• About us
  • Contact us
  • Disclaimer
Monday, October 12, 2026
  • Login
Coastal Times Kannada
No Result
View All Result
  • Home
    • ಗ್ಯಾಜೆಟ್
  • ರಾಜ್ಯ
  • ರಾಷ್ಟ್ರೀಯ
  • ರಾಜಕೀಯ
  • ವಿದೇಶಿ ಸುದ್ದಿ
  • ಕರಾವಳಿ
  • ಕ್ರೈಂ ನ್ಯೂಸ್
  • ಕ್ರೀಡೆ
  • ಸಿನಿಮಾ
  • ಆರೋಗ್ಯ
  • ವೆಬ್ ಸ್ಟೊರೀಸ್
Join to Group
  • Home
    • ಗ್ಯಾಜೆಟ್
  • ರಾಜ್ಯ
  • ರಾಷ್ಟ್ರೀಯ
  • ರಾಜಕೀಯ
  • ವಿದೇಶಿ ಸುದ್ದಿ
  • ಕರಾವಳಿ
  • ಕ್ರೈಂ ನ್ಯೂಸ್
  • ಕ್ರೀಡೆ
  • ಸಿನಿಮಾ
  • ಆರೋಗ್ಯ
  • ವೆಬ್ ಸ್ಟೊರೀಸ್
No Result
View All Result
Coastal Times Kannada
No Result
View All Result

ಮಂಗಳೂರಿನಲ್ಲಿ ಇಂಡಿಯನ್ ಕೋಸ್ಟ್ ಗಾರ್ಡ್ ನಾಲ್ಕು ಹಡಗು, ಎರಡು ಹೆಲಿಕಾಪ್ಟರ್ ಗಳಲ್ಲಿ ಶಕ್ತಿ ಪ್ರದರ್ಶನ

Coastal Times by Coastal Times
February 24, 2024
in ಕರಾವಳಿ
ಮಂಗಳೂರಿನಲ್ಲಿ ಇಂಡಿಯನ್ ಕೋಸ್ಟ್ ಗಾರ್ಡ್ ನಾಲ್ಕು ಹಡಗು, ಎರಡು ಹೆಲಿಕಾಪ್ಟರ್ ಗಳಲ್ಲಿ ಶಕ್ತಿ ಪ್ರದರ್ಶನ
38
VIEWS
WhatsappTelegramShare on FacebookShare on Twitter

ಮಂಗಳೂರ, ಫೆ.23: ವಿಶ್ವದ ಅತಿದೊಡ್ಡ ಕರಾವಳಿ ಕಾವಲು ಪಡೆಗಳಲ್ಲಿ ಒಂದಾಗಿರುವ ಭಾರತೀಯ ಕೋಸ್ಟ್ ಗಾರ್ಡ್ ತನ್ನ 48ನೇ ವರ್ಷದ ಸ್ಥಾಪನಾ ದಿನಾಚರಣೆ ಅಂಗವಾಗಿ ರೈಸಿಂಗ್ ಡೇ ಹಮ್ಮಿಕೊಳ್ಳಲಾಗಿತ್ತು. ಮಂಗಳೂರಿನ ಬಳಿಯ ಅರಬ್ಬೀ ಸಮುದ್ರ ಮಧ್ಯೆ ಕೋಸ್ಟ್ ಗಾರ್ಡ್ ಸಾಮರ್ಥ್ಯ ಎಷ್ಟರ ಮಟ್ಟಿಗಿದೆ, ಶತ್ರುಗಳನ್ನು ಹಿಮ್ಮೆಟ್ಟಿಸಲು ಎಷ್ಟು ಸಮರ್ಥವಾಗಿದೆ ಎಂಬುದನ್ನು ಕೋಸ್ಟ್ ಗಾರ್ಡ್ ಅಣಕು ಕಾರ್ಯಾಚರಣೆ ಮೂಲಕ ತೋರಿಸಿಕೊಟ್ಟಿದೆ.

ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಮುಖ್ಯ ಅತಿಥಿಯಾಗಿದ್ದರು. ರೈಸಿಂಗೇ ಡೇ ಆಚರಣೆ ಅಂಗವಾಗಿ ವಿವಿಧ ಕವಾಯತುಗಳನ್ನು ಮತ್ತು ಅಣಕು ಕಾರ್ಯಾಚರಣೆಯನ್ನು ಹಮ್ಮಿಕೊಳ್ಳಲಾಗಿತ್ತು. ಎನ್‌ಎಂಪಿಎಯಿಂದ ಸುಮಾರು 15 ನಾಟಿಕಲ್ ಮೈಲು ದೂರದ ಸಮುದ್ರದ ನಡುವೆ ನಡೆದ ಈ ಅಣಕು ಕಾರ್ಯಾಚರಣೆ ಬೆಳಗ್ಗೆ ಸುಮಾರು 11 ರಿಂದ 1.30ರವರೆಗೆ ನಡೆದ ಕೋಸ್ಟ್‌ಗಾರ್ಡ್‌ನ ಈ ವಿವಿಧ ರೀತಿಯ ರಕ್ಷಣಾ ಅಣುಕು ಕಾರ್ಯಾ ಚರಣೆಯಲ್ಲಿ 2 ಇಂಟರ್ ಸೆಪ್ಟರ್, 2 ಡ್ರಾನಿಯರ್ಸ್, ಒಂದು ಅತ್ಯಾಧುನಿಕ ಹೆಲಿಕಾಪ್ಟರ್, 6 ಹಡಗುಗಳು, ಒಂದು ಕಡಲಾಚೆಯ ಗಸ್ತು ಹಡಗು (ಆಫ್‌ಶೋರ್ ಪ್ಯಾಟ್ರಲ್ ವೆಸೆಲ್- ಒಪಿವಿ) 3 ವೇಗದ ಗಸ್ತು ನೌಕೆ (ಫಾಸ್ಟ್ ಪ್ಯಾಟ್ರಲ್ ವೆಸೆಲ್- ಎಫ್‌ಪಿವಿ)ಗಳು ಕೋಸ್ಟ್ ಗಾರ್ಡ್ ಅಧಿಕಾರಿಗಳ ಮಾರ್ಗದರ್ಶನದ ಕಾರ್ಯಾಚರಣೆಯಲ್ಲಿ ತಮ್ಮ ಕಾರ್ಯಕ್ಷಮತೆಯನ್ನು ಪ್ರದರ್ಶಿಸಿದವು.

ಕಾರ್ಯಾಚರಣೆ ನೋಡಲು ಬಂದವರು ಕಣ್ಣು ಮಿಟುಕಿಸದೆ ಕೋಸ್ಟ್‌ಗಾರ್ಡ್ ಅಧಿಕಾರಿ ಸಿಬ್ಬಂದಿಗಳ ಪರಾಕ್ರಮವನ್ನು ಕಣ್ತುಂಬಿಕೊಂಡರು. ಒಂದಕ್ಕೊಂದು ಅದ್ಬುತ ಎಂಬಂತೆ ಈ ಕಾರ್ಯಚರಣೆ ನಡೆದವು. ನೀರಿಗೆ ಬಿದ್ದ ಸೇನಾನಿಯೊಬ್ಬನನ್ನು ಹೆಲಿಕಾಫ್ಟರ್ ಮೂಲಕ ಮೇಲಕೆತ್ತುವ ಕಾರ್ಯಾಚರಣೆ ಅದ್ಭುತವಾಗಿತ್ತು. ನೀರಿಗೆ ಬಿದ್ದು ಸ್ಮೂಕ್ ಸಿಗ್ನಲ್ ನೀಡುತ್ತಿದ್ದ ವ್ಯಕ್ತಿಯನ್ನು ಸಿಬ್ಬಂದಿ ಸುತ್ತುವರಿದು ರಕ್ಷಿಸಿದ್ರು.

