• About us
  • Contact us
  • Disclaimer
Tuesday, August 25, 2026
  • Login
Coastal Times Kannada
No Result
View All Result
  • Home
    • ಗ್ಯಾಜೆಟ್
  • ರಾಜ್ಯ
  • ರಾಷ್ಟ್ರೀಯ
  • ರಾಜಕೀಯ
  • ವಿದೇಶಿ ಸುದ್ದಿ
  • ಕರಾವಳಿ
  • ಕ್ರೈಂ ನ್ಯೂಸ್
  • ಕ್ರೀಡೆ
  • ಸಿನಿಮಾ
  • ಆರೋಗ್ಯ
  • ವೆಬ್ ಸ್ಟೊರೀಸ್
Join to Group
  • Home
    • ಗ್ಯಾಜೆಟ್
  • ರಾಜ್ಯ
  • ರಾಷ್ಟ್ರೀಯ
  • ರಾಜಕೀಯ
  • ವಿದೇಶಿ ಸುದ್ದಿ
  • ಕರಾವಳಿ
  • ಕ್ರೈಂ ನ್ಯೂಸ್
  • ಕ್ರೀಡೆ
  • ಸಿನಿಮಾ
  • ಆರೋಗ್ಯ
  • ವೆಬ್ ಸ್ಟೊರೀಸ್
No Result
View All Result
Coastal Times Kannada
No Result
View All Result

ಕೋವಿಡ್ 3ನೇ ಅಲೆ ಆತಂಕ: ಮಕ್ಕಳಿಗೆ ಶಾಲೆಗಳಲ್ಲೇ ಆರೋಗ್ಯ ತಪಾಸಣೆ ನಡೆಸಿ- ಅಧಿಕಾರಿಗಳಿಗೆ ಸಿಎಂ ಬೊಮ್ಮಾಯಿ ಸೂಚನೆ

Coastal Times by Coastal Times
August 10, 2021
in ತಾಜಾ ಸುದ್ದಿ
ಕೋವಿಡ್ 3ನೇ ಅಲೆ ಆತಂಕ: ಮಕ್ಕಳಿಗೆ ಶಾಲೆಗಳಲ್ಲೇ ಆರೋಗ್ಯ ತಪಾಸಣೆ ನಡೆಸಿ- ಅಧಿಕಾರಿಗಳಿಗೆ ಸಿಎಂ ಬೊಮ್ಮಾಯಿ ಸೂಚನೆ
9
VIEWS
WhatsappTelegramShare on FacebookShare on Twitter

ಮೈಸೂರು: ಕೊರೋನಾ 3ನೇ ಅಲೆ ಎದುರಿಸಲು ಸರ್ಕಾರ ಎಲ್ಲಾ ರೀತಿಯ ಸಿದ್ಧತೆ ಮಾಡಿಕೊಂಡಿದ್ದು, ಶಾಲಾ ಹಂತದಲ್ಲಿಯೇ ರಾಜ್ಯಾದ್ಯಂತ ಮಕ್ಕಳ ಆರೋಗ್ಯ ತಪಾಸಣಾ ಶಿಬಿರ ಆಯೋಜಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಹೇಳಿದ್ದಾರೆ.

ಮುಖ್ಯಮಂತ್ರಿಯಾದ ಬಳಿಕ ಮೊದಲ ಬಾರಿಗೆ ಸೋಮವಾರ ಮೈಸೂರಿಗೆ ಆಗಮಿಸಿದ ಅವರು ಚಾಮುಂಡಿಬೆಟ್ಟದಲ್ಲಿನ ತಾಯಿ ಶ್ರೀ ಚಾಮುಂಡೇಶ್ವರಿ ದೇವಿ ದರ್ಶನ ಪಡೆಯಲಾಯಿತು. ಸಚಿವರುಗಳಾದ ಎಸ್.ಟಿ.ಸೋಮಶೇಖರ್, ವಿ.ಸೋಮಣ್ಣ, ಮುರುಗೇಶ್ ನಿರಾಣಿ, ಬೈರತಿ ಬಸವರಾಜು, ಡಾ.ಕೆ.ಸುಧಾಕರ್, ಕೆ.ಸಿ.ನಾರಾಯಣಗೌಡ ,ಶಾಸಕರಾದ ಜಿ.ಟಿ.ದೇವೇಗೌಡ, ಎಲ್. ನಾಗೇಂದ್ರ, ರೇಣುಕಾಚಾರ್ಯ ಮತ್ತಿತರರು ಉಪಸ್ಥಿತರಿದ್ದರು.

ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಕೋವಿಡ್ 3ನೇ ಅಲೆಯ ಸ್ಥಿತಿಗತಿ ಕುರಿತು ಜಿಲ್ಲಾಮಟ್ಟದ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದರು.

ಮಕ್ಕಳ ಸಮಗ್ರ ಆರೋಗ್ಯ ರಕ್ಷಣೆ ನಮ್ಮ ಆದ್ಯತೆಯಾಗಿದೆ. ಕೋವಿಡ್ 3ನೇ ಅಲೆ ಮಕ್ಕಳ ಮೇಲೆ ಪರಿಣಾಮ ಬೀರುತ್ತದೆ ಎಂಬ ಮಾಹಿತಿ ಹಿನ್ನೆಲೆಯಲ್ಲಿ ಈಗಾಗಲೇ ಸಿಬ್ಬಂದಿಗೆ ಅಗತ್ಯ ತರಬೇತಿ ನೀಡಲಾಗಿದೆ. ತಜ್ಞರು ಕೂಡ ಮಕ್ಕಳ ಆರೋಗ್ಯದತ್ತ ಗಮನ ಹರಿಸುವಂತೆ ಸೂಚಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ ವ್ಯಾಪ್ತಿಯ ಶಾಲೆಯಲ್ಲಿ ಈ ಶಿಬಿರ ಆಯೋಜಿಸಲಾಗುತ್ತಿದೆ. 6-14 ವರ್ಷದೊಳಗಿನ ಮಕ್ಕಳ ಆರೋಗ್ಯ ತಪಾಸಣೆ ನಡೆಸಲಾಗುವುದು ಎಂದು ತಿಳಿಸಿದರು.

ಕೊರೋನಾ 3ನೇ ಅಲೆ ಹಿನ್ನೆಲೆಯಲ್ಲಿ ಕೇರಳ ಮತ್ತು ಮಹಾರಾಷ್ಟ್ರ ಕೋವಿಡ್ ಸೋಂಕು ಹೆಚ್ಚಿರುವುದರಿಂದ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗುತ್ತಿದೆ. ಗಡಿ ಭಾಗದಲ್ಲಿ ಬಿಸಿ ತಪಾಸಣೆ ಆರಂಭಿಸಲಾಗಿದೆ. 3 ಪಾಳಿಯಲ್ಲಿ ಕರ್ತವ್ಯ ನಿರ್ವಹಿಸುವಂತೆ ಸಿಬ್ಬಂದಿಗೆ ಸೂಚಿಸಲಾಗಿದೆ. ಗಡಿ ಪ್ರವೇಶಿಸುವವರಿಗೆ ಆರ್’ಟಿಪಿಸಿಆರ್ ಪರೀಕ್ಷೆ ಕಡ್ಡಾಯಗೊಳಿಸಲಾಗಿದೆ. ಗಡಿ ಭಾಗದಲ್ಲಿ ಕಾರ್ಯನಿರ್ವಹಿಸುವ ಸಿಬ್ಬಂದಿ 2 ಡೋಸ್ ಲಸಿಕೆ ಹಾಕಿಸಿಕೊಂಡಿರಬೇಕು.

ಗಡಿ ಭಾಗದ ಹಳ್ಳಿ ಅಥವಾ ಹಾಡಿಯ ಜನರಿಗೆ ಮೊದಲ ಪ್ರಾಶಸ್ತ್ಯದ ಲಸಿಕೆ ನೀಡಬೇಕು. ಡಿಸಿ, ಎಸ್ಪಿ, ಡಿವೈಎಸ್ಪಿ ಇತರೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಬೇಕು ಎಂದರು.

Share this:

  • Share on Facebook (Opens in new window) Facebook
  • Share on X (Opens in new window) X

Like this:

Like Loading…

Related

Discover more from Coastal Times Kannada

Subscribe to get the latest posts sent to your email.

