• About us
  • Contact us
  • Disclaimer
Thursday, August 13, 2026
  • Login
Coastal Times Kannada
No Result
View All Result
  • Home
    • ಗ್ಯಾಜೆಟ್
  • ರಾಜ್ಯ
  • ರಾಷ್ಟ್ರೀಯ
  • ರಾಜಕೀಯ
  • ವಿದೇಶಿ ಸುದ್ದಿ
  • ಕರಾವಳಿ
  • ಕ್ರೈಂ ನ್ಯೂಸ್
  • ಕ್ರೀಡೆ
  • ಸಿನಿಮಾ
  • ಆರೋಗ್ಯ
  • ವೆಬ್ ಸ್ಟೊರೀಸ್
Join to Group
  • Home
    • ಗ್ಯಾಜೆಟ್
  • ರಾಜ್ಯ
  • ರಾಷ್ಟ್ರೀಯ
  • ರಾಜಕೀಯ
  • ವಿದೇಶಿ ಸುದ್ದಿ
  • ಕರಾವಳಿ
  • ಕ್ರೈಂ ನ್ಯೂಸ್
  • ಕ್ರೀಡೆ
  • ಸಿನಿಮಾ
  • ಆರೋಗ್ಯ
  • ವೆಬ್ ಸ್ಟೊರೀಸ್
No Result
View All Result
Coastal Times Kannada
No Result
View All Result

ಹುಬ್ಬಳ್ಳಿಯಲ್ಲಿ ಐದು ವರ್ಷದ ಬಾಲಕಿಯ ಅಪಹರಿಸಿ ಅತ್ಯಾಚಾರ ಕೊಲೆ, ಆರೋಪಿಯ ಎನ್​​ಕೌಂಟರ್!

Coastal Times by Coastal Times
April 14, 2025
in ಕ್ರೈಮ್ ನ್ಯೂಸ್
ಹುಬ್ಬಳ್ಳಿಯಲ್ಲಿ ಐದು ವರ್ಷದ ಬಾಲಕಿಯ ಅಪಹರಿಸಿ ಅತ್ಯಾಚಾರ ಕೊಲೆ, ಆರೋಪಿಯ ಎನ್​​ಕೌಂಟರ್!
98
VIEWS
WhatsappTelegramShare on FacebookShare on Twitter

ಹುಬ್ಬಳ್ಳಿ: ಮನೆಯಂಗಳದಲ್ಲಿ ಆಟವಾಡುತ್ತಿದ್ದ ಐದು ವರ್ಷದ ಬಾಲಕಿಯನ್ನು ಅಪಹರಿಸಿ ಕೊಲೆ ಮಾಡಲಾಗಿದೆ. ಕೃತ್ಯ ಎಸಗಿದ ಆರೋಪಿ ಬಿಹಾರ ಮೂಲದ ರಿತೇಶ ಕುಮಾರ್ (35) ಎಂಬಾತ ಭಾನುವಾರ ಸಂಜೆ ನಗರದ ತಾರಿಹಾಳ ಸೇತುವೆ ಬಳಿ ಪೊಲೀಸರ ಗುಂಡೇಟಿಗೆ ಮೃತಪಟ್ಟಿದ್ದಾನೆ.

