• About us
  • Contact us
  • Disclaimer
Friday, May 8, 2026
  • Login
Coastal Times Kannada
No Result
View All Result
  • Home
    • ಗ್ಯಾಜೆಟ್
  • ರಾಜ್ಯ
  • ರಾಷ್ಟ್ರೀಯ
  • ರಾಜಕೀಯ
  • ವಿದೇಶಿ ಸುದ್ದಿ
  • ಕರಾವಳಿ
  • ಕ್ರೈಂ ನ್ಯೂಸ್
  • ಕ್ರೀಡೆ
  • ಸಿನಿಮಾ
  • ಆರೋಗ್ಯ
  • ವೆಬ್ ಸ್ಟೊರೀಸ್
Join to Group
  • Home
    • ಗ್ಯಾಜೆಟ್
  • ರಾಜ್ಯ
  • ರಾಷ್ಟ್ರೀಯ
  • ರಾಜಕೀಯ
  • ವಿದೇಶಿ ಸುದ್ದಿ
  • ಕರಾವಳಿ
  • ಕ್ರೈಂ ನ್ಯೂಸ್
  • ಕ್ರೀಡೆ
  • ಸಿನಿಮಾ
  • ಆರೋಗ್ಯ
  • ವೆಬ್ ಸ್ಟೊರೀಸ್
No Result
View All Result
Coastal Times Kannada
No Result
View All Result

ಕಾಡಾನೆ ಸೆರೆಹಿಡಿದ ಅರಣ್ಯ ಸಿಬಂದಿ ಮೇಲೆ ಕಲ್ಲು ತೂರಾಟ ; ಏಳು ಮಂದಿ ಬಂಧನ

Coastal Times by Coastal Times
February 24, 2023
in ಕರಾವಳಿ
ಕಾಡಾನೆ ಸೆರೆಹಿಡಿದ ಅರಣ್ಯ ಸಿಬಂದಿ ಮೇಲೆ ಕಲ್ಲು ತೂರಾಟ ; ಏಳು ಮಂದಿ ಬಂಧನ
149
VIEWS
WhatsappTelegramShare on FacebookShare on Twitter

ಉಪ್ಪಿನಂಗಡಿ: ಇಬ್ಬರನ್ನು ಬಲಿ ಪಡೆದ ಕಾಡಾನೆಯನ್ನು ಸೆರೆಹಿಡಿದು ಅದನ್ನು ಬೇರೆ ಕಡೆಗೆ ಒಯ್ಯಲು ಯತ್ನಿಸುತ್ತಿದ್ದಾಗ ಅರಣ್ಯ ಇಲಾಖೆ ಅಧಿಕಾರಿಗಳ ವಾಹನದ ಮೇಲೆ ಕಲ್ಲು ತೂರಾಟ ನಡೆಸಿ ದಾಂಧಲೆ ಎಬ್ಬಿಸಿದ ಘಟನೆ ಕಡಬ ತಾಲೂಕಿನ ಕೊಂಬಾರಿನಲ್ಲಿ ನಡೆದಿದ್ದು ಪ್ರಕರಣ ಸಂಬಂಧಿಸಿ ಪೊಲೀಸರು ಏಳು ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ.  ಕೊಂಬಾರು ಗ್ರಾಮದ ಕಮರಕಜ್ಜಿಮನೆ ಉಮೇಶ್, ರಾಜೇಶ್ ಕನ್ನಡ, ಜನಾರ್ದನ್ ರೈ, ಕೋಕಿಲ ನಂದ, ತೀರ್ಥಕುಮಾರ್, ಗಂಗಾಧರ ಗೌಡ, ಅಜಿತ್ ಕುಮಾರ್ ಬಂಧಿತರು.

