• About us
  • Contact us
  • Disclaimer
Wednesday, July 22, 2026
  • Login
Coastal Times Kannada
No Result
View All Result
  • Home
    • ಗ್ಯಾಜೆಟ್
  • ರಾಜ್ಯ
  • ರಾಷ್ಟ್ರೀಯ
  • ರಾಜಕೀಯ
  • ವಿದೇಶಿ ಸುದ್ದಿ
  • ಕರಾವಳಿ
  • ಕ್ರೈಂ ನ್ಯೂಸ್
  • ಕ್ರೀಡೆ
  • ಸಿನಿಮಾ
  • ಆರೋಗ್ಯ
  • ವೆಬ್ ಸ್ಟೊರೀಸ್
Join to Group
  • Home
    • ಗ್ಯಾಜೆಟ್
  • ರಾಜ್ಯ
  • ರಾಷ್ಟ್ರೀಯ
  • ರಾಜಕೀಯ
  • ವಿದೇಶಿ ಸುದ್ದಿ
  • ಕರಾವಳಿ
  • ಕ್ರೈಂ ನ್ಯೂಸ್
  • ಕ್ರೀಡೆ
  • ಸಿನಿಮಾ
  • ಆರೋಗ್ಯ
  • ವೆಬ್ ಸ್ಟೊರೀಸ್
No Result
View All Result
Coastal Times Kannada
No Result
View All Result

ಅರ್ಜೆಂಟೀನಾ ಚಾಂಪಿಯನ್‌, ಕೊನೆಗೂ ನನಸಾದ ಮೆಸ್ಸಿ ಕನಸು

Coastal Times by Coastal Times
December 19, 2022
in ಕ್ರೀಡಾ ಸುದ್ದಿ
ಅರ್ಜೆಂಟೀನಾ ಚಾಂಪಿಯನ್‌, ಕೊನೆಗೂ ನನಸಾದ ಮೆಸ್ಸಿ ಕನಸು
44
VIEWS
WhatsappTelegramShare on FacebookShare on Twitter

ದೋಹಾ: ಆಧುನಿಕ ಫುಟ್‌ಬಾಲ್‌ನ ದಿಗ್ಗಜ ಆಟಗಾರ ಲಯೊನೆಲ್‌ ಮೆಸ್ಸಿ ಅವರ ಕೋಟ್ಯಂತರ ಅಭಿಮಾನಿಗಳ ಪ್ರಾರ್ಥನೆ, ಕತಾರ್‌ನ ರಾಜಧಾನಿ ದೋಹಾದ ಲುಸೈಲ್‌ ಕ್ರೀಡಾಂಗಣದಲ್ಲಿ ಭಾನುವಾರ ರಾತ್ರಿ ಈಡೇರಿತು. ಫ್ರಾನ್ಸ್‌ ತಂಡವನ್ನು ಪೆನಾಲ್ಟಿ ಶೂಟೌಟ್‌ನಲ್ಲಿ 4–2 ಗೋಲುಗಳಿಂದ ಮಣಿಸಿದ ಅರ್ಜೆಂಟೀನಾ ತಂಡ ಫಿಫಾ ವಿಶ್ವಕಪ್‌ ಫುಟ್‌ಬಾಲ್‌ ಟೂರ್ನಿಯನ್ನು ಗೆದ್ದು ಬೀಗಿತು.

ಮೆಸ್ಸಿ ಅವರು ಈ ಹಿಂದಿನ ನಾಲ್ಕು ವಿಶ್ವಕಪ್‌ ಟೂರ್ನಿಗಳಲ್ಲಿ ತನಗೆ ದಕ್ಕದೇ ಇದ್ದ ಮಿರುಗುವ ಟ್ರೋಫಿಯನ್ನು ಐದನೇ ಪ್ರಯತ್ನದಲ್ಲಿ ಎತ್ತಿಹಿಡಿದು ಮುತ್ತಿಕ್ಕಿದರು. ಆ ಕ್ಷಣಕ್ಕಾಗಿ ಕಾಯುತ್ತಿದ್ದ ಅವರ ಅಭಿಮಾನಿಗಳು ಆನಂದಭಾಷ್ಪ ಸುರಿಸಿದರು. ದಕ್ಷಿಣ ಅಮೆರಿಕದ ರಾಷ್ಟ್ರ, ಅರ್ಜೆಂಟೀನಾ ಸಂಭ್ರಮದಲ್ಲಿ ಮಿಂದೆದ್ದಿತು. ಸಾವಿರಾರು ಮಂದಿ ಬೀದಿಗಿಳಿದು ಸಂತಸಪಟ್ಟರು.

