• About us
  • Contact us
  • Disclaimer
Wednesday, July 22, 2026
  • Login
Coastal Times Kannada
No Result
View All Result
  • Home
    • ಗ್ಯಾಜೆಟ್
  • ರಾಜ್ಯ
  • ರಾಷ್ಟ್ರೀಯ
  • ರಾಜಕೀಯ
  • ವಿದೇಶಿ ಸುದ್ದಿ
  • ಕರಾವಳಿ
  • ಕ್ರೈಂ ನ್ಯೂಸ್
  • ಕ್ರೀಡೆ
  • ಸಿನಿಮಾ
  • ಆರೋಗ್ಯ
  • ವೆಬ್ ಸ್ಟೊರೀಸ್
Join to Group
  • Home
    • ಗ್ಯಾಜೆಟ್
  • ರಾಜ್ಯ
  • ರಾಷ್ಟ್ರೀಯ
  • ರಾಜಕೀಯ
  • ವಿದೇಶಿ ಸುದ್ದಿ
  • ಕರಾವಳಿ
  • ಕ್ರೈಂ ನ್ಯೂಸ್
  • ಕ್ರೀಡೆ
  • ಸಿನಿಮಾ
  • ಆರೋಗ್ಯ
  • ವೆಬ್ ಸ್ಟೊರೀಸ್
No Result
View All Result
Coastal Times Kannada
No Result
View All Result

ಮಂಗಳೂರಿನಲ್ಲಿ ಮಹಿಳೆಗೆ ಮುಂಬೈ ಪೊಲೀಸ್ ಎಂದು ಬೆದರಿಸಿ ʼಡಿಜಿಟಲ್ ಅರೆಸ್ಟ್ʼ: 1.81 ಕೋಟಿ ರೂ. ವಂಚನೆ

Coastal Times by Coastal Times
November 14, 2025
in ಕ್ರೈಮ್ ನ್ಯೂಸ್
ಮಂಗಳೂರಿನಲ್ಲಿ ಮಹಿಳೆಗೆ ಮುಂಬೈ ಪೊಲೀಸ್ ಎಂದು ಬೆದರಿಸಿ ʼಡಿಜಿಟಲ್ ಅರೆಸ್ಟ್ʼ: 1.81 ಕೋಟಿ ರೂ. ವಂಚನೆ
60
VIEWS
WhatsappTelegramShare on FacebookShare on Twitter

ಮಂಗಳೂರು, ನ.13 : ಡಿಜಿಟಲ್ ಅರೆಸ್ಟ್ ಹೆಸರಿನಲ್ಲಿ ಮಂಗಳೂರಿನಲ್ಲಿ ಮತ್ತೊಬ್ಬ ಹಿರಿಯ ಮಹಿಳೆ ಹಣ ಕಳೆದುಕೊಂಡಿದ್ದಾರೆ. ಇತ್ತೀಚೆಗಷ್ಟೇ ಹಿರಿಯ ಮಹಿಳೆಯೊಬ್ಬರು ಪಕ್ಕದ ಮನೆಯ ಮಹಿಳೆಯಿಂದಾಗಿ ಡಿಜಿಟಲ್ ಅರೆಸ್ಟ್ ನಿಂದ ಹಣ ಕಳೆದುಕೊಳ್ಳುವದರಿಂದ ಸ್ವಲ್ಪದರಲ್ಲೇ ಬಚಾವ್ ಆಗಿದ್ದರು. ಇದೀಗ ಮತ್ತೊಬ್ಬ ಹಿರಿಯ ಮಹಿಳೆ ಡಿಜಿಟಲ್ ಅರೆಸ್ಟ್ ನಲ್ಲಿ ಬರೋಬ್ಬರಿ 1.81 ಕೋಟಿ ಹಣ ಕಳಕೊಂಡಿದ್ದಾರೆ.

ಈ ಬಗ್ಗೆ ಮಂಗಳೂರಿನ ಸೆನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸುಮಾರು 58 ವರ್ಷದ ಮಹಿಳೆಯೊಬ್ಬರಿಗೆ ಅ‌.24 ರಂದು ಅವರ ಮೊಬೈಲಿಗೆ ಅಪರಿಚಿತ ವ್ಯಕ್ತಿ (ಮೊಬೈಲ್ ನಂಬ್ರ- 9381017412) ಕರೆ ಮಾಡಿ ಮುಂಬೈ ಕೊಲಾಬ ಪೊಲೀಸ್ ಠಾಣೆಯಿಂದ ಕರೆ ಮಾಡುವುದಾಗಿ ತಿಳಿಸಿ ಮನಿ ಲಾಂಡರಿಂಗ್ ಕೇಸ್ ಹಾಗೂ ಹ್ಯುಮನ್ ಟ್ರಾಫಿಕಿಂಗ್ ಕೇಸ್ ನಲ್ಲಿ ಕಮಿಷನ್ ತೆಗೆದುಕೊಂಡಿರುವುದಾಗಿ ತಿಳಿಸಿದ್ದಾನೆ. ಅಲ್ಲದೆ, ನೀವು ಸಸ್ಪೆಕ್ಟ್ ಇದ್ದೀರಿ, ತನಿಖೆಯ ಬಗ್ಗೆ ನೀವು ವಿಡಿಯೋ ಕಾಲ್ ನಲ್ಲಿ ಸಹಕರಿಸಬೇಕು ಎಂದು ತಿಳಿಸಿದ್ದಾರೆ.

