• About us
  • Contact us
  • Disclaimer
Tuesday, May 5, 2026
  • Login
Coastal Times Kannada
No Result
View All Result
  • Home
    • ಗ್ಯಾಜೆಟ್
  • ರಾಜ್ಯ
  • ರಾಷ್ಟ್ರೀಯ
  • ರಾಜಕೀಯ
  • ವಿದೇಶಿ ಸುದ್ದಿ
  • ಕರಾವಳಿ
  • ಕ್ರೈಂ ನ್ಯೂಸ್
  • ಕ್ರೀಡೆ
  • ಸಿನಿಮಾ
  • ಆರೋಗ್ಯ
  • ವೆಬ್ ಸ್ಟೊರೀಸ್
Join to Group
  • Home
    • ಗ್ಯಾಜೆಟ್
  • ರಾಜ್ಯ
  • ರಾಷ್ಟ್ರೀಯ
  • ರಾಜಕೀಯ
  • ವಿದೇಶಿ ಸುದ್ದಿ
  • ಕರಾವಳಿ
  • ಕ್ರೈಂ ನ್ಯೂಸ್
  • ಕ್ರೀಡೆ
  • ಸಿನಿಮಾ
  • ಆರೋಗ್ಯ
  • ವೆಬ್ ಸ್ಟೊರೀಸ್
No Result
View All Result
Coastal Times Kannada
No Result
View All Result

30ಕ್ಕೂ ಹೆಚ್ಚು ಕಂಪನಿಗಳನ್ನು ಕಟ್ಟಿದ ಉದ್ಯಮ ಸಾಮ್ರಾಜ್ಯದ ಸೂರ್ಯ ಅಸ್ತಂಗತ: ಟಾಟಾ ಗ್ರೂಪ್​​ನ ದಿಗ್ಗಜ ರತನ್​ ಟಾಟಾ ಇನ್ನಿಲ್ಲ

Coastal Times by Coastal Times
October 11, 2024
in ರಾಷ್ಟ್ರೀಯ ಸುದ್ದಿ
30ಕ್ಕೂ ಹೆಚ್ಚು ಕಂಪನಿಗಳನ್ನು ಕಟ್ಟಿದ ಉದ್ಯಮ ಸಾಮ್ರಾಜ್ಯದ ಸೂರ್ಯ ಅಸ್ತಂಗತ: ಟಾಟಾ ಗ್ರೂಪ್​​ನ ದಿಗ್ಗಜ ರತನ್​ ಟಾಟಾ ಇನ್ನಿಲ್ಲ
4
VIEWS
WhatsappTelegramShare on FacebookShare on Twitter

ಮುಂಬೈ: ಟಾಟಾ ಸನ್ಸ್‌ನ ಎಮೆರಿಟಸ್ ಅಧ್ಯಕ್ಷ ರತನ್ ನೇವಲ್ ಟಾಟಾ ವಯೋಸಹಜ ಅನಾರೋಗ್ಯ ಕಾರಣಗಳ ಹಿನ್ನೆಲೆಯಲ್ಲಿ ಬ್ರೀಚ್ ಕ್ಯಾಂಡಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಅವರಿಗೆ 86 ವರ್ಷ ವಯಸ್ಸಾಗಿತ್ತು. ಅನಾರೋಗ್ಯದ ಹಿನ್ನೆಲೆಯಲ್ಲಿ ಅವರನ್ನು ಮುಂಬೈನ ಬ್ರೀಚ್​ಕ್ಯಾಂಡಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಈ ವಿಷಯ ದೇಶಾದ್ಯಂತ ತೀವ್ರ ಸುದ್ದಿಗೆ ಗ್ರಾಸವಾಗಿತ್ತು. ವಯೋಸಹಜ ಆರೋಗ್ಯದ ಸಮಸ್ಯೆ ಹಿನ್ನೆಲೆಯಲ್ಲಿ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಸ್ಪಷ್ಟನೆ ಕೂಡಾ ನೀಡಲಾಗಿತ್ತು.

