• About us
  • Contact us
  • Disclaimer
Tuesday, May 26, 2026
  • Login
Coastal Times Kannada
No Result
View All Result
  • Home
    • ಗ್ಯಾಜೆಟ್
  • ರಾಜ್ಯ
  • ರಾಷ್ಟ್ರೀಯ
  • ರಾಜಕೀಯ
  • ವಿದೇಶಿ ಸುದ್ದಿ
  • ಕರಾವಳಿ
  • ಕ್ರೈಂ ನ್ಯೂಸ್
  • ಕ್ರೀಡೆ
  • ಸಿನಿಮಾ
  • ಆರೋಗ್ಯ
  • ವೆಬ್ ಸ್ಟೊರೀಸ್
Join to Group
  • Home
    • ಗ್ಯಾಜೆಟ್
  • ರಾಜ್ಯ
  • ರಾಷ್ಟ್ರೀಯ
  • ರಾಜಕೀಯ
  • ವಿದೇಶಿ ಸುದ್ದಿ
  • ಕರಾವಳಿ
  • ಕ್ರೈಂ ನ್ಯೂಸ್
  • ಕ್ರೀಡೆ
  • ಸಿನಿಮಾ
  • ಆರೋಗ್ಯ
  • ವೆಬ್ ಸ್ಟೊರೀಸ್
No Result
View All Result
Coastal Times Kannada
No Result
View All Result

ಮಂಗಳೂರು: ಜನವರಿಯಿಂದ 2 ತಿಂಗಳು ಮಂಗಳಾ ಕ್ರೀಡಾಂಗಣ ಬಂದ್‌

Coastal Times by Coastal Times
December 17, 2025
in ಕರಾವಳಿ
ಮಂಗಳೂರು: ಜನವರಿಯಿಂದ 2 ತಿಂಗಳು ಮಂಗಳಾ ಕ್ರೀಡಾಂಗಣ ಬಂದ್‌
24
VIEWS
WhatsappTelegramShare on FacebookShare on Twitter

ಮಂಗಳೂರು: ಜಿಲ್ಲೆಯ ಪ್ರಮುಖ ಕ್ರೀಡಾಂಗಣವಾದ ಮಣ್ಣಗುಡ್ಡೆಯ ಮಂಗಳಾ ಸ್ಟೇಡಿಯಂನ ಮೂಲ ಸೌಕರ್ಯಗಳ ಹೆಚ್ಚಳ ಸೇರಿದಂತೆ ಅಭಿವೃದ್ಧಿಪಡಿಸಲು ನಿರ್ಧರಿಸಲಾಗಿದೆ. ಈ ಕಾಮಗಾರಿಗಳಿಗಾಗಿ ಜನವರಿಯಿಂದ ಎರಡು ತಿಂಗಳವರೆಗೆ ಕ್ರೀಡಾಂಗಣ ಮುಚ್ಚಲಾಗುತ್ತಿದೆ.

ಮಂಗಳಾ ಸ್ಟೇಡಿಯಂ ನಗರದ ಪ್ರತಿಷ್ಠಿತ ಅಂಗಣವಾಗಿದ್ದು, ಇಲ್ಲಿ 400 ಮೀಟರ್‌ಗಳ ಸಿಂಥೆಟಿಕ್‌ ಟ್ರ್ಯಾಕ್‌ ಇದ್ದು, ಯಾವುದೇ ಓಟದ ಸ್ಪರ್ಧೆ, ಲಾಂಗ್‌ ಜಂಪ್‌, ಹೈಜಂಪ್‌, ಶಾಟ್‌ಪುಟ್‌, ಜಾವ್ಲಿನ್‌ ತ್ರೋ ಸೇರಿದಂತೆ ಹಲವು ಕ್ರೀಡಾ ಚಟುವಟಿಕೆಗಳನ್ನು ನಡೆಸುವಷ್ಟು ಸಶಕ್ತವಾಗಿದೆ. ಒಲಿಂಪಿಕ್‌ ದರ್ಜೆಯ ಆಟಗಳಿಗೆ ಪೂರಕವಾದ ಟ್ರ್ಯಾಕ್‌ ಎಂಬ ಹೆಗ್ಗಳಿಕೆ ಇದೆ.

