• About us
  • Contact us
  • Disclaimer
Wednesday, March 11, 2026
  • Login
Coastal Times Kannada
No Result
View All Result
  • Home
    • ಗ್ಯಾಜೆಟ್
  • ರಾಜ್ಯ
  • ರಾಷ್ಟ್ರೀಯ
  • ರಾಜಕೀಯ
  • ವಿದೇಶಿ ಸುದ್ದಿ
  • ಕರಾವಳಿ
  • ಕ್ರೈಂ ನ್ಯೂಸ್
  • ಕ್ರೀಡೆ
  • ಸಿನಿಮಾ
  • ಆರೋಗ್ಯ
  • ವೆಬ್ ಸ್ಟೊರೀಸ್
Join to Group
  • Home
    • ಗ್ಯಾಜೆಟ್
  • ರಾಜ್ಯ
  • ರಾಷ್ಟ್ರೀಯ
  • ರಾಜಕೀಯ
  • ವಿದೇಶಿ ಸುದ್ದಿ
  • ಕರಾವಳಿ
  • ಕ್ರೈಂ ನ್ಯೂಸ್
  • ಕ್ರೀಡೆ
  • ಸಿನಿಮಾ
  • ಆರೋಗ್ಯ
  • ವೆಬ್ ಸ್ಟೊರೀಸ್
No Result
View All Result
Coastal Times Kannada
No Result
View All Result

ಶಿವಸೇನಾದ ಪ್ರಭಾವಿ ಮುಖಂಡ, ಸಚಿವ ಏಕನಾಥ ಶಿಂಧೆ ಹಲವು ಶಾಸಕರ ಜತೆ ಗುಜರಾತ್‌ಗೆ: ಉದ್ಧವ್‌ ಸರ್ಕಾರ ಬಿಕ್ಕಟ್ಟಿಗೆ

Coastal Times by Coastal Times
June 22, 2022
in ರಾಷ್ಟ್ರೀಯ ಸುದ್ದಿ
ಶಿವಸೇನಾದ ಪ್ರಭಾವಿ ಮುಖಂಡ, ಸಚಿವ ಏಕನಾಥ ಶಿಂಧೆ ಹಲವು ಶಾಸಕರ ಜತೆ ಗುಜರಾತ್‌ಗೆ: ಉದ್ಧವ್‌ ಸರ್ಕಾರ ಬಿಕ್ಕಟ್ಟಿಗೆ
11
VIEWS
WhatsappTelegramShare on FacebookShare on Twitter

ಮುಂಬೈ : ಶಿವಸೇನಾ ಮುಖ್ಯಸ್ಥ ಉದ್ಧವ್‌ ಠಾಕ್ರೆ ನೇತೃತ್ವದ, ಮಹಾರಾಷ್ಟ್ರದ ಮಹಾ ವಿಕಾಸ ಆಘಾಡಿ (ಎಂವಿಎ) ಸರ್ಕಾರವು ಬಿಕ್ಕಟ್ಟಿಗೆ ಸಿಲುಕಿದೆ. ಶಿವಸೇನಾದ ಪ್ರಭಾವಿ ಮುಖಂಡ, ಸಚಿವ ಏಕನಾಥ ಶಿಂಧೆ ಅವರು ಪಕ್ಷದ ಕೆಲವು ಶಾಸಕರೊಂದಿಗೆ ಸೂರತ್‌ನ ಹೋಟೆಲ್‌ನಲ್ಲಿ ತಂಗಿದ್ದು, ಬಂಡಾಯದ ಬಾವುಟ ಹಾರಿಸಿದ್ದಾರೆ. ಎರಡೂವರೆ ವರ್ಷಗಳ ಹಿಂದೆ ಅಸ್ತಿತ್ವಕ್ಕೆ ಬಂದ ಸರ್ಕಾರದ ಉಳಿವಿನ ಬಗ್ಗೆ ಈ ಬಂಡಾಯವು ಪ್ರಶ್ನಾರ್ಥಕ ಚಿಹ್ನೆ ಮೂಡುವಂತೆ ಮಾಡಿದೆ.

