• About us
  • Contact us
  • Disclaimer
Tuesday, August 25, 2026
  • Login
Coastal Times Kannada
No Result
View All Result
  • Home
    • ಗ್ಯಾಜೆಟ್
  • ರಾಜ್ಯ
  • ರಾಷ್ಟ್ರೀಯ
  • ರಾಜಕೀಯ
  • ವಿದೇಶಿ ಸುದ್ದಿ
  • ಕರಾವಳಿ
  • ಕ್ರೈಂ ನ್ಯೂಸ್
  • ಕ್ರೀಡೆ
  • ಸಿನಿಮಾ
  • ಆರೋಗ್ಯ
  • ವೆಬ್ ಸ್ಟೊರೀಸ್
Join to Group
  • Home
    • ಗ್ಯಾಜೆಟ್
  • ರಾಜ್ಯ
  • ರಾಷ್ಟ್ರೀಯ
  • ರಾಜಕೀಯ
  • ವಿದೇಶಿ ಸುದ್ದಿ
  • ಕರಾವಳಿ
  • ಕ್ರೈಂ ನ್ಯೂಸ್
  • ಕ್ರೀಡೆ
  • ಸಿನಿಮಾ
  • ಆರೋಗ್ಯ
  • ವೆಬ್ ಸ್ಟೊರೀಸ್
No Result
View All Result
Coastal Times Kannada
No Result
View All Result

ಮಂಗಳೂರು: ಕಾರಿನ ಲೈಸನ್ಸ್ ಹಿಡಿದಿಟ್ಟು 50 ಸಾವಿರ ಲಂಚಕ್ಕೆ ಬೇಡಿಕೆಯಿಟ್ಟ ಕದ್ರಿ ಟ್ರಾಫಿಕ್ ಠಾಣೆಯ ಹೆಡ್ ಕಾನ್ಸ್ ಟೇಬಲ್ ಲೋಕಾಯುಕ್ತ ಬಲೆಗೆ !

Coastal Times by Coastal Times
July 10, 2025
in ಕ್ರೈಮ್ ನ್ಯೂಸ್
ಮಂಗಳೂರು: ಕಾರಿನ ಲೈಸನ್ಸ್ ಹಿಡಿದಿಟ್ಟು 50 ಸಾವಿರ ಲಂಚಕ್ಕೆ ಬೇಡಿಕೆಯಿಟ್ಟ ಕದ್ರಿ ಟ್ರಾಫಿಕ್ ಠಾಣೆಯ ಹೆಡ್ ಕಾನ್ಸ್ ಟೇಬಲ್ ಲೋಕಾಯುಕ್ತ ಬಲೆಗೆ !
329
VIEWS
WhatsappTelegramShare on FacebookShare on Twitter

ಮಂಗಳೂರು: ಕಾರು ಮತ್ತು ಸ್ಕೂಟರ್ ಮಧ್ಯೆ ಸಂಭವಿಸಿದ ಅಪಘಾತಕ್ಕೆ ಸಂಬಂಧಿಸಿ ಕಾರನ್ನು ಠಾಣೆಯಿಂದ ಬಿಡಿಸಿಕೊಳ್ಳಲು ಲಂಚಕ್ಕೆ ಬೇಡಿಕೆಯಿಟ್ಟ ಕದ್ರಿ ಟ್ರಾಫಿಕ್ ಠಾಣೆಯ ಹೆಡ್‌ಕಾನ್ಸ್‌ಟೇಬಲ್ ತಸ್ಲೀಂ ಎಂಬವರನ್ನು ಲೋಕಾಯುಕ್ತ ಪೊಲೀಸರು ಬಲೆಗೆ ಕೆಡವಿದ್ದಾರೆ.‌

