ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆ ಬಂಟ್ವಾಳ ತಾಲೂಕಿನ ವಿಟ್ಲದಲ್ಲಿ ನಿನ್ನೆ(ಭಾನುವಾರ) ರಾತ್ರಿ ನಾಪತ್ತೆಯಾಗಿದ್ದ ಯುವತಿಯೊಬ್ಬಳು ಇಂದು(ಸೋಮವಾರ) ಬೆಳಗ್ಗೆ ಶವವಾಗಿ ಪತ್ತೆಯಾಗಿದ್ದಾಳೆ.
ಆತ್ಮಹತ್ಯೆ ಮಾಡಿಕೊಂಡ ಯುವತಿಯನ್ನು ವಿಟ್ಲ ಕಸಬಾ ಗ್ರಾಮದ ನೆತ್ರಕೆರೆ ನಿವಾಸಿ ಬಾಬು ನಾಯ್ಕ ಎಂಬವರ ಪುತ್ರಿ ನಿಶ್ಮಿತಾ(22) ಮೃತ ದುರ್ದೈವಿ. ಡೆಂಟಲ್ ಕ್ಲಿನಿಕ್ವೊಂದರಲ್ಲಿ ಕೆಲಸ ಮಾಡುತ್ತಿದ್ದ ಯುವತಿ, ಭಾನುವಾರ ಸಂಜೆಯಿಂದ ನಾಪತ್ತೆಯಾಗಿದ್ದಳು. ಸೋಮವಾರ ಬಳಗ್ಗೆ ವಿಟ್ಲದ ನೆತ್ರಕೆರೆಯಲ್ಲಿ ನಿಶ್ಮಿತಾಳ ಪತ್ತೆಯಾಗಿದೆ. ಸ್ಥಳದಲ್ಲಿ ಆಕೆಯ ಮೊಬೈಲ್ ಮತ್ತು ಡೆತ್ನೋಟ್ ಪತ್ತೆಯಾಗಿದೆ.
ಡೆತ್ನೋಟ್ನಲ್ಲಿ ನಾಲ್ವರ ಹೆಸರನ್ನು ಬರೆದಿರುವ ನಿಶ್ಮಿತಾ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಡೆತ್ನೋಟ್ನಲ್ಲಿ ಬೇರೆ ಏನೆಲ್ಲ ಬರೆದಿದ್ದಾಳೆ ಎಂಬ ಮಾಹಿತಿ ಲಭ್ಯವಾಗಿಲ್ಲ. ಆದರೆ, ನಿಶ್ಮಿತಾಗೆ ಮದುವೆ ನಿಶ್ಚಯ ಆಗಿತ್ತು. ಮದುವೆ ಆಗಬೇಕಿದ್ದ ಯುವಕನಿಗೆ ನಿಶ್ಮಿತಾ ಈ ಹಿಂದೆ ಬೇರೋಬ್ಬ ಯುವಕನನ್ನು ಪ್ರೀತಿಸುತ್ತಿದ್ದಳು ಎಂಬ ವಿಷ್ಯ ಗೊತ್ತಾಗಿತ್ತು ಎನ್ನಲಾಗಿದೆ. ಇದೇ ವಿಚಾರವಾಗಿ ನೊಂದ ನಿಶ್ಮಿತಾ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎನ್ನಲಾಗಿದೆ.