ಆ ಬಳಿಕ ಟಾಟಾ ಗ್ರೂಪ್ ಅಧಿಕಾರಿಗಳು ಏನನ್ನೂ ದೃಢೀಕರಿಸಲಿಲ್ಲ ಅಥವಾ ನಿರಾಕರಿಸಲಿಲ್ಲವಾದರೂ ಅವರನ್ನು ಇಂಟೆನ್ಸಿವ್​ ಕೇರ್​ನಲ್ಲಿರಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂಬ ಮಾಹಿತಿ ಹೊರ ಬಿದ್ದಿತ್ತು.

ಚಂದ್ರಶೇಖರನ್​​ ರಿಂದ ಸಂತಾಪ: ಟಾಟಾ ಸನ್ಸ್‌ನ ಅಧ್ಯಕ್ಷ ಎನ್ ಚಂದ್ರಶೇಖರನ್ ಅವರು ಟಾಟಾ ಗ್ರೂಪ್​ನ ವರಿಷ್ಠರ ಸಾವಿಗೆ ಸಂತಾಪ ವ್ಯಕ್ತಪಡಿಸಿದ್ದಾರೆ. ಟಾಟಾ ಗ್ರೂಪ್‌ಗೆ ಮಾತ್ರವಲ್ಲದೇ ನಮ್ಮ ರಾಷ್ಟ್ರದ ಅಭಿವೃದ್ಧಿಗೆ ಕೊಡುಗೆ ನೀಡಿದ ನಿಜವಾದ ಹಾಗೂ ಅಸಾಧಾರಣ ನಾಯಕರಾದ ರತನ್ ನೇವಲ್ ಟಾಟಾ ಅವರಿಗೆ ಭಾರವಾದ ಹೃದಯ ಹಾಗೂ ಭಾವನೆಯೊಂದಿಗೆ ವಿದಾಯ ಹೇಳುತ್ತೇವೆ ಎಂದು ಸಂತಾಪ ಸೂಚಿಸಿದ್ದಾರೆ.

ಟಾಟಾ ತನ್ನ ನೈತಿಕ ದಿಕ್ಸೂಚಿಗೆ ಬದ್ದ: ಟಾಟಾ ಗ್ರೂಪ್‌ಗೆ ಟಾಟಾ ಅವರು ಅಧ್ಯಕ್ಷರಿಗಿಂತ ಹೆಚ್ಚು. ನನಗೆ, ಅವರು ಮಾರ್ಗದರ್ಶಕರಾಗಿದ್ದರು. ಅಷ್ಟೇ ಅಲ್ಲ ಸ್ನೇಹಿತರಾಗಿದ್ದರು. ಶ್ರೇಷ್ಠತೆ, ಸಮಗ್ರತೆ ಮತ್ತು ನಾವೀನ್ಯತೆಗೆ ಅಚಲವಾದ ಬದ್ಧತೆಯೊಂದಿಗೆ ಟಾಟಾ ಗ್ರೂಪ್ ಅವರ ಉಸ್ತುವಾರಿಯಲ್ಲಿ ತನ್ನ ಜಾಗತಿಕ ಹೆಜ್ಜೆಗುರುತನ್ನು ವಿಸ್ತರಿಸಿಕೊಂಡಿತ್ತು. ಅಷ್ಟೇ ಅಲ್ಲ ಕಂಪನಿ ಯಾವಾಗಲೂ ತಮ್ಮ ನೈತಿಕ ದಿಕ್ಸೂಚಿಗೆ ಬದ್ಧವಾಗಿದೆ ಎಂದು ಚಂದ್ರಶೇಖರನ್​ ಹೇಳಿದ್ದಾರೆ.

