ಮಂಗಳೂರು, ಡಿ.18: ಕರಾವಳಿಯ ರಿಯಲ್ ಎಸ್ಟೇಟ್ ಉದ್ಯಮದಲ್ಲಿ ಮುಂಚೂಣಿಯಲ್ಲಿರುವ ರೋಹನ್ ಕಾರ್ಪೊರೇಶನ್ ಸಂಸ್ಥೆಯು ಪಕ್ಷಿಕೆರೆ ಸಮೀಪ ಅತ್ಯಾಧುನಿಕ ಸೌಲಭ್ಯಗಳನ್ನು ಒಳಗೊಂಡ ಸುಸಜ್ಜಿತ 372 ವಸತಿ ನಿವೇಶನಗಳ ಬೃಹತ್ ವಸತಿ ಬಡಾವಣೆಯನ್ನು 32 ಎಕರೆ ಪ್ರದೇಶದಲ್ಲಿ ಅಭಿವೃದ್ಧಿಪಡಿಸಿದೆ ಎಂದು ರೋಹನ್ ಕಾರ್ಪೊರೇಶನ್‌ನ ಆಡಳಿತ ನಿರ್ದೇಶಕ ರೋಹನ್ ಮೊಂತೆರೊ ತಿಳಿಸಿದ್ದಾರೆ.
ಶನಿವಾರ ಪಕ್ಷಿಕೆರೆಯಲ್ಲಿರುವ ರೋಹನ್ ಎಸ್ಟೇಟ್‌ನಲ್ಲಿ ಅವರು ಬ್ರೋಶರ್ ಅನಾವರಣಗೊಳಿಸಿ ಲೋಕಾರ್ಪಣೆಗೈದರು. ಬಳಿಕ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು ಹಳೆಯಂಗಡಿ – ಕಿನ್ನಿಗೋಳಿ ರಸ್ತೆಯಲ್ಲಿನ ಪಕ್ಷಿಕೆರೆಯ ಸುಂದರ, ಪ್ರಶಾಂತ ಪರಿಸರದಲ್ಲಿ ಅತ್ಯಂತ ಆಕರ್ಷಕ, ಸಕಲ ಸೌಲಭ್ಯಗಳಿಂದ ಕೂಡಿದ ವಸತಿ ಬಡಾವಣೆ ನಿರ್ಮಿಸಲಾಗಿದೆ. ನಗರ ಜೀವನ ಶೈಲಿಯ ಅನುಭವದ ಜತೆಗೆ ಹಳ್ಳಿಯ ಜೀವನವನ್ನು ಅನುಭವಿಸುವ ಅದ್ಭುತ ಪರಿಕಲ್ಪನೆಯ ಆಧಾರದಲ್ಲಿ ಬಡಾವಣೆ ನಿರ್ಮಾಣಗೊಂಡಿದೆ. ಬಡಾವಣೆಯ ಶೇ.100 ಕಾಮಗಾರಿ ಮುಗಿದಿದ್ದು, ಗ್ರಾಹಕರು ನಿವೇಶನ ಖರೀದಿಸಿ ಮನೆ ನಿರ್ಮಾಣ ಮಾಡಬಹುದಾಗಿದೆ ಎಂದರು.
ಮಂಗಳೂರು ಸಮೀಪದ ಪಕ್ಷಿಕೆರೆಯ ಎಸ್.ಕೋಡಿ ಜಕ್ಷನ್‍ನಿಂದ ಕೇವಲ 100 ಮೀಟರ್ ದೂರದ ಸ್ವಚ್ಛಂದ ಪರಿಸರದಲ್ಲಿ ‘ರೋಹನ್ ಎಸ್ಟೇಟ್’ ನಿರ್ಮಾಣಗೊಂಡಿದೆ. ಹಳೆಯಂಗಡಿ- ಕಿನ್ನಿಗೋಳಿ ಮುಖ್ಯ ರಸ್ತೆಯಲ್ಲೇ ರೋಹನ್ ಎಸ್ಟೇಟ್ ಇದ್ದು, ಕಟೀಲು ದೇವಸ್ಥಾನ, ಪಕ್ಷಿಕೆರೆ ಚರ್ಚ್, ಶೈಕ್ಷಣಿಕ, ಧಾರ್ಮಿಕ ಕೇಂದ್ರಗಳು ಸಮೀಪದಲ್ಲಿವೆ. ಹಳೆಯಂಗಡಿ ರಾಷ್ಟ್ರೀಯ ಹೆದ್ದಾರಿ ಜಂಕ್ಷನ್ ಹಾಗೂ ಕಿನ್ಬಿಗೋಳಿ ಪೇಟೆಯಿಂದ ಕೇವಲ 4 ಕಿ.ಮೀ.ಸನಿಹದಲ್ಲಿದೆ.