ಗುರುವಾರ ಕೊಂಬಾರು ಗ್ರಾಮದ ಅರಣ್ಯ ಪ್ರದೇಶದಲ್ಲಿ ಕಾರ್ಯಾಚರಣೆ ನಡೆಸಿ, ಕಾಡಾನೆಯನ್ನು ಸೆರೆ ಹಿಡಿಯಲಾಗಿತ್ತು. ರಾತ್ರಿ 9 ಗಂಟೆ ವೇಳೆಗೆ ಕಾಡಾನೆಯನ್ನು ದುಬಾರೆ ಆನೆ ಬಿಡಾರಕ್ಕೆ ಬಿಟ್ಟು ಬರಲು ಮುಂದಾದಾಗ ಸ್ಥಳದಲ್ಲಿದ್ದ ಕೆಲವರು ಸ್ಥಳಕ್ಕೆ ಬಂದು, ಕಾಡಾನೆಯನ್ನು ಕೊಂಡೊಯ್ಯುತ್ತಿದ್ದ ಲಾರಿಯನ್ನು ತಡೆದು ನಿಲ್ಲಿಸಿ, ಹಿಡಿದಿರುವ ಆನೆಯನ್ನು ಇಲ್ಲಿಯೇ ನಿಲ್ಲಿಸಿ, ಇತರ ಕಾಡಾನೆಗಳನ್ನು ಸೆರೆಹಿಡಿದು ಒಟ್ಟಿಗೆ ಎಲ್ಲ ಆನೆಗಳನ್ನು ತೆಗೆದುಕೊಂಡು ಹೋಗಬೇಕು ಎಂದು ಗಲಾಟೆ ಮಾಡಿದ್ದರು.

ಸೆರೆ ಹಿಡಿದ ಆನೆಯನ್ನು ಹೆಚ್ಚು ಹೊತ್ತು ಲಾರಿಯಲ್ಲಿ ನಿಲ್ಲಿಸಲು ಆಗುವುದಿಲ್ಲ. ಮೊದಲು ಸೆರೆಹಿಡಿದ ಆನೆಯನ್ನು ಬಿಟ್ಟು ಬಂದು ಉಳಿದ ಕಾಡಾನೆಗಳನ್ನು ಸೆರೆಹಿಡಿಯುವುದಾಗಿ ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದರೂ ಕೇಳದ ಆರೋಪಿಗಳು, ಅರಣ್ಯ ಇಲಾಖೆ ಅಧಿಕಾರಿಗಳ ಜೊತೆ ವಾಗ್ವಾದ ನಡೆಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಬಂದು ತಿಳಿವಳಿಕೆ ಹೇಳಲು ಯತ್ನಿಸಿದರೂ, ಕೇಳದೆ ಆರೋಪಿಗಳು,  ಕರ್ತವ್ಯದಲ್ಲಿದ್ದ ಪೊಲೀಸರು ಮತ್ತು ಅರಣ್ಯ ಸಿಬ್ಬಂದಿ ಮೇಲೆ ಕಲ್ಲು ತೂರಾಟ ಮಾಡಿದ್ದಾರೆ. ಕಲ್ಲು ತೂರಾಟದಿಂದ ಅರಣ್ಯ ಇಲಾಖೆ ಸಿಬ್ಬಂದಿ ಹಾಗೂ ಪೊಲೀಸರಿಗೆ ಗಾಯಗಳಾಗಿವೆ.  ಆರೋಪಿಗಳು ಸ್ಥಳದಲ್ಲಿ ನಿಲ್ಲಿಸಿದ್ದ ಅರಣ್ಯ ಇಲಾಖೆ ಹಾಗೂ ಪೊಲೀಸ್ ಇಲಾಖೆ ವಾಹನಗಳ ಮೇಲೂ ಕಲ್ಲು ತೂರಾಟ ಮಾಡಿ ವಾಹನಗಳನ್ನು ಜಖಂ ಮಾಡಿದ್ದಾರೆ  ಎಂದು ಕಡಬ ಉಪ ವಲಯ ಅರಣ್ಯ ಅಧಿಕಾರಿ  ಪೊಲೀಸರಿಗೆ ದೂರು ನೀಡಿದ್ದರು. ಪೊಲೀಸರು ಜೀವ ಬೆದರಿಕೆ ಸೇರಿ ವಿವಿಧ ಸೆಕ್ಷನ್ ಗಳಡಿ ಕೇಸು ದಾಖಲಿಸಿದ್ದು ಏಳು ಮಂದಿಯನ್ನು ಬಂಧಿಸಿದ್ದಾರೆ.

