ಮಂಗಳೂರು, ಅ.18: ಚರ್ಚಿಗೆ ಬರುತ್ತಿದ್ದ ಬಾಲಕರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಲ್ಲಿ ವೆಲೆನ್ಸಿಯಾ ಚರ್ಚ್ ಪಾದ್ರಿ ಸಿಪ್ರಿಯನ್ ಪಿಂಟೋ ಅವರನ್ನು ಪಾಂಡೇಶ್ವರ ಪೊಲೀಸರು ಬಂಧಿಸಿದ್ದಾರೆ.
ಸಕಲೇಶಪುರದಲ್ಲಿ ಸಂಬಂಧಿಗಳ ಮನೆಯಲ್ಲಿ ಅಡಗಿ ಕುಳಿತಿದ್ದ ಆರೋಪಿ ಧರ್ಮಗುರುವನ್ನು ಪೊಲೀಸರು ಬಂಧಿಸಿದ್ದು ಮಂಗಳೂರಿಗೆ ಕರೆತಂದಿದ್ದಾರೆ. ಪೋಕ್ಸೊ ಕಾಯಿದೆಯಡಿಯಲ್ಲಿ ಪಾಂಡೇಶ್ವರ ಠಾಣೆಯಲ್ಲಿ ಪ್ರಕರಣ ದಾಖಲಾಗುತ್ತಿದ್ದಂತೆ ಫಾದರ್ ಸಿಪ್ರಿಯನ್ ಪಿಂಟೋ ತಲೆಮರೆಸಿಕೊಂಡಿದ್ದರು. ಬಾಲಕರಿಬ್ಬರ ದೂರಿನ ಆಧಾರದಲ್ಲಿ ಪ್ರಕರಣ ದಾಖಲಿಸಲಾಗಿತ್ತು.
ಇದರ ಬೆನ್ನಲ್ಲೇ ಆರೋಪಿ ಫಾದರ್ ಸಿಪ್ರಿಯನ್ ಪಿಂಟೋ ಮಂಗಳೂರಿನಿಂದ ಪರಾರಿಯಾಗಿದ್ದರು. ಪಿಂಟೋ ಪತ್ತೆಗಾಗಿ ಬೆಂಗಳೂರಿನ ಹಲವೆಡೆ ಪೊಲೀಸರು ತಲಾಶ್ ನಡೆಸಿದ್ದರು. ಚರ್ಚ್ ಗೆ ಬರುತ್ತಿದ್ದ ಹಲವು ಬಾಲಕರಿಗೆ ಚಾಕಲೇಟ್ ಕೊಡಿಸಿ ಲೈಂಗಿಕ ಕಿರುಕುಳ ನೀಡುತ್ತಿದ್ದ ಎಂಬ ಆರೋಪದಲ್ಲಿ ಪ್ರಕರಣ ದಾಖಲಾಗಿದೆ.
ಹೆತ್ತವರ ಬಳಿ ಫಾದರ್ ಕಿರುಕುಳ ನೀಡುತ್ತಿರುವ ಬಗ್ಗೆ ಬಾಲಕರು ಹೇಳಿಕೊಂಡಿದ್ದು ಇದರಂತೆ ಮಂಗಳೂರು ಬಿಷಪ್ ಅವರಿಗೂ ದೂರು ಹೋಗಿತ್ತು. ಆನಂತರ ಮೈಸೂರಿನ ಒಡನಾಡಿ ಸಂಸ್ಥೆಯವರು ಮಂಗಳೂರು ಕಮಿಷನರ್ ಗೆ ದೂರು ನೀಡಿದ್ದರು. ಬಳಿಕ ಬಾಲಕರ ಕುಟುಂಬವೇ ಪೊಲೀಸರಿಗೆ ದೂರು ನೀಡಿತ್ತು.
Discover more from Coastal Times Kannada
Subscribe to get the latest posts sent to your email.







Discussion about this post