• About us
  • Contact us
  • Disclaimer
Wednesday, October 14, 2026
  • Login
Coastal Times Kannada
No Result
View All Result
  • Home
    • ಗ್ಯಾಜೆಟ್
  • ರಾಜ್ಯ
  • ರಾಷ್ಟ್ರೀಯ
  • ರಾಜಕೀಯ
  • ವಿದೇಶಿ ಸುದ್ದಿ
  • ಕರಾವಳಿ
  • ಕ್ರೈಂ ನ್ಯೂಸ್
  • ಕ್ರೀಡೆ
  • ಸಿನಿಮಾ
  • ಆರೋಗ್ಯ
  • ವೆಬ್ ಸ್ಟೊರೀಸ್
Join to Group
  • Home
    • ಗ್ಯಾಜೆಟ್
  • ರಾಜ್ಯ
  • ರಾಷ್ಟ್ರೀಯ
  • ರಾಜಕೀಯ
  • ವಿದೇಶಿ ಸುದ್ದಿ
  • ಕರಾವಳಿ
  • ಕ್ರೈಂ ನ್ಯೂಸ್
  • ಕ್ರೀಡೆ
  • ಸಿನಿಮಾ
  • ಆರೋಗ್ಯ
  • ವೆಬ್ ಸ್ಟೊರೀಸ್
No Result
View All Result
Coastal Times Kannada
No Result
View All Result

ಕ್ರಿಕೆಟ್ ಆಸ್ಟ್ರೇಲಿಯಾ ಅನಯಾ ಬಂಗಾರ್​ಗೆ ಆಡುವ ಅವಕಾಶ; ಮಹಿಳಾ ಆಟಗಾರ್ತಿಯರ ವಿರೋಧ

Coastal Times by Coastal Times
August 29, 2026
in ಕ್ರೀಡಾ ಸುದ್ದಿ
ಕ್ರಿಕೆಟ್ ಆಸ್ಟ್ರೇಲಿಯಾ ಅನಯಾ ಬಂಗಾರ್​ಗೆ ಆಡುವ ಅವಕಾಶ; ಮಹಿಳಾ ಆಟಗಾರ್ತಿಯರ ವಿರೋಧ
52
VIEWS
WhatsappTelegramShare on FacebookShare on Twitter

ನವದೆಹಲಿ: ಟೀಂ ಇಂಡಿಯಾದ ಮಾಜಿ ಆಟಗಾರ ಸಂಜಯ್ ಬಂಗಾರ್ ಅವರ ಮಗ ಲಿಂಗ ಬದಲಾವಣೆ ಮಾಡಿಕೊಂಡು ಹೆಣ್ಣಾಗಿ ಬದಲಾಗಿರುವುದು ಹಳೆಯ ವಿಚಾರ. ಹೆಣ್ಣಾಗಿ ಬದಲಾಗಿರುವ ಅನಯಾ ಬಂಗಾರ್ ಮಹಿಳಾ ಕ್ರಿಕೆಟ್​ನಲ್ಲಿ ತಮ್ಮ ವೃತ್ತಿಜೀವನವನ್ನು ಮತ್ತೆ ಶುರು ಮಾಡುವ ಇರಾದೆಯಲ್ಲಿದ್ದಾರೆ. ಇದಕ್ಕೆ ಪೂರಕವಾಗಿ ಕ್ರಿಕೆಟ್ ಆಸ್ಟ್ರೇಲಿಯಾ ಕೆಲವು ಷರತ್ತುಗಳೊಂದಿಗೆ ಅನಯಾ ಬಂಗಾರ್​ಗೆ ಆಸ್ಟ್ರೇಲಿಯಾ ಮಹಿಳಾ ಕ್ರಿಕೆಟ್​ನಲ್ಲಿ ಆಡುವ ಅವಕಾಶ ನೀಡುವ ಬಗ್ಗೆ ಉತ್ಸುಕವಾಗಿತ್ತು. ಕ್ರಿಕೆಟ್ ಆಸ್ಟ್ರೇಲಿಯಾದ ಈ ತೀರ್ಮಾನ ಮಹಿಳಾ ಆಟಗಾರ್ತಿಯರ ಅಸಮಾಧಾನಕ್ಕೆ ಕಾರಣವಾಗಿದೆ. ದಕ್ಷಿಣ ಆಫ್ರಿಕಾದ ಅನುಭವಿ ಆಲ್‌ರೌಂಡರ್ ಮರಿಜಾನ್ನೆ ಕಪ್ ಇದು ಅತ್ಯಂತ ಕೆಟ್ಟ ನಿರ್ಧಾರ ಎಂದು ಜರಿದಿದ್ದು, ಅನಯಾ ಬಂಗಾರ್​ಗೆ ಅವಕಾಶ ನೀಡಬಾರದು ಎಂದು ಒತ್ತಾಯಿಸಿದ್ದಾರೆ.