ಸರಕಾರಿ ಮತ್ತು ಕೆಲವು ಖಾಸಗಿ ಕ್ರೀಡಾ ಚಟುವಟಿಕೆಗಳ ಜತೆಗೆ ಮಂಗಳೂರು ನಗರ, ಗ್ರಾಮಾಂತರ ಭಾಗದ ಅನೇಕ ಶಿಕ್ಷಣ ಸಂಸ್ಥೆಗಳು, ಸಂಘ ಸಂಸ್ಥೆಗಳ ಕ್ರೀಡಾಕೂಟಗಳು ಮಂಗಳಾ ಕ್ರೀಡಾಂಗಣದಲ್ಲಿ ನಡೆಯುತ್ತದೆ. ಇದೀಗ ಎರಡು ತಿಂಗಳ ಕಾಲ ಸ್ಟೇಡಿಯಂ ಮುಚ್ಚುವ ಕಾರಣ ಬೇರೆ ಕ್ರೀಡಾಂಗಣದಲ್ಲಿ ನಡೆಸಬೇಕಾಗಿದೆ.

ಕೆಲ ತಿಂಗಳ ಹಿಂದೆ ಮಂಗಳೂರಿನಲ್ಲಿ ನಡೆದ ಕರ್ನಾಟಕ ಕ್ರೀಡಾಕೂಟಕ್ಕೆ ಆಗ ಮಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಗಳಾ ಕ್ರೀಡಾಂಗಣ ಅಭಿವೃದ್ಧಿಗೆ 3 ಕೋಟಿ ರೂ. ಅನುದಾನ ಘೋಷಿಸಿ ದ್ದರು. ಬಜೆಟ್‌ನಲ್ಲಿಯೂ ಈ ಬಗ್ಗೆ ಉಲ್ಲೇಖೀಸ ಲಾಗಿದ್ದು, ಇದೇ ಅನುದಾನದಲ್ಲಿ ಅಭಿವೃದ್ಧಿ ಕಾಮಗಾರಿ ಕೈಗೆತ್ತಿಕೊಳ್ಳಲು ನಿರ್ಧರಿಸಲಾಗಿದೆ.

ಹಲವು ದಶಕಗಳ ಹಿಂದೆ ಮಣ್ಣಗುಡ್ಡ ಮೈದಾನವಾಗಿದ್ದ ಈ ಪ್ರದೇಶ ಹಲವು ವರ್ಷಗಳಿಂದ ಮಂಗಳಾ ಸ್ಟೇಡಿಯಂ ಆಗಿ ಮಂಗಳೂರಿನ ಹೆಮ್ಮೆಯಾಗಿದೆ. 2009ರಲ್ಲಿ ಇಲ್ಲಿ ಎರಡನೇ ಹಂತದ ಅಭಿವೃದ್ಧಿ ಕಾಮಗಾರಿಗಳು ನಡೆದು ಸಿಂಥೆಟಿಕ್‌ ಟ್ರ್ಯಾಕ್‌ನೊಂದಿಗೆ ಸಜ್ಜಿತವಾಯಿತು. ಹಲವು ರಾಜ್ಯ ಮತ್ತು ರಾಷ್ಟ್ರ ಮಟ್ಟದ ಕ್ರೀಡಾಕೂಟಗಳಿಗೆ ಇದು ನೆಲೆಯಾಗಿತ್ತು.