ಇದರಿಂದ ಭಯಭೀತರಾದ ಮಹಿಳೆಗೆ ವಿಡಿಯೋ ಕಾಲ್ ಮಾಡಿ ಲೆಟರ್ ಬರೆಸಿಕೊಂಡು ವಾಟ್ಸ್‌ಆ್ಯಪ್ ನಂಬ್ರವೊಂದಕ್ಕೆ ಕಳುಹಿಸಿಕೊಡುವಂತೆ ತಿಳಿಸಿದ್ದಾರೆ. ವಿನೋದ್ ರಾಥೋಡ್ ಹಾಗೂ ರಾಜೇಶ್ ಮಿಶ್ರಾ ಎಂಬ ಅಪರಿಚಿತ ವ್ಯಕ್ತಿಗಳು ಪೊಲೀಸ್ ಅಕಾರಿಗಳೆಂದು ಪರಿಚಯಿಸಿ ವಾಟ್ಸಪ್ ವಿಡಿಯೋ ಕರೆ ಮಾಡಿ ಬ್ಯಾಂಕ್ ಖಾತೆಗಳ ಪರಿಶೀಲನೆ ಮಾಡಬೇಕು ಎಂದು ತಿಳಿಸಿದ್ದಾರೆ. ಇದಾದ ಬಳಿಕ ನಮ್ಮಲ್ಲಿ ಹಣವನ್ನು ನೀಡಿದರೆ, ಪ್ರಕರಣ ಇತ್ಯರ್ಥವಾದ ಬಳಿಕ ವಾಪಾಸ್ ನೀಡುತ್ತೇವೆ ಎಂದು ನಂಬಿಸಿದ್ದಾರೆ. ಇದನ್ನು ನಂಬಿದ ಮಹಿಳೆ ಅ.28ರಿಂದ ನ.11ರವರೆಗೆ ಹಂತಹಂತವಾಗಿ 1,81,50,000ರೂ. ಆರ್ಟಿಜಿಎಸ್ ಮೂಲಕ ಹಣ ವರ್ಗಾಯಿಸಿದ್ದಾರೆ. ಹಣ ನೀಡಿದ ಬಳಿಕ ಆರೋಪಿಗಳು ಸಂಪರ್ಕ ಕಡಿತಗೊಳಿಸಿದ್ದು ಮಹಿಳೆಗೆ ಮೋಸದ ಅರಿವಾಗಿ ಪೊಲೀಸ್ ದೂರು ನೀಡಿದ್ದಾರೆ. ಮಂಗಳೂರಿನಲ್ಲಿ ಹಿರಿಯ ನಾಗರಿಕರನ್ನು ಡಿಜಿಟಲ್ ಅರೆಸ್ಟ್ ಹೆಸರಲ್ಲಿ ಯಾಮಾರಿಸುವುದು ಹೆಚ್ಚುತ್ತಿದ್ದು ಪೊಲೀಸರು ಕೂಡ ಅಸಹಾಯಕತೆ ತೋರಿದ್ದಾರೆ. ವಂಚನೆಗೊಳಗಾದ ಮಹಿಳೆ ಸೈಬರ್ ಠಾಣೆಗೆ ದೂರು ನೀಡಿದ್ದಾರೆ.

Share this:

  • Share on Facebook (Opens in new window) Facebook
  • Share on X (Opens in new window) X

Like this:

Like Loading…

Related

Discover more from Coastal Times Kannada

Subscribe to get the latest posts sent to your email.

