• About us
  • Contact us
  • Disclaimer
Sunday, February 8, 2026
  • Login
Coastal Times Kannada
No Result
View All Result
  • Home
    • ಗ್ಯಾಜೆಟ್
  • ರಾಜ್ಯ
  • ರಾಷ್ಟ್ರೀಯ
  • ರಾಜಕೀಯ
  • ವಿದೇಶಿ ಸುದ್ದಿ
  • ಕರಾವಳಿ
  • ಕ್ರೈಂ ನ್ಯೂಸ್
  • ಕ್ರೀಡೆ
  • ಸಿನಿಮಾ
  • ಆರೋಗ್ಯ
  • ವೆಬ್ ಸ್ಟೊರೀಸ್
Join to Group
  • Home
    • ಗ್ಯಾಜೆಟ್
  • ರಾಜ್ಯ
  • ರಾಷ್ಟ್ರೀಯ
  • ರಾಜಕೀಯ
  • ವಿದೇಶಿ ಸುದ್ದಿ
  • ಕರಾವಳಿ
  • ಕ್ರೈಂ ನ್ಯೂಸ್
  • ಕ್ರೀಡೆ
  • ಸಿನಿಮಾ
  • ಆರೋಗ್ಯ
  • ವೆಬ್ ಸ್ಟೊರೀಸ್
No Result
View All Result
Coastal Times Kannada
No Result
View All Result

ಸಿಎಂ ಬೊಮ್ಮಾಯಿಗೆ ರಾಜೀನಾಮೆ ಪತ್ರ ಸಲ್ಲಿಸಿದ ಕೆ.ಎಸ್ ಈಶ್ವರಪ್ಪ

Coastal Times by Coastal Times
April 15, 2022
in ರಾಜ್ಯ
ಸಿಎಂ ಬೊಮ್ಮಾಯಿಗೆ ರಾಜೀನಾಮೆ ಪತ್ರ ಸಲ್ಲಿಸಿದ ಕೆ.ಎಸ್ ಈಶ್ವರಪ್ಪ
41
VIEWS
WhatsappTelegramShare on FacebookShare on Twitter

ಬೆಂಗಳೂರು: ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್‌.ಈಶ್ವರಪ್ಪ ಅವರು ಇಂದು ಸಚಿವ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ. ಬೆಳಗಾವಿಯ ಗುತ್ತಿಗೆದಾರ ಸಂತೋಷ್‌ ಪಾಟೀಲ ಆತ್ಮಹತ್ಯೆ ಪ್ರಕರಣದಲ್ಲಿ ಅವರು ಮೊದಲನೇ ಆರೋಪಿಯಾಗಿದ್ದಾರೆ.

ರಾತ್ರಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಅವರ ಅಧಿಕೃತ ನಿವಾಸದಲ್ಲಿ ಭೇಟಿಯಾದ ಈಶ್ವರಪ್ಪ ರಾಜೀನಾಮೆ ಪತ್ರ ಸಲ್ಲಿಸಿದರು. ಮುಖ್ಯಮಂತ್ರಿ ನಿವಾಸದ ಬಳಿ ಸೇರಿದ್ದ ಈಶ್ವರಪ್ಪ ಅವರ ಅಭಿಮಾನಿಗಳು, ಈಶ್ವರಪ್ಪ ಅವರಿಗೆ ‘ಜಿಂದಾಬಾದ್‌’ ಕೂಗಿದರು.

ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ಬಿಜೆಪಿ ವರಿಷ್ಠರು ನೀಡಿದ್ದ ಸೂಚನೆಯನ್ನು ಕಡೆಗಣಿಸಿ ಶಿವಮೊಗ್ಗದಲ್ಲಿ ಉಳಿದುಕೊಂಡಿದ್ದ ಈಶ್ವರಪ್ಪ, ಪ್ರಾಥಮಿಕ ತನಿಖೆಯ ವರದಿ ಬರುವವರೆಗೂ ಮುಂದುವರಿಯುವುದಾಗಿ ಪಟ್ಟು ಹಿಡಿದಿದ್ದರು. ಕಾಂಗ್ರೆಸ್‌ ಮುಖಂಡರು ವಿಧಾನಸೌಧದ ಮುಂದೆ ಅಹೋರಾತ್ರಿ ಧರಣಿ ಆರಂಭಿಸುತ್ತಿದ್ದಂತೆಯೇ ಪುನಃ ಮಧ್ಯಪ್ರವೇಶ ಮಾಡಿದ ಬಿಜೆಪಿ ವರಿಷ್ಠರು, ತಕ್ಷಣ ರಾಜೀನಾಮೆ ಕೊಡುವಂತೆ ಸಂದೇಶ ರವಾನಿಸಿದರು. ಅದರ ಬೆನ್ನಲ್ಲೇ ಗುರುವಾರ ಸಂಜೆ ಶಿವಮೊಗ್ಗದಲ್ಲಿ ದಿಢೀರ್‌ ಪತ್ರಿಕಾಗೋಷ್ಠಿ ನಡೆಸಿದ ಈಶ್ವರಪ್ಪ ನಿರ್ಧಾರ ಪ್ರಕಟಿಸಿದ್ದರು.

‘ಬಾಕಿ ಬಿಲ್‌ ಪಾವತಿಗೆ ಶೇಕಡ 40ರಷ್ಟು ಲಂಚಕ್ಕೆ ಈಶ್ವರಪ್ಪ ಬೇಡಿಕೆ ಇಟ್ಟಿದ್ದಾರೆ’ ಎಂದು ಆರೋಪಿಸಿದ್ದ ಸಂತೋಷ್‌ ಉಡುಪಿಯ ಲಾಡ್ಜ್‌ ಒಂದರಲ್ಲಿ ಸೋಮವಾರ ಆತ್ಮಹತ್ಯೆ ಮಾಡಿಕೊಂಡಿರುವುದು ಮಂಗಳವಾರ ಬಹಿರಂಗವಾಗಿತ್ತು. ಈಶ್ವರಪ್ಪ ರಾಜೀನಾಮೆಗೆ ಆಗ್ರಹಿಸಿ ವಿರೋಧ ಪಕ್ಷಗಳಾದ ಕಾಂಗ್ರೆಸ್‌, ಎಎಪಿ ಪ್ರತಿಭಟನೆ ಆರಂಭಿಸಿದ್ದವು.

ಸೋಮವಾರ ಅಂಗೀಕಾರ: ‘ಈಶ್ವರಪ್ಪ ತಮ್ಮ ಸಚಿವ ಸ್ಥಾನಕ್ಕೆ ನೀಡಿರುವ ರಾಜೀನಾಮೆಯನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ರಾಜ್ಯಪಾಲರಿಗೆ ಸಲ್ಲಿಕೆ ಮಾಡಲಿದ್ದು, ಗುಜರಾತ್ ಪ್ರವಾಸಕ್ಕೆ ತೆರಳಿರುವ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ಸೋಮವಾರ ರಾಜ್ಯಕ್ಕೆ ಹಿಂದಿರುಗಲಿದ್ದು, ಅಂದೇ ಈಶ್ವರಪ್ಪ ರಾಜೀನಾಮೆ ಅಂಗೀಕಾರ ಸಾಧ್ಯತೆಗಳಿವೆ ಎಂದು ಗೊತ್ತಾಗಿದೆ.

Share this:

  • Click to share on Facebook (Opens in new window) Facebook
  • Click to share on X (Opens in new window) X

Like this:

Like Loading...

Related

Discover more from Coastal Times Kannada

Subscribe to get the latest posts sent to your email.

Previous Post

ಕಪಿಲ್‌ ಶೋನಲ್ಲಿ ಸಿದ್ದು ಜಾಗದಲ್ಲಿ ಇಮ್ರಾನ್‌ರನ್ನು ಕೂರಿಸಬಹುದು: ಮಾಜಿ ಪತ್ನಿ ರೆಹಮ್‌ ಖಾನ್‌

Next Post

ಈಶ್ವರಪ್ಪರನ್ನು ಬಂಧಿಸಿ ತನಿಖೆ ಎದುರಿಸಿ,’ಈಶ್ವರಪ್ಪ ಧರ್ಮಸ್ಥಳದಲ್ಲಿ ಆಣೆ ಪ್ರಮಾಣಕ್ಕೆ ಬರಲಿ’ – ಹಿಂದೂ ಮಹಾಸಭಾ ಆಗ್ರಹ