Share this:

  • Share on Facebook (Opens in new window) Facebook
  • Share on X (Opens in new window) X

Like this:

Like Loading...

Related

Discover more from Coastal Times Kannada

Subscribe to get the latest posts sent to your email.

Previous Post

ಕಡಬ : ‘ ಆಫರೇಷನ್ ಎಲಿಫೆಂಟ್ ’ ಯಶಸ್ವಿ ,ಇಬ್ಬರನ್ನು ಬಲಿಪಡೆದ ಒಂಟಿ ಸಲಗ ಸೆರೆ

Next Post

ಭಟ್ಕಳ: ಆಸ್ತಿ ಕಲಹ – ಒಂದೇ ಕುಟುಂಬದ ನಾಲ್ವರನ್ನು ಮಾರಾಕಾಸ್ತ್ರಗಳಿಂದ ಕೊಚ್ಚಿ ಕೊಲೆ

Related Posts

ಖ್ಯಾತ ಸಾಹಿತಿ ವಲ್ಲಿ ವಗ್ಗ ಅವರ ನೂತನ ಕೃತಿ ‘ವಿಂಚ್ಣಾರ್ ಕಾಣಿಯೊ’ ಬಿಡುಗಡೆ
ಕರಾವಳಿ

ಖ್ಯಾತ ಸಾಹಿತಿ ವಲ್ಲಿ ವಗ್ಗ ಅವರ ನೂತನ ಕೃತಿ ‘ವಿಂಚ್ಣಾರ್ ಕಾಣಿಯೊ’ ಬಿಡುಗಡೆ

May 6, 2026
3
ಮೇ 9 -10 ರಂದು : ಸುರತ್ಕಲ್ ನಲ್ಲಿ ರಾಜ್ಯಮಟ್ಟದ “ಲೆಜೆಂಡ್ಸ್ ಕ್ರಿಕೆಟ್ ಲೀಗ್ ಸೀಸನ್ – 5” ಹಿರಿಯರ ಕ್ರಿಕೆಟ್ ಹಬ್ಬ
ಕರಾವಳಿ

ಮೇ 9 -10 ರಂದು : ಸುರತ್ಕಲ್ ನಲ್ಲಿ ರಾಜ್ಯಮಟ್ಟದ “ಲೆಜೆಂಡ್ಸ್ ಕ್ರಿಕೆಟ್ ಲೀಗ್ ಸೀಸನ್ – 5” ಹಿರಿಯರ ಕ್ರಿಕೆಟ್ ಹಬ್ಬ

May 6, 2026
9
Next Post
ಭಟ್ಕಳ: ಆಸ್ತಿ ಕಲಹ – ಒಂದೇ ಕುಟುಂಬದ ನಾಲ್ವರನ್ನು ಮಾರಾಕಾಸ್ತ್ರಗಳಿಂದ ಕೊಚ್ಚಿ ಕೊಲೆ

ಭಟ್ಕಳ: ಆಸ್ತಿ ಕಲಹ - ಒಂದೇ ಕುಟುಂಬದ ನಾಲ್ವರನ್ನು ಮಾರಾಕಾಸ್ತ್ರಗಳಿಂದ ಕೊಚ್ಚಿ ಕೊಲೆ

Discussion about this post

Recent News

ಪಶ್ಚಿಮ ಬಂಗಾಳ: ಮುಖ್ಯಮಂತ್ರಿ ರೇಸ್​ನಲ್ಲಿರುವ ಸುವೇಂದು ಅಧಿಕಾರಿ ಆಪ್ತ ಸಹಾಯಕ ಚಂದ್ರನಾಥ್ ರಥ್ ಹತ್ಯೆ