ನಿಗದಿತ ಮತ್ತು ಹೆಚ್ಚುವರಿ ಅವಧಿಯ ಬಳಿಕ ಉಭಯ ತಂಡಗಳು 3–3 ಗೋಲುಗಳಿಂದ ಸಮಬಲ ಸಾಧಿಸಿದ್ದವು. ಇದರಿಂದ ವಿಜೇತರನ್ನು ನಿರ್ಣಯಿಸಲು ಪೆನಾಲ್ಟಿ ಶೂಟೌಟ್‌ ಮೊರೆ ಹೋಗಲಾಯಿತು. ನಿಗದಿತ ಸಮಯದಲ್ಲಿ ಅರ್ಜೆಂಟೀನಾ ಪರ ಮೆಸ್ಸಿ (23 ಮತ್ತು 109ನೇ ನಿ.) ಎರಡು ಗೋಲುಗಳನ್ನು ಗಳಿಸಿದರೆ, ಇನ್ನೊಂದು ಗೋಲನ್ನು ಏಂಜೆಲ್‌ ಡಿ ಮರಿಯಾ (36ನೇ ನಿ.) ತಂದಿತ್ತರು. ಫ್ರಾನ್ಸ್‌ ತಂಡದ ಮೂರೂ ಗೋಲುಗಳನ್ನು ಕಿಲಿಯಾನ್‌ ಎಂಬಾಪೆ (80, 81 ಮತ್ತು 118ನೇ ನಿ.) ಗಳಿಸಿದರು.

ಅರ್ಜೆಂಟೀನಾಕ್ಕೆ ದೊರೆತ ಮೂರನೇ ಟ್ರೋಫಿ ಇದು. ಈ ಹಿಂದೆ 1978 ಮತ್ತು 1986 ರಲ್ಲಿ ಚಾಂಪಿಯನ್‌ ಆಗಿತ್ತು. ಡಿಯೆಗೊ ಮರಡೋನಾ ಅವರು 36 ವರ್ಷಗಳ ಹಿಂದೆ ಮೆಕ್ಸಿಕೊದಲ್ಲಿ ಮಾಡಿದ್ದ ಚಮತ್ಕಾರವನ್ನು ಮೆಸ್ಸಿ, ಮರುಭೂಮಿಯ ನಾಡಿನಲ್ಲಿ ಮಾಡಿ ತೋರಿಸಿದರು. 35 ವರ್ಷದ ಮೆಸ್ಸಿ ಅವರಿಗೆ ಇದು ಬಹುತೇಕ ಕೊನೆಯ ವಿಶ್ವಕಪ್‌ ಟೂರ್ನಿ ಆಗಿದೆ. ಸತತ ಎರಡನೇ ಪ್ರಶಸ್ತಿ ಜಯಿಸಬೇಕೆಂಬ ಫ್ರಾನ್ಸ್‌ ತಂಡದ ಕನಸು ನುಚ್ಚುನೂರಾಯಿತು. ಸ್ಟಾರ್ ಆಟಗಾರ ಎಂಬಾಪೆ ಮಿಂಚಿದರೂ ತಂಡಕ್ಕೆ ಗೆಲುವು ದಕ್ಕಲಿಲ್ಲ.

Share this:

  • Share on Facebook (Opens in new window) Facebook
  • Share on X (Opens in new window) X

Like this:

Like Loading…

Related

Discover more from Coastal Times Kannada

Subscribe to get the latest posts sent to your email.