ಅತ್ಲೆಟಿಕ್‌ ಇವೆಂಟ್‌ಗಳಿಗೆ ಹೇಳಿ ಮಾಡಿಸಿದ ಕ್ರೀಡಾಂಗಣದಲ್ಲಿ ಶೌಚಾಲಯ, ಡ್ರೆಸ್ಸಿಂಗ್‌ ರೂಮ್‌ಗಳನ್ನು ಹೊಂದಿವೆ. ಪ್ರಧಾನ ಗ್ಯಾಲರಿಯ ಜತೆಗೆ ಮೈದಾನದ ಸುತ್ತಲೂ ಕುಳಿತುಕೊಳ್ಳಲು ಅವಕಾಶವಿದ್ದು, 20 ಸಾವಿರಕ್ಕೂ ಅಧಿಕ ಮಂದಿ ಇಲ್ಲಿನ ಆಟಗಳನ್ನು ನೋಡಬಹುದು. ಹಿಂದೆ ಇಲ್ಲಿ, ಫುಟ್ಬಾಲ್‌, ಕ್ರಿಕೆಟ್‌, ಸಾಂಸ್ಕೃತಿಕ ಕಾರ್ಯಕ್ರಮಗಳು ಕೂಡಾ ನಡೆಯುತ್ತಿದ್ದವು. ಆದರೆ, 15 ವರ್ಷಗಳಿಂದ ಸಿಂಥೆಟಿಕ್‌ ಟ್ರ್ಯಾಕ್‌ ನಿರ್ಮಾಣದ ಬಳಿಕ ಅಥ್ಲೆಟಿಕ್ಸ್‌ಗೆ ಹೆಚ್ಚು ಒತ್ತು ನೀಡಲಾಗುತ್ತಿದೆ. ಪಕ್ಕದಲ್ಲೇ ಕ್ರೀಡಾ ಹಾಸ್ಟೆಲ್‌, ಒಳಾಂಗಣ ಕ್ರೀಡಾಂಗಣ, ಸ್ವಿಮ್ಮಿಂಗ್‌ ಪೂಲ್‌ ಕೂಡಾ ಇದೆ.

ಕ್ರೀಡಾಂಗಣದಲ್ಲಿರುವ ಸಿಂಥೆಟಿಕ್‌ ಟ್ರ್ಯಾಕ್‌ ದುರಸ್ತಿಗೆ ಪ್ರಥಮ ಆದ್ಯತೆ ನೀಡಲಾಗುತ್ತಿದೆ. ಸದ್ಯ ಸಿಂಥೆಟಿಕ್‌ ಟ್ರ್ಯಾಕ್‌ ನ ಅಲ್ಲಲ್ಲಿ ಗುಂಡಿಗಳಿದ್ದು, ಇದರಿಂದಾಗಿ ಕ್ರೀಡಾಪಟುಗಳಿಗೆ ಸಮಸ್ಯೆ ಉಂಟಾಗುತ್ತಿದೆ. ಈ ಕುರಿತು ಇಲಾಖೆಗೆ ಅನೇಕ ಮನವಿಗಳು ಬಂದಿದ್ದು, ಈ ಕುರಿತು, ಪರಿಶೀಲನೆ ನಡೆಸಲು ಕ್ರೀಡಾ ಇಲಾಖೆಗೆ ರಾಜ್ಯ ಮಟ್ಟದ ಅಧಿಕಾರಿಗಳು ಇತ್ತೀಚೆಗೆ ಭೇಟಿ ನೀಡಿದ್ದರು. ಟ್ರ್ಯಾಕ್‌ ಅಭಿವೃದ್ಧಿ ಜತೆಗೆ ಸುತ್ತಲೂ ಸಮರ್ಪಕ ಚರಂಡಿ ವ್ಯವಸ್ಥೆಯನ್ನೂ ಮಾಡಲಾಗುತ್ತದೆ.

ಮಂಗಳಾ ಕ್ರೀಡಾಂಗಣ ಇನ್ನಷ್ಟು ಅಭಿವೃದ್ಧಿ ಕಾಣುತ್ತಿದೆ. ಕ್ರೀಡಾಂಗಣದ ಸಿಂಥೆಟಿಕ್‌ ಟ್ರ್ಯಾಕ್‌ ದುರಸ್ತಿ ಕಾಮಗಾರಿ, ಚರಂಡಿ ಸಹಿತ ಮೂಲಭೂತ ವ್ಯವಸ್ಥೆ ಕಾಮಗಾರಿ ನಡೆಯ ಲಿದೆ. ಇದೇ ಕಾರಣಕ್ಕೆ ಜನವರಿ ತಿಂಗಳಿನಿಂದ ಎರಡು ತಿಂಗಳ ವರೆಗೆ ಕ್ರೀಡಾಂಗಣ ಮುಚ್ಚಲಿದೆ. ಕ್ರೀಡಾಂಗಣದಲ್ಲಿ ನಡೆಯುವ ಪ್ರಮುಖ ಕ್ರೀಡಾಕೂಟಗಳು ಈಗಾಗಲೇ ಪೂರ್ಣಗೊಂಡಿದ್ದ ಕಾರಣ ದೊಡ್ಡ ಮಟ್ಟದ ಸಮಸ್ಯೆ ಉದ್ಭವಿಸದು.