ಭಾರತದಲ್ಲಿ ಅವಕಾಶ ಸಿಕ್ಕಿಲ್ಲ : ಮೇಲೆ ಹೇಳಿದಂತೆ ಅನಯಾ ಬಂಗಾರ್ ಒಬ್ಬ ಟ್ರಾನ್ಸ್ಜೆಂಡರ್ ಕ್ರಿಕೆಟರ್, ಅವರು ತಮ್ಮ ಲಿಂಗವನ್ನು ಹುಡುಗನಿಂದ ಹುಡುಗಿಯಾಗಿ ಬದಲಾಯಿಸಲು ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಈ ರೂಪಾಂತರದ ಮೊದಲು, ಬಂಗಾರ್ ಭಾರತದಲ್ಲಿ ಮುಂಬೈ ಪರ ವಯೋಮಾನದ ಕ್ರಿಕೆಟ್‌ ಆಡುತ್ತಿದ್ದರು. ಆದಾಗ್ಯೂ, ಲಿಂಗ ಬದಲಾವಣೆಯ ನಂತರ ಭಾರತದಲ್ಲಿ ಅವರಿಗೆ ಆಡುವ ಅವಕಾಶ ಸಿಕ್ಕಿಲ್ಲ. ಏಕೆಂದರೆ ಮಹಿಳಾ ಕ್ರಿಕೆಟ್‌ನಲ್ಲಿ ಟ್ರಾನ್ಸ್ಜೆಂಡರ್‌ಗಳು ಆಡುವ ಬಗ್ಗೆ ಬಿಸಿಸಿಐ ಯಾವುದೇ ನೀತಿಯನ್ನು ಹೊಂದಿಲ್ಲ. ಅಲ್ಲದೆ ಐಸಿಸಿ ಕೂಡ ಅದನ್ನು ನಿಷೇಧಿಸಿದೆ.

ಇದನ್ನು ಅನುಮತಿಸಬಾರದು ದಕ್ಷಿಣ ಆಫ್ರಿಕಾದ ಅನುಭವಿ ಆಟಗಾರ್ತಿ ಮರಿಜಾನ್ನೆ ಕಪ್ಪ್; ಆದರೆ ಕ್ರಿಕೆಟ್ ಆಸ್ಟ್ರೇಲಿಯಾ ವಿಭಿನ್ನ ನೀತಿಯನ್ನು ಹೊಂದಿದ್ದು, ಅದರ ಅಡಿಯಲ್ಲಿ ಅನಯಾ ಬಂಗಾರ್ ಮಹಿಳಾ ಕ್ರಿಕೆಟ್‌ನಲ್ಲಿ ಭಾಗವಹಿಸಲು ಷರತ್ತುಬದ್ಧ ಅವಕಾಶ ನೀಡಿದೆ. ಅನೇಕ ಅಭಿಮಾನಿಗಳು ಈ ಬಗ್ಗೆ ವಿಭಿನ್ನ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದರೂ, ಮೊದಲ ಬಾರಿಗೆ, ಕ್ರಿಕೆಟ್ ವಲಯದಲ್ಲಿ ಇದರ ವಿರುದ್ಧ ಧ್ವನಿ ಎತ್ತಲಾಗುತ್ತಿದೆ. ದಕ್ಷಿಣ ಆಫ್ರಿಕಾದ ಅನುಭವಿ ಆಟಗಾರ್ತಿ ಮರಿಜಾನ್ನೆ ಕಪ್ಪ್ ತಮ್ಮ ಇನ್‌ಸ್ಟಾಗ್ರಾಮ್ ಈ ಬಗ್ಗೆ ಪೋಸ್ಟ್‌ ಮಾಡಿದ್ದು, ‘ಇದು ಸಂಪೂರ್ಣವಾಗಿ ಅಸಂಬದ್ಧ, ಇದನ್ನು ಅನುಮತಿಸಬಾರದು’ ಎಂದು ಬರೆದುಕೊಂಡಿದ್ದಾರೆ. ಹಾಗೆಯೇ ಇದರ ಜೊತೆಗೆ ಬಂಗಾರ್ ಆಡುವ ನಿರೀಕ್ಷೆಯಿರುವ WBBL ಅನ್ನು ಸಹ ಟ್ಯಾಗ್ ಮಾಡಿದ್ದಾರೆ.

