• About us
  • Contact us
  • Disclaimer
Friday, July 17, 2026
  • Login
Coastal Times Kannada
No Result
View All Result
  • Home
    • ಗ್ಯಾಜೆಟ್
  • ರಾಜ್ಯ
  • ರಾಷ್ಟ್ರೀಯ
  • ರಾಜಕೀಯ
  • ವಿದೇಶಿ ಸುದ್ದಿ
  • ಕರಾವಳಿ
  • ಕ್ರೈಂ ನ್ಯೂಸ್
  • ಕ್ರೀಡೆ
  • ಸಿನಿಮಾ
  • ಆರೋಗ್ಯ
  • ವೆಬ್ ಸ್ಟೊರೀಸ್
Join to Group
  • Home
    • ಗ್ಯಾಜೆಟ್
  • ರಾಜ್ಯ
  • ರಾಷ್ಟ್ರೀಯ
  • ರಾಜಕೀಯ
  • ವಿದೇಶಿ ಸುದ್ದಿ
  • ಕರಾವಳಿ
  • ಕ್ರೈಂ ನ್ಯೂಸ್
  • ಕ್ರೀಡೆ
  • ಸಿನಿಮಾ
  • ಆರೋಗ್ಯ
  • ವೆಬ್ ಸ್ಟೊರೀಸ್
No Result
View All Result
Coastal Times Kannada
No Result
View All Result

ವಿಚಾರಣೆ ನೆಪದಲ್ಲಿ ವಕೀಲೆಗೆ ಕಿರುಕುಳ; ಬೆತ್ತಲೆಗೊಳಿಸಿ ಹಿಂಸೆ ನೀಡಿದ್ದ ಡಿವೈಎಸ್ಪಿ ಕನಕಲಕ್ಷ್ಮಿ ಬಂಧನ

Coastal Times by Coastal Times
March 15, 2025
in ಕೋಸ್ಟಾಲ್ ಟೈಮ್ಸ್ ವಿಶೇಷ
ವಿಚಾರಣೆ ನೆಪದಲ್ಲಿ ವಕೀಲೆಗೆ ಕಿರುಕುಳ; ಬೆತ್ತಲೆಗೊಳಿಸಿ ಹಿಂಸೆ ನೀಡಿದ್ದ ಡಿವೈಎಸ್ಪಿ ಕನಕಲಕ್ಷ್ಮಿ ಬಂಧನ
73
VIEWS
WhatsappTelegramShare on FacebookShare on Twitter

ಬೆಂಗಳೂರು: ವಕೀಲೆ, ಉದ್ಯಮಿ ಎಸ್‌. ಜೀವಾ ಆತ್ಮಹತ್ಯೆಗೆ ಪ್ರಚೋದಿಸಿ ಸಾವಿಗೆ ಕಾರಣವಾಗಿದ್ದ ಸಿಐಡಿ ಡಿವೈಎಸ್‌ಪಿ ಬಿ.ಎಂ. ಕನಕಲಕ್ಷ್ಮಿ ಪರಪ್ಪನ ಅಗ್ರಹಾರ ಜೈಲು ಸೇರಿದ್ದಾರೆ. ಜೀವಾ ಆತ್ಮಹತ್ಯೆ ಪ್ರಕರಣದ ಎಸ್‌ಐಟಿ ಮುಖ್ಯ ತನಿಖಾಧಿಕಾರಿ ಸುಧೀರ್‌ ಎಂ. ಹೆಗಡೆ ನೇತತ್ವದ ತಂಡ ಮಂಗಳವಾರ ಆರೋಪಿ ಡಿವೈಎಸ್‌ಪಿ ಕನಕಲಕ್ಷ್ಮಿ ಅವರನ್ನು ಬಂಧಿಸಿ ಲೋಕಾಯುಕ್ತ ವಿಶೇಷ ನ್ಯಾಯಾಲಯದ ಮುಂದೆ ಹಾಜರುಪಡಿಸಿದೆ.

ಬನಶಂಕರಿ ಠಾಣಾ ವ್ಯಾಪ್ತಿಯ ರಾಘವೇಂದ್ರ ಲೇಔಟ್‌ನ ಮನೆಯಲ್ಲಿ ಮರಣ ಪತ್ರ ಬರೆದಿಟ್ಟು ನ.22ರಂದು ಜೀವಾ ಆತ್ಮಹತ್ಯೆ ಮಾಡಿಕೊಂಡಿದ್ದರು. ಆತ್ಮಹತ್ಯೆಗೂ ಮುನ್ನ ಜೀವಾ ಬರೆದಿಟ್ಟಿದ್ದ ಮರಣ ಪತ್ರ ಆಧರಿಸಿ, ಅವರ ಸಹೋದರಿ ಸಂಗೀತಾ ಅವರು ಬನಶಂಕರಿ ಠಾಣೆಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ತನಿಖೆ ಆರಂಭಿಸಿದ್ದರು. ಅದಾದ ಮೇಲೆ ಪ್ರಕರಣವನ್ನು ಸಿಸಿಬಿಗೆ ವರ್ಗಾವಣೆ ಮಾಡಲಾಗಿತ್ತು. ನಂತರ ಹೈಕೋರ್ಟ್‌, ಸಿಬಿಐ ಅಧಿಕಾರಿಗಳನ್ನೂ ಒಳಗೊಂಡಂತೆ ಎಸ್‌ಐಟಿ ರಚಿಸಿತ್ತು. ಅವರು ತನಿಖೆ ಮುಂದುವರಿಸಿದ್ದರು.

