• About us
  • Contact us
  • Disclaimer
Friday, March 20, 2026
  • Login
Coastal Times Kannada
No Result
View All Result
  • Home
    • ಗ್ಯಾಜೆಟ್
  • ರಾಜ್ಯ
  • ರಾಷ್ಟ್ರೀಯ
  • ರಾಜಕೀಯ
  • ವಿದೇಶಿ ಸುದ್ದಿ
  • ಕರಾವಳಿ
  • ಕ್ರೈಂ ನ್ಯೂಸ್
  • ಕ್ರೀಡೆ
  • ಸಿನಿಮಾ
  • ಆರೋಗ್ಯ
  • ವೆಬ್ ಸ್ಟೊರೀಸ್
Join to Group
  • Home
    • ಗ್ಯಾಜೆಟ್
  • ರಾಜ್ಯ
  • ರಾಷ್ಟ್ರೀಯ
  • ರಾಜಕೀಯ
  • ವಿದೇಶಿ ಸುದ್ದಿ
  • ಕರಾವಳಿ
  • ಕ್ರೈಂ ನ್ಯೂಸ್
  • ಕ್ರೀಡೆ
  • ಸಿನಿಮಾ
  • ಆರೋಗ್ಯ
  • ವೆಬ್ ಸ್ಟೊರೀಸ್
No Result
View All Result
Coastal Times Kannada
No Result
View All Result

ಅಕ್ಷರ ಸಂತ ಪದ್ಮಶ್ರೀ ಹಾಜಬ್ಬರ ಕನಸಿಗೆ ವೃಕ್ಷಮಾತೆ ಪದ್ಮಶ್ರೀ ಪುರಸ್ಕೃತೆ ತುಳಸಿ ಗೌಡ ನೆರವು

Coastal Times by Coastal Times
November 14, 2021
in ಕರಾವಳಿ
ಅಕ್ಷರ ಸಂತ ಪದ್ಮಶ್ರೀ ಹಾಜಬ್ಬರ ಕನಸಿಗೆ ವೃಕ್ಷಮಾತೆ ಪದ್ಮಶ್ರೀ ಪುರಸ್ಕೃತೆ ತುಳಸಿ ಗೌಡ ನೆರವು
60
VIEWS
WhatsappTelegramShare on FacebookShare on Twitter

ಉಳ್ಳಾಲ: ಅಕ್ಷರ ಸಂತ, ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಹರೇಕಳ ಹಾಜಬ್ಬರ ಮನೆಗೆ ಶನಿವಾರ ಅಂಕೋಲದ ಪದ್ಮಶ್ರೀ ಪುರಸ್ಕೃತ ವೃಕ್ಷಮಾತೆ ಖ್ಯಾತಿಯ ಅರಣ್ಯವನ್ನೇ ಉಸಿರಾಗಿರಿಸಿಕೊಂಡಿರುವ ತುಳಸಿ ಗೌಡ ಶನಿವಾರ ಭೇಟಿ ನೀಡಿದರು.

ಹಾಜಬ್ಬ ಅವರ ಪದವಿಪೂರ್ವ ಕಾಲೇಜು ನಿರ್ಮಾಣದ ಕನಸನ್ನು ಅರ್ಥಮಾಡಿಕೊಂಡ ತುಳಸಿ ಗೌಡ, ಪದ್ಮಶ್ರೀ ಪಡೆದು ದೆಹಲಿಯಿಂದ ಹಿಂದಿರುಗುವಾಗ ಹಾಜಬ್ಬರ ಶಾಲೆಗೆ ಭೇಟಿ ನೀಡುವ ಇಂಗಿತ ವ್ಯಕ್ತಪಡಿಸಿದ್ದರು. ಈ ಹಿನ್ನೆಲೆಯಲ್ಲಿ ಕುಟುಂಬದವರು ಶನಿವಾರ ಬೆಳಗ್ಗೆ ಅವರನ್ನು ಹಾಜಬ್ಬರ ಮನೆಗೆ ಕರೆದುಕೊಂಡು ಬಂದಿದ್ದರು. ಪದ್ಮಶ್ರೀ ಪುರಸ್ಕೃತರಿಬ್ಬರನ್ನು ಜತೆಗೇ ಕಂಡ ಶಾಲಾ ಮಕ್ಕಳು ಮತ್ತು ಗ್ರಾಮಸ್ಥರು ಪುಳಕಿತರಾದರು.