Previous Post

ಮುಲ್ಕಿ; ಮರಕ್ಕೆ ಕಟ್ಟಿ ಹಾಕಿ ಯುವಕನಿಗೆ ಹಲ್ಲೆ ಪ್ರಕರಣ: ಮೂವರು ಆರೋಪಿಗಳ ಬಂಧನ

Next Post

ಡಿಸೆಂಬರ್ 24 ರಿಂದ 10 ದಿನಗಳ ಬೇಕಲ್ ಅಂತರಾಷ್ಟ್ರೀಯ ಬೀಚ್ ಫೆಸ್ಟ್ ಆರಂಭ

Related Posts

FIFA World Cup 2026: ಅರ್ಜೆಂಟೀನಾಗೆ ಸೋಲು – ಸ್ಪೇನ್ ಮುಡಿಗೆ ಫಿಫಾ ವಿಶ್ವಕಪ್​ ಕಿರೀಟ
ಕ್ರೀಡಾ ಸುದ್ದಿ

FIFA World Cup 2026: ಅರ್ಜೆಂಟೀನಾಗೆ ಸೋಲು – ಸ್ಪೇನ್ ಮುಡಿಗೆ ಫಿಫಾ ವಿಶ್ವಕಪ್​ ಕಿರೀಟ

July 20, 2026
37
ವೆಸ್ಟ್ ಇಂಡೀಸ್‌ ಕ್ರಿಕೆಟ್​​ ದಂತಕಥೆ, ಆಲ್​ರೌಂಡರ್ ಸರ್ ಗ್ಯಾರಿ ಸೋಬರ್ಸ್ ನಿಧನ
ಕ್ರೀಡಾ ಸುದ್ದಿ

ವೆಸ್ಟ್ ಇಂಡೀಸ್‌ ಕ್ರಿಕೆಟ್​​ ದಂತಕಥೆ, ಆಲ್​ರೌಂಡರ್ ಸರ್ ಗ್ಯಾರಿ ಸೋಬರ್ಸ್ ನಿಧನ

July 18, 2026
20
Next Post
ಡಿಸೆಂಬರ್ 24 ರಿಂದ 10 ದಿನಗಳ ಬೇಕಲ್ ಅಂತರಾಷ್ಟ್ರೀಯ ಬೀಚ್ ಫೆಸ್ಟ್ ಆರಂಭ

ಡಿಸೆಂಬರ್ 24 ರಿಂದ 10 ದಿನಗಳ ಬೇಕಲ್ ಅಂತರಾಷ್ಟ್ರೀಯ ಬೀಚ್ ಫೆಸ್ಟ್ ಆರಂಭ

Discussion about this post

Recent News

ಆಗಸ್ಟ್ 8, 9; ಮಂಗಳೂರಿನಲ್ಲಿ ಉಚಿತ ಕೃತಕ ಕೈ-ಕಾಲು ಜೋಡಣಾ ಶಿಬಿರ, ಅರ್ಹ ಫಲಾನುಭವಿಗಳಿಗೆ ಹೆಸರು ನೋಂದಾಯಿಸಲು ಮನವಿ

ಆಗಸ್ಟ್ 8, 9; ಮಂಗಳೂರಿನಲ್ಲಿ ಉಚಿತ ಕೃತಕ ಕೈ-ಕಾಲು ಜೋಡಣಾ ಶಿಬಿರ, ಅರ್ಹ ಫಲಾನುಭವಿಗಳಿಗೆ ಹೆಸರು ನೋಂದಾಯಿಸಲು ಮನವಿ

July 22, 2026
42
ಮಂಗಳೂರಿನಲ್ಲಿ ಅಕೌಂಟ್ ದಂಧೆ ಬಯಲಿಗೆ: ಯುವಕನ ಅಕೌಂಟ್ ಬಳಸಿ ಕೋಟಿ ಕೋಟಿ ಸೈಬರ್ ವಂಚನೆ: ಪ್ರಕರಣ ದಾಖಲು

