ತಿರುವನಂತಪುರಂ: 500ಕ್ಕೂ ಹೆಚ್ಚು ಮಲಯಾಳಂ ಚಿತ್ರಗಳಲ್ಲಿ ಅಭಿನಯಿಸಿದ್ದ ಮತ್ತು ಎರಡು ಬಾರಿ ರಾಷ್ಟ್ರ ಪ್ರಶಸ್ತಿ, ಅರ್ಧ ಡಜನ್‌ಗಿಂತಲೂ ಹೆಚ್ಚು ಕೇರಳ ಚಲನಚಿತ್ರ ಪ್ರಶಸ್ತಿಗಳನ್ನು ಪಡೆದಿದ್ದ ಪ್ರತಿಭಾನ್ವಿತ ಹಿರಿಯ ನಟ ನೆಡುಮುಡಿ ವೇಣು(73) ಅವರು ಸೋಮವಾರ ನಿಧನರಾಗಿದ್ದಾರೆ.
ಕೋವಿಡ್ -19 ರಿಂದ ಚೇತರಿಸಿಕೊಂಡ ನಂತರ ಲಿವರ್ ಸಮಸ್ಸೆ ಹಾಗೂ ಇತರೆ ಕಾಯಿಲೆಗಳಿಂದ ಬಳಲುತ್ತಿದ್ದ 73 ವರ್ಷದ ವೇಣು ಅವರು ಚಿಕಿತ್ಸೆ ಪಲಕಾರಿಯಾಗಿದೇ ಇಂದು ಮಧ್ಯಾಹ್ನದ ವೇಳೆಗೆ ಕೊನೆಯುಸಿರೆಳೆದಿದ್ದಾರೆ.
ಅಲಪುಳದ ನೆಡುಮುಡಿಯಲ್ಲಿ ಪಿ ಕೆ ಕೇಶವನ್ ಪಿಳ್ಳೈ ಮತ್ತು ಪಿ ಕುಂಜಿಕುಟ್ಟಿಯಮ್ಮ ದಂಪತಿಗೆ ಜನಿಸಿದ ಐದು ಮಕ್ಕಳಲ್ಲಿ ಒಬ್ಬರಾದ ವೇಣು 1978 ರಲ್ಲಿ ಜಿ ಅರವಿಂದನ್ ನಿರ್ದೇಶನದ ‘ಥಂಪು’ ಚಿತ್ರದ ಮೂಲಕ ನಟನಾಗಿ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು.
ನೆಡುಮುಡಿ ವೇಣು ಅವರು ‘ಕವಾಲಂ ನಾರಾಯಣ ಪಣಿಕೆರ್’ ನಾಟಕದ ಮೂಲಕ ರಂಗಭೂಮಿ ಕಲಾವಿದರಾಗಿ ವೃತ್ತಿ ಜೀವನ ಆರಂಭಿಸಿದ್ದರು. ಮಲಯಾಳಂ ಹಾಗೂ ತಮಿಳು ಚಿತ್ರರಂಗದಲ್ಲಿ ನೆಡುಮುಡಿ ವೇಣು ಸಕ್ರಿಯವಾಗಿ ಕೆಲಸ ಮಾಡಿದ್ದು, ಅವರು ನಟಿಸಿದ ಸಿನಿಮಾಗಳ ಸಂಖ್ಯೆ 500ಕ್ಕೂ ಅಧಿಕವಾಗಿದೆ.
Discover more from Coastal Times Kannada
Subscribe to get the latest posts sent to your email.
Discussion about this post