ಮಂಗಳೂರು, ಅ.18 : ನಗರದ ಫಲ್ನೀರ್ ಜಂಕ್ಷನ್ ನಲ್ಲಿರುವ ಜಿ.ಐ. ಬೇಕರಿ ಮೇಲೆ ಆಹಾರ ಸುರಕ್ಷತಾ ಅಧಿಕಾರಿಗಳ ತಂಡ ದಾಳಿ ನಡೆಸಿ ಪರಿಶೀಲನೆ ನಡೆಸಿದೆ. ಮಾನ್ಯ ಆರೋಗ್ಯ ಸಚಿವ ಯು.ಟಿ. ಖಾದರ್ ಅವರ ಸೂಚನೆಯ ಮೇರೆಗೆ, ಅಕ್ಟೋಬರ್ 17ರಂದು ದಕ್ಷಿಣ ಕನ್ನಡ ಜಿಲ್ಲಾ ಆಹಾರ ಸುರಕ್ಷತಾ ಅಧಿಕಾರಿ ಡಾ. ಪ್ರವೀಣ್ ಕುಮಾರ್ ಸಿ.ಎಚ್. ಅವರ ನೇತೃತ್ವದಲ್ಲಿ ಈ ಕಾರ್ಯಾಚರಣೆ ನಡೆಸಲಾಯಿತು
ಆಹಾರ ಇಲಾಖೆಯ ಅಧಿಕಾರಿಗಳು ನಗರದ ಫಳ್ನೀರ್ ನಲ್ಲಿ ಸಿಹಿ ತಿಂಡಿ ತಿನಿಸು ತಯಾರಿಕಾ ಘಟಕ ಜಿಐ ಬೇಕರಿ ಅಂಗಡಿಗಳ ಮೇಲೆ ದಾಳಿ ನಡೆಸಿದ್ದು ಅವಧಿ ಮುಗಿದ ಸಿಹಿ ತಿಂಡಿಗಳನ್ನು ಮರಳಿ ಪ್ಯಾಕ್ ಮಾಡುತ್ತಿರುವುದನ್ನು ಪತ್ತೆ ಮಾಡಿದ್ದಾರೆ.

ಈ ವೇಳೆ ಆಹಾರದ ಪ್ಯಾಕೆಟ್ಗಳ ಮೇಲೆ ತಯಾರಿಕಾ ದಿನಾಂಕ, ಬಳಕೆಯ ಅವಧಿ ಮೀರುವ ದಿನಾಂಕ, ಬ್ಯಾಚ್ ನಂಬರ್, ಎಫ್ಎಸ್ಎಸ್ಎ ಐ ಲೈಸೆನ್ಸ್ ನಂಬರ್ ಇಲ್ಲದ ಆಹಾರ ಉತ್ಪನ್ನಗಳನ್ನು ವಶಕ್ಕೆ ಪಡೆದು ಮುದ್ರೆ ಹಾಕಲಾಯಿತು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಆಹಾರ ಸುರಕ್ಷತಾ ನಿಯಮಗಳ ಪಾಲನೆಗೆ ಅಧಿಕಾರಿಗಳು ಕ್ರಮ ಕೈಗೊಂಡಿದ್ದು, ಸಾರ್ವಜನಿಕರು ಆಹಾರ ಪದಾರ್ಥಗಳನ್ನು ಖರೀದಿಸುವಾಗ ಪ್ಯಾಕೆಟ್ ಮೇಲಿನ ಮಾಹಿತಿಗಳನ್ನು ಪರಿಶೀಲಿಸುವಂತೆ ಸೂಚಿಸಲಾಗಿದೆ.
Discover more from Coastal Times Kannada
Subscribe to get the latest posts sent to your email.








Discussion about this post