ವಿಧಾನಸಭೆಯಿಂದ ವಿಧಾನ ಪರಿಷತ್‌ನ 10 ಸ್ಥಾನಗಳಿಗೆ ಸೋಮವಾರ ನಡೆದ ಚುನಾವಣೆಯಲ್ಲಿ ಎಂವಿಎಗೆ ಹಿನ್ನಡೆಯಾದ ಬಳಿಕ ಮಹಾರಾಷ್ಟ್ರ ರಾಜಕಾರಣದಲ್ಲಿ ತೀವ್ರಗತಿಯಲ್ಲಿ ಬೆಳವಣಿಗೆಗಳು ನಡೆದಿವೆ. ಶಿವಸೇನಾ, ಎನ್‌ಸಿಪಿ ಮತ್ತು ಕಾಂಗ್ರೆಸ್‌ ಪಕ್ಷಗಳ ಮೈತ್ರಿಕೂಟವಾಗಿರುವ ಎಂವಿಎ, ಪರಿಷತ್‌ನ ಆರು ಸ್ಥಾನಗಳಿಗೆ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಿತ್ತು. ಆದರೆ, ಎಂವಿಎ ಅಂಗ ಪಕ್ಷಗಳ ಶಾಸಕರು ಅಡ್ಡ ಮತದಾನ ಮಾಡಿದ ಕಾರಣ ಎಂವಿಎಯ ಆರನೇ ಅಭ್ಯರ್ಥಿಗೆ ಸೋಲಾಗಿದೆ. ಬಿಜೆಪಿ ಐದು ಸ್ಥಾನಗಳನ್ನು ಗೆದ್ದುಕೊಂಡಿದೆ. ಇದರ ಬೆನ್ನಲ್ಲೇ, ಶಿಂಧೆ ಅವರು ಕೆಲವು ಶಾಸಕರ ಜತೆಗೆ ಗುಜರಾತ್‌ಗೆ ತೆರಳಿದ್ದಾರೆ.

ವಿಧಾನಸಭೆಯಿಂದ ರಾಜ್ಯಸಭೆಗೆ ನಡೆದ ಚುನಾವಣೆಯಲ್ಲಿಯೂ ಎಂವಿಎ ಅಂಗ ಪಕ್ಷಗಳ ಶಾಸಕರು ಬಿಜೆಪಿ ಅಭ್ಯರ್ಥಿ ಪರವಾಗಿ ಅಡ್ಡ ಮತದಾನ ಮಾಡಿದ್ದರು. ಶಿಂಧೆ ಅವರ ಜತೆಗೆ 14–15 ಶಾಸಕರು ಇದ್ದಾರೆ ಎಂದು ಸೇನಾ ಸಂಸದ ಸಂಜಯ ರಾವುತ್‌ ಹೇಳಿದ್ದಾರೆ. ವಿಧಾನಸಭೆಯಲ್ಲಿ ಶಿವಸೇನಾದ ನಾಯಕ ಹುದ್ದೆಯಿಂದ ಶಿಂಧೆ ಅವರನ್ನು ವಜಾ ಮಾಡಲಾಗಿದೆ. ಅಜಯ್‌ ಚೌಧರಿ ಅವರನ್ನು ಈ ಸ್ಥಾನಕ್ಕೆ ನೇಮಿಸಲಾಗಿದೆ ಎಂದು ರಾವುತ್‌ ತಿಳಿಸಿದ್ದಾರೆ.ಬಂಡಾಯ ಶಮನದಲ್ಲಿಯೂ ಎಂವಿಎ ತೊಡಗಿದೆ. ಮುಖಂಡರಾದ ಮಿಲಿಂದ್‌ ನಾರ್ವೇಕರ್‌ ಮತ್ತು ರವೀಂದ್ರ ಪಾಠಕ್‌ ಅವರನ್ನು ಸೂರತ್‌ಗೆ ಕಳುಹಿಸಿದ್ದು, ಶಿಂಧೆ ಮನವೊಲಿಸುವ ಹೊಣೆಯನ್ನು ಅವರಿಗೆ ವಹಿಸಲಾಗಿದೆ. ತಮ್ಮ ಯೋಜನೆಗಳೇನು ಎಂಬುದನ್ನು ಶಿಂಧೆ ಅವರು ಬಹಿರಂಗಪಡಿಸಿಲ್ಲ.