ನಗರದ ನಂತೂರಿನಲ್ಲಿ ಕಾರು ಮತ್ತು ಸ್ಕೂಟರ್ ಮಧ್ಯೆ ಅಪಘಾತ ಆಗಿದ್ದು, ಈ ಕುರಿತು ಕದ್ರಿ ಟ್ರಾಫಿಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಕದ್ರಿ ಟ್ರಾಫಿಕ್ ಪೊಲೀಸ್ ಠಾಣೆಯ ಸಿಬ್ಬಂದಿ ತಸ್ಲಿಂ, ಕಾರು ಮತ್ತು ಕಾರಿನ ದಾಖಲಾತಿಗಳನ್ನು ಪೊಲೀಸ್ ಠಾಣೆಗೆ ತಂದು ಕೊಡುವಂತೆ ತಿಳಿಸಿದ್ದರು. ಆನಂತರ, ತನ್ನ ಕಾರನ್ನು ಪೊಲೀಸ್ ಠಾಣೆಯಿಂದ ಬಿಡಿಸಿಕೊಡಲು ಕದ್ರಿ ಟ್ರಾಫಿಕ್ ಪೊಲೀಸ್ ಠಾಣೆಯ ಸಿಬ್ಬಂದಿ ತಸ್ಲಿಂ ರೂ. 50,000/- ಲಂಚ ನೀಡಬೇಕೆಂದು ಬೇಡಿಕೆ ಇಟ್ಟಿದ್ದರು. ನಂತರ ಕಾರಿನ ಮಾಲೀಕ ತನ್ನ ವಕೀಲರಲ್ಲಿ ವಿಷಯವನ್ನು ತಿಳಿಸಿದ್ದು ವಕೀಲರು ಠಾಣೆಗೆ ಭೇಟಿ ನೀಡಿ ಕಾರನ್ನು ಬಿಟ್ಟುಕೊಡುವಂತೆ ಕೇಳಿದ್ದರು. ಆಗ ಸದ್ರಿ ವ್ಯಕ್ತಿ ಕಾರನ್ನು ಸ್ವೀಕರಿಸಿರುತ್ತಾರೆ ಎಂದು ಸಹಿ ಪಡೆದುಕೊಂಡು ಕಾರನ್ನು ಪೊಲೀಸ್ ಠಾಣೆಯಿಂದ ಬಿಟ್ಟುಕೊಟ್ಟಿರಲಿಲ್ಲ.

ಆನಂತರ ತಸ್ಲಿಂ ಅವರು ಕಾರನ್ನು ಬಿಟ್ಟುಕೊಡಲು ನಿನ್ನ ಮೊಬೈಲ್ ಇಟ್ಟು ಹೋಗುವಂತೆ ತಿಳಿಸಿದ್ದು ಬಲವಂತದಿಂದ ಮೊಬೈಲ್ ಪಡೆದು ಕಾರನ್ನು ಬಿಟ್ಟುಕೊಟ್ಟಿದ್ದರು. ಬಳಿಕ ತನ್ನ ಮೊಬೈಲ್ ಪೋನ್ ವಾಪಸ್ ಕೊಡಲು ತಸ್ಲಿಂ ಅವರಲ್ಲಿ ಕೇಳಿಕೊಂಡಾಗ ಮತ್ತೆ ರೂ. 50,000 ಲಂಚದ ಹಣಕ್ಕೆ ಬೇಡಿಕೆ ಇಟ್ಟಿದ್ದರು. ಮೊಬೈಲ್ ಪೋನ್ ಹಿಂತಿರುಗಿಸಬೇಕಾದರೆ ಒರಿಜಿನಲ್ ಲೈಸನ್ಸ್ ಅನ್ನು ಠಾಣೆಗೆ ತಂದುಕೊಡುವಂತೆ ತಿಳಿಸಿದ್ದರು. ನಂತರ ಕಾರಿನ ಮಾಲಕ ತನ್ನ ಒರಿಜಿನಲ್ ಲೈಸನ್ಸ್ ಅನ್ನು ಪೊಲೀಸರಿಗೆ ನೀಡಿದ್ದರು.

