• About us
  • Contact us
  • Disclaimer
Friday, October 2, 2026
  • Login
Coastal Times Kannada
No Result
View All Result
  • Home
    • ಗ್ಯಾಜೆಟ್
  • ರಾಜ್ಯ
  • ರಾಷ್ಟ್ರೀಯ
  • ರಾಜಕೀಯ
  • ವಿದೇಶಿ ಸುದ್ದಿ
  • ಕರಾವಳಿ
  • ಕ್ರೈಂ ನ್ಯೂಸ್
  • ಕ್ರೀಡೆ
  • ಸಿನಿಮಾ
  • ಆರೋಗ್ಯ
  • ವೆಬ್ ಸ್ಟೊರೀಸ್
Join to Group
  • Home
    • ಗ್ಯಾಜೆಟ್
  • ರಾಜ್ಯ
  • ರಾಷ್ಟ್ರೀಯ
  • ರಾಜಕೀಯ
  • ವಿದೇಶಿ ಸುದ್ದಿ
  • ಕರಾವಳಿ
  • ಕ್ರೈಂ ನ್ಯೂಸ್
  • ಕ್ರೀಡೆ
  • ಸಿನಿಮಾ
  • ಆರೋಗ್ಯ
  • ವೆಬ್ ಸ್ಟೊರೀಸ್
No Result
View All Result
Coastal Times Kannada
No Result
View All Result

ಸಿಟಿ ಸೆಂಟರ್ ಕೆಎಫ್‌ಸಿಯಲ್ಲಿ 6 ತಿಂಗಳ ಹಿಂದೆ ಪ್ಯಾಕ್ ಮಾಡಿಟ್ಟಿರುವ ಕೊಳೆತ ಚಿಕನ್ ಮಾಂಸವನ್ನು ಪತ್ತೆ ,ಕೆಎಫ್‌ಸಿ ಔಟ್‌ಲೆಟ್ ಗೆ ಬೀಗ ಜಡಿದ ಅಧಿಕಾರಿಗಳು!

Coastal Times by Coastal Times
August 16, 2026
in ಕ್ರೈಮ್ ನ್ಯೂಸ್
ಸಿಟಿ ಸೆಂಟರ್ ಕೆಎಫ್‌ಸಿಯಲ್ಲಿ 6 ತಿಂಗಳ ಹಿಂದೆ ಪ್ಯಾಕ್ ಮಾಡಿಟ್ಟಿರುವ ಕೊಳೆತ ಚಿಕನ್ ಮಾಂಸವನ್ನು ಪತ್ತೆ ,ಕೆಎಫ್‌ಸಿ ಔಟ್‌ಲೆಟ್ ಗೆ ಬೀಗ ಜಡಿದ ಅಧಿಕಾರಿಗಳು!
49
VIEWS
WhatsappTelegramShare on FacebookShare on Twitter

ಮಂಗಳೂರು, ಆ.15: ಮಂಗಳೂರಿನ ಹೆಸರಾಂತ ಸಿಟಿ ಸೆಂಟರ್ ಮಾಲ್ ನಲ್ಲಿರುವ ಕೆಎಫ್ ಸಿ ಚಿಕನ್ ಸೆಂಟರ್ ನಲ್ಲಿ ಕೊಳೆತ ಮಾಂಸದ ಫುಡ್ ಐಟಂ ಕೊಟ್ಟಿದ್ದಾರೆಂಬ ದೂರಿನ ಮೇರೆಗೆ ಆರೋಗ್ಯ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದು ಆರು ತಿಂಗಳ ಹಿಂದೆ ಪ್ಯಾಕ್ ಮಾಡಿಟ್ಟಿರುವ ಕೊಳೆತ ಚಿಕನ್ ಮಾಂಸವನ್ನು ಪತ್ತೆ ಮಾಡಿದ್ದಾರೆ.

ಮಾಜಿ ಮೇಯರ್ ಮತ್ತು ಬಿಜೆಪಿ ನಾಯಕಿ ಕವಿತಾ ಸನಿಲ್ ತಮ್ಮ ಮಗುವಿಗೆ ಸ್ವಿಗ್ಗಿ ಮೂಲಕ ಪೆರಿ-ಪೆರಿ ಚಿಕನ್ ಆರ್ಡರ್ ಮಾಡಿದ್ದರು. ಕೆಎಫ್‌ಸಿ ಪಾರ್ಸೆಲ್ ಬಂದ ನಂತರ, ಅವರ 10 ವರ್ಷದ ಮಗು ಕೋಳಿಯನ್ನು ತಿನ್ನುತ್ತಿದ್ದಾಗ ಮಾಂಸ ಕಪ್ಪು ಬಣ್ಣಕ್ಕೆ ತಿರುಗಿರುವುದನ್ನು ಕಂಡು ಬಂತು. ಅದು ಕೆಟ್ಟ ವಾಸನೆಯನ್ನು ಹೊಂದಿತ್ತು ಎಂದು ವರದಿಯಾಗಿದೆ.