ಶಿವಸೇನಾದಲ್ಲಿನ ಬೆಳವಣಿಗೆಯೊಂದಿಗೆ ಬಿಜೆಪಿಗೆ ಯಾವುದೇ ನಂಟು ಇಲ್ಲ ಎಂದು ಮಹಾರಾಷ್ಟ್ರ ಬಿಜೆಪಿ ಘಟಕದ ಅಧ್ಯಕ್ಷ ಚಂದ್ರಕಾಂತ ಪಾಟೀಲ್‌ ಹೇಳಿದ್ದಾರೆ. ಪರ್ಯಾಯ ಸರ್ಕಾರ ರಚಿಸುವುದಕ್ಕಾಗಿ ಶಿಂಧೆ ಅವರು ತಮ್ಮನ್ನು ಸಂಪರ್ಕಿಸಿದರೆ, ಖಂಡಿತವಾಗಿಯೂ ಅದನ್ನು ಪರಿಶೀಲಿಸಲಾಗುವುದು ಎಂದು ಅವರು ಹೇಳಿದ್ದಾರೆ.  ‘ಹಿಂದುತ್ವದ ಪಾಠ ಹೇಳಿಕೊಟ್ಟ ಬಾಳಾಸಾಹೇಬ್‌ ಅವರ ನಿಷ್ಠಾವಂತ ಶಿವ ಸೈನಿಕರು ನಾವು. ಅಧಿಕಾರಕ್ಕಾಗಿ ನಾವು ವಂಚಿಸುವುದಿಲ್ಲ. ಬಾಳಾಸಾಹೇಬ್‌ ಮತ್ತು ಆನಂದ್‌ ದಿಘೆ ಅವರ ಸಿದ್ಧಾಂತಗಳನ್ನು ಅಧಿಕಾರಕ್ಕಾಗಿ ಕೈಬಿಡುವುದಿಲ್ಲ’ ಎಂದು ಶಿಂಧೆ ಟ್ವೀಟ್‌ ಮಾಡಿದ್ದಾರೆ. ಬಾಳಾಸಾಹೇಬ್‌ ಅವರು ಸೇನಾ ಸಂಸ್ಥಾಪಕ. ದಿಘೆ ಅವರು ಠಾಣೆ ಪ್ರದೇಶ ದಲ್ಲಿ ಸೇನಾದ ಪ್ರಭಾವಿ ಮುಖಂಡರಾಗಿದ್ದರು. ದಿಘೆ ಮಾರ್ಗದರ್ಶನದಲ್ಲಿಯೇ ಶಿಂಧೆ ಅವರು ಬೆಳೆದುಬಂದಿದ್ದಾರೆ.

ಮಹಾರಾಷ್ಟ್ರದ ಸರ್ಕಾರವನ್ನು ಉರುಳಿಸುವ ಮೂರನೇ ಪ್ರಯತ್ನ ನಡೆದಿದೆ ಎಂದು ಎಂವಿಎಯ ಎರಡನೇ ಅತೀ ದೊಡ್ಡ ಪಕ್ಷ ಎನ್‌ಸಿಪಿ ಮುಖ್ಯಸ್ಥ ಶರದ್‌ ಪವಾರ್‌ ಹೇಳಿದ್ದಾರೆ. ಇದು ಸೇನಾದ ಆಂತರಿಕ ವಿಚಾರವಾಗಿದ್ದು, ಉದ್ಧವ್‌ ಅವರು ಅದನ್ನು ನಿಭಾಯಿಸಲಿದ್ದಾರೆ ಎಂದಿದ್ದಾರೆ.

ಹೋಟೆಲ್‌ಗೆ ಬಿಗಿ ಭದ್ರತೆ ; ಸೇನಾ ಶಾಸಕರು ತಂಗಿರುವ ಸೂರತ್‌ನ ಲಿ ಮೆರೀಡಿಯನ್‌ ಹೋಟೆಲ್‌ಗೆ ಭಾರಿ ಭದ್ರತೆ ಒದಗಿಸಲಾಗಿದೆ. 300–400 ಪೊಲೀಸರು ಕಾವಲು ಕಾಯುತ್ತಿದ್ದಾರೆ. ಪ್ರವೇಶ ಮತ್ತು ನಿರ್ಗಮನ ದ್ವಾರಗಳಲ್ಲಿ ಬ್ಯಾರಿಕೇಡ್‌ ಅಳವಡಿಸಲಾಗಿದೆ. ಪರಿಶೀಲನೆಯ ಬಳಿಕವೇ ಜನರನ್ನು ಒಳಕ್ಕೆ ಕಳುಹಿಸಲಾಗುತ್ತಿದೆ. ಹೋಟೆಲ್‌ನ ಒಳಗಡೆಯೂ ಪೊಲೀಸ್‌ ಬಂದೋಬಸ್ತ್‌ ಏರ್ಪಡಿಸಲಾಗಿದೆ.

