ಭೋಪಾಲ್: ಗುಂಡಿನ ಗಮ್ಮತ್ತು…ದೆಹಲಿ ಮೂಲದ ಯುವತಿಯೊಬ್ಬಳು ಕಂಠಪೂರ್ತಿ ಕುಡಿದು ರಸ್ತೆಯಲ್ಲಿ ತೂರಾಡಿದ್ದಲ್ಲದೆ, ವಾಹನ ನಿಬಿಡ ರಸ್ತೆಯ ಮಧ್ಯೆಯೇ ಸೇನಾ ವಾಹನವನ್ನು ತಡೆದು ಅದನ್ನು ಜಖಂಗೊಳಿಸಲು ಪ್ರಯತ್ನಿಸಿ ಹೈಡ್ರಾಮ ಸೃಷ್ಟಿಸಿದ ಘಟನೆ ಮಧ್ಯಪ್ರದೇಶದ ಗ್ವಾಲಿಯರ್ನಲ್ಲಿ ನಡೆದಿದೆ.
22 ವರ್ಷದ ಯುವತಿ ಮಾಡೆಲ್ ಎಂದು ತಿಳಿದುಬಂದಿದೆ. ಆಕೆ ಕುಡಿದ ಮತ್ತಿನಲ್ಲಿ ದಾಂಧಲೆ ನಡೆಸಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.
ಸೇನಾ ವಾಹನವನ್ನು ತಡೆದು ಅದಕ್ಕೆ ಒರಗಿಕೊಂಡು ಫೋನ್ನಲ್ಲಿ ಮಾತನಾಡುತ್ತಿರುತ್ತಾಳೆ. ಈ ವೇಳೆ ಎಷ್ಟೇ ಹಾರ್ನ್ ಮಾಡಿದರೂ ಆಕೆ ದಾರಿಯನ್ನು ಬಿಡುವುದಿಲ್ಲ. ಕಾರಿನ ಎದುರಿಗೆ ತಿರುಗಿ ಒಳಗೆ ಕುಳಿತಿದ್ದ ಯೋಧನನ್ನು ನಿಂದಿಸಲು ಶುರು ಮಾಡುತ್ತಾಳೆ. ಬಳಿಕ ಮಾತನಾಡುವುದನ್ನು ಮುಂದುವರಿಸುತ್ತಲೇ ಸೇನಾ ಕಾರಿಗೆ ಕಾಲಿನಿಂದ ಒದೆಯುತ್ತಾಳೆ. ಈ ವೇಳೆ ಅವಳ ಬ್ಯಾಗ್ನಿಂದ ಒಂದು ಮದ್ಯದ ಬಾಟಲ್ ರಸ್ತೆ ಬಿದ್ದು ಚೂರಾಗುತ್ತದೆ. ಅದನ್ನು ಗಮನಿಸಿದ ಮಾಡೆಲ್, ಕಾರು ಒದೆಯುವುದನ್ನು ಮುಂದುವರಿಸುತ್ತಾಳೆ. ಅದನ್ನು ನೋಡಿ ಕಾರಿನ ಒಳಗಿದ್ದ ಯೋಧ ಕೆಳಗಿಳಿದು ಬರುತ್ತಾರೆ. ಆದರೆ, ಅವರಿಗೂ ಕ್ಯಾರೆ ಎನ್ನದ ಯುವತಿ, ಯೋಧನನ್ನು ನೂಕುತ್ತಾಳೆ. ಕೊನೆಗೆ ದಾರಿ ಬಿಡುತ್ತಾಳೆ.