ಬಿಲ್ ಹೊತ್ತುಕೊಂಡು ಕವಿತಾ, ತಕ್ಷಣ ಸಿಟಿ ಸೆಂಟರ್ ಮಾಲ್‌ನಲ್ಲಿರುವ ಕೆಎಫ್‌ಸಿ ಔಟ್‌ಲೆಟ್‌ಗೆ ಹೋಗಿ ಡಿಎಚ್‌ಒ ಮತ್ತು ಇತರ ಆರೋಗ್ಯ ಇಲಾಖೆ ಅಧಿಕಾರಿಗಳನ್ನು ಸ್ಥಳಕ್ಕೆ ಕರೆಸಿದ್ದಾರೆ. ಅವರು ಈ ವಿಷಯವನ್ನು ಉಸ್ತುವಾರಿ ಸಚಿವ ಯುಟಿ ಖಾದರ್ ಅವರ ಗಮನಕ್ಕೂ ತಂದರು. ತಕ್ಷಣ ಅವರು ದ.ಕ ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ. ಖಾದರ್‌ರ ಗಮನಕ್ಕೆ ತಂದಿದ್ದಾರೆ. ಸಚಿವರ ಸೂಚನೆಯಂತೆ ಜಿಲ್ಲಾ ಆರೋಗ್ಯಾಧಿಕಾರಿ ಡಾ. ಎಚ್.ಆರ್ ತಿಮ್ಮಯ್ಯ ಮತ್ತು ಜಿಲ್ಲಾ ಆಹಾರ ಸುರಕ್ಷತಾ ಅಧಿಕಾರಿ ಪ್ರವೀಣ್ ಜಂಟಿಯಾಗಿ ಕೆಎಫ್‌ಸಿಗೆ ದಾಳಿ ಮಾಡಿ ಪರಿಶೀಲನೆ ನಡೆಸಿದ್ದಾರೆ.

ಒಳಗಡೆ ಹೊಕ್ಕು ಪರಿಶೀಲನೆ ನಡೆಸಿದಾಗ ಐದಾರು ತಿಂಗಳ ಹಿಂದೆ ಪ್ಯಾಕ್ ಮಾಡಿರುವ ಚಿಕನ್ ಪತ್ತೆಯಾಗಿದೆ. ಆರಂಭದಲ್ಲಿ ಸಾರಿ ಎನ್ನುತ್ತಲೇ ಆ ರೀತಿ ಏನೂ ಇಲ್ಲ, ಒಂದು ಪಾರ್ಸೆಲ್ ಮಾತ್ರ ಆ ರೀತಿಯಾಗಿದೆ ಎಂದು ಸಮಜಾಯಿಷಿ ಕೊಡುತ್ತಿದ್ದವರು ಬಳಿಕ ಸಪ್ಪಗಾಗಿದ್ದಾರೆ. ಒಳಗಡೆ ಫ್ರೀಜರ್ ನಲ್ಲಿ ಮಾರ್ಚ್ ತಿಂಗಳಲ್ಲಿ ಪ್ಯಾಕ್ ಆಗಿದ್ದ ಚಿಕನ್ ಗಟ್ಟಿಯಾಗಿರುವುದು ಪತ್ತೆಯಾಗಿದೆ. ಅಲ್ಲದೆ, ಒಳಗೆ ಗಬ್ಬು ವಾಸನೆಯೂ ಬರ್ತಾ ಇತ್ತು. ಇದನ್ನು ನೋಡಿದ ಅಧಿಕಾರಿಗಳು ಮತ್ತು ಸಾರ್ವಜನಿಕರು ಗಾಬರಿಗೊಂಡಿದ್ದು ಎಲ್ಲವನ್ನೂ ಹೊರತೆಗೆಸಿ ತಪಾಸಣೆ ನಡೆಸಿದ್ದಾರೆ.