Share this:

  • Share on Facebook (Opens in new window) Facebook
  • Share on X (Opens in new window) X

Like this:

Like Loading...

Related

Discover more from Coastal Times Kannada

Subscribe to get the latest posts sent to your email.

Previous Post

ಮುಡಿಪು: ಹತ್ತಿ ಫ್ಯಾಕ್ಟರಿಯಲ್ಲಿ ಬೆಂಕಿ: ₹ 10 ಲಕ್ಷಕ್ಕೂ ಅಧಿಕ ನಷ್ಟ

Next Post

ಬೆಳಗಾವಿ: ಕೋಮಾದಲ್ಲಿರುವ ಮಗನ ಪ್ರಾಣ ಉಳಿಸಲು ದೇವರ ಮೊರೆ ಹೋದ ತಾಯಿ

Related Posts

ಇರಾನ್-ಇಸ್ರೇಲ್ ಯುದ್ಧ; ಕೇರಳದ ವಿಮಾನ ನಿಲ್ದಾಣಗಳಿಂದ ಗಲ್ಫ್​ ರಾಷ್ಟ್ರಗಳಿಗೆ ವಿಮಾನ ಸೇವೆ ಸ್ಥಗಿತ
ರಾಷ್ಟ್ರೀಯ ಸುದ್ದಿ

ಇರಾನ್-ಇಸ್ರೇಲ್ ಯುದ್ಧ; ಕೇರಳದ ವಿಮಾನ ನಿಲ್ದಾಣಗಳಿಂದ ಗಲ್ಫ್​ ರಾಷ್ಟ್ರಗಳಿಗೆ ವಿಮಾನ ಸೇವೆ ಸ್ಥಗಿತ

March 1, 2026
12
ರೆಡ್ ಹ್ಯಾಂಡ್ ಲಂಚ ಪಡೆಯುವಾಗ ಸಿಕ್ಕಿಬಿದ್ದ ಗಣಿ ಅಧಿಕಾರಿಯ ಮನೆ ತಪಾಸಣೆ ವೇಳೆ 4 ಕೋಟಿ ರೂಪಾಯಿ ಹಣ ಪತ್ತೆ
ಕ್ರೈಮ್ ನ್ಯೂಸ್

ರೆಡ್ ಹ್ಯಾಂಡ್ ಲಂಚ ಪಡೆಯುವಾಗ ಸಿಕ್ಕಿಬಿದ್ದ ಗಣಿ ಅಧಿಕಾರಿಯ ಮನೆ ತಪಾಸಣೆ ವೇಳೆ 4 ಕೋಟಿ ರೂಪಾಯಿ ಹಣ ಪತ್ತೆ

February 25, 2026
53
Next Post
ಬೆಳಗಾವಿ: ಕೋಮಾದಲ್ಲಿರುವ ಮಗನ ಪ್ರಾಣ ಉಳಿಸಲು ದೇವರ ಮೊರೆ ಹೋದ ತಾಯಿ

