿಂದ 7 ಜಿಲ್ಲೆಗಳಿಗೆ ವಿಸ್ತರಿಸುತ್ತಿರುವುದಕ್ಕೆ ಸಂತಸ ವ್ಯಕ್ತಪಡಿಸಿ, ಬ್ಯಾಂಕಿನ ಅಭಿವೃದ್ಧಿಗೆ ಆಡಳಿತ ಮಂಡಳಿ ಹಾಗೂ ಸಿಬ್ಬಂದಿ ವರ್ಗ ಒಗ್ಗೂಡಿ ಶ್ರಮಿಸುವಂತೆ ಕೋರಿ, ಮುಂದಿನ ಕಾರ್ಯಗಳಿಗೆ ಶುಭ ಹಾರೈಸಿದರು. ವೇದಿಕೆಯಲ್ಲಿ ಅತಿಥಿಗಳಿಂದ ಸ್ಥಾಪಕರ ಕೇಕ್ ಕತ್ತರಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಲಾಯಿತು. ಸಂಸ್ಥಾಪಕರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಲಾಯಿತು. ಮೇ ತಿಂಗಳಲ್ಲಿ ಹುಟ್ಟುಹಬ್ಬ ಆಚರಿಸಿಕೊಂಡವರನ್ನು ಹುಟ್ಟುಹಬ್ಬದ ಕೇಕ್ ಕತ್ತರಿಸಿ ಸನ್ಮಾನಿಸಲಾಯಿತು.

ನಿರ್ದೇಶಕರುಗಳಾದ ಶ್ರೀ ಡೇವಿಡ್ ಡಿಸೋಜಾ, ಶ್ರೀ ಹೆರಾಲ್ಡ್ ಮೊಂತರೊ, ಶ್ರೀ ರೋಶನ್ ಡಿಸೋಜಾ, ಶ್ರೀ ಎಲ್‌ರಾಯ್‌ ಕ್ರಾಸ್ಕೊ, ಡಾ| ಪೀಡಾ ಡಿಸೋಜಾ, ಶ್ರೀ ಸುಶಾಂತ್ ಸಲ್ದಾನ್ಹಾ, ಶ್ರೀ ಅಲ್ವಿನ್ ಪಿ ಮೊಂತರೊ, ಶ್ರೀಮತಿ ಶರ್ಮಿಳಾ ಮಿನೇಜಸ್, ಶ್ರೀ ಫೆಲಿಕ್ಸ್ ಡಿಕ್ರೂಜ್, ಡಾ| ಜೆರಾಲ್ಡ್ ಪಿಂಟೊ ಇವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಪ್ರಧಾನ ವ್ಯವಸ್ಥಾಪಕರಾದ ಶ್ರೀ ಸುನಿಲ್ ಮಿನೇಜಸ್ ವಂದಿಸಿದರು. ಉಳ್ಳಾಲ ಶಾಖೆಯ ಕಿರಿಯ ಸಹಾಯಕಿ ಶ್ರೀಮತಿ ಶೈನಿ ಡಿಸೋಜಾ ಕಾರ್ಯಕ್ರಮ ನಿರೂಪಿಸಿದರು. 

Share this:

  • Share on Facebook (Opens in new window) Facebook
  • Share on X (Opens in new window) X

Like this:

Like Loading…

Related

Discover more from Coastal Times Kannada

Subscribe to get the latest posts sent to your email.

Previous Post

ಮಂಗಳೂರು ಮಹಾನಗರದ ಜನರನ್ನು ಸಂಕಷ್ಟಕ್ಕೆ ದೂಡಿದ ಬಿಜೆಪಿ : ಜೆ.ಆರ್.ಲೋಬೊ

Next Post

ಮಂಗಳೂರು ಉತ್ತರ ಕ್ಷೇತ್ರವನ್ನು ಅಭಿವೃದ್ಧಿಯ ಎತ್ತರಕ್ಕೇರಿಸುವೆ: ಇನಾಯತ್ ಅಲಿ

Related Posts

ಸೆ.19: ಕಾಞಂಗಾಡ್‌ನ  ಹೊಸದುರ್ಗ ನಿತ್ಯಾನಂದ ಆಶ್ರಮದಲ್ಲಿ ಪುಸ್ತಕ ಬಿಡುಗಡೆ
ಕರಾವಳಿ

ಸೆ.19: ಕಾಞಂಗಾಡ್‌ನ ಹೊಸದುರ್ಗ ನಿತ್ಯಾನಂದ ಆಶ್ರಮದಲ್ಲಿ ಪುಸ್ತಕ ಬಿಡುಗಡೆ

September 11, 2026
17
ಬೆಳೆಗಾರರ ಬೆಂಬಲದಿಂದ 2025-26 ರ ಆರ್ಥಿಕ ವರ್ಷದಲ್ಲಿ ಕ್ಯಾಂಪ್ಕೊ, ದಾಖಲೆ ಸಾಧನೆ:  ರೂ.3,735 ಕೋಟಿ ವಹಿವಾಟು, ರೂ.49.62 ಕೋಟಿ ಲಾಭ