Related Posts

ಮಾವನ ಮಗನ ಜೊತೆ ನಿಶ್ಚಿತಾರ್ಥ, ಮನೆಯ ಚಾಲಕನ ಜೊತೆ ಓಡಿಹೋದ ಶ್ರೀಮಂತ ಉದ್ಯಮಿಯ ಮಗಳು: ಚೆಲುವಿನ ಚಿತ್ತಾರ ಸಿನಿಮಾ ರೀತಿಯ ನೈಜ ಘಟನೆ
ರಾಜ್ಯ

ಮಾವನ ಮಗನ ಜೊತೆ ನಿಶ್ಚಿತಾರ್ಥ, ಮನೆಯ ಚಾಲಕನ ಜೊತೆ ಓಡಿಹೋದ ಶ್ರೀಮಂತ ಉದ್ಯಮಿಯ ಮಗಳು: ಚೆಲುವಿನ ಚಿತ್ತಾರ ಸಿನಿಮಾ ರೀತಿಯ ನೈಜ ಘಟನೆ

February 2, 2026
130
ಅಕ್ರಮ ಬೆಟ್ಟಿಂಗ್ ಪ್ರಕರಣ; ಕಾಂಗ್ರೆಸ್ ಶಾಸಕ ಕೆ.ಸಿ. ವೀರೇಂದ್ರ ಪಪ್ಪಿ ಅವರಿಗೆ 4 ತಿಂಗಳ ಬಳಿಕ ಷರತ್ತುಬದ್ಧ ಜಾಮೀನು.
ರಾಜ್ಯ

ಅಕ್ರಮ ಬೆಟ್ಟಿಂಗ್ ಪ್ರಕರಣ; ಕಾಂಗ್ರೆಸ್ ಶಾಸಕ ಕೆ.ಸಿ. ವೀರೇಂದ್ರ ಪಪ್ಪಿ ಅವರಿಗೆ 4 ತಿಂಗಳ ಬಳಿಕ ಷರತ್ತುಬದ್ಧ ಜಾಮೀನು.

December 30, 2025
17
Next Post
ಈಶ್ವರಪ್ಪರನ್ನು ಬಂಧಿಸಿ ತನಿಖೆ ಎದುರಿಸಿ,’ಈಶ್ವರಪ್ಪ ಧರ್ಮಸ್ಥಳದಲ್ಲಿ ಆಣೆ ಪ್ರಮಾಣಕ್ಕೆ ಬರಲಿ’ – ಹಿಂದೂ ಮಹಾಸಭಾ ಆಗ್ರಹ

ಈಶ್ವರಪ್ಪರನ್ನು ಬಂಧಿಸಿ ತನಿಖೆ ಎದುರಿಸಿ,'ಈಶ್ವರಪ್ಪ ಧರ್ಮಸ್ಥಳದಲ್ಲಿ ಆಣೆ ಪ್ರಮಾಣಕ್ಕೆ ಬರಲಿ' - ಹಿಂದೂ ಮಹಾಸಭಾ ಆಗ್ರಹ

Discussion about this post

Recent News

ಪುತ್ತೂರಿನಲ್ಲಿ ಒಂದು ಕ್ವಿಂಟಾಲ್ ಗಾಂಜಾ ವಶಕ್ಕೆ ; ಒರಿಸ್ಸಾ ಮೂಲದ ವ್ಯಕ್ತಿ ಸೇರಿ ಬೆಳ್ತಂಗಡಿಯ ಮೂವರು ಆರೋಪಿಗಳ ಬಂಧನ

ಪುತ್ತೂರಿನಲ್ಲಿ ಒಂದು ಕ್ವಿಂಟಾಲ್ ಗಾಂಜಾ ವಶಕ್ಕೆ ; ಒರಿಸ್ಸಾ ಮೂಲದ ವ್ಯಕ್ತಿ ಸೇರಿ ಬೆಳ್ತಂಗಡಿಯ ಮೂವರು ಆರೋಪಿಗಳ ಬಂಧನ

February 8, 2026
28
ಮಂಗಳೂರು: ನೇಪಾಳದಲ್ಲಿ ಕುಳಿತು ವಂಚಿಸುತ್ತಿದ್ದ ಚೀನಾ- ಭಾರತದ 11 ಆರೋಪಿಗಳ ಸೆರೆ, ದಿನಕ್ಕೆ ಒಂದು ಕೋಟಿ ಗಳಿಕೆ, 624 ಬ್ಯಾಂಕ್ ಖಾತೆ ಪತ್ತೆ

