ವಾಷಿಂಗ್ಟನ್ ಏಪ್ರಿಲ್ 14: ಹೈಟೆಕ್ ವೇಶ್ಯಾವಾಟಿಕೆ ಅಡ್ಡೆಗೆ ತೆರಳಿದ್ದ ಆರೋಪದಲ್ಲಿ ಭಾರತೀಯ ಮೂಲದ ಉದ್ಯಮಿ ಮತ್ತು ಗ್ರೇಡಿಯಂಟ್ ಕ್ಲೀನ್ ವಾಟರ್ ಸೊಲ್ಯೂಷನ್ ಸ್ಟಾರ್ಟ್‌ಅಪ್‌ನ ಸಿಇಒ ಅನುರಾಗ್ ಬಾಜಪೇಯಿನನ್ನು ಅಮೆರಿಕದಲ್ಲಿ ಬಂದಿಸಲಾಗಿದೆ. ಅನುರಾಗ್ ಬಾಜಪೇಯಿ ಸೇರಿದಂತೆ ಹಲವು ಪುರುಷರು ಏಷ್ಯನ್ ಮಹಿಳೆಯರೊಂದಿಗೆ ಲೈಂಗಿಕ ಸುಖಕ್ಕಾಗಿ ಗಂಟೆಗೆ ಸುಮಾರು $600 ಡಾಲರ್ ಅಂದರೆ 50 ಸಾವಿರ ರೂ. ಪಾವತಿಸಿದ್ದರು ಎಂದು ವರದಿಯಾಗಿದೆ. ಇದೇ ಆರೋಪದಡಿ ಇದೀಗ ಆತ ಕಂಬಿ ಎಣಿಸುವಂತಾಗಿದೆ.
ಹಾರ್ವರ್ಡ್ ವಿಶ್ವವಿದ್ಯಾಲಯದ ಬಳಿ ದುಬಾರಿ ಅಪಾರ್ಟ್‌ಮೆಂಟ್‌ಗಳಲ್ಲಿ ನಡೆಯುತ್ತಿತ್ತು, ಈ ಹೈಟೆಕ್ ವೇಶ್ಯಾಗೃಹದಲ್ಲಿ ವ್ಯಕ್ತಿಗಳು ಸಂಭೋಗಕ್ಕಾಗಿ ಒಂದು ಗಂಟೆಗೆ 600 ಡಾಲರ್ ಅಂದರೆ ಸರಿಸುಮಾರು 50 ಸಾವಿರ ರೂಪಾಯಿ ಮೊತ್ತವನ್ನು ಪಾವತಿಸಬೇಕಾಗಿತ್ತು. ಈ ಹೈಟೆಕ್ ವೇಶ್ಯಾವಾಟಿಕೆಯಲ್ಲಿ ಭಾರತೀಯ-ಅಮೇರಿಕನ್ ಸಿಇಒ ಮತ್ತು ಶತಕೋಟಿ ಡಾಲರ್ ಮೌಲ್ಯದ ವಾಟರ್ ಟೆಕ್ ಸಂಸ್ಥೆ ಗ್ರೇಡಿಯಂಟ್‌ನ ಸಹ-ಸಂಸ್ಥಾಪಕ ಅನುರಾಗ್ ಬಾಜಪೇಯಿ ಭಾಗಿಯಾಗಿರುವುದು ಉನ್ನತ ಮಟ್ಟದ ತನಿಖೆಯಲ್ಲಿ ಬಹಿರಂಗವಾಗಿದೆ. ಈ ವೇಶ್ಯಾವಾಟಿಕೆ ಜಾಲವು ವೈದ್ಯರು, ವಕೀಲರು, ಕಾರ್ಪೊರೇಟ್ ಕಾರ್ಯನಿರ್ವಾಹಕರು ಮತ್ತು ಸಾರ್ವಜನಿಕ ಅಧಿಕಾರಿಗಳ ಕಕ್ಷಿದಾರರಿಗೆ ಸೇವೆ ನೀಡುತ್ತಿತ್ತು ಎಂದು ತಿಳಿದುಬಂದಿದೆ. ಅದಲ್ಲದೆ, ಈ ಹೈಟೆಕ್ ವೇಶ್ಯಾಗೃಹಕ್ಕೆ ಬರುವ ವ್ಯಕ್ತಿಗಳು ಗುರುತಿನ ಚೀಟಿ, ಉದ್ಯೋಗದ ವಿವರ ಮತ್ತು ಯಾರ ಶಿಫಾರಸ್ಸಿನ ಮೂಲಕ ಬಂದಿದ್ದಾರೆ ಎಂಬ ಮಾಹಿತಿ ನೀಡುತ್ತಿದ್ದರು ಎಂದು ತಿಳಿದು ಬಂದಿದೆ.
ಅದಲ್ಲದೇ, ಈ ವೇಶ್ಯಾಗೃಹ ಹಗರಣದಲ್ಲಿ ಅನುರಾಗ್ ಬಾಜಪೇಯಿ ಹೆಸರು ಕೇಳಿ ಬರುತ್ತಿದ್ದಂತೆ ಗ್ರೇಡಿಯಂಟ್ ತನ್ನ ಸಿಇಒ ಪರವಾಗಿ ನಿಂತುಕೊಳ್ಳುವ ಮೂಲಕ ಹೇಳಿಕೆ ನೀಡಿದೆ. ಹೌದು, ಗ್ರೇಡಿಯಂಟ್ ಪ್ರತಿನಿಧಿ ಫೆಲಿಕ್ಸ್ ವಾಂಗ್ ಪ್ರತಿಕ್ರಿಯೆ ನೀಡಿದ್ದು “ನಾವು ನ್ಯಾಯ ವ್ಯವಸ್ಥೆಯಲ್ಲಿ ನಂಬಿಕೆ ಇಡುತ್ತೇವೆ. ಇದು ಸರಿಯಾದ ಸಮಯದಲ್ಲಿ ಅನುಕೂಲಕರವಾಗಿ ಪರಿಹರಿಸಲ್ಪಡುತ್ತದೆ ಎನ್ನುವ ವಿಶ್ವಾಸ ನಮಗಿದೆ. ಅದಲ್ಲದೆ ಗ್ರೇಡಿಯಂಟ್ ತಾಂತ್ರಿಕ ನಾವೀನ್ಯತೆಯಲ್ಲಿ ತನ್ನ ಶ್ರೇಷ್ಠತೆ ಮುಂದುವರಿಸುತ್ತದೆ. ಈ ಮೂಲಕ ಶುದ್ಧ ನೀರನ್ನು ನೀಡುವ ಧ್ಯೇಯದತ್ತ ಕೆಲಸ ಮಾಡುತ್ತಿದೆ ಎಂದು ತಿಳಿಸಿದ್ದಾರೆ.
Discover more from Coastal Times Kannada
Subscribe to get the latest posts sent to your email.
Discussion about this post