ರತನ್​​ ಅವರ ತತ್ವಗಳ ಅಡಿ ಕೆಲಸ ಮುಂದುವರೆಯುತ್ತೆ: ಲೋಕೋಪಕಾರ ಮತ್ತು ಸಮಾಜದ ಅಭಿವೃದ್ಧಿಗೆ ಟಾಟಾ ಅವರ ಸಮರ್ಪಣೆ ಕೋಟ್ಯಂತರ ಜನರ ಜೀವನವನ್ನು ಮುಟ್ಟಿದೆ. ಶಿಕ್ಷಣದಿಂದ ಆರೋಗ್ಯದವರೆಗೆ ಅವರು ತೆಗೆದುಕೊಂಡ ಉಪಕ್ರಮಗಳು ಸಮಾಜದಲ್ಲಿ ತಮ್ಮದೇ ಛಾಪನ್ನು ಮೂಡಿಸಿವೆ. ಮುಂದಿನ ಪೀಳಿಗೆಗೆ ಅವರ ಆದರ್ಶಗಳು ಮುಂದುವರೆಯುತ್ತವೆ ಎಂದಿದ್ದಾರೆ. ಇಡೀ ಟಾಟಾ ಕುಟುಂಬದ ಪರವಾಗಿ ನಾನು ಅವರ ಪ್ರೀತಿಪಾತ್ರರಿಗೆ ನಮ್ಮ ಆಳವಾದ ಸಂತಾಪವನ್ನು ವ್ಯಕ್ತಪಡಿಸುತ್ತೇನೆ. ಅವರು ಉತ್ಸಾಹದಿಂದ ಪ್ರತಿಪಾದಿಸಿದ ತತ್ವಗಳನ್ನು ಎತ್ತಿಹಿಡಿಯಲು ನಾವು ಶ್ರಮಿಸುತ್ತಿರುವಾಗ ಅವರ ಪರಂಪರೆಯು ನಮಗೆ ಸ್ಫೂರ್ತಿ ನೀಡುತ್ತಲೇ ಇರುತ್ತದೆ ಎಂದು ಟಾಟಾ ಸನ್ಸ್‌ನ ಅಧ್ಯಕ್ಷ ಎನ್ ಚಂದ್ರಶೇಖರನ್ ತಿಳಿಸಿದ್ದಾರೆ.

2012ರಲ್ಲೇ 100 ಶತಕೋಟಿ ದಾಟಿದ್ದ ಕಂಪನಿ; ಕಠಿಣ ಮತ್ತು ಕುಶಾಗ್ರಮತಿಯನ್ನು ಮರೆಮಾಚುವಷ್ಟು ಸೌಮ್ಯ ವರ್ತನೆಗೆ ಹೆಸರುವಾಸಿಯಾದ ಟಾಟಾ ಅವರು 1991 ರಿಂದ ಡಿಸೆಂಬರ್ 28, 2012ರವರೆಗೆ, ಅಂದರೆ ನಿವೃತ್ತರಾಗುವವರೆಗೆ ಟಾಟಾ ಗ್ರೂಪ್‌ನ ಟಾಟಾ ಸನ್ಸ್‌ನ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದರು. ಅವರ ಉಸ್ತುವಾರಿ ಅವಧಿಯಲ್ಲಿ ಟಾಟಾ ಸನ್ಸ್​ $100 ಶತಕೋಟಿ ಡಾಲರ್​ ಆದಾಯದ ಕಂಪನಿಯಾಗಿ ಬೆಳೆದು ನಿಂತಿತ್ತು

ಟಾಟಾ ಮೋಟಾರ್ಸ್, ಟಾಟಾ ಸ್ಟೀಲ್, ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್, ಟಾಟಾ ಪವರ್, ಟಾಟಾ ಗ್ಲೋಬಲ್ ಬೆವರೇಜಸ್, ಟಾಟಾ ಕೆಮಿಕಲ್ಸ್, ಇಂಡಿಯನ್ ಹೋಟೆಲ್ಸ್ ಮತ್ತು ಟಾಟಾ ಟೆಲಿಸರ್ವಿಸಸ್ ಸೇರಿದಂತೆ ಪ್ರಮುಖ ಟಾಟಾ ಕಂಪನಿಗಳ ಅಧ್ಯಕ್ಷರಾಗಿ ರತನ್​ ಟಾಟಾ ಅನುಪಮ ಸೇವೆ ಸಲ್ಲಿಸಿದ್ದಾರೆ. ಅವರು ಭಾರತ ಮತ್ತು ವಿದೇಶಗಳಲ್ಲಿನ ವಿವಿಧ ಸಂಸ್ಥೆಗಳೊಂದಿಗೆ ಸಹ ಸಂಬಂಧ ಹೊಂದಿದ್ದರು ಮತ್ತು ಮಿತ್ಸುಬಿಷಿ ಕಾರ್ಪೊರೇಷನ್ ಮತ್ತು ಜೆಪಿ ಮೋರ್ಗಾನ್ ಚೇಸ್‌ನ ಅಂತಾರಾಷ್ಟ್ರೀಯ ಸಲಹಾ ಮಂಡಳಿಗಳಲ್ಲಿ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದರು.