3.5 ಸೆಂಟ್ಸ್‌ನಿಂದ 10 ಸೆಂಟ್ಸ್ ವರೆಗಿನ ಸೈಟ್‍ಗಳು ಲಭ್ಯವಿದ್ದು ಒಂದಕ್ಕೊಂದು ಹೊಂದಿಕೊಂಡ ಸೈಟ್‍ಗಳನ್ನು ಕೂಡಾ ಗ್ರಾಹಕರು ಖರೀದಿಸಬಹುದಾಗಿದೆ. ಇಡೀ ಬಡಾವಣೆಗೆ ಅಗಲವಾದ ಕಾಂಕ್ರಿಟ್ ರಸ್ತೆ ನಿರ್ಮಾಣ ಮಾಡಲಾಗಿದ್ದು, ಸುವ್ಯವಸ್ಥಿತ ಒಳಚರಂಡಿ, ಬೀದಿ ದೀಪಗಳನ್ನು ಅಳವಡಿಸಲಾಗಿದೆ. ಬಡಾವಣೆಗೆಂದೇ ನಿರ್ಮಿಸಿದ ಪ್ರತ್ಯೇಕ ಕುಡಿಯುವ ನೀರಿನ ಸಂಪರ್ಕವಲ್ಲದೆ ಭವಿಷ್ಯದಲ್ಲಿ ಗ್ರಾಪಂ ವತಿಯಿಂದ ಪೂರೈಸುವ ಕುಡಿಯುವ ನೀರಿನ ಸಂಪರ್ಕ ಪಡೆಯಲು ಸಾಧ್ಯವಾಗುವಂತೆ ಪ್ರತಿಯೊಂದು ಸೈಟ್‍ಗೆ ಪ್ರತ್ಯೇಕ ನೀರಿನ ಪೈಪ್ ಲೈನ್ ಜೋಡಿಸಲಾಗಿದೆ.
ಇಡೀ ಲೇ ಔಟ್‍ಗೆ ಕಣ್ಗಾವಲಾಗಿ 12 ಕಡೆಗಳಲ್ಲಿ ಹೈ ರೆಸಲ್ಯೂಶನ್ ಸಿಸಿ ಕ್ಯಾಮರಾ, ವಾಕಿಂಗ್ ಮಾಡಲು ಸುಮಾರು 5 ಕಿ.ಮೀ. ಇಂಟರ್‌ಲಾಕ್ ಹಾಕಲಾಗಿರುವ ಫೂಟ್‍ಪಾತ್, ಬ್ಯಾಡ್ಮಿಂಟನ್ ಕೋರ್ಟ್, ಮಕ್ಕಳಿಗಾಗಿ ಆಟದ ಮೈದಾನ ಹೀಗೆ ಹಲವು ವಿಶೇಷತೆಗಳಿಂದ ಕೂಡಿದ ಸುಸಜ್ಜಿತ ವಸತಿ ಬಡಾವಣೆ ನಿರ್ಮಾಣಗೊಂಡಿದೆ ಎಂದರು.
ಗ್ರಾಹಕರ ಅನುಕೂಲಕ್ಕೆ ತಕ್ಕಂತೆ 35 ಲಕ್ಷ ರೂ.ದಿಂದ 75 ಲಕ್ಷ ರೂ.ನೊಳಗೆ ನಿವೇಶನ ಸಹಿತ ಮನೆಯನ್ನು ನಿರ್ಮಾಣ ಮಾಡಿ ಕೊಡಲಾಗುವುದು. ಅನುಭವಿ ವಿನ್ಯಾಸಗಾರರ ತಂಡವು ಮನೆಯನ್ನು ವಿನ್ಯಾಸ ಮಾಡಿಕೊಡಲಿದ್ದು, ಸಂಸ್ಥೆಯು ಕಡಿಮೆ ವೆಚ್ಚದಲ್ಲಿ ಆರು ತಿಂಗಳಿನಲ್ಲಿ ಸುದೃಢ ಮನೆಯನ್ನು ನಿರ್ಮಾಣ ಮಾಡಿಕೊಡಲಿದೆ. ಈ ಅವಕಾಶವನ್ನು ಕೂಡಾ ಗ್ರಾಹಕರು ಸದುಪಯೋಗ ಪಡಿಸಿಕೊಳ್ಳಬಹುದಾಗಿದೆ ಎಂದು ರೋಹನ್ ಮೊಂತೆರೋ ತಿಳಿಸಿದರು.