2018ರಿಂದ ಕರಾವಳಿ ಕಡಲಿನಲ್ಲಿ ಕೋಸ್ಟ್‌ಗಾರ್ಡ್‌ನ ಕಡಲಾಚೆಯ ಗಸ್ತು ಹಡಗಾಗಿ ಕಾರ್ಯಾಚರಿಸುತ್ತಿರುವ ‘ವಿಕ್ರಂ’ ನೊಳಗೆ ಬೆಳಗ್ಗೆ 10.30ರ ವೇಳೆಗೆ ಪ್ರವೇಶಿಸಿದ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರನ್ನು ಕೋಸ್ಟ್‌ಗಾರ್ಡ್ ಗೌರವದೊಂದಿಗೆ ಸ್ವಾಗತಿಸಲಾಯಿತು.

ಕರ್ನಾಟಕ ಕೋಸ್ಟ್ ಗಾರ್ಡ್ ಕಮಾಂಡರ್ ಪ್ರವೀಣ್ ಕುಮಾರ್ ಮಿಶ್ರಾ, ಕಮಾಂಡಿಂಗ್ ಅಫೀಸರ್ ಹಾಗೂ ಡಿಐಜಿ ಅಶೋಕ್ ಕುಮಾರ್ ಭಾಮ, ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್, ಪೊಲೀಸ್ ಆಯುಕ್ತ ಅನುಪಮ್ ಅಗರ್ವಾಲ್, ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಆನಂದ್ ಅಲ್ಲದೆ, ಕೋಸ್ಟ್‌ಗಾರ್ಡ್ ಅಧಿಕಾರಿ- ಸಿಬ್ಬಂದಿ, ಕೆಲ ಪ್ರವಾಸಿಗರು ಸೇರಿದಂತೆ ಸುಮಾರು 200ಕ್ಕೂ ಅಧಿಕ ಮಂದಿಯನ್ನು ಹೊತ್ತ ವಿಕ್ರಂ ಕೋಸ್ಟ್‌ಗಾರ್ಡ್ ಎನ್‌ಎಂಪಿಎಯಿಂದ ಸಮುದ್ರದ ಸುಮಾರು 15 ನಾಟಿಕಲ್ ಮೈಲಿಗೆ ತೆರಳಿದ ಬಳಿಕ ಅಣುಕು ಕಾರ್ಯಾಚರಣೆ ಆರಂಭಗೊಂಡಿತು.

Share this:

  • Share on Facebook (Opens in new window) Facebook
  • Share on X (Opens in new window) X

Like this:

Like Loading…

Related

Discover more from Coastal Times Kannada

Subscribe to get the latest posts sent to your email.

Previous Post

ದುಬೈಯಲ್ಲಿ ರಸ್ತೆ ಅಪಘಾತ: ಉಳ್ಳಾಲದ ಯುವತಿ ವಿದಿಶಾ ವಿಧಿವಶ

Next Post

ಮಹಿಳೆಯ ಚಿನ್ನದ ಸರ ಎಗರಿಸಿದ್ದ ಕಾಸರಗೋಡು ಮೂಲದ ಕುಖ್ಯಾತ ಕಳ್ಳರಿಬ್ಬರ ಸೆರೆ

Related Posts

ದಾಂಡಿಯಾ ಹೆಸರಲ್ಲಿ ಅಸಭ್ಯ ನೃತ್ಯ, ಫ್ಯಾಷನ್ ಶೋ, ಪಾರ್ಟಿಗೆ ಅನುಮತಿ ನೀಡದಂತೆ ಬಜರಂಗದಳ ಆಗ್ರಹ: ಕಾನೂನು ಕೈಗೆತ್ತಿಕೊಂಡರೆ 10 ವರ್ಷ ಜೈಲು ಎಂದ ಕಮಿಷನರ್​
ಕರಾವಳಿ