3 ಮಾದರಿಗಳ ಸಂಗ್ರಹ – 4 ತಿಂಗಳ ಹಳೆಯ ಪ್ಯಾಕೆಟ್‌ಗಳು ಪತ್ತೆ: ತಪಾಸಣೆ ವೇಳೆ ಮೇಲ್ನೋಟಕ್ಕೆ ಚಿಕನ್ ಹಾಳಾಗಿರುವುದು ಹಾಗೂ ದುರ್ವಾಸನೆ ಬರುತ್ತಿರುವುದು ಕಂಡುಬಂದಿದೆ. ಸ್ಥಳದಿಂದ ಫ್ರೋಜನ್ ಲೆಗ್ ಪೀಸ್ ಚಿಕನ್ ಮಾದರಿ, ತಾಪಮಾನ ಸಮತೋಲನಗೊಳಿಸಿದ ಚಿಕನ್, ಮಸಾಲೆ ಬೆರೆಸಿದ ಚಿಕನ್ ಸೇರಿದಂತೆ 3 ಬಗೆಯ ಚಿಕನ್ ಸ್ಯಾಂಪಲ್‌ಗಳು ಹಾಗೂ ಚಿಕನ್ ಕರಿಯಲು ಬಳಸುತ್ತಿದ್ದ ಎಣ್ಣೆಯ ಮಾದರಿಗಳನ್ನು ಸಂಗ್ರಹಿಸಿ, ಗುಣಮಟ್ಟ ಮತ್ತು ಬ್ಯಾಕ್ಟೀರಿಯಾ ಪರೀಕ್ಷೆಗಾಗಿ ಆಹಾರ ಪರೀಕ್ಷಾ ಪ್ರಯೋಗಾಲಯಕ್ಕೆ ರವಾನಿಸಲಾಗಿದೆ ಎಂದು ಡಾ.ಪ್ರವೀಣ್ ಕುಮಾರ್ ಸಿ.ಹೆಚ್. ತಿಳಿಸಿದ್ದಾರೆ.

ಕೆಎಫ್ ಸಿಯಲ್ಲಿ ಬೇರೆ ಬೇರೆ ಮಾದರಿಯ ಚಿಕನ್ ಐಟಂಗಳಿಗೆ ವಿಶೇಷ ಆಫರ್ ಗಳಿದ್ದು ಚಿಕನ್ ತಿನ್ನುವುದಕ್ಕಾಗಿಯೇ ಸಾವಿರಾರು ಜನರು ಸಿಟಿ ಸೆಂಟರ್ ಬರುತ್ತಾರೆ.‌ ಆದರೆ ಇಂಥ ಹೆಸರಾಂತ ಫುಡ್ ಕೌಂಟರ್ ನಲ್ಲಿ ಚಿಕನ್ ಪತ್ತೆಯಾಗಿರುವುದು ಮಂಗಳೂರಿನಲ್ಲೂ ಕೊಳೆತ ಚಿಕನ್ ತಿನ್ನಿಸುವವವರಿದ್ದಾರೆಂಬುದು ಖಾತ್ರಿಯಾಗಿದೆ. ಕವಿತಾ ಸನಿಲ್ ಮೂರು ಗಂಟೆಗಳ ಕಾಲ ಅಲ್ಲಿಯೇ ಇದ್ದು ಅಧಿಕಾರಿಗಳ ಮೂಲಕ ಪರಿಶೀಲನೆಗೆ ಒಳಪಡಿಸಿದ್ದಾರೆ.

ನೊಟೀಸ್ ಜಾರಿ, ಡಿಸಿ ನ್ಯಾಯಾಲಯದಲ್ಲಿ ಪ್ರಕರಣ ದಾಖಲು: ನಿಯಮಗಳ ಪ್ರಕಾರ ಸ್ವಚ್ಛತೆ ಕಾಪಾಡಲು ಹಾಗೂ ಹಳಸಿದ ಪದಾರ್ಥಗಳನ್ನು ತೆರವುಗೊಳಿಸಲು ಸೂಚಿಸಲಾಗಿದೆ. ಮಳಿಗೆಗೆ ಅಧಿಕೃತ ನೊಟೀಸ್ ಜಾರಿ ಮಾಡಲಾಗುತ್ತಿದ್ದು, ಅವರ ಉತ್ತರ ಹಾಗೂ ಲ್ಯಾಬ್ ವರದಿ ಬಂದ ಬಳಿಕ ಜಿಲ್ಲಾಧಿಕಾರಿಗಳ (ಅಪರ ಜಿಲ್ಲಾಧಿಕಾರಿ) ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಡಾ.ಪ್ರವೀಣ್ ಕುಮಾರ್ ಸಿ.ಹೆಚ್. ವಿವರಿಸಿದ್ದಾರೆ.