ಟಾಟಾ ಅವರು ಟಾಟಾ ಇನ್‌ಸ್ಟಿಟ್ಯೂಟ್ ಆಫ್ ಫಂಡಮೆಂಟಲ್ ರಿಸರ್ಚ್‌ನ ಕೌನ್ಸಿಲ್ ಆಫ್ ಮ್ಯಾನೇಜ್‌ಮೆಂಟ್‌ನ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದರು. ಕಾರ್ನೆಲ್ ವಿಶ್ವವಿದ್ಯಾಲಯ ಮತ್ತು ದಕ್ಷಿಣ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದ ಟ್ರಸ್ಟಿಗಳ ಮಂಡಳಿಗಳಲ್ಲಿ ತಮ್ಮ ಛಾಪು ಮೂಡಿಸಿದ್ದರು.

Share this:

  • Share on Facebook (Opens in new window) Facebook
  • Share on X (Opens in new window) X

Like this:

Like Loading...

Related

Discover more from Coastal Times Kannada

Subscribe to get the latest posts sent to your email.

Previous Post

ಮುಮ್ತಾಜ್ ಆಲಿ ಆತ್ಮಹತ್ಯೆ ; ಅಬ್ದುಲ್ ಸತ್ತಾರ್, ಶಾಫಿ ನಂದಾವರ ಸೇರಿ ಮೂವರ ಅರೆಸ್ಟ್, ಆಡಿಯೋ ಮುಂದಿಟ್ಟು ಹಣಕ್ಕಾಗಿ ಬ್ಲಾಕ್ ಮೇಲ್ ಮಾಡಿದ್ದ ಹರಾಮಿಗಳು

Next Post

ಓವರ್ ಟೆಕ್ ವಿಷಯದಲ್ಲಿ ಗಲಾಟೆ ,ಲೋಟಸ್ ಪ್ರಾಪರ್ಟಿಸ್ ಪಾಲುದಾರ ಜಿತೇಂದ್ರ ಕೊಟ್ಟಾರಿ ಮನೆಗೆ ನುಗ್ಗಿ ಹಲ್ಲೆ ಯತ್ನ ,ಇಬ್ಬರು ಯುವಕರು ಪೊಲೀಸ್ ವಶಕ್ಕೆ

Related Posts

ವಿವಾದಗಳನ್ನು ಮೆಟ್ಟಿ ನಿಂತ ‘ಜನನಾಯಕ’ ದಳಪತಿ ಕೈಹಿಡಿದ ತಮಿಳುನಾಡಿನ ಜನತೆ
ರಾಜಕೀಯ

ವಿವಾದಗಳನ್ನು ಮೆಟ್ಟಿ ನಿಂತ ‘ಜನನಾಯಕ’ ದಳಪತಿ ಕೈಹಿಡಿದ ತಮಿಳುನಾಡಿನ ಜನತೆ

May 4, 2026
37
ರೀಲ್ಸ್​ಗಾಗಿ ಓವರ್​ಹೆಡ್​ ಟ್ಯಾಂಕ್​ ಮೇಲೆ ಹತ್ತಿ ಹೋಗುವಾಗ ಏಣಿ ಕುಸಿದು ಓರ್ವ ಸಾವು, 16 ಗಂಟೆ ಮೇಲೆಯೇ ಸಿಲುಕಿದ್ದ ಇಬ್ಬರು!
ರಾಷ್ಟ್ರೀಯ ಸುದ್ದಿ

ರೀಲ್ಸ್​ಗಾಗಿ ಓವರ್​ಹೆಡ್​ ಟ್ಯಾಂಕ್​ ಮೇಲೆ ಹತ್ತಿ ಹೋಗುವಾಗ ಏಣಿ ಕುಸಿದು ಓರ್ವ ಸಾವು, 16 ಗಂಟೆ ಮೇಲೆಯೇ ಸಿಲುಕಿದ್ದ ಇಬ್ಬರು!