Previous Post

ನ.16ರಂದು ಕಟೀಲು 7ನೇ ಮೇಳದ ಪದಾರ್ಪಣೆ, ನ.15ರಂದು ಸಂಜೆ ಬಜಪೆ ಪೇಟೆಯಿಂದ ದೇವಸ್ಥಾನದ ವರೆಗೆ ಮೆರವಣಿಗೆ

Next Post

ನವಮಂಗಳೂರು ಬಂದರ್‌ನ ಸುವರ್ಣ ಮಹೋತ್ಸವ: 1,507 ಕೋಟಿ ರೂ.ಗಳ 20 ಯೋಜನೆಗಳಿಗೆ ಚಾಲನೆ, ದೇಶದಲ್ಲಿ ಹಡಗು ನಿರ್ಮಾಣದ ಕ್ಲಸ್ಟರ್ ಅಭಿವೃದ್ಧಿ; ಕೇಂದ್ರ ಸಚಿವ ಸರ್ಬಾನಂದ ಸೋನಾವಾಲ್

Related Posts

ಮಂಗಳೂರಿನಲ್ಲಿ ಅಕೌಂಟ್ ದಂಧೆ ಬಯಲಿಗೆ: ಯುವಕನ ಅಕೌಂಟ್ ಬಳಸಿ ಕೋಟಿ ಕೋಟಿ ಸೈಬರ್ ವಂಚನೆ: ಪ್ರಕರಣ ದಾಖಲು
ಕ್ರೈಮ್ ನ್ಯೂಸ್

ಮಂಗಳೂರಿನಲ್ಲಿ ಅಕೌಂಟ್ ದಂಧೆ ಬಯಲಿಗೆ: ಯುವಕನ ಅಕೌಂಟ್ ಬಳಸಿ ಕೋಟಿ ಕೋಟಿ ಸೈಬರ್ ವಂಚನೆ: ಪ್ರಕರಣ ದಾಖಲು

July 22, 2026
21
ಮಂತ್ರಾಲಯಕ್ಕೆ ತೆರಳುತ್ತಿದ್ದ ವೇಳೆ ನಿಯಂತ್ರಣ ತಪ್ಪಿ ಕಾರು ಡಿವೈಡರ್ ಗೆ ಡಿಕ್ಕಿ, ಮಂಗಳೂರಿನ ಹಾಪ್‌ಕಾಮ್ಸ್ ಜಿಎಂ ರವಿ ಶೆಟ್ಟಿ ಸ್ಥಳದಲ್ಲೇ ಸಾವು
ಕ್ರೈಮ್ ನ್ಯೂಸ್

ಮಂತ್ರಾಲಯಕ್ಕೆ ತೆರಳುತ್ತಿದ್ದ ವೇಳೆ ನಿಯಂತ್ರಣ ತಪ್ಪಿ ಕಾರು ಡಿವೈಡರ್ ಗೆ ಡಿಕ್ಕಿ, ಮಂಗಳೂರಿನ ಹಾಪ್‌ಕಾಮ್ಸ್ ಜಿಎಂ ರವಿ ಶೆಟ್ಟಿ ಸ್ಥಳದಲ್ಲೇ ಸಾವು

July 21, 2026
75
Next Post
ನವಮಂಗಳೂರು ಬಂದರ್‌ನ ಸುವರ್ಣ ಮಹೋತ್ಸವ: 1,507 ಕೋಟಿ ರೂ.ಗಳ 20 ಯೋಜನೆಗಳಿಗೆ ಚಾಲನೆ, ದೇಶದಲ್ಲಿ ಹಡಗು ನಿರ್ಮಾಣದ ಕ್ಲಸ್ಟರ್ ಅಭಿವೃದ್ಧಿ; ಕೇಂದ್ರ ಸಚಿವ ಸರ್ಬಾನಂದ ಸೋನಾವಾಲ್

ನವಮಂಗಳೂರು ಬಂದರ್‌ನ ಸುವರ್ಣ ಮಹೋತ್ಸವ: 1,507 ಕೋಟಿ ರೂ.ಗಳ 20 ಯೋಜನೆಗಳಿಗೆ ಚಾಲನೆ, ದೇಶದಲ್ಲಿ ಹಡಗು ನಿರ್ಮಾಣದ ಕ್ಲಸ್ಟರ್ ಅಭಿವೃದ್ಧಿ; ಕೇಂದ್ರ ಸಚಿವ ಸರ್ಬಾನಂದ ಸೋನಾವಾಲ್

Discussion about this post

Recent News

ಆಗಸ್ಟ್ 8, 9; ಮಂಗಳೂರಿನಲ್ಲಿ ಉಚಿತ ಕೃತಕ ಕೈ-ಕಾಲು ಜೋಡಣಾ ಶಿಬಿರ, ಅರ್ಹ ಫಲಾನುಭವಿಗಳಿಗೆ ಹೆಸರು ನೋಂದಾಯಿಸಲು ಮನವಿ