ಅರ್ಹತೆ ಆಯ್ಕೆಯಲ್ಲ : ಇನ್ನು ಕ್ರಿಕೆಟ್ ಆಸ್ಟ್ರೇಲಿಯಾ ಷರತ್ತುಬದ್ಧ ಅನುಮತಿ ನೀಡಿರುವ ಬಗ್ಗೆ ಅಭಿಪ್ರಾಯ ಹಂಚಿಕೊಂಡಿರುವ ಅನಯಾ ಬಂಗಾರ್, ‘ಅರ್ಹತೆ ಆಯ್ಕೆಯಲ್ಲ ಎಂದು ನಾನು ಸ್ಪಷ್ಟವಾಗಿ ಹೇಳಲು ಬಯಸುತ್ತೇನೆ. ಕ್ರಿಕೆಟ್ ಆಸ್ಟ್ರೇಲಿಯಾ ನನಗೆ ಒಂದು ಮಾರ್ಗವನ್ನು ತೋರಿಸಿದೆ, ಆದರೆ ಅದರರ್ಥ ನಾನು ತಂಡದಲ್ಲಿ ಸ್ಥಾನ ಪಡೆದಿದ್ದೇನೆ ಎಂದಲ್ಲ. ನಾನು ಇನ್ನೂ ಅಭ್ಯಾಸ ಮಾಡಬೇಕು, ಸ್ಪರ್ಧಿಸಬೇಕು, ಉತ್ತಮ ಪ್ರದರ್ಶನ ನೀಡಬೇಕು ಮತ್ತು ಆ ಅವಕಾಶವನ್ನು ಗಳಿಸಬೇಕು’ ಎಂದು ಬರೆದುಕೊಂಡಿದ್ದಾರೆ.

Share this:

  • Share on Facebook (Opens in new window) Facebook
  • Share on X (Opens in new window) X

Like this:

Like Loading…

Related

Discover more from Coastal Times Kannada

Subscribe to get the latest posts sent to your email.

Previous Post

ಮಧ್ಯಪ್ರದೇಶದಲ್ಲಿ ಭೀಕರ ಅಪಘಾತ: ಆರೋಪಿ ಬಂಧನಕ್ಕೆ ತೆರಳಿದ್ದ ಬೆಂಗಳೂರಿನ ಪೊಲೀಸ್​ ಇನ್ಸ್​ಪೆಕ್ಟರ್ ಸೇರಿ ನಾಲ್ವರು ಸಾವು

Next Post

ಜಿಲ್ಲಾ ಕಾರಾಗೃಹದಲ್ಲಿ ಪಿಎಂಐ ಮಂಗಳೂರು ಘಟಕದಿಂದ ರಕ್ಷಾಬಂಧನ ಆಚರಣೆ-ಬಂಧಿಗಳಲ್ಲಿ ಸಹೋದರತ್ವ, ಗೌರವ ಹಾಗೂ ಭರವಸೆಯ ಸಂದೇಶ ಸಾರಿದ ರಾಖಿ ಹಬ್ಬ

Related Posts

ಸರ್ವಾಂಗಾಸನವನ್ನು ನಿರಂತರ 32 ನಿಮಿಷಗಳ ಕಾಲ ಮಾಡುವ ಮೂಲಕ ಆಳ್ವಾಸ್ ವಿದ್ಯಾರ್ಥಿ ಪಿಕೆ ವಿಕಾಸ್ ‘ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್’ನಿಂದ ವಿಶ್ವ ದಾಖಲೆ ಮಾನ್ಯತೆ ಪಡೆದಿದ್ದಾರೆ.
ಕರಾವಳಿ