ಈ ಕುರಿತಂತೆ ಹು-ಧಾ ಪೊಲೀಸ್ ಕಮಿಷನರ್ ಎನ್.ಶಶಿಕುಮಾರ್ ಸ್ಪಷ್ಟನೆ ನೀಡಿದ್ದು, ”ಆರೋಪಿ ವಶಕ್ಕೆ ಪಡೆದು ಆತನು ವಾಸಿಸುತ್ತಿದ್ದ ಸ್ಥಳಕ್ಕೆ ಕರೆದೊಯ್ದು ವಿಚಾರಣೆ ಮಾಡುವ ವೇಳೆ ಪೊಲೀಸ್ ಸಿಬ್ಬಂದಿ ಮೇಲೆ ಕಲ್ಲಿನಿಂದ ಹಲ್ಲೆ ನಡೆಸಿ, ಪರಾರಿಯಾಗಲು ಯತ್ನಿಸಿದ್ದಾನೆ. ಆಗ ಮಹಿಳಾ ಪಿಎಸ್​​​ಐ ಅನ್ನಪೂರ್ಣ ಅವರು ಮೊದಲು ಮೂರು ಸುತ್ತು ಗಾಳಿಯಲ್ಲಿ ಗುಂಡು ಹಾರಿಸಿ ಎಚ್ಚರಿಸಿದ್ದಾರೆ. ಆದರೂ ಸಹ ಆರೋಪಿ ತಪ್ಪಿಸಿಕೊಳ್ಳಲು ಯತ್ನಿಸಿದಾಗ ಆತನ ಕಾಲಿಗೆ ಗುಂಡು ಹೊಡೆದಿದ್ದಾರೆ. ನಂತರ ಗುಂಡು ಹಾರಿಸಿದಾಗ ಆತನ ಬೆನ್ನಿಗೆ ಗುಂಡು ತಗುಲಿ ಗಂಭೀರವಾಗಿ ಗಾಯಗೊಂಡಿದ್ದ. ಬಳಿಕ ಆತನನ್ನು ಚಿಕಿತ್ಸೆಗೆಂದು ಕೆಎಂಸಿಆರ್​​​ಐ ಆಸ್ಪತ್ರೆಗೆ ಕರೆತಂದಿದ್ದಾಗ ವೈದ್ಯರು ಆತ ಮೃತಪಟ್ಟಿರುವುದಾಗಿ ಹೇಳಿದ್ದಾರೆ” ಎಂದು ಮಾಹಿತಿ ನೀಡಿದರು.

‘ಬಿಹಾರ ಪಾಟ್ನಾದ ನಿವಾಸಿಯಾದ ಆರೋಪಿ ರಿತೀಶ ಕುಮಾರ್ ಭಾನುವಾರ ಬೆಳಿಗ್ಗೆ 10.40ರ ಸುಮಾರು ವಿಜಯನಗರದ ವಾಸವಾಗಿದ್ದ ಬಾಲಕಿಗೆ ತಿಂಡಿ ತಿನಿಸುಗಳನ್ನು ನೀಡುವುದಾಗಿ ಪುಸಲಾಯಿಸಿ ಕರೆದಿದ್ದಾನೆ. ನಂತರ ಅವಳನ್ನು ಎತ್ತಿಹಾಕಿಕೊಂಡು ಎದುರಿನ ಮನೆಯಲ್ಲಿರುವ ಶೆಡ್‌ಗೆ ಕರೆದೊಯ್ದು ಅಸಭ್ಯವಾಗಿ ವರ್ತಿಸಿದ್ದಾನೆ. ಆಕೆ ಕೂಗಿಕೊಂಡಾಗ ಕೊಲೆ ಮಾಡಿ ಪರಾರಿಯಾಗಿದ್ದಾನೆ. ಬಾಲಕಿಯ ಶವ ನೋಡಿದ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಬಳಿಕ ಆತನನ್ನು ಹಿಡಿದು ಅಶೋಕ ನಗರ ಠಾಣೆಯ ಪೊಲೀಸರಿಗೆ ಒಪ್ಪಿಸಿದ್ದಾರೆ’ ಎಂದು  ಶಶಿಕುಮಾರ್ ತಿಳಿಸಿದರು.