Share this:

  • Share on Facebook (Opens in new window) Facebook
  • Share on X (Opens in new window) X

Like this:

Like Loading…

Related

Discover more from Coastal Times Kannada

Subscribe to get the latest posts sent to your email.

Previous Post

ಡೇವಿಡ್ ಡಿಸೋಜ ಹತ್ಯೆ ಪ್ರಕರಣ: ಸುಪಾರಿ ಕಿಲ್ಲರ್ಸ್ ಗೆ ಹಣಕಾಸು ಪೂರೈಸಿದ್ದ ಇಬ್ಬರು ಆರೋಪಿಗಳ ಬಂಧನ

Next Post

ತುಳುನಾಡಿನಲ್ಲಿ ಶ್ರದ್ಧಾಭಕ್ತಿಯ ನಾಗರಪಂಚಮಿ ಸಂಭ್ರಮ: ಮೂಲಸ್ಥಾನ, ನಾಗಬನಗಳಲ್ಲಿ ಕುಟುಂಬಸ್ಥರಿಂದ ಹಾಲು-ಎಳನೀರು ಸಮರ್ಪಣೆ

Related Posts

AI ಬಳಸಿ ನಕಲಿ ಹಾಲ್‌ಟಿಕೆಟ್ ಸೃಷ್ಟಿಸಿ ಪೊಲೀಸ್ ನೇಮಕಾತಿ ದೈಹಿಕ ಪರೀಕ್ಷೆಗೆ ಹಾಜರಾಗಲು ಯತ್ನ: ಕಡಬ ಮೂಲದ ಯುವಕ ಅರೆಸ್ಟ್​
ಕ್ರೈಮ್ ನ್ಯೂಸ್

AI ಬಳಸಿ ನಕಲಿ ಹಾಲ್‌ಟಿಕೆಟ್ ಸೃಷ್ಟಿಸಿ ಪೊಲೀಸ್ ನೇಮಕಾತಿ ದೈಹಿಕ ಪರೀಕ್ಷೆಗೆ ಹಾಜರಾಗಲು ಯತ್ನ: ಕಡಬ ಮೂಲದ ಯುವಕ ಅರೆಸ್ಟ್​

October 1, 2026
308
ಬಂಟ್ವಾಳ ದಾಸಕೋಡಿಯಲ್ಲಿ ಬಸ್‌ನಿಂದ ಇಳಿದ ಕಾರ್ಮಿಕನಿಗೆ ಕಾರು ಢಿಕ್ಕಿ: ಸ್ಥಳದಲ್ಲೇ ಸಾವು
ಕ್ರೈಮ್ ನ್ಯೂಸ್

ಬಂಟ್ವಾಳ ದಾಸಕೋಡಿಯಲ್ಲಿ ಬಸ್‌ನಿಂದ ಇಳಿದ ಕಾರ್ಮಿಕನಿಗೆ ಕಾರು ಢಿಕ್ಕಿ: ಸ್ಥಳದಲ್ಲೇ ಸಾವು

October 1, 2026
29
Next Post
ತುಳುನಾಡಿನಲ್ಲಿ ಶ್ರದ್ಧಾಭಕ್ತಿಯ ನಾಗರಪಂಚಮಿ ಸಂಭ್ರಮ: ಮೂಲಸ್ಥಾನ, ನಾಗಬನಗಳಲ್ಲಿ ಕುಟುಂಬಸ್ಥರಿಂದ ಹಾಲು-ಎಳನೀರು ಸಮರ್ಪಣೆ

ತುಳುನಾಡಿನಲ್ಲಿ ಶ್ರದ್ಧಾಭಕ್ತಿಯ ನಾಗರಪಂಚಮಿ ಸಂಭ್ರಮ: ಮೂಲಸ್ಥಾನ, ನಾಗಬನಗಳಲ್ಲಿ ಕುಟುಂಬಸ್ಥರಿಂದ ಹಾಲು-ಎಳನೀರು ಸಮರ್ಪಣೆ

Discussion about this post

Recent News

AI ಬಳಸಿ ನಕಲಿ ಹಾಲ್‌ಟಿಕೆಟ್ ಸೃಷ್ಟಿಸಿ ಪೊಲೀಸ್ ನೇಮಕಾತಿ ದೈಹಿಕ ಪರೀಕ್ಷೆಗೆ ಹಾಜರಾಗಲು ಯತ್ನ: ಕಡಬ ಮೂಲದ ಯುವಕ ಅರೆಸ್ಟ್​

