ಉಳ್ಳಾಲ ನ.11: ಅಜ್ಜಿನಡ್ಕ ನಿವಾಸಿ ಇಕ್ಬಾಲ್ (32) ಎಂಬ ಯುವಕ ಇರಿತಕ್ಕೊಳಗಾದ ವ್ಯಕ್ತಿ. ಸ್ಥಳೀಯ ಗಾಂಜಾ ಮಾಫಿಯಾದ ವಿರುದ್ಧ ಧ್ವನಿ ಎತ್ತುತಿರುವ ಕಾರಣಕ್ಕೆ ಇಕ್ಬಾಲ್ ಎಂಬ ಯುವಕನಿಕೆ ನಿನ್ನೆ ರಾತ್ರಿ 8.00 ಗಂಟೆಗೆ ಮಾರಕಾಸ್ತ್ರದಿಂದ ಮಾರಣಾಂತಿಕವಾಗಿ ಇರಿದ ಘಟನೆ ನಡೆದಿದೆ.
ಅವರು ಕೆಲಸ ಮುಗಿಸಿ ಮನೆಗೆ ತನ್ನ ಸ್ಕೂಟರ್ ನಲ್ಲಿ ಹೋಗುತ್ತಿದ್ದ ಸಂದರ್ಭದಲ್ಲಿ ಇಮ್ತಿಯಾಝ್ ಮತ್ತು ಶಫೀಕ್ ಎಂಬವರು ತಡೆದು ನಿಲ್ಲಿಸಿ ಚೂರಿಯಿಂದ ಇರಿದಿದ್ದಾರೆಂದು ಆರೋಪಿಸಲಾಗಿದೆ.
ಚೂರಿ ಇರಿದು ಪರಾರಿಯಾದ ಆರೋಪಿಗಳು ಶಫೀಕ್ ಮತ್ತು ಇಮ್ತಿಯಾಜ್ ಎಂದು ಸ್ಥಳಿಯರು ಗುರುತಿಸಿದ್ದಾರೆ,
ಚೂರಿ ಇರಿತಕ್ಕೊಳಗಾದ ವ್ಯಕ್ತಿ ತೊಕ್ಕೊಟ್ಟುವಿನ ನೇತಾಜಿ ಎಲ್ಲಪ್ಪ ಆಸ್ಪತ್ರೆಯಲ್ಲಿ ಚಿಕ್ಸಿತೆ ಪಡೆಯುತ್ತಿದ್ದಾರೆ, ಇಕ್ಬಾಲ್ ನೀಡಿದ ದೂರಿನ ಮೇರೆಗೆ ಉಳ್ಳಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆರೋಪಿಗಳ ಬಂಧನಕ್ಕೆ SDPI ಒತ್ತಾಯ:
ಅಜ್ಜಿನಡ್ಕದಲ್ಲಿ SDPI ಕಾರ್ಯಕರ್ತ ಇಕ್ಬಾಲ್ ಎಂಬವರ ಮೇಲೆ ದಾಳಿ ನಡೆಸಿರುವುದನ್ನು ಎಸ್ ಡಿಪಿಐ ಖಂಡಿಸಿದೆ. ಘಟನೆಯನ್ನು ಖಂಡಿಸಿರುವ SDPI ಮಂಗಳೂರು ಎಸ್.ಡಿ.ಪಿ.ಐ ಮಂಗಳೂರು ಕ್ಷೇತ್ರ ಸಮಿತಿ ಅಧ್ಯಕ್ಷ ಇರ್ಷಾದ್ ಅಜ್ಜಿನಡ್ಕ,ಕಾರ್ಯದರ್ಶಿ ಝಾಹಿದ್ ಮಲಾರ್, ಜಿಲ್ಲಾ ಸಮಿತಿ ಸದಸ್ಯ ಝಾಕಿರ್ ಉಳ್ಳಾಲ್, ಅಶ್ರಫ್ ಕೆಸಿ ರೋಡ್, ಉಳ್ಳಾಲ ನಗರ ಸಮಿತಿ ಅಧ್ಯಕ್ಷ ಸುಹೈಲ್ ಉಳ್ಳಾಲ್, ಇಮ್ತಿಯಾಜ್ ಕೋಟೇಪುರ, ಅಲ್ತಾಫ್ ಉಳ್ಳಾಲ್ ಮತ್ತಿತರರು ಉಪಸ್ಥಿತರಿದ್ದರು, ಇವರು ಕೂಡಲೇ ಕೊಲೆ ಯತ್ನ ಪ್ರಕರಣದ ಎಲ್ಲಾ ಆರೋಪಿಗಳನ್ನು ಬಂಧಿಸಬೇಕು ಎಂದು ಒತ್ತಾಯಿಸಿದ್ದಾರೆ.