ಬಾಲಕಿ ಕೊಲೆ ಖಂಡಿಸಿ ಪ್ರತಿಭಟನೆ: ಬಾಲಕಿ ಕೊಲೆ ಮಾಡಿರುವ ಆರೋಪಿಯನ್ನು ತಮ್ಮ ವಶಕ್ಕೆ ನೀಡಿ ಹಾಗೂ ಗುಂಡು ಹಾರಿಸಿ ಹತ್ಯೆ ಮಾಡಲು ಆಗ್ರಹಿಸಿ ವಿವಿಧ ಸಂಘಟನೆಗಳಿಂದ‌ ಅಶೋಕ‌ ನಗರದ ಪೊಲೀಸ್ ಠಾಣೆ ಎದುರು ಸೇರಿದಂತೆ ವಿವಿಧೆಡೆ ತೀವ್ರ ಪ್ರತಿಭಟನೆ ನಡೆಸಿದರು. ನಗರದ ರಾಣಿ ಚೆನ್ನಮ್ಮ ವೃತ್ತ, ಕೆಎಂಸಿಆರ್​​​ಐ ಶವಾಗಾರ, ಕೆಎಂಸಿಆರ್​​ಐ ಮುಖ್ಯ ದ್ವಾರ ಬಳಿ ಹು-ಧಾ ಮುಖ್ಯ ರಸ್ತೆ ಬಂದ್ ಮಾಡಿ, ಟೈಯರ್​​​ಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದರು.

ಆರೋಪಿ ಎನ್‌ಕೌಂಟರ್‌ನಿಂದ ಮೃತಪಟ್ಟ ವಿಷಯ ತಿಳಿದು ಸಾರ್ವಜನಿಕರು ಪ್ರತಿಭಟನೆ ಕೈಬಿಟ್ಟು ಕೆಎಂಸಿ ಆಸ್ಪತ್ರೆ ಎದುರು ಸಂಭ್ರಮಿಸಿದರು. ಪೊಲೀಸ್ ಕಮಿಷನರ್ ಶಶಿಕುಮಾರ್‌ ಅವರಿಗೆ ಜೈಕಾರ ಹಾಕಿದರು.

Share this:

  • Share on Facebook (Opens in new window) Facebook
  • Share on X (Opens in new window) X

Like this:

Like Loading…

Related

Discover more from Coastal Times Kannada

Subscribe to get the latest posts sent to your email.

Previous Post

ಶಿವಬಾಗ್‌ನಲ್ಲಿ ರೋಹನ್ ಗಾರ್ಡನ್ ಅಪಾರ್ಟ್‌ಮೆಂಟ್‌ಗೆ ಭೂಮಿಪೂಜೆ

Next Post

ಒಂದು ಗಂಟೆ SEXಗೆ ಬರೋಬ್ಬರಿ 50 ಸಾವಿರ ರೂ.- ಅಮೆರಿಕದ ಹೈಟೆಕ್‌ ವೇಶ್ಯಾವಾಟಿಕೆ ಅಡ್ಡೆಗೆ ತೆರಳಿದ್ದ ಆರೋಪದಲ್ಲಿ ಭಾರತೀಯ ಮೂಲದ ಉದ್ಯಮಿ ಬಂಧನ

Related Posts

ಆಪರೇಷನ್ ತೂಫಾನ್: ಕರ್ನಾಟಕ ಗಡಿ ಮೂಲಕ ಕೇರಳಕ್ಕೆ ಭಾರೀ ಪ್ರಮಾಣದಲ್ಲಿ ಎಂಡಿಎಂಎ ಸಾಗಿಸಲು ಯತ್ನಿಸಿದ ಯುವಕ-ಯುವತಿಯ ಬಂಧನ
ಕ್ರೈಮ್ ನ್ಯೂಸ್

ಆಪರೇಷನ್ ತೂಫಾನ್: ಕರ್ನಾಟಕ ಗಡಿ ಮೂಲಕ ಕೇರಳಕ್ಕೆ ಭಾರೀ ಪ್ರಮಾಣದಲ್ಲಿ ಎಂಡಿಎಂಎ ಸಾಗಿಸಲು ಯತ್ನಿಸಿದ ಯುವಕ-ಯುವತಿಯ ಬಂಧನ