ಮಂಗಳೂರಿನಲ್ಲಿ ಅಕೌಂಟ್ ದಂಧೆ ಬಯಲಿಗೆ: ಯುವಕನ ಅಕೌಂಟ್ ಬಳಸಿ ಕೋಟಿ ಕೋಟಿ ಸೈಬರ್ ವಂಚನೆ: ಪ್ರಕರಣ ದಾಖಲು

July 22, 2026
33
COASTAL BOX LOGO

CORPORATE OFFICE

KHYATI VISUAL MEDIA
3rd Floor, Shalimar Complex
Kankanady, Mangaluru-575002

Email ID : coastaltimeskannada@gmail.com

Follow Us

ಹೊಸ ಸುದ್ದಿಗಳು

ಆಗಸ್ಟ್ 8, 9; ಮಂಗಳೂರಿನಲ್ಲಿ ಉಚಿತ ಕೃತಕ ಕೈ-ಕಾಲು ಜೋಡಣಾ ಶಿಬಿರ, ಅರ್ಹ ಫಲಾನುಭವಿಗಳಿಗೆ ಹೆಸರು ನೋಂದಾಯಿಸಲು ಮನವಿ

ಆಗಸ್ಟ್ 8, 9; ಮಂಗಳೂರಿನಲ್ಲಿ ಉಚಿತ ಕೃತಕ ಕೈ-ಕಾಲು ಜೋಡಣಾ ಶಿಬಿರ, ಅರ್ಹ ಫಲಾನುಭವಿಗಳಿಗೆ ಹೆಸರು ನೋಂದಾಯಿಸಲು ಮನವಿ

July 22, 2026
ಮಂಗಳೂರಿನಲ್ಲಿ ಅಕೌಂಟ್ ದಂಧೆ ಬಯಲಿಗೆ: ಯುವಕನ ಅಕೌಂಟ್ ಬಳಸಿ ಕೋಟಿ ಕೋಟಿ ಸೈಬರ್ ವಂಚನೆ: ಪ್ರಕರಣ ದಾಖಲು

ಮಂಗಳೂರಿನಲ್ಲಿ ಅಕೌಂಟ್ ದಂಧೆ ಬಯಲಿಗೆ: ಯುವಕನ ಅಕೌಂಟ್ ಬಳಸಿ ಕೋಟಿ ಕೋಟಿ ಸೈಬರ್ ವಂಚನೆ: ಪ್ರಕರಣ ದಾಖಲು

July 22, 2026
ಮಂತ್ರಾಲಯಕ್ಕೆ ತೆರಳುತ್ತಿದ್ದ ವೇಳೆ ನಿಯಂತ್ರಣ ತಪ್ಪಿ ಕಾರು ಡಿವೈಡರ್ ಗೆ ಡಿಕ್ಕಿ, ಮಂಗಳೂರಿನ ಹಾಪ್‌ಕಾಮ್ಸ್ ಜಿಎಂ ರವಿ ಶೆಟ್ಟಿ ಸ್ಥಳದಲ್ಲೇ ಸಾವು

ಮಂತ್ರಾಲಯಕ್ಕೆ ತೆರಳುತ್ತಿದ್ದ ವೇಳೆ ನಿಯಂತ್ರಣ ತಪ್ಪಿ ಕಾರು ಡಿವೈಡರ್ ಗೆ ಡಿಕ್ಕಿ, ಮಂಗಳೂರಿನ ಹಾಪ್‌ಕಾಮ್ಸ್ ಜಿಎಂ ರವಿ ಶೆಟ್ಟಿ ಸ್ಥಳದಲ್ಲೇ ಸಾವು

July 21, 2026
  • About
  • Advertise
  • Privacy & Policy
  • Contact

Copyright ©2024. All Rights Reserved. Coastaltimeskannada.com | Design and Developed By Bluechip Infosystem - Contact Us : cc.bcis.blr@gmail.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

%d