Share this:

  • Share on Facebook (Opens in new window) Facebook
  • Share on X (Opens in new window) X

Like this:

Like Loading…

Related

Discover more from Coastal Times Kannada

Subscribe to get the latest posts sent to your email.

Previous Post

ಮಂಗಳೂರು: ಅಂತರ್ ರಾಜ್ಯ ವಾಹನ, ಸರಗಳ್ಳತನದ ಇಬ್ಬರು ಆರೋಪಿಗಳ ಬಂಧನ

Next Post

ಧರ್ಮಸ್ಥಳ ಪ್ರಕರಣದಲ್ಲಿ ಜಾಮೀನು ಸಿಕ್ಕರೂ 23 ದಿನಗಳಿಂದ ಶಿವಮೊಗ್ಗ ಜೈಲಿನಲ್ಲೇ ಉಳಿದಿದ್ದ ಚಿನ್ನಯ್ಯನಿಗೆ ಕಡೆಗೂ ಬಿಡುಗಡೆ ಭಾಗ್ಯ

Related Posts

ಅಮ್ಮ ಮಂಗಳೂರಿನಲ್ಲಿ ಮೇ 28 ಮತ್ತು29 ರಂದು ಜೀವನೋಲ್ಲಾಸದ ಸಂಭ್ರಮಾಚರಣೆ.
ಕರಾವಳಿ

ಅಮ್ಮ ಮಂಗಳೂರಿನಲ್ಲಿ ಮೇ 28 ಮತ್ತು29 ರಂದು ಜೀವನೋಲ್ಲಾಸದ ಸಂಭ್ರಮಾಚರಣೆ.

May 25, 2026
41
ಮಂಗಳೂರು: ಪ್ರಥಮ ಬಾರಿ ಏಕಕಾಲಕ್ಕೆ ಪಾಲೆಮಾರ್ ಸಮೂಹದಿಂದ ನಾಲ್ಕು ಅತ್ಯಾಧುನಿಕ ಸಭಾಭವನಗಳು ಲೋಕಾರ್ಪಣೆ
ಕರಾವಳಿ

ಮಂಗಳೂರು: ಪ್ರಥಮ ಬಾರಿ ಏಕಕಾಲಕ್ಕೆ ಪಾಲೆಮಾರ್ ಸಮೂಹದಿಂದ ನಾಲ್ಕು ಅತ್ಯಾಧುನಿಕ ಸಭಾಭವನಗಳು ಲೋಕಾರ್ಪಣೆ

May 23, 2026
73
Next Post
ಧರ್ಮಸ್ಥಳ ಪ್ರಕರಣದಲ್ಲಿ ಜಾಮೀನು ಸಿಕ್ಕರೂ 23 ದಿನಗಳಿಂದ ಶಿವಮೊಗ್ಗ ಜೈಲಿನಲ್ಲೇ ಉಳಿದಿದ್ದ ಚಿನ್ನಯ್ಯನಿಗೆ ಕಡೆಗೂ ಬಿಡುಗಡೆ ಭಾಗ್ಯ

ಧರ್ಮಸ್ಥಳ ಪ್ರಕರಣದಲ್ಲಿ ಜಾಮೀನು ಸಿಕ್ಕರೂ 23 ದಿನಗಳಿಂದ ಶಿವಮೊಗ್ಗ ಜೈಲಿನಲ್ಲೇ ಉಳಿದಿದ್ದ ಚಿನ್ನಯ್ಯನಿಗೆ ಕಡೆಗೂ ಬಿಡುಗಡೆ ಭಾಗ್ಯ

Discussion about this post

Recent News

ಅಮ್ಮ ಮಂಗಳೂರಿನಲ್ಲಿ ಮೇ 28 ಮತ್ತು29 ರಂದು ಜೀವನೋಲ್ಲಾಸದ ಸಂಭ್ರಮಾಚರಣೆ.