ಬೆಳಗಾವಿ: ಕೋಮಾದಲ್ಲಿರುವ ಮಗನ ಪ್ರಾಣ ಉಳಿಸಲು ದೇವರ ಮೊರೆ ಹೋದ ತಾಯಿ

Discussion about this post

Recent News

ಉಪ್ಪಿನಂಗಡಿ ; ಖಾಸಗಿ ವ್ಯಕ್ತಿ ಮನೆಯಲ್ಲಿ ಅಕ್ರಮ ಶೇಖರಿಸಿಟ್ಟ 4,175 ಲೀಟರ್ ಡೀಸೆಲ್ ಜಪ್ತಿ

ಉಪ್ಪಿನಂಗಡಿ ; ಖಾಸಗಿ ವ್ಯಕ್ತಿ ಮನೆಯಲ್ಲಿ ಅಕ್ರಮ ಶೇಖರಿಸಿಟ್ಟ 4,175 ಲೀಟರ್ ಡೀಸೆಲ್ ಜಪ್ತಿ

March 11, 2026
15
ಮಂಗಳೂರು ಜಂಕ್ಷನ್ ರೈಲ್ವೆ ನಿಲ್ದಾಣದಲ್ಲಿ 10 ಲಕ್ಷ ಮೌಲ್ಯದ 201 ಸ್ಮಾರ್ಟ್‌ ಫೋನ್ ಪತ್ತೆ

ಮಂಗಳೂರು ಜಂಕ್ಷನ್ ರೈಲ್ವೆ ನಿಲ್ದಾಣದಲ್ಲಿ 10 ಲಕ್ಷ ಮೌಲ್ಯದ 201 ಸ್ಮಾರ್ಟ್‌ ಫೋನ್ ಪತ್ತೆ

March 11, 2026
16
COASTAL BOX LOGO

CORPORATE OFFICE

KHYATI VISUAL MEDIA
3rd Floor, Shalimar Complex
Kankanady, Mangaluru-575002

Email ID : coastaltimeskannada@gmail.com

Follow Us

ಹೊಸ ಸುದ್ದಿಗಳು

ಉಪ್ಪಿನಂಗಡಿ ; ಖಾಸಗಿ ವ್ಯಕ್ತಿ ಮನೆಯಲ್ಲಿ ಅಕ್ರಮ ಶೇಖರಿಸಿಟ್ಟ 4,175 ಲೀಟರ್ ಡೀಸೆಲ್ ಜಪ್ತಿ

ಉಪ್ಪಿನಂಗಡಿ ; ಖಾಸಗಿ ವ್ಯಕ್ತಿ ಮನೆಯಲ್ಲಿ ಅಕ್ರಮ ಶೇಖರಿಸಿಟ್ಟ 4,175 ಲೀಟರ್ ಡೀಸೆಲ್ ಜಪ್ತಿ

March 11, 2026
ಮಂಗಳೂರು ಜಂಕ್ಷನ್ ರೈಲ್ವೆ ನಿಲ್ದಾಣದಲ್ಲಿ 10 ಲಕ್ಷ ಮೌಲ್ಯದ 201 ಸ್ಮಾರ್ಟ್‌ ಫೋನ್ ಪತ್ತೆ

ಮಂಗಳೂರು ಜಂಕ್ಷನ್ ರೈಲ್ವೆ ನಿಲ್ದಾಣದಲ್ಲಿ 10 ಲಕ್ಷ ಮೌಲ್ಯದ 201 ಸ್ಮಾರ್ಟ್‌ ಫೋನ್ ಪತ್ತೆ

March 11, 2026
ಬಂಟ್ವಾಳದ ಬಸ್ಸಿನಲ್ಲಿದ್ದಾಗ ಬ್ಯಾಗಿನಿಂದ 180 ಗ್ರಾಂ ಚಿನ್ನಾಭರಣ ಕಳವು ; ಆರೋಪಿ ಸೆರೆ, 20 ಲಕ್ಷ ಮೌಲ್ಯದ ಚಿನ್ನಾಭರಣ ವಶಕ್ಕೆ

ಬಂಟ್ವಾಳದ ಬಸ್ಸಿನಲ್ಲಿದ್ದಾಗ ಬ್ಯಾಗಿನಿಂದ 180 ಗ್ರಾಂ ಚಿನ್ನಾಭರಣ ಕಳವು ; ಆರೋಪಿ ಸೆರೆ, 20 ಲಕ್ಷ ಮೌಲ್ಯದ ಚಿನ್ನಾಭರಣ ವಶಕ್ಕೆ

March 10, 2026
  • About
  • Advertise
  • Privacy & Policy
  • Contact

Copyright ©2024. All Rights Reserved. Coastaltimeskannada.com | Design and Developed By Bluechip Infosystem - Contact Us : cc.bcis.blr@gmail.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

%d