ದುಬಾೖ: ರವಿವಾರ ಸಂಜೆ, ಸಮಯ 7.30… ಇಡೀ ಕ್ರಿಕೆಟ್ ಜಗತ್ತೇ ಸ್ತಬ್ಧವಾಗುವ ಸಮಯ. ಆರು ವರ್ಷಗಳ ಬಳಿಕ ಭಾರತ ಮತ್ತು ಪಾಕಿಸ್ಥಾನ ಟಿ20 ಪಂದ್ಯವೊಂದರಲ್ಲಿ ಮುಖಾಮುಖಿಯಾಗುತ್ತಿರುವುದೇ ಇದಕ್ಕೆ ಕಾರಣ. ಇಲ್ಲಿ ಯಾರೇ ಗೆದ್ದರೂ ಯಾರೇ ಸೋತರೂ ಅದು ಇಡೀ ಜಗತ್ತಿಗೇ ಅದು ಸುದ್ದಿ!
ಭಾರತವೇ ಫೇವರಿಟ್
ಭಾರತವೇ ಇಲ್ಲಿ ಫೇವರಿಟ್. ಇದಕ್ಕೆ ಕಾರಣವೆಂದರೆ ಇದುವರೆಗೆ ಭಾರತ ವಿಶ್ವಕಪ್ನಲ್ಲಿ ಪಾಕ್ ವಿರುದ್ಧ ಸೋತೇ ಇಲ್ಲ. ಇಲ್ಲಿಯ ವರೆಗೆ ಐದು ಬಾರಿ ಇತ್ತಂಡಗಳು ಮುಖಾಮುಖೀಯಾಗಿದ್ದು, ಪ್ರತೀ ಬಾರಿಯೂ ಭಾರತವೇ ಗೆದ್ದಿದೆ.
ಭಾರತ ತಂಡ :
ವಿರಾಟ್ ಕೊಹ್ಲಿ (ನಾಯಕ)ರೋಹಿತ್ ಶರ್ಮ,ಕೆ.ಎಲ್. ರಾಹುಲ್ ,ಆರ್. ಅಶ್ವಿನ್ , ಬುಮ್ರಾ , ಚಹರ್ , ಇಶಾನ್ ಕಿಶನ್ ,ಜಡೇಜ ,ಭುವಿ, ಶಮಿ , ಹಾರ್ದಿಕ್ ಪಾಂಡ್ಯ ,ಪಂತ್ ,ಸೂರ್ಯಕುಮಾರ್ ಯಾದವ್ , ಶಾರ್ದೂಲ್ ಠಾಕೂರ್, ವರುಣ್ ಚಕ್ರವರ್ತಿ
ಪಾಕಿಸ್ಥಾನ ತಂಡ :
ಬಾಬರ್ ಅಜಮ್ (ನಾಯಕ) ,ಶಬಾದ್ಖಾನ್ ,ಆಸಿಫ್ ಅಲಿ , ಫಖರ್ ಜಮಾನ್ ,ಹೈದರ್ ಅಲಿ, ಹ್ಯಾರೀಸ್ ರೌಫ್, ಹಸನ್ ಅಲಿ ,ಇಮಾದ್ ವಾಸಿಮ್,ಮೊಹಮ್ಮದ್ ಹಫೀಜ್ ,ಮೊಹಮ್ಮದ್ ನವಾಜ್ ,ಮೊಹಮ್ಮದ್ ರಿಜ್ವಾನ್ ,ಮೊಹಮ್ಮದ್ ವಾಸಿಮ್ , ಸಫ್ರಾಜ್ ಅಹ್ಮದ್ ,ಶಹೀನ್ ಶಾ ಅಫ್ರಿದಿ ,ಶೋಯಿಬ್ ಮಲಿಕ್.
Discussion about this post