AI ಬಳಸಿ ನಕಲಿ ಹಾಲ್‌ಟಿಕೆಟ್ ಸೃಷ್ಟಿಸಿ ಪೊಲೀಸ್ ನೇಮಕಾತಿ ದೈಹಿಕ ಪರೀಕ್ಷೆಗೆ ಹಾಜರಾಗಲು ಯತ್ನ: ಕಡಬ ಮೂಲದ ಯುವಕ ಅರೆಸ್ಟ್​

October 1, 2026
308
ಬಂಟ್ವಾಳ ದಾಸಕೋಡಿಯಲ್ಲಿ ಬಸ್‌ನಿಂದ ಇಳಿದ ಕಾರ್ಮಿಕನಿಗೆ ಕಾರು ಢಿಕ್ಕಿ: ಸ್ಥಳದಲ್ಲೇ ಸಾವು

ಬಂಟ್ವಾಳ ದಾಸಕೋಡಿಯಲ್ಲಿ ಬಸ್‌ನಿಂದ ಇಳಿದ ಕಾರ್ಮಿಕನಿಗೆ ಕಾರು ಢಿಕ್ಕಿ: ಸ್ಥಳದಲ್ಲೇ ಸಾವು

October 1, 2026
29
COASTAL BOX LOGO

CORPORATE OFFICE

KHYATI VISUAL MEDIA
3rd Floor, Shalimar Complex
Kankanady, Mangaluru-575002

Email ID : coastaltimeskannada@gmail.com

Follow Us

ಹೊಸ ಸುದ್ದಿಗಳು

AI ಬಳಸಿ ನಕಲಿ ಹಾಲ್‌ಟಿಕೆಟ್ ಸೃಷ್ಟಿಸಿ ಪೊಲೀಸ್ ನೇಮಕಾತಿ ದೈಹಿಕ ಪರೀಕ್ಷೆಗೆ ಹಾಜರಾಗಲು ಯತ್ನ: ಕಡಬ ಮೂಲದ ಯುವಕ ಅರೆಸ್ಟ್​

AI ಬಳಸಿ ನಕಲಿ ಹಾಲ್‌ಟಿಕೆಟ್ ಸೃಷ್ಟಿಸಿ ಪೊಲೀಸ್ ನೇಮಕಾತಿ ದೈಹಿಕ ಪರೀಕ್ಷೆಗೆ ಹಾಜರಾಗಲು ಯತ್ನ: ಕಡಬ ಮೂಲದ ಯುವಕ ಅರೆಸ್ಟ್​

October 1, 2026
ಬಂಟ್ವಾಳ ದಾಸಕೋಡಿಯಲ್ಲಿ ಬಸ್‌ನಿಂದ ಇಳಿದ ಕಾರ್ಮಿಕನಿಗೆ ಕಾರು ಢಿಕ್ಕಿ: ಸ್ಥಳದಲ್ಲೇ ಸಾವು

ಬಂಟ್ವಾಳ ದಾಸಕೋಡಿಯಲ್ಲಿ ಬಸ್‌ನಿಂದ ಇಳಿದ ಕಾರ್ಮಿಕನಿಗೆ ಕಾರು ಢಿಕ್ಕಿ: ಸ್ಥಳದಲ್ಲೇ ಸಾವು

October 1, 2026
ಎಂಆರ್‌‌ಪಿಎಲ್ ಸ್ಫೋಟದ ತೀವ್ರತೆಗೆ 54 ಮನೆಗಳು, 8 ಧಾರ್ಮಿಕ ಕ್ಷೇತ್ರಗಳಿಗೆ ಹಾನಿ; ಎಫ್​ಐಆರ್​ ದಾಖಲು

ಎಂಆರ್‌‌ಪಿಎಲ್ ಸ್ಫೋಟದ ತೀವ್ರತೆಗೆ 54 ಮನೆಗಳು, 8 ಧಾರ್ಮಿಕ ಕ್ಷೇತ್ರಗಳಿಗೆ ಹಾನಿ; ಎಫ್​ಐಆರ್​ ದಾಖಲು

October 1, 2026
  • About
  • Advertise
  • Privacy & Policy
  • Contact

Copyright ©2024. All Rights Reserved. Coastaltimeskannada.com | Design and Developed By Bluechip Infosystem - Contact Us : cc.bcis.blr@gmail.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

%d