ಸನ್ಮಾನದ ಹಣ ಶಾಲಾಭಿವೃದ್ಧಿಗೆ: ಹಾಜಬ್ಬ ಅವರ ಮನೆಯಲ್ಲೇ ಬೆಳಗ್ಗಿನ ಉಪಾಹಾರ ಸೇವಿಸಿದ ತುಳಸಿ ಗೌಡ, ಬಳಿಕ ನ್ಯೂಪಡ್ಪು ಸರ್ಕಾರಿ ಶಾಲೆಗೆ ತೆರಳಿದರು. ಆ ವೇಳೆ ಶಾಲಾ ಮಕ್ಕಳು ಮತ್ತು ಶಿಕ್ಷಕರು ಅವರನ್ನು ಬ್ಯಾಂಡ್ ಮೂಲಕ ಮೆರವಣಿಗೆಯಲ್ಲಿ ಶಾಲಾ ಸಭಾಂಗಣಕ್ಕೆ ಕರೆದೊಯ್ದರು. ತುಳಸಿ ಅವರನ್ನು ಸನ್ಮಾನಿಸಲಾಯಿತು. ಮಕ್ಕಳಿಗೆ ಪರಿಸರ ಬಗ್ಗೆ ಕಿವಿಮಾತು ಹೇಳಿದ ತುಳಸಿ ಗೌಡ, ತಮಗೆ ಸಿಕ್ಕ ಸನ್ಮಾನವನ್ನು ಹಾಜಬ್ಬರಿಗೆ ಹಿಂದಿರುಗಿಸಿ, ಸನ್ಮಾನದ ಮೊತ್ತವನ್ನು ಶಾಲಾಭಿವೃದ್ಧಿಗಾಗಿ ಹಾಜಬ್ಬರ ಕೈಗಿತ್ತರು.

ಅವರು ಶಾಲೆ ಕಟ್ಟಿಸಿದರು, ನಾನೇನು ಮಾಡಿದ್ದೇನೆ?: ಮಾಧ್ಯಮಗಳೊಂದಿಗೆ ಮಾತನಾಡಿದ ತುಳಸಿ ಗೌಡ, ಹಾಜಬ್ಬ ಅವರು ಕಿತ್ತಳೆ ಮಾರಿ ಶಾಲೆ ಕಟ್ಟಿಸಿದ್ದಾರೆ. ಇದರಿಂದ ಎಲ್ಲರಿಗೂ ಸಹಾಯವಾಗಿದೆ. ಆದರೆ ನಾನು ಅಂಥದ್ದೇನೂ ಮಾಡಿಲ್ಲ ಎಂದು ಮುಗ್ಧತೆಯ ಮಾತುಗಳನ್ನಾಡಿದರು. ಶಾಲೆ ನೋಡಿ ಬಹಳ ಖುಷಿಯಾಯಿತು. ಇಷ್ಟೆಲ್ಲ ಮಾಡಿದರೂ ಅವರು ಈಗಲೂ ಕುಳಿತುಕೊಳ್ಳದೆ ಓಡಾಡಿಕೊಂಡೇ ಇರುತ್ತಾರೆ. ಹಾಜಬ್ಬನವರು ಶಾಲೆ ಕಟ್ಟುವುದಕ್ಕೆ ನನ್ನ ಕೈಲಾದಷ್ಟು ನೆರವು ಕೊಟ್ಟಿದ್ದೇನೆ. ಸ್ಥಳೀಯರಾದ ನೀವು ಕೂಡ ನಿಮ್ಮಿಂದಾದ ಸಹಾಯ ಮಾಡಿ. ಅವರ ಪದವಿಪೂರ್ವ ಕಾಲೇಜು ನಿರ್ಮಾಣ ಕನಸು ಈಡೇರಬೇಕು. ಅದಕ್ಕಾಗಿ ಎಲ್ಲರೂ ಸಹಕರಿಸಬೇಕು. ನಾವಾದರೂ ದೂರವಿದ್ದೇವೆ. ಆದರೆ ನೀವು ಹತ್ತಿರವಿದ್ದೀರಿ, ಅವರೊಂದಿಗೆ ಕೈಜೋಡಿಸಿ. ನಾನೂ ಸರ್ಕಾರಕ್ಕೆ ಒತ್ತಾಯ ಮಾಡುತ್ತೇನೆ. ನನ್ನೊಂದಿಗೆ ಅವರಿಗೂ ಪದ್ಮಶ್ರೀ ಸಿಕ್ಕಿರುವುದು ಖುಷಿಯಾಗಿದೆ. ಅಂಕೋಲದಿಂದ ಸರ್ಕಾರಿ ಶಾಲೆ ದೂರದಲ್ಲಿದೆ, ಅದು ಅಂಕೋಲಕ್ಕೆ ಬರಬೇಕೆನ್ನುವುದು ನನ್ನ ಬೇಡಿಕೆ ಎಂದರು.