ಮಾದರಿ ಮನೆ ನಿರ್ಮಾಣಚ :
*ಈಗಾಗಲೇ 3.5 ಸೆಂಟ್ಸ್ ಸ್ಥಳದಲ್ಲಿ 35 ಲಕ್ಷ ರೂ. ವೆಚ್ಚದ ಮೊಡೆಲ್ ಮನೆಯನ್ನು ನಿರ್ಮಿಸಲಾಗಿದ್ದು, ವೀಕ್ಷಣೆಗೆ ಲಭ್ಯವಿದೆ.
*ಬಡಾವಣೆಯಲ್ಲಿ ಮದುವೆ ಮತ್ತಿತರ ಪಾರ್ಟಿಗಳನ್ನು ನಡೆಸಲು ಅತ್ಯುತ್ತಮ ಸ್ಥಳಾವಕಾಶವಿದ್ದು ಮಕ್ಕಳಿಗಾಗಿ ಆಟಿಕೆಗಳನ್ನೊಳಗೊಂಡ ದೊಡ್ಡದಾದ ಪ್ಲೇ ಏರಿಯಾ ರಚಿಸಲಾಗಿದೆ. ಇಡೀ ಬಡಾವಣೆಗೆ ಮೆರಗು ನೀಡುವಂತಹ ಬೃಹತ್ ಪಾರ್ಕ್ ನಿರ್ಮಿಸಲಾಗಿದ್ದು, ದಿನದ 24 ಗಂಟೆಯೂ ಸೆಕ್ಯೂರಿಟಿ ವ್ಯವಸ್ಥೆ ಇದೆ. ಕೂಡಲೇ ಮನೆ ಕಟ್ಟುವವರಿಗೆ ಯಾವುದೇ ರೀತಿಯ ಇಲೆಕ್ಟ್ರಿಕ್ ಡೆಪಾಸಿಟ್ ಆಗಲಿ, ನೀರಿನ ಡೆಪಾಸಿಟ್ ಆಗಲಿ ನೀಡುವ ಪ್ರಮೇಯವಿಲ್ಲ. ಆರು ತಿಂಗಳೊಳಗೆ ಮನೆಯನ್ನು ಪೂರ್ತಿಗೊಳಿಸಬಹುದಾಗಿದೆ.
*ಕರ್ನಾಟಕ ಸರಕಾರದ ರೇರಾ ಮಾನ್ಯತೆ ಪಡೆದಿದ್ದು, ಎಲ್ಲಾ ಬ್ಯಾಂಕುಗಳಿಂದ ಸಾಲ ಸೌಲಭ್ಯದ ವ್ಯವಸ್ಥೆಯನ್ನು ಕೂಡ ಮಾಡಲಾಗಿದೆ.
*ಮಳೆ ನೀರಿನ ಕೊಯಿಲು, ಓವರ್ ಹೆಡ್ ಟ್ಯಾಂಕ್, ಬೋರ್‍ವೆಲ್, ಓಪನ್‍ವೆಲ್ ಹಾಗೂ ಗ್ರಾಪಂ ವತಿಯಿಂದ ಕೂಡಾ ನೀರಿನ ವ್ಯವಸ್ಥೆಯನ್ನು ಮಾಡಲಾಗಿದೆ. ಯಾವುದೇ ರೀತಿಯ ನೀರಿನ ಸಮಸ್ಯೆ ಬಾರದಂತೆ ಕ್ರಮವನ್ನು ವಹಿಸಲಾಗಿದೆ ಎಂದು ರೋಹನ್ ಮೊಂತೆರೋ ತಿಳಿಸಿದರು.
