ಮಂಗಳೂರು,ಡಿ.19: ರಾಜ್ಯದ ಗಡಿಭಾಗ ವೆಂದರೆ ಎರಡು ರಾಜ್ಯ ಗಳ ನಡುವಿನ ಕೊಂಡಿಗಳಿದ್ದಂತೆ ಇರುವ ಪ್ರದೇಶಗಳು ಅಲ್ಲಿ ಸಾಮರಸ್ಯ ,ಸೌಹಾರ್ದತೆ ಗೆ ಧಕ್ಕೆ ಯಾಗುವ ಯಾವುದೇ ಚಟುವಟಿಕೆಗಳು ನಡೆಯದಂತೆ ಎಚ್ಚರಿಕೆ ವಹಿಸಬೇಕಾದ ಹೊಣೆಗಾರಿಕೆ ಎಲ್ಲರ ಮೇಲಿದೆ ಎಂದು ಮಂಗ ಳೂರು ಶಾಸಕ ಯು.ಟಿ.ಖಾದರ್ ತಿಳಿಸಿದ್ದಾರೆ.
ಅವರು ಕೊಲ್ಯ ಬೀರಿಯ ಬ್ರಹ್ಮ ಶ್ರೀ ನಾರಾಯಣ ಗುರು ಸಭಾಂಗಣದಲ್ಲಿ ಕರ್ನಾಟಕ ಸಾಮಾಜಿಕ, ಸಾಂಸ್ಕೃತಿಕ ಅಭಿವೃದ್ಧಿ ಪ್ರತಿಷ್ಠಾನದ ಆಶ್ರಯ ದಲ್ಲಿ ಕರ್ನಾಟಕ ಗಡಿ ಅಭಿವೃದ್ಧಿ ಪ್ರಾಧಿಕಾರದ ಪ್ರಾಯೋಜಕತ್ವದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಗಡಿ ಉತ್ಸವವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
ಗಡಿ ಪ್ರದೇಶದಲ್ಲಿ ಜನರು ವಿವಿಧ ಭಾಷೆ, ಸಂಸ್ಕೃತಿ ಗಳೊಂದಿಗೆ ಬದುಕು ತ್ತಿದ್ದಾರೆ.ಹಲವು ಸೂಕ್ಷ್ಮ ಕಾರಣ ಗಳಿಂದ ಸಮಸ್ಯೆ ಗಳನ್ನು ಎದುರಿಸಬೇಕಾಗುತ್ತದೆ. ಉದಾಹರಣೆಗೆ ಭಾಷಾವಾರು ಪ್ರಾಂತ್ಯ ದ ರಚನೆಯಾದ ಬಳಿಕ ಕಾಸರಗೋಡು ಕೇರಳಕ್ಕೆ ಸೇರಿದ ಕಾರಣ ಅಲ್ಲಿನ ಕನ್ನಡಿಗರು ತಾವು ಕರ್ನಾಟಕದಲ್ಲಿ ಸೇರ್ಪಡೆ ಯಾಗಲು ಸಾಧ್ಯವಾಗಿಲ್ಲ ಎಂಬ ನೋವನ್ನು ಹೊಂದಿ ದ್ದಾರೆ. ಕರ್ನಾಟಕದ ಗಡಿ ಭಾಗದ ಕನ್ನಡಿಗ ರಿಗೆ ಕರ್ನಾಟಕ ಸರ್ಕಾರ ಸಾಧ್ಯವಾಗುವ ಎಲ್ಲಾ ನೆರವು ನೀಡಲು ಮುಂದಾಗಬೇಕು. ಮುಖ್ಯ ವಾಗಿ ಗಡಿಭಾಗದ ಸೌಹಾರ್ದ ವಾತವರಣ ಕದಡದಂತೆ ಎಚ್ಚರಿಕೆ ವಹಿಸಬೇಕಾಗಿದೆ ಎಂದು ಯು.ಟಿ.ಖಾದರ್ ತಿಳಿಸಿದ್ದಾರೆ.
ಸಮಾರಂಭ ಅಧ್ಯಕ್ಷ ತೆಯನ್ನು ಕರ್ನಾಟಕ ಸಾಮಾಜಿಕ, ಸಾಂಸ್ಕೃತಿಕ ಅಭಿವೃದ್ಧಿ ಪ್ರತಿಷ್ಠಾನದ ಅಧ್ಯಕ್ಷೆ ರಾಣಿ ಪುಷ್ಪಲತಾ ದೇವಿ ವಹಿಸಿ ಗಡಿಭಾಗದ ಸಮಸ್ಯೆ ಗಳ ಬಗ್ಗೆ ಸರ್ಕಾರ ಆಧ್ಯತೆಯೊಂದಿಗೆ ಗಮನಹರಿಸುವ ಅಗತ್ಯವಿದೆ ಎಂದರು. ಗಡಿ ಭಾಗದ ಬಗ್ಗೆ ವಿಷಯ ಮಂಡಿಸಿದ ಹಿರಿಯ ಪತ್ರಕರ್ತ ಪುಷ್ಪರಾಜ್ ಬಿ.ಎನ್ ,ಗಡಿ ಭಾಗದಲ್ಲಿ ಭಾಷಾ ಅಲ್ಪ ಸಂಖ್ಯಾತ ರಾಗಿರುವ ಕನ್ನಡಿಗರ ಆರ್ಥಿಕ, ಸಾಮಾಜಿಕ,ಆರೋಗ್ಯ, ಶೈಕ್ಷಣಿಕ, ಸಾಂಸ್ಕೃತಿಕ ಅಭಿವೃದ್ಧಿ ಯ ಬಗ್ಗೆ ಗಡಿಯಾಚೆ ಗೂ ನೆರವು ನೀಡಬೇಕಾಗಿದೆ.ದಾಖಲೆ ಪ್ರಮಾಣ ಪತ್ರ ದ ಸಮಸ್ಯೆ ಗೆ ಕರ್ನಾಟಕ ಸರಕಾರ ಗಮನ ಹರಿಸಬೇಕಾಗಿದೆ ಎಂದರು.
ಕಲಾವಿದ ಭಾಸ್ಕರ್ ಅವರ ತಂಡ ಹಾಗೂ ಇತರ ಸಾಂಸ್ಕೃತಿಕ ಪ್ರತಿಭೆ ಗಳಿಂದ ಸಾಂಸ್ಕೃತಿಕ ಕಾರ್ಯ ಕ್ರಮ ನಡೆಯಿತು.
ಸಮಾರಂಭದಲ್ಲಿ ವಿಕಲ ಚೇತನರ ಜಿಲ್ಲಾ ಕಲ್ಯಾಣಾಧಿಕಾರಿ ಗೋಪಾಲ ಕೃಷ್ಣ,ಕೊಲ್ಯ ಬಿಲ್ಲವ ಸೇವಾ ಸಮಾಜ ಟ್ರಸ್ಟ್ ನ ಅಧ್ಯಕ್ಷ ವೇಣುಗೋಪಾಲ ಕೊಲ್ಯ ಉಪಸ್ಥಿತರಿದ್ದರು. ಗಂಗಾಧರ ಗಾಂಧಿ ಕಾರ್ಯಕ್ರಮ ನಿರೊಪಿಸಿದರು.