Discussion about this post

Recent News

ಮುಲ್ಕಿಯ ಆದಿ ಕಿಲ್ಪಾಡಿ ಕೊರ್ದಬ್ಬು ದೈವಸ್ಥಾನದಲ್ಲಿ ನಡೆದ ಕಳ್ಳತನ ಪ್ರಕರಣ: ನಾಲ್ವರು ಅಂತರ್ ಜಿಲ್ಲಾ ಕಳ್ಳರ ಬಂಧನ

ಮುಲ್ಕಿಯ ಆದಿ ಕಿಲ್ಪಾಡಿ ಕೊರ್ದಬ್ಬು ದೈವಸ್ಥಾನದಲ್ಲಿ ನಡೆದ ಕಳ್ಳತನ ಪ್ರಕರಣ: ನಾಲ್ವರು ಅಂತರ್ ಜಿಲ್ಲಾ ಕಳ್ಳರ ಬಂಧನ

September 11, 2026
41
ಮಂಗಳೂರು: ಸಾರ್ವಜನಿಕ ಸ್ಥಳಗಳಲ್ಲಿ ನಿಷೇಧಿತ ಎಂಡಿಎಂಎ ಹಾಗೂ ಗಾಂಜಾ ಸೇವನೆ ಮಾಡಿ ತೂರಾಡುತ್ತಿದ್ದ ಒಟ್ಟು 6 ಮಂದಿ ಆರೋಪಿಗಳ ಬಂಧನ

ಮಂಗಳೂರು: ಸಾರ್ವಜನಿಕ ಸ್ಥಳಗಳಲ್ಲಿ ನಿಷೇಧಿತ ಎಂಡಿಎಂಎ ಹಾಗೂ ಗಾಂಜಾ ಸೇವನೆ ಮಾಡಿ ತೂರಾಡುತ್ತಿದ್ದ ಒಟ್ಟು 6 ಮಂದಿ ಆರೋಪಿಗಳ ಬಂಧನ

September 11, 2026
60
COASTAL BOX LOGO

CORPORATE OFFICE

KHYATI VISUAL MEDIA
3rd Floor, Shalimar Complex
Kankanady, Mangaluru-575002

Email ID : coastaltimeskannada@gmail.com

Follow Us

ಹೊಸ ಸುದ್ದಿಗಳು

ಮುಲ್ಕಿಯ ಆದಿ ಕಿಲ್ಪಾಡಿ ಕೊರ್ದಬ್ಬು ದೈವಸ್ಥಾನದಲ್ಲಿ ನಡೆದ ಕಳ್ಳತನ ಪ್ರಕರಣ: ನಾಲ್ವರು ಅಂತರ್ ಜಿಲ್ಲಾ ಕಳ್ಳರ ಬಂಧನ

ಮುಲ್ಕಿಯ ಆದಿ ಕಿಲ್ಪಾಡಿ ಕೊರ್ದಬ್ಬು ದೈವಸ್ಥಾನದಲ್ಲಿ ನಡೆದ ಕಳ್ಳತನ ಪ್ರಕರಣ: ನಾಲ್ವರು ಅಂತರ್ ಜಿಲ್ಲಾ ಕಳ್ಳರ ಬಂಧನ

September 11, 2026
ಮಂಗಳೂರು: ಸಾರ್ವಜನಿಕ ಸ್ಥಳಗಳಲ್ಲಿ ನಿಷೇಧಿತ ಎಂಡಿಎಂಎ ಹಾಗೂ ಗಾಂಜಾ ಸೇವನೆ ಮಾಡಿ ತೂರಾಡುತ್ತಿದ್ದ ಒಟ್ಟು 6 ಮಂದಿ ಆರೋಪಿಗಳ ಬಂಧನ

ಮಂಗಳೂರು: ಸಾರ್ವಜನಿಕ ಸ್ಥಳಗಳಲ್ಲಿ ನಿಷೇಧಿತ ಎಂಡಿಎಂಎ ಹಾಗೂ ಗಾಂಜಾ ಸೇವನೆ ಮಾಡಿ ತೂರಾಡುತ್ತಿದ್ದ ಒಟ್ಟು 6 ಮಂದಿ ಆರೋಪಿಗಳ ಬಂಧನ

September 11, 2026
ಸೆ.19: ಕಾಞಂಗಾಡ್‌ನ  ಹೊಸದುರ್ಗ ನಿತ್ಯಾನಂದ ಆಶ್ರಮದಲ್ಲಿ ಪುಸ್ತಕ ಬಿಡುಗಡೆ

ಸೆ.19: ಕಾಞಂಗಾಡ್‌ನ ಹೊಸದುರ್ಗ ನಿತ್ಯಾನಂದ ಆಶ್ರಮದಲ್ಲಿ ಪುಸ್ತಕ ಬಿಡುಗಡೆ

September 11, 2026
  • About
  • Advertise
  • Privacy & Policy
  • Contact

Copyright ©2024. All Rights Reserved. Coastaltimeskannada.com | Design and Developed By Bluechip Infosystem - Contact Us : cc.bcis.blr@gmail.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

%d