August 12, 2026
89
ನೀಟ್ ಪ್ರಶ್ನೆ ಪತ್ರಿಕೆ ಲೀಕ್ ಆಗಿದ್ದರಿಂದ ನೊಂದು ಹಾಸ್ಟೆಲ್‌ನಲ್ಲಿ ತಂಗಿ ಆತ್ಮಹತ್ಯೆ ; ದುಬೈನಲ್ಲಿ ಇಂಜಿನಿಯರ್ ಆಗಿದ್ದ ಅಣ್ಣನೂ ಮಂಗಳೂರಿಗೆ ಬಂದು ಲಾಡ್ಜ್ ನಲ್ಲಿ ಆತ್ಮಹತ್ಯೆಗೆ ಶರಣು !
ಕ್ರೈಮ್ ನ್ಯೂಸ್

ನೀಟ್ ಪ್ರಶ್ನೆ ಪತ್ರಿಕೆ ಲೀಕ್ ಆಗಿದ್ದರಿಂದ ನೊಂದು ಹಾಸ್ಟೆಲ್‌ನಲ್ಲಿ ತಂಗಿ ಆತ್ಮಹತ್ಯೆ ; ದುಬೈನಲ್ಲಿ ಇಂಜಿನಿಯರ್ ಆಗಿದ್ದ ಅಣ್ಣನೂ ಮಂಗಳೂರಿಗೆ ಬಂದು ಲಾಡ್ಜ್ ನಲ್ಲಿ ಆತ್ಮಹತ್ಯೆಗೆ ಶರಣು !

August 11, 2026
74
Next Post
ಒಂದು ಗಂಟೆ SEXಗೆ ಬರೋಬ್ಬರಿ 50 ಸಾವಿರ ರೂ.- ಅಮೆರಿಕದ ಹೈಟೆಕ್‌ ವೇಶ್ಯಾವಾಟಿಕೆ ಅಡ್ಡೆಗೆ ತೆರಳಿದ್ದ ಆರೋಪದಲ್ಲಿ ಭಾರತೀಯ ಮೂಲದ ಉದ್ಯಮಿ ಬಂಧನ

ಒಂದು ಗಂಟೆ SEXಗೆ ಬರೋಬ್ಬರಿ 50 ಸಾವಿರ ರೂ.- ಅಮೆರಿಕದ ಹೈಟೆಕ್‌ ವೇಶ್ಯಾವಾಟಿಕೆ ಅಡ್ಡೆಗೆ ತೆರಳಿದ್ದ ಆರೋಪದಲ್ಲಿ ಭಾರತೀಯ ಮೂಲದ ಉದ್ಯಮಿ ಬಂಧನ

Discussion about this post

Recent News

ರಾಜ್ಯದಲ್ಲಿ ತಂಬಾಕು, ನಿಕೋಟಿನ್ ಉತ್ಪನ್ನಗಳ ನಿಷೇಧ ಜಾರಿಯಲ್ಲಿ ಅಡಿಕೆ ಬೆಳೆಗಾರರು ಬಲಿಪಶುವಾಗದಂತೆ ಸ್ಪಷ್ಟ ಚೌಕಟ್ಟು ರಚಿಸುವಂತೆ ಕ್ಯಾಂಪ್ಕೋ ಆಗ್ರಹ

ರಾಜ್ಯದಲ್ಲಿ ತಂಬಾಕು, ನಿಕೋಟಿನ್ ಉತ್ಪನ್ನಗಳ ನಿಷೇಧ ಜಾರಿಯಲ್ಲಿ ಅಡಿಕೆ ಬೆಳೆಗಾರರು ಬಲಿಪಶುವಾಗದಂತೆ ಸ್ಪಷ್ಟ ಚೌಕಟ್ಟು ರಚಿಸುವಂತೆ ಕ್ಯಾಂಪ್ಕೋ ಆಗ್ರಹ

August 13, 2026
14
ರಾಜ್ಯಾದ್ಯಂತ ತಂಬಾಕು, ಗುಟ್ಕಾ ಹಾಗೂ ಪಾನ್ ಮಸಾಲ ಒಂದು ವರ್ಷ ನಿಷೇಧಿಸಿ ರಾಜ್ಯ ಸರ್ಕಾರ ಆದೇಶ

