ಮಂಗಳೂರು, ಫೆ 11 : ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಇಂದು ಮಂಗಳೂರು ನಗರಕ್ಕೆ ಆಗಮಿಸಿ ಏರ್ಪೋರ್ಟ್ ರಸ್ತೆಯಲ್ಲಿನ ಕೆಂಜಾರು ಸಮೀಪದ ಶ್ರೀದೇವಿ ಇಂಜಿನಿಯರಿಂಗ್ ಕಾಲೇಜ್ ನಲ್ಲಿ ಆಯೋಜಿಸಿರುವ ಸಭೆಯಲ್ಲಿ ಭಾಗವಹಿಸುವ ಕಾರಣ ಸಂಚಾರ ದಟ್ಟಣೆ ಉಂಟಾಗುವ ಸಾಧ್ಯತೆ ಇದೆ ಎಂದು ಪೊಲೀಸರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಅಮಿತ್ ಶಾ ಅವರು ಏರ್ಪೋರ್ಟ್ ರಸ್ತೆಯಲ್ಲಿನ ಕೆಂಜಾರು ಸಮೀಪದ ಶ್ರೀದೇವಿ ಇಂಜಿನಿಯರಿಂಗ್ ಕಾಲೇಜ್ ನಲ್ಲಿ ಆಯೋಜಿಸಿರುವ ಸಭೆಯಲ್ಲಿ ಭಾಗವಹಿಸುವ ಕಾರಣ ಸಂಜೆ ಸುಮಾರು 4:00 ಗಂಟೆಯಿಂದ 9:00 ಗಂಟೆಯವರೆಗೂ ಕೆಂಜಾರು ಸಮೀಪದ ಏರ್ಪೋರ್ಟ್ ರಸ್ತೆಯಲ್ಲಿ ವಾಹನ ಹಾಗೂ ಜನಸಂದಣಿ ಜಾಸ್ತಿ ಇರುವ ಕಾರಣ ಸಂಚಾರ ವ್ಯತ್ಯಯ ಉಂಟಾಗುವುದನ್ನು ತಪ್ಪಿಸಲು ಸಂಚಾರ ವ್ಯವಸ್ಥೆಯಲ್ಲಿ ಬದಲಾವಣೆ ಮಾಡಲಾಗಿದೆ.
ಕೆಂಜಾರು ಸಮೀಪದ ರಸ್ತೆಯನ್ನು ಉಪಯೋಗಿಸಿ ಏರ್ಪೋರ್ಟ್ ಗೆ ಹೋಗುವವರು ಪರ್ಯಾಯ ರಸ್ತೆಯಾಗಿ
1 ಮುಲ್ಕಿ – ಕಟೀಲ್ – ಬಜಪೆ ಮೂಲಕ ಏರ್ ಪೋರ್ಟ್
2 ಕುದುರೆಮುಖ ಜಂಕ್ಷನ್ – ಜೋ ಕಟ್ಟೆ – ಪೊರ್ಕೊಡಿ – ಏರ್ ಪೋರ್ಟ್
3 ಇಂಡಸ್ಟ್ರಿಯಲ್ ಏರಿಯಾ – ಜೋಕಟ್ಟೆ – ಪೊರ್ಕೋಡಿ – ಏರ್ಪೋರ್ಟ್
4 ನಂತೂರು – ಬಿಕರ್ನಕಟ್ಟೆ- ಕೈಕಂಬ -ಏರ್ಪೋರ್ಟ್
ಈ ಮಾರ್ಗಗಳನ್ನು ಉಪಯೋಗಿಸಬೇಕಾಗಿ ಕೋರಲಾಗಿದೆ ಎಂದು ಪ್ರಕಟನೆ ತಿಳಿಸಿದೆ.
Discover more from Coastal Times Kannada
Subscribe to get the latest posts sent to your email.








Discussion about this post