ಮಕ್ಕಳೊಂದಿಗೆ ಬೆರೆತರು; ಸಾಮಾನ್ಯರಾಗಿದ್ದುಕೊಂಡೆ ಸಾಧನೆ ಮಾಡಿದ ಚೇತನಗಳು ಮಕ್ಕಳೊಂದಿಗೆ ಬೆರೆತರು. ಪದ್ಮ ಪುರಸ್ಕಾರದ ಗೌರವವನ್ನು ಮತ್ತಷ್ಟು ಎತ್ತರಕ್ಕೆ ತೆಗೆದುಕೊಂಡು ಹೋದ ಇಬ್ಬರು ದಿಗ್ಗಜರಿಗೆ ಮತ್ತೊಮ್ಮೆ ಅಭಿನಂದನೆ.

Share this:

  • Share on Facebook (Opens in new window) Facebook
  • Share on X (Opens in new window) X

Like this:

Like Loading...

Related

Discover more from Coastal Times Kannada

Subscribe to get the latest posts sent to your email.

Previous Post

ಮಂಗಳೂರು: ಗ್ಲೋ ಟಚ್ ಟೆಕ್ನಾಲಜೀಸ್ ಮತ್ತು ದಿಯಾ ಸಿಸ್ಟಮ್ಸ್ ಸಿಇಒ ವಿ.ರವಿಚಂದ್ರನ್ ಇನ್ನಿಲ್ಲ .

Next Post

ಮಣಿಪುರದಲ್ಲಿ ಉಗ್ರರಿಂದ ದಾಳಿ, ಸೇನಾ ಕರ್ನಲ್, ಪತ್ನಿ ಮತ್ತು ಪುತ್ರ ಹಾಗೂ ನಾಲ್ವರು ಯೋಧರು ಸೇರಿ 7 ಜನ ಹುತಾತ್ಮ!

Related Posts

ಮಂಗಳೂರು: ಪಿಲಿಕುಳ ಜೈವಿಕ ಉದ್ಯಾನವನದಲ್ಲಿ ಭಾರತೀಯ ಪ್ರಭೇದದ ತೋಳ ‘ಗೀತಾ’ 7 ಮರಿಗಳಿಗೆ ಜನ್ಮ ನೀಡಿದೆ.
ಕರಾವಳಿ

ಮಂಗಳೂರು: ಪಿಲಿಕುಳ ಜೈವಿಕ ಉದ್ಯಾನವನದಲ್ಲಿ ಭಾರತೀಯ ಪ್ರಭೇದದ ತೋಳ ‘ಗೀತಾ’ 7 ಮರಿಗಳಿಗೆ ಜನ್ಮ ನೀಡಿದೆ.

March 19, 2026
30
ಮಹಿಳೆಯರೊಂದಿಗೆ ಅಸಭ್ಯ ವರ್ತನೆ ಮೂಡುಬಿದಿರೆ ಇನ್ಸ್‌ಪೆಕ್ಟರ್ ಸಂದೇಶ್ ಸಸ್ಪೆಂಡ್
ಕರಾವಳಿ

ಮಹಿಳೆಯರೊಂದಿಗೆ ಅಸಭ್ಯ ವರ್ತನೆ ಮೂಡುಬಿದಿರೆ ಇನ್ಸ್‌ಪೆಕ್ಟರ್ ಸಂದೇಶ್ ಸಸ್ಪೆಂಡ್

March 18, 2026
27
Next Post
ಮಣಿಪುರದಲ್ಲಿ ಉಗ್ರರಿಂದ ದಾಳಿ, ಸೇನಾ ಕರ್ನಲ್, ಪತ್ನಿ ಮತ್ತು ಪುತ್ರ ಹಾಗೂ ನಾಲ್ವರು ಯೋಧರು ಸೇರಿ 7 ಜನ ಹುತಾತ್ಮ!

ಮಣಿಪುರದಲ್ಲಿ ಉಗ್ರರಿಂದ ದಾಳಿ, ಸೇನಾ ಕರ್ನಲ್, ಪತ್ನಿ ಮತ್ತು ಪುತ್ರ ಹಾಗೂ ನಾಲ್ವರು ಯೋಧರು ಸೇರಿ 7 ಜನ ಹುತಾತ್ಮ!