‘ಪ್ರಕರಣದ ಸಂಬಂಧ ವಿಚಾರಣೆಗೆ ಬರುವಂತೆ ಕನಕಲಕ್ಷ್ಮಿ ಅವರಿಗೆ ನೋಟಿಸ್‌ ಜಾರಿ ಮಾಡಲಾಗಿತ್ತು. ಮಂಗಳವಾರ ವಿಚಾರಣೆಗೆ ಬಂದಿದ್ದರು. ವಿಚಾರಣೆ ವೇಳೆ ವಶಕ್ಕೆ ಪಡೆದು ಬಂಧಿಸಲಾಯಿತು’ ಎಂದು ಎಸ್‌ಐಟಿ ಮೂಲಗಳು ತಿಳಿಸಿವೆ.

‘ಕರ್ನಾಟಕ ಭೋವಿ ನಿಗಮ ಹಗರಣದ ಸಂಬಂಧ ವಿಚಾರಣೆ ವೇಳೆ ವಿವಸ್ತ್ರಗೊಳಿಸಿ ರೂ.25 ಲಕ್ಷಕ್ಕೆ ಬೇಡಿಕೆ ಇಟ್ಟಿದ್ದರು. ಇದರಿಂದ ಮಾನಸಿಕವಾಗಿ ನೊಂದು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ’ ಎಂಬುದಾಗಿ ಜೀವಾ ಅವರು ಮರಣ ಪತ್ರದಲ್ಲಿ ಉಲ್ಲೇಖಿಸಿದ್ದರು. 13 ಪುಟಗಳ ಮರಣ ಪತ್ರ ಬರೆದಿಟ್ಟಿದ್ದರು. ಮರಣ ಪತ್ರವನ್ನು ಪೊಲೀಸರು ವಶಕ್ಕೆ ಪಡೆದು ಪರಿಶೀಲನೆ ನಡೆಸಿದ್ದರು. ಅಲ್ಲದೇ ಮರಣ ಪತ್ರದ ನೈಜತೆ ತಿಳಿದುಕೊಳ್ಳಲು ಜೀವಾ ಅವರ ಕೈಬರಹವಿದ್ದ ಪತ್ರ ಹಾಗೂ ಮರಣ ಪತ್ರ ಎರಡನ್ನೂ ತನಿಖಾಧಿಕಾರಿಗಳು ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ (ಎಫ್‌ಎಸ್ಎಲ್‌) ರವಾನೆ ಮಾಡಿದ್ದರು.

ಏನಿದು ಹಗರಣ?: ಬಿಜೆಪಿ ಸರ್ಕಾರದ ಅವಧಿಯಲ್ಲಿ ಭೋವಿ ನಿಗಮದಲ್ಲಿ ನಡೆದಿದ್ದ ಅಕ್ರಮ ಪ್ರಕರಣದ ತನಿಖೆಯನ್ನು ಕಾಂಗ್ರೆಸ್​ ಸರ್ಕಾರವು ಸಿಐಡಿ ತನಿಖೆಗೆ ವಹಿಸಿತ್ತು. ಸಿಐಡಿ ಡಿವೈಎಸ್‌ಪಿ ಕನಕಲಕ್ಷ್ಮಿ ಅವರು ತನಿಖಾಧಿಕಾರಿ ಆಗಿದ್ದರು. 2018ರಿಂದ 2024ರವರೆಗೆ ಐದು ವರ್ಷಗಳಲ್ಲಿ ಸುಮಾರು ರೂ.90 ಕೋಟಿಗೂ ಅಧಿಕ ಮೊತ್ತದ ಅಕ್ರಮ ನಡೆದಿರುವುದು ತನಿಖೆಯಿಂದ ದೃಢಪಟ್ಟಿದೆ ಎಂದು ಸಿಐಡಿ ಹೇಳಿತ್ತು.