ಆಗಸ್ಟ್ 8, 9; ಮಂಗಳೂರಿನಲ್ಲಿ ಉಚಿತ ಕೃತಕ ಕೈ-ಕಾಲು ಜೋಡಣಾ ಶಿಬಿರ, ಅರ್ಹ ಫಲಾನುಭವಿಗಳಿಗೆ ಹೆಸರು ನೋಂದಾಯಿಸಲು ಮನವಿ

July 22, 2026
11
ಮಂಗಳೂರಿನಲ್ಲಿ ಅಕೌಂಟ್ ದಂಧೆ ಬಯಲಿಗೆ: ಯುವಕನ ಅಕೌಂಟ್ ಬಳಸಿ ಕೋಟಿ ಕೋಟಿ ಸೈಬರ್ ವಂಚನೆ: ಪ್ರಕರಣ ದಾಖಲು

ಮಂಗಳೂರಿನಲ್ಲಿ ಅಕೌಂಟ್ ದಂಧೆ ಬಯಲಿಗೆ: ಯುವಕನ ಅಕೌಂಟ್ ಬಳಸಿ ಕೋಟಿ ಕೋಟಿ ಸೈಬರ್ ವಂಚನೆ: ಪ್ರಕರಣ ದಾಖಲು

July 22, 2026
21
COASTAL BOX LOGO

CORPORATE OFFICE

KHYATI VISUAL MEDIA
3rd Floor, Shalimar Complex
Kankanady, Mangaluru-575002

Email ID : coastaltimeskannada@gmail.com

Follow Us

ಹೊಸ ಸುದ್ದಿಗಳು

ಆಗಸ್ಟ್ 8, 9; ಮಂಗಳೂರಿನಲ್ಲಿ ಉಚಿತ ಕೃತಕ ಕೈ-ಕಾಲು ಜೋಡಣಾ ಶಿಬಿರ, ಅರ್ಹ ಫಲಾನುಭವಿಗಳಿಗೆ ಹೆಸರು ನೋಂದಾಯಿಸಲು ಮನವಿ

ಆಗಸ್ಟ್ 8, 9; ಮಂಗಳೂರಿನಲ್ಲಿ ಉಚಿತ ಕೃತಕ ಕೈ-ಕಾಲು ಜೋಡಣಾ ಶಿಬಿರ, ಅರ್ಹ ಫಲಾನುಭವಿಗಳಿಗೆ ಹೆಸರು ನೋಂದಾಯಿಸಲು ಮನವಿ

July 22, 2026
ಮಂಗಳೂರಿನಲ್ಲಿ ಅಕೌಂಟ್ ದಂಧೆ ಬಯಲಿಗೆ: ಯುವಕನ ಅಕೌಂಟ್ ಬಳಸಿ ಕೋಟಿ ಕೋಟಿ ಸೈಬರ್ ವಂಚನೆ: ಪ್ರಕರಣ ದಾಖಲು

ಮಂಗಳೂರಿನಲ್ಲಿ ಅಕೌಂಟ್ ದಂಧೆ ಬಯಲಿಗೆ: ಯುವಕನ ಅಕೌಂಟ್ ಬಳಸಿ ಕೋಟಿ ಕೋಟಿ ಸೈಬರ್ ವಂಚನೆ: ಪ್ರಕರಣ ದಾಖಲು

July 22, 2026
ಮಂತ್ರಾಲಯಕ್ಕೆ ತೆರಳುತ್ತಿದ್ದ ವೇಳೆ ನಿಯಂತ್ರಣ ತಪ್ಪಿ ಕಾರು ಡಿವೈಡರ್ ಗೆ ಡಿಕ್ಕಿ, ಮಂಗಳೂರಿನ ಹಾಪ್‌ಕಾಮ್ಸ್ ಜಿಎಂ ರವಿ ಶೆಟ್ಟಿ ಸ್ಥಳದಲ್ಲೇ ಸಾವು

ಮಂತ್ರಾಲಯಕ್ಕೆ ತೆರಳುತ್ತಿದ್ದ ವೇಳೆ ನಿಯಂತ್ರಣ ತಪ್ಪಿ ಕಾರು ಡಿವೈಡರ್ ಗೆ ಡಿಕ್ಕಿ, ಮಂಗಳೂರಿನ ಹಾಪ್‌ಕಾಮ್ಸ್ ಜಿಎಂ ರವಿ ಶೆಟ್ಟಿ ಸ್ಥಳದಲ್ಲೇ ಸಾವು

July 21, 2026
  • About
  • Advertise
  • Privacy & Policy
  • Contact

Copyright ©2024. All Rights Reserved. Coastaltimeskannada.com | Design and Developed By Bluechip Infosystem - Contact Us : cc.bcis.blr@gmail.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

%d