ಸರ್ವಾಂಗಾಸನವನ್ನು ನಿರಂತರ 32 ನಿಮಿಷಗಳ ಕಾಲ ಮಾಡುವ ಮೂಲಕ ಆಳ್ವಾಸ್ ವಿದ್ಯಾರ್ಥಿ ಪಿಕೆ ವಿಕಾಸ್ ‘ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್’ನಿಂದ ವಿಶ್ವ ದಾಖಲೆ ಮಾನ್ಯತೆ ಪಡೆದಿದ್ದಾರೆ.

October 5, 2026
28
ಮಂಗಳೂರು: ಏಷ್ಯನ್ ಗೇಮ್ಸ್‌ನ ರಿಲೇ ಸ್ಪರ್ಧೆಯಲ್ಲಿ ಭಾರತಕ್ಕೆ ಚಿನ್ನದ ಪದಕ ತಂದುಕೊಟ್ಟ ಅಥ್ಲೀಟ್ ಎಂ.ಆರ್. ಪೂವಮ್ಮ ಅವರಿಗೆ ಬಿಜೆಪಿಯಿಂದ ಅಭಿನಂದನೆ
ಕ್ರೀಡಾ ಸುದ್ದಿ

ಮಂಗಳೂರು: ಏಷ್ಯನ್ ಗೇಮ್ಸ್‌ನ ರಿಲೇ ಸ್ಪರ್ಧೆಯಲ್ಲಿ ಭಾರತಕ್ಕೆ ಚಿನ್ನದ ಪದಕ ತಂದುಕೊಟ್ಟ ಅಥ್ಲೀಟ್ ಎಂ.ಆರ್. ಪೂವಮ್ಮ ಅವರಿಗೆ ಬಿಜೆಪಿಯಿಂದ ಅಭಿನಂದನೆ

October 3, 2026
27
Next Post
ಜಿಲ್ಲಾ ಕಾರಾಗೃಹದಲ್ಲಿ ಪಿಎಂಐ ಮಂಗಳೂರು ಘಟಕದಿಂದ ರಕ್ಷಾಬಂಧನ ಆಚರಣೆ-ಬಂಧಿಗಳಲ್ಲಿ ಸಹೋದರತ್ವ, ಗೌರವ ಹಾಗೂ ಭರವಸೆಯ ಸಂದೇಶ ಸಾರಿದ ರಾಖಿ ಹಬ್ಬ

ಜಿಲ್ಲಾ ಕಾರಾಗೃಹದಲ್ಲಿ ಪಿಎಂಐ ಮಂಗಳೂರು ಘಟಕದಿಂದ ರಕ್ಷಾಬಂಧನ ಆಚರಣೆ-ಬಂಧಿಗಳಲ್ಲಿ ಸಹೋದರತ್ವ, ಗೌರವ ಹಾಗೂ ಭರವಸೆಯ ಸಂದೇಶ ಸಾರಿದ ರಾಖಿ ಹಬ್ಬ

Discussion about this post

Recent News

ಸುಳ್ಯ: ತಡರಾತ್ರಿ ಮೀನು ಹಿಡಿಯಲು ಹೋಗಿದ್ದ ವೇಳೆ ಹಂದಿಗೆ ಇಟ್ಟಿದ್ದ ವಿದ್ಯುತ್ ತಂತಿಯನ್ನು ತುಳಿದು ಇಬ್ಬರು ಯುವಕರು ಸಾವು

ಸುಳ್ಯ: ತಡರಾತ್ರಿ ಮೀನು ಹಿಡಿಯಲು ಹೋಗಿದ್ದ ವೇಳೆ ಹಂದಿಗೆ ಇಟ್ಟಿದ್ದ ವಿದ್ಯುತ್ ತಂತಿಯನ್ನು ತುಳಿದು ಇಬ್ಬರು ಯುವಕರು ಸಾವು

October 13, 2026
54
ಪೆಹಲ್ಗಾಮ್ ಹತ್ಯಾಕಾಂಡದ ಹೆಸರಿನಲ್ಲಿ ಡಿಜಿಟಲ್ ಅರೆಸ್ಟ್ ಮುಂಬೈ ಪೊಲೀಸ್ ಸೋಗಿನಲ್ಲಿ ಪುತ್ತೂರಿನ ವ್ಯಕ್ತಿಯೊಬ್ಬರಿಗೆ 1.3 ಕೋಟಿ ರೂ. ವಂಚನೆ!