Previous Post

KSSAP ವತಿಯಿಂದ ಉಚಿತ ನೇತ್ರ ತಪಾಸಣಾ ಶಿಬಿರ: “ಕತ್ತಲಿನಿಂದ ಬೆಳಕಿನ ಕಡೆಗೆ”

Next Post

ಭಾರತದ ಗಡಿ ನುಸುಳುವಿಕೆ: ಬಾಂಗ್ಲಾದಿಂದ 441, ಪಾಕ್‌ನಿಂದ 33 ಯತ್ನ

Related Posts

ಕೋವಿಡ್‌ ಪೂರ್ವ ಮಟ್ಟ ಮೀರಲಿದೆ ‌ಜಿಡಿಪಿ ಗಾತ್ರ: ರಾಷ್ಟ್ರೀಯ ಸಾಂಖ್ಯಿಕ ಕಚೇರಿ
ತಾಜಾ ಸುದ್ದಿ

ಕೋವಿಡ್‌ ಪೂರ್ವ ಮಟ್ಟ ಮೀರಲಿದೆ ‌ಜಿಡಿಪಿ ಗಾತ್ರ: ರಾಷ್ಟ್ರೀಯ ಸಾಂಖ್ಯಿಕ ಕಚೇರಿ

January 7, 2022
11
ಮೂಲ್ಕಿ : ಆಟವಾಡುತ್ತಿದ್ದಾಗ ಸಿಮೆಂಟ್ ಪೈಪ್ ಉರುಳಿ ಮಗು ಸಾವು
ತಾಜಾ ಸುದ್ದಿ

ಮೂಲ್ಕಿ : ಆಟವಾಡುತ್ತಿದ್ದಾಗ ಸಿಮೆಂಟ್ ಪೈಪ್ ಉರುಳಿ ಮಗು ಸಾವು

September 1, 2021
7
Next Post
ಭಾರತದ ಗಡಿ ನುಸುಳುವಿಕೆ: ಬಾಂಗ್ಲಾದಿಂದ 441, ಪಾಕ್‌ನಿಂದ 33 ಯತ್ನ

ಭಾರತದ ಗಡಿ ನುಸುಳುವಿಕೆ: ಬಾಂಗ್ಲಾದಿಂದ 441, ಪಾಕ್‌ನಿಂದ 33 ಯತ್ನ

Discussion about this post

Recent News

ದಕ್ಷಿಣ ಕನ್ನಡ ಜಿಲ್ಲೆಯ SIR ಕರಡು ಮತದಾರರ ಪಟ್ಟಿ ಪ್ರಕಟ: ಹೊಂದಾಣಿಕೆಯಾಗದ ಹಾಗೂ ತಾರ್ಕಿಕ ದೋಷವಿರುವ 1.50 ಲಕ್ಷ ಮಂದಿಗೆ ನೋಟಿಸ್ ಜಾರಿ

ದಕ್ಷಿಣ ಕನ್ನಡ ಜಿಲ್ಲೆಯ SIR ಕರಡು ಮತದಾರರ ಪಟ್ಟಿ ಪ್ರಕಟ: ಹೊಂದಾಣಿಕೆಯಾಗದ ಹಾಗೂ ತಾರ್ಕಿಕ ದೋಷವಿರುವ 1.50 ಲಕ್ಷ ಮಂದಿಗೆ ನೋಟಿಸ್ ಜಾರಿ

August 24, 2026
45
ಆ.25 ರಂದು ಮೀಲಾದುನ್ನಬಿ :ಕೋಟೆಪುರದಿಂದ ದರ್ಗಾ ವರೆಗೆ ಕಾಲ್ನಡಿಗೆ ಜಾಥಾ, ಬೈಕ್ ಗಳಲ್ಲಿ ಹಸಿರು ಧ್ವಜ ಕಟ್ಟುವುದು, ವಾಹನ ರ‍್ಯಾಲಿಗೆ ಅವಕಾಶ ಇಲ್ಲ :ಹನೀಫ್ ಹಾಜಿ