ನಿಗಮದ ಮಾಜಿ ಪ್ರಧಾನ ವ್ಯವಸ್ಥಾಪಕ ಬಿ.ಕೆ.ನಾಗರಾಜಪ್ಪ ಮನೆಯಲ್ಲಿ, ಉದ್ಯಮಿಯೂ ಆಗಿದ್ದ ವಕೀಲೆ ಜೀವಾ ಹಾಗೂ ಆಕೆಯ ಸಹೋದರಿ ಸಂಗೀತಾ ಬಾಡಿಗೆಗೆ ಇದ್ದರು. ಇದೇ ಮನೆಯನ್ನೇ ತಮ್ಮ ಸಹೋದರಿ ಸಂಗೀತಾ ಒಡೆತನದ ಹರ್ನಿತಾ ಕ್ರಿಯೇಷನ್ಸ್ ಕಂಪನಿಯ ಕಚೇರಿ ಎಂದು ಹೇಳಿಕೊಂಡು ಜೀವಾ ಹಣ ವರ್ಗಾವಣೆ ಮಾಡಿಕೊಂಡಿದ್ದರು ಎಂಬುದನ್ನು ತನಿಖಾ ತಂಡ ಪತ್ತೆ ಹಚ್ಚಿತ್ತು. ಅದಾದ ಮೇಲೆ ಜೀವಾ ಅವರನ್ನು ವಿಚಾರಣೆಗೆ ಕರೆಸಿ ಕಿರುಕುಳ ನೀಡಲಾಗಿತ್ತು ಎಂಬ ಆರೋಪವಿತ್ತು ಎಂದು ಮೂಲಗಳು ಹೇಳಿವೆ.

ಕನಕಲಕ್ಷ್ಮಿ ವಿರುದ್ಧ ಭ್ರಷ್ಟಾಚಾರ ತಡೆ ಕಾಯ್ದೆಯ ಸೆಕ್ಷನ್ 7 (ಎ) ಮತ್ತು ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ 108ರ ಅಡಿಯಲ್ಲಿ ಜೀವಾ ಅವರ ಸಹೋದರಿ ಸಂಗೀತಾ ನೀಡಿದ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಾಗಿತ್ತು.

← Back

Thank you for your response. ✨

← Back

Thank you for your response. ✨

Share this:

  • Share on Facebook (Opens in new window) Facebook
  • Share on X (Opens in new window) X

Like this:

Like Loading…

Related

Discover more from Coastal Times Kannada

Subscribe to get the latest posts sent to your email.

Previous Post

ಬಿಜೈ: ಕಾರು ಢಿಕ್ಕಿ ಹೊಡೆಸಿ ಕೊಲೆಯತ್ನ ಪ್ರಕರಣ: ಆರೋಪಿಗೆ ನ್ಯಾಯಾಂಗ ಬಂಧನ

Next Post

ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಬಹುಭಾಷಾ ನಟ,ಇಂಡಿಯನ್​ ಮೈಕಲ್​ ಜಾಕ್ಸನ್​ ಪ್ರಭುದೇವ್ ಭೇಟಿ

Related Posts

ಯೋಗೇಶ್ ಗೌಡ ಕೊಲೆ ಪ್ರಕರಣ ; ಶಾಸಕ ವಿನಯ್ ಕುಲಕರ್ಣಿ ಸೇರಿ ಒಟ್ಟು 16 ಮಂದಿ ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ..!
ಕೋಸ್ಟಾಲ್ ಟೈಮ್ಸ್ ವಿಶೇಷ

ಯೋಗೇಶ್ ಗೌಡ ಕೊಲೆ ಪ್ರಕರಣ ; ಶಾಸಕ ವಿನಯ್ ಕುಲಕರ್ಣಿ ಸೇರಿ ಒಟ್ಟು 16 ಮಂದಿ ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ..!

April 18, 2026
23
ಮಂಗಳೂರು: ಭೂ ವ್ಯವಹಾರದಲ್ಲಿ ಮೋಸ ಮಾಡಿದ ಸಿಟ್ಟಿನಲ್ಲಿ ಇನ್ನೋವಾ ಕಾರಿನಲ್ಲಿ ಸ್ಕೂಟರಿಗೆ ಡಿಕ್ಕಿಯಾಗಿಸಿ ಕೊಲೆಯತ್ನ; ಸಿಸಿಟಿವಿಯಲ್ಲಿ ಸೆರೆ
ಕೋಸ್ಟಾಲ್ ಟೈಮ್ಸ್ ವಿಶೇಷ

ಮಂಗಳೂರು: ಭೂ ವ್ಯವಹಾರದಲ್ಲಿ ಮೋಸ ಮಾಡಿದ ಸಿಟ್ಟಿನಲ್ಲಿ ಇನ್ನೋವಾ ಕಾರಿನಲ್ಲಿ ಸ್ಕೂಟರಿಗೆ ಡಿಕ್ಕಿಯಾಗಿಸಿ ಕೊಲೆಯತ್ನ; ಸಿಸಿಟಿವಿಯಲ್ಲಿ ಸೆರೆ