ಆ ನಂತರ ಮಾತುಕತೆ ನಡೆಸಿ, ಠಾಣೆಯ ಮತ್ತೋರ್ವ ಸಿಬ್ಬಂದಿ ವಿನೋದ್ ಮುಖಾಂತರ ರೂ 30,000/- ಲಂಚದ ಹಣ ಕೊಟ್ಟು ಓರಿಜಿನಲ್ ಲೈಸನ್ಸ್ ಪಡೆದುಕೊಂಡು ಹೋಗಲು ತಸ್ಲಿಂ ತಿಳಿಸಿದ್ದರು. ಇದರಂತೆ, ಜುಲೈ 9ರಂದು ಕದ್ರಿ ಟ್ರಾಪಿಕ್ ಪೊಲೀಸ್ ಠಾಣೆಗೆ ಹೋಗಿ ತಸ್ಲಿಂ ಅವರನ್ನು ಭೇಟಿ ಮಾಡಿದಾಗ ಓರಿಜಿನಲ್ ಲೈಸನ್ಸ್ ನೀಡಲು ರೂ. 10,000/- ಹಣ ನೀಡುವಂತೆ ಕೇಳಿದ್ದರು. ಅದಕ್ಕೆ ಕಾರಿನ ಮಾಲಕರು ತನ್ನಲ್ಲಿ ರೂ. 500 ಇದೆ ಎಂದಾಗ, ರೂ. 5000 ಇಲ್ಲದೇ ಠಾಣೆ ಕಡೆಗೆ ಬರಬೇಡ ಎಂದು ಬೈದು ಕಳುಹಿಸಿದ್ದಾರೆ. ಬಳಿಕ ಸ್ವಲ್ಪ ಕಡಿಮೆ ಮಾಡಿ ಎಂದು ಕೇಳಿದಾಗ, ಓರಿಜಿನಲ್ ಲೈಸನ್ಸ್ ನೀಡಲು ರೂ. 5000/- ನೀಡಲೇಬೇಕು ಎಂದು ಒತ್ತಾಯ ಮಾಡಿದ್ದಾರೆ. ಕಾನೂನು ಬದ್ಧವಾಗಿ ಮಾಡಬೇಕಾದ ಸರ್ಕಾರಿ ಕೆಲಸಕ್ಕೆ ಲಂಚ ನೀಡಿ ಕೆಲಸ ಮಾಡಿಸಿಕೊಳ್ಳಲು ಇಚ್ಛೆ ಇಲ್ಲದ ಕಾರಣ ಆ ವ್ಯಕ್ತಿ ಮಂಗಳೂರು ಲೋಕಾಯುಕ್ತ ಪೊಲೀಸ್ ಠಾಣೆಗೆ ದೂರು ನೀಡಿರುತ್ತಾರೆ. ಈ ಬಗ್ಗೆ ಮಂಗಳೂರು ಲೋಕಾಯುಕ್ತ ಪೊಲೀಸ್ ಠಾಣೆಯಲ್ಲಿ ಕದ್ರಿ ಟ್ರಾಫಿಕ್ ಪೊಲೀಸ್ ಠಾಣೆಯ ಸಿಬ್ಬಂದಿ ತಸ್ಲಿಂ ಮತ್ತು ವಿನೋದ್ ಎಂಬವರ ವಿರುದ್ಧ ಪ್ರಕರಣ ದಾಖಲಾಗಿರುತ್ತದೆ. ಇಂದು ಬೆಳಗ್ಗೆ ಕದ್ರಿ ಟ್ರಾಫಿಕ್ ಪೊಲೀಸ್ ಠಾಣೆಯ ಸಿಬ್ಬಂದಿ ತಸ್ಲಿಂ (ಸಿಹೆಚ್‌ಸಿ 322) ಅವರು ಕಾರಿನ ಮಾಲಕರಿಂದ ರೂ. 5000/- ಲಂಚದ ಹಣವನ್ನು ಸ್ವೀಕರಿಸುವಾಗಲೇ ಲೋಕಾಯುಕ್ತ ಪೊಲೀಸರು ಕಾರ್ಯಾಚರಣೆ ನಡೆಸಿ ತಸ್ಲಿಂನನ್ನು  ಬಂಧನ ಮಾಡಿದ್ದಾರೆ. ‌

ಲೋಕಾಯುಕ್ತ ಪ್ರಭಾರ ಎಸ್ಪಿ ಕುಮಾರಚಂದ್ರ ಮಾರ್ಗದರ್ಶನದಲ್ಲಿ ಮಂಗಳೂರು ಲೋಕಾಯುಕ್ತ ಪೊಲೀಸ್ ಠಾಣೆಯ ಪೊಲೀಸ್ ಉಪಾಧೀಕ್ಷಕ ಡಾ. ಗಾನ ಪಿ ಕುಮಾರ್, ಸುರೇಶ್ ಕುಮಾರ್ ಪಿ, ಪೊಲೀಸ್ ನಿರೀಕ್ಷಕಿ ಭಾರತಿ ಜಿ, ಚಂದ್ರಶೇಖರ್ ಕೆ.ಎನ್ ಅವರು ಸಿಬ್ಬಂದಿಗಳ ಜೊತೆ  ಟ್ರ್ಯಾಪ್ ಕಾರ್ಯಾಚರಣೆ ಕೈಗೊಂಡಿರುತ್ತಾರೆ.

Share this:

  • Share on Facebook (Opens in new window) Facebook
  • Share on X (Opens in new window) X

Like this:

Like Loading…

Related

Discover more from Coastal Times Kannada

Subscribe to get the latest posts sent to your email.