ಆ.25 ರಂದು ಮೀಲಾದುನ್ನಬಿ :ಕೋಟೆಪುರದಿಂದ ದರ್ಗಾ ವರೆಗೆ ಕಾಲ್ನಡಿಗೆ ಜಾಥಾ, ಬೈಕ್ ಗಳಲ್ಲಿ ಹಸಿರು ಧ್ವಜ ಕಟ್ಟುವುದು, ವಾಹನ ರ‍್ಯಾಲಿಗೆ ಅವಕಾಶ ಇಲ್ಲ :ಹನೀಫ್ ಹಾಜಿ

August 24, 2026
27
COASTAL BOX LOGO

CORPORATE OFFICE

KHYATI VISUAL MEDIA
3rd Floor, Shalimar Complex
Kankanady, Mangaluru-575002

Email ID : coastaltimeskannada@gmail.com

Follow Us

ಹೊಸ ಸುದ್ದಿಗಳು

ದಕ್ಷಿಣ ಕನ್ನಡ ಜಿಲ್ಲೆಯ SIR ಕರಡು ಮತದಾರರ ಪಟ್ಟಿ ಪ್ರಕಟ: ಹೊಂದಾಣಿಕೆಯಾಗದ ಹಾಗೂ ತಾರ್ಕಿಕ ದೋಷವಿರುವ 1.50 ಲಕ್ಷ ಮಂದಿಗೆ ನೋಟಿಸ್ ಜಾರಿ

ದಕ್ಷಿಣ ಕನ್ನಡ ಜಿಲ್ಲೆಯ SIR ಕರಡು ಮತದಾರರ ಪಟ್ಟಿ ಪ್ರಕಟ: ಹೊಂದಾಣಿಕೆಯಾಗದ ಹಾಗೂ ತಾರ್ಕಿಕ ದೋಷವಿರುವ 1.50 ಲಕ್ಷ ಮಂದಿಗೆ ನೋಟಿಸ್ ಜಾರಿ

August 24, 2026
ಆ.25 ರಂದು ಮೀಲಾದುನ್ನಬಿ :ಕೋಟೆಪುರದಿಂದ ದರ್ಗಾ ವರೆಗೆ ಕಾಲ್ನಡಿಗೆ ಜಾಥಾ, ಬೈಕ್ ಗಳಲ್ಲಿ ಹಸಿರು ಧ್ವಜ ಕಟ್ಟುವುದು, ವಾಹನ ರ‍್ಯಾಲಿಗೆ ಅವಕಾಶ ಇಲ್ಲ :ಹನೀಫ್ ಹಾಜಿ

ಆ.25 ರಂದು ಮೀಲಾದುನ್ನಬಿ :ಕೋಟೆಪುರದಿಂದ ದರ್ಗಾ ವರೆಗೆ ಕಾಲ್ನಡಿಗೆ ಜಾಥಾ, ಬೈಕ್ ಗಳಲ್ಲಿ ಹಸಿರು ಧ್ವಜ ಕಟ್ಟುವುದು, ವಾಹನ ರ‍್ಯಾಲಿಗೆ ಅವಕಾಶ ಇಲ್ಲ :ಹನೀಫ್ ಹಾಜಿ

August 24, 2026
ಬಂಟ್ವಾಳ: ಗ್ಯಾಸ್ ಸಿಲಿಂಡರ್ ಸಾಗಿಸುತ್ತಿದ್ದ ಸ್ಕೂಟರ್ ನಿಯಂತ್ರಣ ತಪ್ಪಿ ಕಾರಿಗೆ ಡಿಕ್ಕಿ; ಸವಾರನಿಗೆ ಗಾಯ

ಬಂಟ್ವಾಳ: ಗ್ಯಾಸ್ ಸಿಲಿಂಡರ್ ಸಾಗಿಸುತ್ತಿದ್ದ ಸ್ಕೂಟರ್ ನಿಯಂತ್ರಣ ತಪ್ಪಿ ಕಾರಿಗೆ ಡಿಕ್ಕಿ; ಸವಾರನಿಗೆ ಗಾಯ

August 24, 2026
  • About
  • Advertise
  • Privacy & Policy
  • Contact

Copyright ©2024. All Rights Reserved. Coastaltimeskannada.com | Design and Developed By Bluechip Infosystem - Contact Us : cc.bcis.blr@gmail.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

%d