ಅಮ್ಮ ಮಂಗಳೂರಿನಲ್ಲಿ ಮೇ 28 ಮತ್ತು29 ರಂದು ಜೀವನೋಲ್ಲಾಸದ ಸಂಭ್ರಮಾಚರಣೆ.

May 25, 2026
41
ಬೆಂಗಳೂರು: ಡಿಜಿಟಲ್ ಅರೆಸ್ಟ್ ಹೆಸರಿನಲ್ಲಿ ವೃದ್ಧೆಯೋರ್ವರನ್ನು ಬೆದರಿಸಿ ಬರೋಬ್ಬರಿ 24 ಕೋಟಿ ರೂಪಾಯಿ ಸುಲಿಗೆ ಮಾಡಿದ ಐವರ ಬಂಧನ

ಬೆಂಗಳೂರು: ಡಿಜಿಟಲ್ ಅರೆಸ್ಟ್ ಹೆಸರಿನಲ್ಲಿ ವೃದ್ಧೆಯೋರ್ವರನ್ನು ಬೆದರಿಸಿ ಬರೋಬ್ಬರಿ 24 ಕೋಟಿ ರೂಪಾಯಿ ಸುಲಿಗೆ ಮಾಡಿದ ಐವರ ಬಂಧನ

May 25, 2026
50
COASTAL BOX LOGO

CORPORATE OFFICE

KHYATI VISUAL MEDIA
3rd Floor, Shalimar Complex
Kankanady, Mangaluru-575002

Email ID : coastaltimeskannada@gmail.com

Follow Us

ಹೊಸ ಸುದ್ದಿಗಳು

ಅಮ್ಮ ಮಂಗಳೂರಿನಲ್ಲಿ ಮೇ 28 ಮತ್ತು29 ರಂದು ಜೀವನೋಲ್ಲಾಸದ ಸಂಭ್ರಮಾಚರಣೆ.

ಅಮ್ಮ ಮಂಗಳೂರಿನಲ್ಲಿ ಮೇ 28 ಮತ್ತು29 ರಂದು ಜೀವನೋಲ್ಲಾಸದ ಸಂಭ್ರಮಾಚರಣೆ.

May 25, 2026
ಬೆಂಗಳೂರು: ಡಿಜಿಟಲ್ ಅರೆಸ್ಟ್ ಹೆಸರಿನಲ್ಲಿ ವೃದ್ಧೆಯೋರ್ವರನ್ನು ಬೆದರಿಸಿ ಬರೋಬ್ಬರಿ 24 ಕೋಟಿ ರೂಪಾಯಿ ಸುಲಿಗೆ ಮಾಡಿದ ಐವರ ಬಂಧನ

ಬೆಂಗಳೂರು: ಡಿಜಿಟಲ್ ಅರೆಸ್ಟ್ ಹೆಸರಿನಲ್ಲಿ ವೃದ್ಧೆಯೋರ್ವರನ್ನು ಬೆದರಿಸಿ ಬರೋಬ್ಬರಿ 24 ಕೋಟಿ ರೂಪಾಯಿ ಸುಲಿಗೆ ಮಾಡಿದ ಐವರ ಬಂಧನ

May 25, 2026
ಮಂಗಳೂರು: ಪ್ರಥಮ ಬಾರಿ ಏಕಕಾಲಕ್ಕೆ ಪಾಲೆಮಾರ್ ಸಮೂಹದಿಂದ ನಾಲ್ಕು ಅತ್ಯಾಧುನಿಕ ಸಭಾಭವನಗಳು ಲೋಕಾರ್ಪಣೆ

ಮಂಗಳೂರು: ಪ್ರಥಮ ಬಾರಿ ಏಕಕಾಲಕ್ಕೆ ಪಾಲೆಮಾರ್ ಸಮೂಹದಿಂದ ನಾಲ್ಕು ಅತ್ಯಾಧುನಿಕ ಸಭಾಭವನಗಳು ಲೋಕಾರ್ಪಣೆ

May 23, 2026
  • About
  • Advertise
  • Privacy & Policy
  • Contact

Copyright ©2024. All Rights Reserved. Coastaltimeskannada.com | Design and Developed By Bluechip Infosystem - Contact Us : cc.bcis.blr@gmail.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

%d