ಪೆಹಲ್ಗಾಮ್ ಹತ್ಯಾಕಾಂಡದ ಹೆಸರಿನಲ್ಲಿ ಡಿಜಿಟಲ್ ಅರೆಸ್ಟ್ ಮುಂಬೈ ಪೊಲೀಸ್ ಸೋಗಿನಲ್ಲಿ ಪುತ್ತೂರಿನ ವ್ಯಕ್ತಿಯೊಬ್ಬರಿಗೆ 1.3 ಕೋಟಿ ರೂ. ವಂಚನೆ!

October 13, 2026
26
COASTAL BOX LOGO

CORPORATE OFFICE

KHYATI VISUAL MEDIA
3rd Floor, Shalimar Complex
Kankanady, Mangaluru-575002

Email ID : coastaltimeskannada@gmail.com

Follow Us

ಹೊಸ ಸುದ್ದಿಗಳು

ಸುಳ್ಯ: ತಡರಾತ್ರಿ ಮೀನು ಹಿಡಿಯಲು ಹೋಗಿದ್ದ ವೇಳೆ ಹಂದಿಗೆ ಇಟ್ಟಿದ್ದ ವಿದ್ಯುತ್ ತಂತಿಯನ್ನು ತುಳಿದು ಇಬ್ಬರು ಯುವಕರು ಸಾವು

ಸುಳ್ಯ: ತಡರಾತ್ರಿ ಮೀನು ಹಿಡಿಯಲು ಹೋಗಿದ್ದ ವೇಳೆ ಹಂದಿಗೆ ಇಟ್ಟಿದ್ದ ವಿದ್ಯುತ್ ತಂತಿಯನ್ನು ತುಳಿದು ಇಬ್ಬರು ಯುವಕರು ಸಾವು

October 13, 2026
ಪೆಹಲ್ಗಾಮ್ ಹತ್ಯಾಕಾಂಡದ ಹೆಸರಿನಲ್ಲಿ ಡಿಜಿಟಲ್ ಅರೆಸ್ಟ್ ಮುಂಬೈ ಪೊಲೀಸ್ ಸೋಗಿನಲ್ಲಿ ಪುತ್ತೂರಿನ ವ್ಯಕ್ತಿಯೊಬ್ಬರಿಗೆ 1.3 ಕೋಟಿ ರೂ. ವಂಚನೆ!

ಪೆಹಲ್ಗಾಮ್ ಹತ್ಯಾಕಾಂಡದ ಹೆಸರಿನಲ್ಲಿ ಡಿಜಿಟಲ್ ಅರೆಸ್ಟ್ ಮುಂಬೈ ಪೊಲೀಸ್ ಸೋಗಿನಲ್ಲಿ ಪುತ್ತೂರಿನ ವ್ಯಕ್ತಿಯೊಬ್ಬರಿಗೆ 1.3 ಕೋಟಿ ರೂ. ವಂಚನೆ!

October 13, 2026
ಮಂಗಳೂರು ಪಂಜಿಮೊಗರು ಅನೈತಿಕ ಸಂಬಂಧ ಶಂಕೆ; ಪತ್ನಿಯ ಭೀಕರ ಕೊಲೆ, ಪತಿಯ ಬಂಧನ

ಮಂಗಳೂರು ಪಂಜಿಮೊಗರು ಅನೈತಿಕ ಸಂಬಂಧ ಶಂಕೆ; ಪತ್ನಿಯ ಭೀಕರ ಕೊಲೆ, ಪತಿಯ ಬಂಧನ

October 13, 2026
  • About
  • Advertise
  • Privacy & Policy
  • Contact

Copyright ©2024. All Rights Reserved. Coastaltimeskannada.com | Design and Developed By Bluechip Infosystem - Contact Us : cc.bcis.blr@gmail.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

%d