March 18, 2026
197
Next Post
ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಬಹುಭಾಷಾ ನಟ,ಇಂಡಿಯನ್​ ಮೈಕಲ್​ ಜಾಕ್ಸನ್​ ಪ್ರಭುದೇವ್ ಭೇಟಿ

ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಬಹುಭಾಷಾ ನಟ,ಇಂಡಿಯನ್​ ಮೈಕಲ್​ ಜಾಕ್ಸನ್​ ಪ್ರಭುದೇವ್ ಭೇಟಿ

Discussion about this post

Recent News

FIFA World Cup 2026: ಕೊನೆಯ ಕ್ಷಣದಲ್ಲಿ ಅರ್ಜೆಂಟೀನಾ ಎರಡು ಮ್ಯಾಜಿಕ್‌ ಗೋಲು : ಫೈನಲ್‌ ಪ್ರವೇಶಿಸಿ ಮೆಸ್ಸಿ ಪಡೆ

FIFA World Cup 2026: ಕೊನೆಯ ಕ್ಷಣದಲ್ಲಿ ಅರ್ಜೆಂಟೀನಾ ಎರಡು ಮ್ಯಾಜಿಕ್‌ ಗೋಲು : ಫೈನಲ್‌ ಪ್ರವೇಶಿಸಿ ಮೆಸ್ಸಿ ಪಡೆ

July 16, 2026
29
FIFA World Cup 2026: ಫ್ರಾನ್ಸ್ ವಿರುದ್ಧ 2-0 ಅಂತರದ ಗೆದ್ದು ವಿಶ್ವಕಪ್ ಫೈನಲ್‌ ಪ್ರವೇಶಿಸಿದ ಸ್ಪೇನ್​

FIFA World Cup 2026: ಫ್ರಾನ್ಸ್ ವಿರುದ್ಧ 2-0 ಅಂತರದ ಗೆದ್ದು ವಿಶ್ವಕಪ್ ಫೈನಲ್‌ ಪ್ರವೇಶಿಸಿದ ಸ್ಪೇನ್​

July 15, 2026
34
COASTAL BOX LOGO

CORPORATE OFFICE

KHYATI VISUAL MEDIA
3rd Floor, Shalimar Complex
Kankanady, Mangaluru-575002

Email ID : coastaltimeskannada@gmail.com

Follow Us

ಹೊಸ ಸುದ್ದಿಗಳು

FIFA World Cup 2026: ಕೊನೆಯ ಕ್ಷಣದಲ್ಲಿ ಅರ್ಜೆಂಟೀನಾ ಎರಡು ಮ್ಯಾಜಿಕ್‌ ಗೋಲು : ಫೈನಲ್‌ ಪ್ರವೇಶಿಸಿ ಮೆಸ್ಸಿ ಪಡೆ

FIFA World Cup 2026: ಕೊನೆಯ ಕ್ಷಣದಲ್ಲಿ ಅರ್ಜೆಂಟೀನಾ ಎರಡು ಮ್ಯಾಜಿಕ್‌ ಗೋಲು : ಫೈನಲ್‌ ಪ್ರವೇಶಿಸಿ ಮೆಸ್ಸಿ ಪಡೆ

July 16, 2026
FIFA World Cup 2026: ಫ್ರಾನ್ಸ್ ವಿರುದ್ಧ 2-0 ಅಂತರದ ಗೆದ್ದು ವಿಶ್ವಕಪ್ ಫೈನಲ್‌ ಪ್ರವೇಶಿಸಿದ ಸ್ಪೇನ್​

FIFA World Cup 2026: ಫ್ರಾನ್ಸ್ ವಿರುದ್ಧ 2-0 ಅಂತರದ ಗೆದ್ದು ವಿಶ್ವಕಪ್ ಫೈನಲ್‌ ಪ್ರವೇಶಿಸಿದ ಸ್ಪೇನ್​

July 15, 2026
ಹಾರ್ಮುಜ್ ಜಲಸಂಧಿಯಲ್ಲಿ ದಾಳಿಗೆ ಒಬ್ಬ ಭಾರತೀಯ ಸಿಬ್ಬಂದಿ ಸಾವು, ಆರು ಜನರಿಗೆ ಗಾಯ

ಹಾರ್ಮುಜ್ ಜಲಸಂಧಿಯಲ್ಲಿ ದಾಳಿಗೆ ಒಬ್ಬ ಭಾರತೀಯ ಸಿಬ್ಬಂದಿ ಸಾವು, ಆರು ಜನರಿಗೆ ಗಾಯ

July 15, 2026
  • About
  • Advertise
  • Privacy & Policy
  • Contact

Copyright ©2024. All Rights Reserved. Coastaltimeskannada.com | Design and Developed By Bluechip Infosystem - Contact Us : cc.bcis.blr@gmail.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

%d