May 3, 2026
30
Next Post
ಓವರ್ ಟೆಕ್ ವಿಷಯದಲ್ಲಿ ಗಲಾಟೆ ,ಲೋಟಸ್ ಪ್ರಾಪರ್ಟಿಸ್ ಪಾಲುದಾರ ಜಿತೇಂದ್ರ ಕೊಟ್ಟಾರಿ ಮನೆಗೆ ನುಗ್ಗಿ ಹಲ್ಲೆ ಯತ್ನ ,ಇಬ್ಬರು ಯುವಕರು ಪೊಲೀಸ್ ವಶಕ್ಕೆ

ಓವರ್ ಟೆಕ್ ವಿಷಯದಲ್ಲಿ ಗಲಾಟೆ ,ಲೋಟಸ್ ಪ್ರಾಪರ್ಟಿಸ್ ಪಾಲುದಾರ ಜಿತೇಂದ್ರ ಕೊಟ್ಟಾರಿ ಮನೆಗೆ ನುಗ್ಗಿ ಹಲ್ಲೆ ಯತ್ನ ,ಇಬ್ಬರು ಯುವಕರು ಪೊಲೀಸ್ ವಶಕ್ಕೆ

Discussion about this post

Recent News

ಪಂಚ ರಾಜ್ಯಗಳ ವಿಧಾನಸಭಾ ಚುನಾವಣೆಗಳ ಫಲಿತಾಂಶ 2026

ಪಂಚ ರಾಜ್ಯಗಳ ವಿಧಾನಸಭಾ ಚುನಾವಣೆಗಳ ಫಲಿತಾಂಶ 2026

May 4, 2026
67
ವಿವಾದಗಳನ್ನು ಮೆಟ್ಟಿ ನಿಂತ ‘ಜನನಾಯಕ’ ದಳಪತಿ ಕೈಹಿಡಿದ ತಮಿಳುನಾಡಿನ ಜನತೆ

ವಿವಾದಗಳನ್ನು ಮೆಟ್ಟಿ ನಿಂತ ‘ಜನನಾಯಕ’ ದಳಪತಿ ಕೈಹಿಡಿದ ತಮಿಳುನಾಡಿನ ಜನತೆ

May 4, 2026
37
COASTAL BOX LOGO

CORPORATE OFFICE

KHYATI VISUAL MEDIA
3rd Floor, Shalimar Complex
Kankanady, Mangaluru-575002

Email ID : coastaltimeskannada@gmail.com

Follow Us

ಹೊಸ ಸುದ್ದಿಗಳು

ಪಂಚ ರಾಜ್ಯಗಳ ವಿಧಾನಸಭಾ ಚುನಾವಣೆಗಳ ಫಲಿತಾಂಶ 2026

ಪಂಚ ರಾಜ್ಯಗಳ ವಿಧಾನಸಭಾ ಚುನಾವಣೆಗಳ ಫಲಿತಾಂಶ 2026

May 4, 2026
ವಿವಾದಗಳನ್ನು ಮೆಟ್ಟಿ ನಿಂತ ‘ಜನನಾಯಕ’ ದಳಪತಿ ಕೈಹಿಡಿದ ತಮಿಳುನಾಡಿನ ಜನತೆ

ವಿವಾದಗಳನ್ನು ಮೆಟ್ಟಿ ನಿಂತ ‘ಜನನಾಯಕ’ ದಳಪತಿ ಕೈಹಿಡಿದ ತಮಿಳುನಾಡಿನ ಜನತೆ

May 4, 2026
ರೀಲ್ಸ್​ಗಾಗಿ ಓವರ್​ಹೆಡ್​ ಟ್ಯಾಂಕ್​ ಮೇಲೆ ಹತ್ತಿ ಹೋಗುವಾಗ ಏಣಿ ಕುಸಿದು ಓರ್ವ ಸಾವು, 16 ಗಂಟೆ ಮೇಲೆಯೇ ಸಿಲುಕಿದ್ದ ಇಬ್ಬರು!

ರೀಲ್ಸ್​ಗಾಗಿ ಓವರ್​ಹೆಡ್​ ಟ್ಯಾಂಕ್​ ಮೇಲೆ ಹತ್ತಿ ಹೋಗುವಾಗ ಏಣಿ ಕುಸಿದು ಓರ್ವ ಸಾವು, 16 ಗಂಟೆ ಮೇಲೆಯೇ ಸಿಲುಕಿದ್ದ ಇಬ್ಬರು!

May 3, 2026
  • About
  • Advertise
  • Privacy & Policy
  • Contact

Copyright ©2024. All Rights Reserved. Coastaltimeskannada.com | Design and Developed By Bluechip Infosystem - Contact Us : cc.bcis.blr@gmail.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

%d