ರಾಜ್ಯಾದ್ಯಂತ ತಂಬಾಕು, ಗುಟ್ಕಾ ಹಾಗೂ ಪಾನ್ ಮಸಾಲ ಒಂದು ವರ್ಷ ನಿಷೇಧಿಸಿ ರಾಜ್ಯ ಸರ್ಕಾರ ಆದೇಶ

August 12, 2026
37
COASTAL BOX LOGO

CORPORATE OFFICE

KHYATI VISUAL MEDIA
3rd Floor, Shalimar Complex
Kankanady, Mangaluru-575002

Email ID : coastaltimeskannada@gmail.com

Follow Us

ಹೊಸ ಸುದ್ದಿಗಳು

ರಾಜ್ಯದಲ್ಲಿ ತಂಬಾಕು, ನಿಕೋಟಿನ್ ಉತ್ಪನ್ನಗಳ ನಿಷೇಧ ಜಾರಿಯಲ್ಲಿ ಅಡಿಕೆ ಬೆಳೆಗಾರರು ಬಲಿಪಶುವಾಗದಂತೆ ಸ್ಪಷ್ಟ ಚೌಕಟ್ಟು ರಚಿಸುವಂತೆ ಕ್ಯಾಂಪ್ಕೋ ಆಗ್ರಹ

ರಾಜ್ಯದಲ್ಲಿ ತಂಬಾಕು, ನಿಕೋಟಿನ್ ಉತ್ಪನ್ನಗಳ ನಿಷೇಧ ಜಾರಿಯಲ್ಲಿ ಅಡಿಕೆ ಬೆಳೆಗಾರರು ಬಲಿಪಶುವಾಗದಂತೆ ಸ್ಪಷ್ಟ ಚೌಕಟ್ಟು ರಚಿಸುವಂತೆ ಕ್ಯಾಂಪ್ಕೋ ಆಗ್ರಹ

August 13, 2026
ರಾಜ್ಯಾದ್ಯಂತ ತಂಬಾಕು, ಗುಟ್ಕಾ ಹಾಗೂ ಪಾನ್ ಮಸಾಲ ಒಂದು ವರ್ಷ ನಿಷೇಧಿಸಿ ರಾಜ್ಯ ಸರ್ಕಾರ ಆದೇಶ

ರಾಜ್ಯಾದ್ಯಂತ ತಂಬಾಕು, ಗುಟ್ಕಾ ಹಾಗೂ ಪಾನ್ ಮಸಾಲ ಒಂದು ವರ್ಷ ನಿಷೇಧಿಸಿ ರಾಜ್ಯ ಸರ್ಕಾರ ಆದೇಶ

August 12, 2026
ಆಪರೇಷನ್ ತೂಫಾನ್: ಕರ್ನಾಟಕ ಗಡಿ ಮೂಲಕ ಕೇರಳಕ್ಕೆ ಭಾರೀ ಪ್ರಮಾಣದಲ್ಲಿ ಎಂಡಿಎಂಎ ಸಾಗಿಸಲು ಯತ್ನಿಸಿದ ಯುವಕ-ಯುವತಿಯ ಬಂಧನ

ಆಪರೇಷನ್ ತೂಫಾನ್: ಕರ್ನಾಟಕ ಗಡಿ ಮೂಲಕ ಕೇರಳಕ್ಕೆ ಭಾರೀ ಪ್ರಮಾಣದಲ್ಲಿ ಎಂಡಿಎಂಎ ಸಾಗಿಸಲು ಯತ್ನಿಸಿದ ಯುವಕ-ಯುವತಿಯ ಬಂಧನ

August 12, 2026
  • About
  • Advertise
  • Privacy & Policy
  • Contact

Copyright ©2024. All Rights Reserved. Coastaltimeskannada.com | Design and Developed By Bluechip Infosystem - Contact Us : cc.bcis.blr@gmail.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

%d