ದಾಂಡಿಯಾ ಹೆಸರಲ್ಲಿ ಅಸಭ್ಯ ನೃತ್ಯ, ಫ್ಯಾಷನ್ ಶೋ, ಪಾರ್ಟಿಗೆ ಅನುಮತಿ ನೀಡದಂತೆ ಬಜರಂಗದಳ ಆಗ್ರಹ: ಕಾನೂನು ಕೈಗೆತ್ತಿಕೊಂಡರೆ 10 ವರ್ಷ ಜೈಲು ಎಂದ ಕಮಿಷನರ್​

October 9, 2026
94
ಅಕ್ಟೋಬರ್: 11ರಿಂದ ಐತಿಹಾಸಿಕ ಮಂಗಳೂರು ದಸರಾ ಮಹೋತ್ಸವ – 12ರಂದು ಮುಖ್ಯಮಂತ್ರಿಗಳಿಂದ ಅದ್ಧೂರಿ ಚಾಲನೆ
ಕರಾವಳಿ

ಅಕ್ಟೋಬರ್: 11ರಿಂದ ಐತಿಹಾಸಿಕ ಮಂಗಳೂರು ದಸರಾ ಮಹೋತ್ಸವ – 12ರಂದು ಮುಖ್ಯಮಂತ್ರಿಗಳಿಂದ ಅದ್ಧೂರಿ ಚಾಲನೆ

October 7, 2026
26
Next Post
ಮಹಿಳೆಯ ಚಿನ್ನದ ಸರ ಎಗರಿಸಿದ್ದ ಕಾಸರಗೋಡು ಮೂಲದ ಕುಖ್ಯಾತ ಕಳ್ಳರಿಬ್ಬರ ಸೆರೆ

ಮಹಿಳೆಯ ಚಿನ್ನದ ಸರ ಎಗರಿಸಿದ್ದ ಕಾಸರಗೋಡು ಮೂಲದ ಕುಖ್ಯಾತ ಕಳ್ಳರಿಬ್ಬರ ಸೆರೆ

Discussion about this post

Recent News

11 ವರ್ಷದ ಬಾಲಕನ ಮೇಲೆ ಲೈಂಗಿಕ ದೌರ್ಜನ್ಯ: ಸೋಷಿಯಲ್ ಮೀಡಿಯಾ ಇನ್​ಫ್ಲುಯನ್ಸರ್​ ನಿಶಾ ರಾಫೆಲ್ ವಿರುದ್ಧ ಪೋಕ್ಸೊ ಕೇಸ್ ದಾಖಲು

11 ವರ್ಷದ ಬಾಲಕನ ಮೇಲೆ ಲೈಂಗಿಕ ದೌರ್ಜನ್ಯ: ಸೋಷಿಯಲ್ ಮೀಡಿಯಾ ಇನ್​ಫ್ಲುಯನ್ಸರ್​ ನಿಶಾ ರಾಫೆಲ್ ವಿರುದ್ಧ ಪೋಕ್ಸೊ ಕೇಸ್ ದಾಖಲು

October 9, 2026
80
ಮಂಗಳೂರು: ಕೋರಿಯರ್ ಮೂಲಕ ವಾಟರ್ ಪ್ಯೂರಿಫೈಯರ್‌ನಲ್ಲಿ ಅಡಗಿಸಿಟ್ಟು MDMA ಮಾದಕವಸ್ತು ಸಾಗಾಟದ ಜಾಲ ಪತ್ತೆ: ರೂ.1.58 ಕೋಟಿ ಮೌಲ್ಯದ ಮಾದಕವಸ್ತು ವಶ

ಮಂಗಳೂರು: ಕೋರಿಯರ್ ಮೂಲಕ ವಾಟರ್ ಪ್ಯೂರಿಫೈಯರ್‌ನಲ್ಲಿ ಅಡಗಿಸಿಟ್ಟು MDMA ಮಾದಕವಸ್ತು ಸಾಗಾಟದ ಜಾಲ ಪತ್ತೆ: ರೂ.1.58 ಕೋಟಿ ಮೌಲ್ಯದ ಮಾದಕವಸ್ತು ವಶ