ಮಂಗಳೂರು: ನೇಪಾಳದಲ್ಲಿ ಕುಳಿತು ವಂಚಿಸುತ್ತಿದ್ದ ಚೀನಾ- ಭಾರತದ 11 ಆರೋಪಿಗಳ ಸೆರೆ, ದಿನಕ್ಕೆ ಒಂದು ಕೋಟಿ ಗಳಿಕೆ, 624 ಬ್ಯಾಂಕ್ ಖಾತೆ ಪತ್ತೆ

February 6, 2026
84
COASTAL BOX LOGO

CORPORATE OFFICE

KHYATI VISUAL MEDIA
3rd Floor, Shalimar Complex
Kankanady, Mangaluru-575002

Email ID : coastaltimeskannada@gmail.com

Follow Us

ಹೊಸ ಸುದ್ದಿಗಳು

ಪುತ್ತೂರಿನಲ್ಲಿ ಒಂದು ಕ್ವಿಂಟಾಲ್ ಗಾಂಜಾ ವಶಕ್ಕೆ ; ಒರಿಸ್ಸಾ ಮೂಲದ ವ್ಯಕ್ತಿ ಸೇರಿ ಬೆಳ್ತಂಗಡಿಯ ಮೂವರು ಆರೋಪಿಗಳ ಬಂಧನ

ಪುತ್ತೂರಿನಲ್ಲಿ ಒಂದು ಕ್ವಿಂಟಾಲ್ ಗಾಂಜಾ ವಶಕ್ಕೆ ; ಒರಿಸ್ಸಾ ಮೂಲದ ವ್ಯಕ್ತಿ ಸೇರಿ ಬೆಳ್ತಂಗಡಿಯ ಮೂವರು ಆರೋಪಿಗಳ ಬಂಧನ

February 8, 2026
ಮಂಗಳೂರು: ನೇಪಾಳದಲ್ಲಿ ಕುಳಿತು ವಂಚಿಸುತ್ತಿದ್ದ ಚೀನಾ- ಭಾರತದ 11 ಆರೋಪಿಗಳ ಸೆರೆ, ದಿನಕ್ಕೆ ಒಂದು ಕೋಟಿ ಗಳಿಕೆ, 624 ಬ್ಯಾಂಕ್ ಖಾತೆ ಪತ್ತೆ

ಮಂಗಳೂರು: ನೇಪಾಳದಲ್ಲಿ ಕುಳಿತು ವಂಚಿಸುತ್ತಿದ್ದ ಚೀನಾ- ಭಾರತದ 11 ಆರೋಪಿಗಳ ಸೆರೆ, ದಿನಕ್ಕೆ ಒಂದು ಕೋಟಿ ಗಳಿಕೆ, 624 ಬ್ಯಾಂಕ್ ಖಾತೆ ಪತ್ತೆ

February 6, 2026
ನಂತೂರಿನಲ್ಲಿ ಸ್ಕೂಟರ್ ಗೆ ಖಾಸಗಿ ಬಸ್ ಡಿಕ್ಕಿ, ನೆಲಕ್ಕೆ ಬಿದ್ದ ಹಿಂಬದಿ ಸವಾರೆ ಮೇಲೆ ಹರಿದ ಬಸ್, ಯುವತಿ ದಾರುಣ ಸಾವು

ನಂತೂರಿನಲ್ಲಿ ಸ್ಕೂಟರ್ ಗೆ ಖಾಸಗಿ ಬಸ್ ಡಿಕ್ಕಿ, ನೆಲಕ್ಕೆ ಬಿದ್ದ ಹಿಂಬದಿ ಸವಾರೆ ಮೇಲೆ ಹರಿದ ಬಸ್, ಯುವತಿ ದಾರುಣ ಸಾವು

February 5, 2026
  • About
  • Advertise
  • Privacy & Policy
  • Contact

Copyright ©2024. All Rights Reserved. Coastaltimeskannada.com | Design and Developed By Bluechip Infosystem - Contact Us : cc.bcis.blr@gmail.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

%d