Previous Post

ಬೆಂಗಳೂರು | ಬ್ಯಾರಿಸ್ ಸೆಂಟ್ರಲ್ ಕಮಿಟಿಯ ನೂತನ ಅಧ್ಯಕ್ಷರಾಗಿ ಶಬೀರ್ ಬ್ರಿಗೇಡ್ ಮರು ಆಯ್ಕೆ

Next Post

XIAOMI ENTRY IN AUTOMOBILE SECTOR- ಆಟೋಮೊಬೈಲ್​ ವಲಯಕ್ಕೆ ಎಂಟ್ರಿ ಕೊಟ್ಟ ಶಿಯೋಮಿ!

Related Posts

ಬಂಟ್ವಾಳ: ಗ್ಯಾಸ್ ಸಿಲಿಂಡರ್ ಸಾಗಿಸುತ್ತಿದ್ದ ಸ್ಕೂಟರ್ ನಿಯಂತ್ರಣ ತಪ್ಪಿ ಕಾರಿಗೆ ಡಿಕ್ಕಿ; ಸವಾರನಿಗೆ ಗಾಯ
ಕ್ರೈಮ್ ನ್ಯೂಸ್

ಬಂಟ್ವಾಳ: ಗ್ಯಾಸ್ ಸಿಲಿಂಡರ್ ಸಾಗಿಸುತ್ತಿದ್ದ ಸ್ಕೂಟರ್ ನಿಯಂತ್ರಣ ತಪ್ಪಿ ಕಾರಿಗೆ ಡಿಕ್ಕಿ; ಸವಾರನಿಗೆ ಗಾಯ

August 24, 2026
22
ಪುತ್ತೂರು: ಅಕ್ರಮ ಜಾನುವಾರು ಸಾಗಾಟ ಪತ್ತೆ, ಪಿಕ್‌ಅಪ್ ವಾಹನ ಚಾಲಕನ ಬಂಧನ
ಕ್ರೈಮ್ ನ್ಯೂಸ್

ಪುತ್ತೂರು: ಅಕ್ರಮ ಜಾನುವಾರು ಸಾಗಾಟ ಪತ್ತೆ, ಪಿಕ್‌ಅಪ್ ವಾಹನ ಚಾಲಕನ ಬಂಧನ

August 24, 2026
26
Next Post
XIAOMI ENTRY IN AUTOMOBILE SECTOR- ಆಟೋಮೊಬೈಲ್​ ವಲಯಕ್ಕೆ ಎಂಟ್ರಿ ಕೊಟ್ಟ ಶಿಯೋಮಿ!

XIAOMI ENTRY IN AUTOMOBILE SECTOR- ಆಟೋಮೊಬೈಲ್​ ವಲಯಕ್ಕೆ ಎಂಟ್ರಿ ಕೊಟ್ಟ ಶಿಯೋಮಿ!

Discussion about this post

Recent News

ದಕ್ಷಿಣ ಕನ್ನಡ ಜಿಲ್ಲೆಯ SIR ಕರಡು ಮತದಾರರ ಪಟ್ಟಿ ಪ್ರಕಟ: ಹೊಂದಾಣಿಕೆಯಾಗದ ಹಾಗೂ ತಾರ್ಕಿಕ ದೋಷವಿರುವ 1.50 ಲಕ್ಷ ಮಂದಿಗೆ ನೋಟಿಸ್ ಜಾರಿ

ದಕ್ಷಿಣ ಕನ್ನಡ ಜಿಲ್ಲೆಯ SIR ಕರಡು ಮತದಾರರ ಪಟ್ಟಿ ಪ್ರಕಟ: ಹೊಂದಾಣಿಕೆಯಾಗದ ಹಾಗೂ ತಾರ್ಕಿಕ ದೋಷವಿರುವ 1.50 ಲಕ್ಷ ಮಂದಿಗೆ ನೋಟಿಸ್ ಜಾರಿ

August 24, 2026
55
ಆ.25 ರಂದು ಮೀಲಾದುನ್ನಬಿ :ಕೋಟೆಪುರದಿಂದ ದರ್ಗಾ ವರೆಗೆ ಕಾಲ್ನಡಿಗೆ ಜಾಥಾ, ಬೈಕ್ ಗಳಲ್ಲಿ ಹಸಿರು ಧ್ವಜ ಕಟ್ಟುವುದು, ವಾಹನ ರ‍್ಯಾಲಿಗೆ ಅವಕಾಶ ಇಲ್ಲ :ಹನೀಫ್ ಹಾಜಿ