ಮಾಸಿಕ ಕಂತು
ಗ್ರಾಹಕರು ಕೇವಲ 10 ಸಾವಿರ ರೂ. ಪಾವತಿಸಿ ತಮಗೆ ಬೇಕಾದ ನಿವೇಶನಗಳನ್ನು ಬುಕ್ ಮಾಡಬಹುದಾಗಿದೆ. ಬಾಕಿ ಮೊತ್ತವನ್ನು ತಿಂಗಳ ಮಾಸಿಕ ಕಂತಿನಲ್ಲಿ ಪಾವತಿಸಬಹುದಾಗಿದೆ. ಅದೇ ರೀತಿ ನಿವೇಶನ ಖರೀದಿಸಿ, ಮನೆ ನಿರ್ಮಾಣ ಮಾಡುವುದಿದ್ದಲ್ಲಿ 25 ಸಾವಿರ ರೂ. ಪಾವತಿಸಿ ಬುಕ್ ಮಾಡಿ, ಉಳಿದ ಮೊತ್ತವನ್ನು ಮಾಸಿಕ ಕಂತುಗಳಲ್ಲಿ ಪಾವತಿಸಬಹುದಾಗಿದೆ.
ಒಂದು ವೇಳೆ ಗ್ರಾಹಕರು ನಿವೇಶನ ಮತ್ತು ಮನೆ ಖರೀದಿಗೆ ಬ್ಯಾಂಕ್‍ನಿಂದ ಸಾಲ ಪಡೆದುಕೊಳ್ಳುವುದಿದ್ದಲ್ಲಿ ಡೌನ್‍ಪೇಮೆಂಟ್ ಮೊತ್ತವನ್ನು ಗ್ರಾಹಕರು ಮಾಸಿಕ ಕಂತಿನ ಆಧಾರದಲ್ಲಿ ಪಡೆದುಕೊಳ್ಳಬಹುದಾಗಿದೆ.
ಗೃಹ ಸಾಲಕ್ಕೆ ಸಂಬಂಧಿಸಿದಂತೆ ಈಗಾಗಲೇ ಹಲವಾರು ಬ್ಯಾಂಕ್‍ಗಳಿಂದ ಲೀಗಲ್ ಓಪಿನಿಯನ್ ಪಡೆದುಕೊಳ್ಳಲಾಗಿದ್ದು, ಗ್ರಾಹಕರು ಗೃಹ ಸಾಲಕ್ಕಾಗಿ ಬ್ಯಾಂಕ್‍ಗಳಿಗೆ ಅಲೆದಾಡುವ ಅವಶ್ಯಕತೆ ಇರುವುದಿಲ್ಲ.
ಪ್ರಸ್ತುತ ಬಹುತೇಕ ಗ್ರಾಹಕರು ಮನೆ, ನಿವೇಶನ ಖರೀದಿ ಸಂದರ್ಭ ವಾಸ್ತು ಪ್ರಕಾರಕ್ಕೆ ಹೆಚ್ಚಿನ ಮಹತ್ವ ನೀಡುತ್ತಾರೆ. ಆದ್ದರಿಂದ, ವಾಸ್ತು ಸರಿಯಿಲ್ಲದ ಕಡೆಗಳಲ್ಲಿ ಗ್ರಾಹಕರು ಖರೀದಿ ಹಾಗೂ ಹೂಡಿಕೆ ಮಾಡಲು ಹಿಂಜರಿಯುತ್ತಾರೆ. ಆದರೆ ರೋಹನ್ ಎಸ್ಟೇಟ್‍ನಲ್ಲಿ ನಿರ್ಮಾಣವಾದ ಎಲ್ಲಾ ನಿವೇಶನಗಳು ವಾಸ್ತು ಪ್ರಕಾರ ಇದ್ದು ಮನೆ ಕಟ್ಟಲು ಬಯಸುವ ಗ್ರಾಹಕರು ವಾಸ್ತು ಅನುಕೂಲಕ್ಕೆ ತಕ್ಕಂತೆ ಮನೆಯನ್ನು ನಿರ್ಮಿಸ ಬಹುದಾಗಿದೆ. ಪ್ರತಿ ಸೆಂಟ್ಸಿಗೆ 4 ಲಕ್ಷ ರೂ. ಬೆಲೆಯಿದ್ದು, ಸೀಮಿತ ಅವಧಿಗೆ 3.50 ಲಕ್ಷ ರೂ.ಗೆ ಮಾರಾಟ ಮಾಡಲಾಗುವುದು.
Discussion about this post