Discussion about this post

Recent News

ಬೆಳ್ತಂಗಡಿ: ನೈತಿಕ‌ ಪೊಲೀಸ್ ಗಿರಿ, ಜಾತ್ರೆಗೆ ಬಂದಿದ್ದ ಬಾಲಕನನ್ನು ಅಪಹರಿಸಿ ಹಲ್ಲೆ : ಪ್ರಕರಣ ದಾಖಲು

ಬೆಳ್ತಂಗಡಿ: ನೈತಿಕ‌ ಪೊಲೀಸ್ ಗಿರಿ, ಜಾತ್ರೆಗೆ ಬಂದಿದ್ದ ಬಾಲಕನನ್ನು ಅಪಹರಿಸಿ ಹಲ್ಲೆ : ಪ್ರಕರಣ ದಾಖಲು

March 19, 2026
25
ಉಳ್ಳಾಲ: 9ರ ಹರೆಯದ ಬಾಲಕನಿಗೆ ಅಶ್ಲೀಲ ವೀಡಿಯೋ ತೋರಿಸಿ ಲೈಂಗಿಕ ಕಿರುಕುಳ: ಆರೋಪಿ ಪೊಲೀಸ್ ವಶಕ್ಕೆ

ಉಳ್ಳಾಲ: 9ರ ಹರೆಯದ ಬಾಲಕನಿಗೆ ಅಶ್ಲೀಲ ವೀಡಿಯೋ ತೋರಿಸಿ ಲೈಂಗಿಕ ಕಿರುಕುಳ: ಆರೋಪಿ ಪೊಲೀಸ್ ವಶಕ್ಕೆ

March 19, 2026
41
COASTAL BOX LOGO

CORPORATE OFFICE

KHYATI VISUAL MEDIA
3rd Floor, Shalimar Complex
Kankanady, Mangaluru-575002

Email ID : coastaltimeskannada@gmail.com

Follow Us

ಹೊಸ ಸುದ್ದಿಗಳು

ಬೆಳ್ತಂಗಡಿ: ನೈತಿಕ‌ ಪೊಲೀಸ್ ಗಿರಿ, ಜಾತ್ರೆಗೆ ಬಂದಿದ್ದ ಬಾಲಕನನ್ನು ಅಪಹರಿಸಿ ಹಲ್ಲೆ : ಪ್ರಕರಣ ದಾಖಲು

ಬೆಳ್ತಂಗಡಿ: ನೈತಿಕ‌ ಪೊಲೀಸ್ ಗಿರಿ, ಜಾತ್ರೆಗೆ ಬಂದಿದ್ದ ಬಾಲಕನನ್ನು ಅಪಹರಿಸಿ ಹಲ್ಲೆ : ಪ್ರಕರಣ ದಾಖಲು

March 19, 2026
ಉಳ್ಳಾಲ: 9ರ ಹರೆಯದ ಬಾಲಕನಿಗೆ ಅಶ್ಲೀಲ ವೀಡಿಯೋ ತೋರಿಸಿ ಲೈಂಗಿಕ ಕಿರುಕುಳ: ಆರೋಪಿ ಪೊಲೀಸ್ ವಶಕ್ಕೆ

ಉಳ್ಳಾಲ: 9ರ ಹರೆಯದ ಬಾಲಕನಿಗೆ ಅಶ್ಲೀಲ ವೀಡಿಯೋ ತೋರಿಸಿ ಲೈಂಗಿಕ ಕಿರುಕುಳ: ಆರೋಪಿ ಪೊಲೀಸ್ ವಶಕ್ಕೆ

March 19, 2026
ಮಂಗಳೂರು: ಪಿಲಿಕುಳ ಜೈವಿಕ ಉದ್ಯಾನವನದಲ್ಲಿ ಭಾರತೀಯ ಪ್ರಭೇದದ ತೋಳ ‘ಗೀತಾ’ 7 ಮರಿಗಳಿಗೆ ಜನ್ಮ ನೀಡಿದೆ.

ಮಂಗಳೂರು: ಪಿಲಿಕುಳ ಜೈವಿಕ ಉದ್ಯಾನವನದಲ್ಲಿ ಭಾರತೀಯ ಪ್ರಭೇದದ ತೋಳ ‘ಗೀತಾ’ 7 ಮರಿಗಳಿಗೆ ಜನ್ಮ ನೀಡಿದೆ.

March 19, 2026
  • About
  • Advertise
  • Privacy & Policy
  • Contact

Copyright ©2024. All Rights Reserved. Coastaltimeskannada.com | Design and Developed By Bluechip Infosystem - Contact Us : cc.bcis.blr@gmail.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

%d