ಆ.25 ರಂದು ಮೀಲಾದುನ್ನಬಿ :ಕೋಟೆಪುರದಿಂದ ದರ್ಗಾ ವರೆಗೆ ಕಾಲ್ನಡಿಗೆ ಜಾಥಾ, ಬೈಕ್ ಗಳಲ್ಲಿ ಹಸಿರು ಧ್ವಜ ಕಟ್ಟುವುದು, ವಾಹನ ರ‍್ಯಾಲಿಗೆ ಅವಕಾಶ ಇಲ್ಲ :ಹನೀಫ್ ಹಾಜಿ

August 24, 2026
30
COASTAL BOX LOGO

CORPORATE OFFICE

KHYATI VISUAL MEDIA
3rd Floor, Shalimar Complex
Kankanady, Mangaluru-575002

Email ID : coastaltimeskannada@gmail.com

Follow Us

ಹೊಸ ಸುದ್ದಿಗಳು

ದಕ್ಷಿಣ ಕನ್ನಡ ಜಿಲ್ಲೆಯ SIR ಕರಡು ಮತದಾರರ ಪಟ್ಟಿ ಪ್ರಕಟ: ಹೊಂದಾಣಿಕೆಯಾಗದ ಹಾಗೂ ತಾರ್ಕಿಕ ದೋಷವಿರುವ 1.50 ಲಕ್ಷ ಮಂದಿಗೆ ನೋಟಿಸ್ ಜಾರಿ

ದಕ್ಷಿಣ ಕನ್ನಡ ಜಿಲ್ಲೆಯ SIR ಕರಡು ಮತದಾರರ ಪಟ್ಟಿ ಪ್ರಕಟ: ಹೊಂದಾಣಿಕೆಯಾಗದ ಹಾಗೂ ತಾರ್ಕಿಕ ದೋಷವಿರುವ 1.50 ಲಕ್ಷ ಮಂದಿಗೆ ನೋಟಿಸ್ ಜಾರಿ

August 24, 2026
ಆ.25 ರಂದು ಮೀಲಾದುನ್ನಬಿ :ಕೋಟೆಪುರದಿಂದ ದರ್ಗಾ ವರೆಗೆ ಕಾಲ್ನಡಿಗೆ ಜಾಥಾ, ಬೈಕ್ ಗಳಲ್ಲಿ ಹಸಿರು ಧ್ವಜ ಕಟ್ಟುವುದು, ವಾಹನ ರ‍್ಯಾಲಿಗೆ ಅವಕಾಶ ಇಲ್ಲ :ಹನೀಫ್ ಹಾಜಿ

ಆ.25 ರಂದು ಮೀಲಾದುನ್ನಬಿ :ಕೋಟೆಪುರದಿಂದ ದರ್ಗಾ ವರೆಗೆ ಕಾಲ್ನಡಿಗೆ ಜಾಥಾ, ಬೈಕ್ ಗಳಲ್ಲಿ ಹಸಿರು ಧ್ವಜ ಕಟ್ಟುವುದು, ವಾಹನ ರ‍್ಯಾಲಿಗೆ ಅವಕಾಶ ಇಲ್ಲ :ಹನೀಫ್ ಹಾಜಿ

August 24, 2026
ಬಂಟ್ವಾಳ: ಗ್ಯಾಸ್ ಸಿಲಿಂಡರ್ ಸಾಗಿಸುತ್ತಿದ್ದ ಸ್ಕೂಟರ್ ನಿಯಂತ್ರಣ ತಪ್ಪಿ ಕಾರಿಗೆ ಡಿಕ್ಕಿ; ಸವಾರನಿಗೆ ಗಾಯ

ಬಂಟ್ವಾಳ: ಗ್ಯಾಸ್ ಸಿಲಿಂಡರ್ ಸಾಗಿಸುತ್ತಿದ್ದ ಸ್ಕೂಟರ್ ನಿಯಂತ್ರಣ ತಪ್ಪಿ ಕಾರಿಗೆ ಡಿಕ್ಕಿ; ಸವಾರನಿಗೆ ಗಾಯ

August 24, 2026
  • About
  • Advertise
  • Privacy & Policy
  • Contact

Copyright ©2024. All Rights Reserved. Coastaltimeskannada.com | Design and Developed By Bluechip Infosystem - Contact Us : cc.bcis.blr@gmail.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

%d