October 9, 2026
40
COASTAL BOX LOGO

CORPORATE OFFICE

KHYATI VISUAL MEDIA
3rd Floor, Shalimar Complex
Kankanady, Mangaluru-575002

Email ID : coastaltimeskannada@gmail.com

Follow Us

ಹೊಸ ಸುದ್ದಿಗಳು

11 ವರ್ಷದ ಬಾಲಕನ ಮೇಲೆ ಲೈಂಗಿಕ ದೌರ್ಜನ್ಯ: ಸೋಷಿಯಲ್ ಮೀಡಿಯಾ ಇನ್​ಫ್ಲುಯನ್ಸರ್​ ನಿಶಾ ರಾಫೆಲ್ ವಿರುದ್ಧ ಪೋಕ್ಸೊ ಕೇಸ್ ದಾಖಲು

11 ವರ್ಷದ ಬಾಲಕನ ಮೇಲೆ ಲೈಂಗಿಕ ದೌರ್ಜನ್ಯ: ಸೋಷಿಯಲ್ ಮೀಡಿಯಾ ಇನ್​ಫ್ಲುಯನ್ಸರ್​ ನಿಶಾ ರಾಫೆಲ್ ವಿರುದ್ಧ ಪೋಕ್ಸೊ ಕೇಸ್ ದಾಖಲು

October 9, 2026
ಮಂಗಳೂರು: ಕೋರಿಯರ್ ಮೂಲಕ ವಾಟರ್ ಪ್ಯೂರಿಫೈಯರ್‌ನಲ್ಲಿ ಅಡಗಿಸಿಟ್ಟು MDMA ಮಾದಕವಸ್ತು ಸಾಗಾಟದ ಜಾಲ ಪತ್ತೆ: ರೂ.1.58 ಕೋಟಿ ಮೌಲ್ಯದ ಮಾದಕವಸ್ತು ವಶ

ಮಂಗಳೂರು: ಕೋರಿಯರ್ ಮೂಲಕ ವಾಟರ್ ಪ್ಯೂರಿಫೈಯರ್‌ನಲ್ಲಿ ಅಡಗಿಸಿಟ್ಟು MDMA ಮಾದಕವಸ್ತು ಸಾಗಾಟದ ಜಾಲ ಪತ್ತೆ: ರೂ.1.58 ಕೋಟಿ ಮೌಲ್ಯದ ಮಾದಕವಸ್ತು ವಶ

October 9, 2026
ಮಂಗಳೂರಿನಲ್ಲಿ ಬಾಯ್‌ಫ್ರೆಂಡ್ ಜೊತೆ ಸೇರಿ ಅಪ್ಪನ ಕೊಲೆ ಮಾಡಿರುವ ಶಂಕೆ? 2 ತಿಂಗಳ ಹಿಂದೆ ಹೂತಿದ್ದ ಶವ ಹೊರತೆಗೆದ ಪೋಲಿಸರು

ಮಂಗಳೂರಿನಲ್ಲಿ ಬಾಯ್‌ಫ್ರೆಂಡ್ ಜೊತೆ ಸೇರಿ ಅಪ್ಪನ ಕೊಲೆ ಮಾಡಿರುವ ಶಂಕೆ? 2 ತಿಂಗಳ ಹಿಂದೆ ಹೂತಿದ್ದ ಶವ ಹೊರತೆಗೆದ ಪೋಲಿಸರು

October 9, 2026
  • About
  • Advertise
  • Privacy & Policy
  • Contact

Copyright ©2024. All Rights Reserved. Coastaltimeskannada.com | Design and Developed By Bluechip Infosystem - Contact Us : cc.bcis.blr@gmail.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

%d