ಪಶ್ಚಿಮ ಬಂಗಾಳ: ಮುಖ್ಯಮಂತ್ರಿ ರೇಸ್​ನಲ್ಲಿರುವ ಸುವೇಂದು ಅಧಿಕಾರಿ ಆಪ್ತ ಸಹಾಯಕ ಚಂದ್ರನಾಥ್ ರಥ್ ಹತ್ಯೆ

May 7, 2026
46
ಖ್ಯಾತ ಸಾಹಿತಿ ವಲ್ಲಿ ವಗ್ಗ ಅವರ ನೂತನ ಕೃತಿ ‘ವಿಂಚ್ಣಾರ್ ಕಾಣಿಯೊ’ ಬಿಡುಗಡೆ

ಖ್ಯಾತ ಸಾಹಿತಿ ವಲ್ಲಿ ವಗ್ಗ ಅವರ ನೂತನ ಕೃತಿ ‘ವಿಂಚ್ಣಾರ್ ಕಾಣಿಯೊ’ ಬಿಡುಗಡೆ

May 6, 2026
3
COASTAL BOX LOGO

CORPORATE OFFICE

KHYATI VISUAL MEDIA
3rd Floor, Shalimar Complex
Kankanady, Mangaluru-575002

Email ID : coastaltimeskannada@gmail.com

Follow Us

ಹೊಸ ಸುದ್ದಿಗಳು

ಪಶ್ಚಿಮ ಬಂಗಾಳ: ಮುಖ್ಯಮಂತ್ರಿ ರೇಸ್​ನಲ್ಲಿರುವ ಸುವೇಂದು ಅಧಿಕಾರಿ ಆಪ್ತ ಸಹಾಯಕ ಚಂದ್ರನಾಥ್ ರಥ್ ಹತ್ಯೆ

ಪಶ್ಚಿಮ ಬಂಗಾಳ: ಮುಖ್ಯಮಂತ್ರಿ ರೇಸ್​ನಲ್ಲಿರುವ ಸುವೇಂದು ಅಧಿಕಾರಿ ಆಪ್ತ ಸಹಾಯಕ ಚಂದ್ರನಾಥ್ ರಥ್ ಹತ್ಯೆ

May 7, 2026
ಖ್ಯಾತ ಸಾಹಿತಿ ವಲ್ಲಿ ವಗ್ಗ ಅವರ ನೂತನ ಕೃತಿ ‘ವಿಂಚ್ಣಾರ್ ಕಾಣಿಯೊ’ ಬಿಡುಗಡೆ

ಖ್ಯಾತ ಸಾಹಿತಿ ವಲ್ಲಿ ವಗ್ಗ ಅವರ ನೂತನ ಕೃತಿ ‘ವಿಂಚ್ಣಾರ್ ಕಾಣಿಯೊ’ ಬಿಡುಗಡೆ

May 6, 2026
ಸಚಿವ ಜಮೀರ್ ಮನೆಯಿಂದ 1 ಕೆ.ಜಿ 200 ಗ್ರಾಂ ಚಿನ್ನಾಭರಣ ಕಳ್ಳತನ; ಸಂಬಂಧಿ ಸೇರಿ ಇಬ್ಬರು ಸೆರೆ

ಸಚಿವ ಜಮೀರ್ ಮನೆಯಿಂದ 1 ಕೆ.ಜಿ 200 ಗ್ರಾಂ ಚಿನ್ನಾಭರಣ ಕಳ್ಳತನ; ಸಂಬಂಧಿ ಸೇರಿ ಇಬ್ಬರು ಸೆರೆ

May 6, 2026
  • About
  • Advertise
  • Privacy & Policy
  • Contact

Copyright ©2024. All Rights Reserved. Coastaltimeskannada.com | Design and Developed By Bluechip Infosystem - Contact Us : cc.bcis.blr@gmail.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

%d